ತಾಯಿಗೆ ಸ್ತನ ಕ್ಯಾನ್ಸರ್; ಭಾವನಾತ್ಮಕ ಸಾಲು ಹಂಚಿಕೊಂಡ ಕಾರ್ತಿಕ್ ಆರ್ಯನ್

Published : May 06, 2023, 01:11 PM IST
ತಾಯಿಗೆ ಸ್ತನ ಕ್ಯಾನ್ಸರ್; ಭಾವನಾತ್ಮಕ ಸಾಲು ಹಂಚಿಕೊಂಡ ಕಾರ್ತಿಕ್ ಆರ್ಯನ್

ಸಾರಾಂಶ

ಕಾರ್ತಿಕ್ ಆರ್ಯನ್ ತಾಯಿ ಸ್ತಾನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಗ್ಗೆ ನಟ ಭಾವನಾತ್ಮಕ ಸಾಲು ಹಂಚಿಕೊಂಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಕಾರ್ತಿಕ್ ಆರ್ಯನ್ ಸದಾ ನಗುತ್ತಾ ಕ್ಯಾಮರಾ ಮುಂದೆ ಪೋಸ್ ನೀಡುತ್ತಾರೆ. ಆದರೆ ಕಾರ್ತಿಕ್ ತನ್ನ ತಾಯಿಯ ಅನಾರೋಗ್ಯದ ನೋವಿನಲ್ಲಿದ್ದಾರೆ.   ಕಾರ್ತಿಕ್ ಆರ್ಯನ್ ಅಮ್ಮ  ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿದ್ದಾರೆ. ೊದಲ ಹಾಗೆ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಕಾರ್ತಿಕ್ ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತಾಯಿಯ ಜೊತೆಗಿನ ಫೋಟೋ ಶೇರ್ ಮಾಡಿ ತಮ್ಮ ಕುಟುಂಬಕ್ಕೆ ಕ್ಯಾನ್ಸರ್ ಹೇಗೆ ನುಗ್ಗಿತು ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ತಮ್ಮ ಕುಟುಂಬ ಹೇಗೆ ನಲುಗಿಹೋಗಿತ್ತು, ಅಸಹಾಯಕರಾಗಿದ್ವಿ ಎಂದು ಕಾರ್ತಿಕ್ ಭಾವನಾತ್ಮಕ ಸಾಲು ಹಂಚಿಕೊಂಡಿದ್ದಾರೆ. 

ಕಾರ್ತಿಕ್ ಆರ್ಯನ್ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರು ಕಾಮೆಂಟ್ ಮಾಡಿ ಪ್ರೀತಿ ಮತ್ತು ಬೆಂಬಲ ನೀಡುತ್ತಿದ್ದೆ.  ಕಾರ್ತಿಕ್ ಶೇರ್ ಮಾಡಿರುವ ಪೋಸ್ಟ್‌ನಲ್ಲಿ, 'ಕೆಲ ಸಮಯದ ಹಿಂದೆ ಬಿಗ್ ಸಿ ಕ್ಯಾನ್ಸರ್ ಸೈಲೆಂಟ್ ನುಗ್ಗಿ ನಮ್ಮ ಕುಟುಂಬವನ್ನು ಕದಡಲು ಪ್ರಯತ್ನಿಸಿತು. ನಾವು ಹತಾಶೆಯನ್ನು ಮೀರಿ ಅಸಹಾಯಕರಾಗಿದ್ದೆವು. ಆದರೆ ಇಚ್ಛಾಶಕ್ತಿ ಮತ್ತು ಈ ಉಗ್ರ ಸೈನಿಕನ ಮನೋಭಾವವನ್ನು ಎಂದಿಗೂ ನನ್ನ ತಾಯಿ ಬಿಟ್ಟುಕೊಡುವುದಿಲ್ಲ, ಅದಕ್ಕೆ ಧನ್ಯವಾದಗಳು. ನಾವು ಬಿಗ್ ಸಿ ಯನ್ನು ಧೈರ್ಯದ ಕಡೆಗೆ ತಿರುಗಿಸಿ ನಮ್ಮೆಲ್ಲರ ಶಕ್ತಿಯಿಂದ ಕತ್ತಲನ್ನು ಗೆದ್ದಿದ್ದೀವಿ. ಆದರೆ ಯುದ್ಧವನ್ನು ಗೆಲ್ಲಲು ಉದ್ದೇಶಿಸಿದೆವು. ನಿಮ್ಮ ಕುಟುಂಬದ ಪ್ರೀತಿ ಮತ್ತು ಬೆಂಬಲಕ್ಕಿಂತ ದೊಡ್ಡದೊಂದು ಮಹಾಶಕ್ತಿ ಇಲ್ಲ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

ಬಾಡಿಗಾರ್ಡ್ ಮದ್ವೆಲಿ ಕಾರ್ತಿಕ್ ಆರ್ಯನ್; ಮದುಮಗನ ಕುತ್ತಿಗೆ ಹಿಡಿದು ಪೋಸ್ ನೀಡಿದ ಸ್ಟಾರ್, ಫ್ಯಾನ್ಸ್ ಹೇಳಿದ್ದೇನು?

ಕಾರ್ತಿರ್ ಆರ್ಯನ್ ಪೋಸ್ಟ್‌ಗೆ ವಿಕ್ಕಿ ಕೌಶಲ್, ಏಕ್ತಾ ಕಪೂರ್, ಸೋನಾಲ್ ಚೌಹಾನ್ ಮತ್ತು ಸನ್ಯಾ ಮಲ್ಹೋತ್ರಾ ಸೇರಿದಂತೆ ಅನೇಕರು ಪ್ರೀತಿಯನ್ನು ಕಳುಹಿಸಿದ್ದಾರೆ, ಧೈರ್ಯ ತುಂಬಿದ್ದಾರೆ. ಕ್ಯಾನ್ಸರ್‌ನಿಂದ ಬದುಕುಳಿದವರ ಜೊತೆಗಿನ ವಿಡಿಯೋವೊಂದನ್ನು ಕಾರ್ತಿಕ್ ಆರ್ಯನ್ ಈ ಹಿಂದೆ ಶೇರ್ ಮಾಡಿದ್ದಾರೆ. ಮುಂಬೈ ಆಸ್ಪತ್ರೆಯಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ತಿಕ್ ಭಾಗಿಯಾಗಿದ್ದರು. ಅವರ ತಾಯಿಗೆ ಸ್ತನ ಕ್ಯಾನ್ಸರ್ ಇರುವುದ ಪತ್ತೆಯಾಯಿತು. ಆದರೆ ಚಿಕಿತ್ಸೆ ಬಳಿಕ  ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದರು.  

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಾರ್ತಿಕ್ ಆರ್ಯನ್, ಇದು ನಮಗೆಲ್ಲ ಬಹಳ ಭಾವನಾತ್ಮಕ ಸಮಯಯವಾಗಿತ್ತು. ಆದರೆ ನನ್ನ ತಾಯಿ ಈ ರೋಗವನ್ನು ಗೆದ್ದಿರುವ ಬಗ್ಗೆ ತುಂಬಾ ಹೆಮ್ಮೆ ಇದೆ. ಅದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಇವತ್ತು ಇಲ್ಲಿ ಇದ್ದೀನಿ ಅಂದರೆ ನೀವುಗಳೇ ಕಾರಣ' ಎಂದು ಹೇಳಿದ್ದರು.

ಮದುವೆ ಬಗ್ಗೆ ನಟ ಕಾರ್ತಿಕ್ ಆರ್ಯನ್ ಸುಳಿವು; ದಯವಿಟ್ಟು ಕೃತಿ ಸನೊನ್‌‌ನ ಮದ್ವೆಯಾಗಿ ಎಂದ ಫ್ಯಾನ್ಸ್

ಕಾರ್ತಿರ್ ಆರ್ಯನ್ ಸಿನಿಮಾ ಬಗ್ಗೆ

ಕಾರ್ತಿಕ್ ಕೊನೆಯದಾಗಿ ಶೆಹಜಾದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ ತು ಜೂಥಿ ಮೈನ್ ಮಕ್ಕರ್ ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಸದ್ಯ  ಕಾರ್ತಿಕ್ ಆರ್ಯನ್ ಸತ್ಯಪ್ರೇಮ್ ಕಿ ಕಥಾದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಆಶಿಕಿ 3 ಚಿತ್ರದಲ್ಲೂ ನಟಿಸುತ್ತಿದ್ದಾರೆ..
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!