ಸಿನಿಮಾ ಆಫರ್​ ಇಲ್ಲ, ಕೈಯಿಂದ ಜಾರಿದೆ ಹಲವು ಸಿನಿಮಾ.. ಶ್ರೀಲೀಲಾ ಸಕ್ಸಸ್ ಜರ್ನಿಗೆ ಅಮ್ಮನೇ ಮುಳ್ಳಾ?

Published : Jul 17, 2026, 03:07 PM IST
Sreeleela

ಸಾರಾಂಶ

ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಬೇಕಿತ್ತು. ಈ ಸುದ್ದಿ ಕೇಳಿ ಶ್ರೀಲೀಲಾ ಭಕ್ತಗಣ ಖುಷಿ ಕೂಡ ಪಟ್ಟಿತ್ತು. ಆದ್ರೆ ಈಗ ತಲಾ ಅಜಿತ್ ಜತೆಗಿನ ಕಾಂಬಿನೇಷನ್ ನಿಂದ ಶ್ರೀಲೀಲಾ ಕಿಕ್​ಔಟ್ ಆಗಿದ್ದಾರೆ ಅನ್ನೋ ವಿಚಾರ ರಿವಿಲ್ ಆಗಿದೆ.

ಏನಾಗ್ತಿದೆ ಶ್ರೀಲೀಲಾಗೆ?

ಮಕ್ಕಳ ಏಳಿಗೆ ಬಯಸೋಳು ತಾಯಿ.. ಆದ್ರೆ ಅವರೇ ಮಕ್ಕಳಿಗೆ ಮಗ್ಗಲು ಮುಳ್ಳಾದ್ರ ಏನಾಗುತ್ತೆ.. ನಟಿ ಶ್ರೀಲೀಲಾಗೆ ಆದ ಹಾಗೆ ಆಗುತ್ತೆ ಎನ್ನುತ್ತಿದೆ ಟಾಲಿವುಡ್​ಸಿನಿ ಜಗತ್ತು.. ಅರೆ, ಹಾಗಾದ್ರೆ ನಟಿ ಶ್ರೀಲೀಲಾ (Sreeleela) ಖರಿಯರ್​ಗೆ ಅವರ ತಾಯಿನೇ ವಿಲನ್ ಆದ್ರಾ..? ಟಾಲಿವುಡ್​ ಜಗತ್ತು ಹೀಗೆನ್ನುತ್ತಿರೋದೇಕೆ..? ನೋಡೋಣ ಬನ್ನಿ...

ಶ್ರೀಲೀಲಾ ಖರಿಯರ್ ಗೆ ಮುಳುವಾದ್ರಾ ಹೆತ್ತಮ್ಮ..? ಸಿನಿಮಾ ಆಫರ್​ಇಲ್ಲ.. ಕೈ ಜಾರಿತು ಒಪ್ಪಿದ್ದ ಚಿತ್ರ?

ಶ್ರೀಲೀಲಾ. ಈ ಹೆಸರಲ್ಲೇ ಒಂದು ಕಿಕ್​ ಇದೆ. ಶ್ರೀಲೀಲಾ ಅಂದ್ರೆ ಪಡ್ಡೆಗಳಿಗೆ ಸಖತ್ ಖುಷಿ.. ಆಕೆಯ ಸೌಂದರ್ಯಕ್ಕೆ ಕೋಟಿ ಕೋಟಿ ಫಾಲೋವರ್ಸ್ ಇದ್ದಾರೆ. ಶ್ರೀಲೀಲಾ ಮುದ್ದು ಮುದ್ದಾದ ಬ್ಯೂಟಿಗೆ ಅದೆಷ್ಟೋ ಜನ ಕ್ರಶ್‌ಗೆ ಬಿದ್ದಿದ್ದಾರೆ. ಅದಕ್ಕಾಗೆ ಶ್ರೀಲೀಲಾ ತೆಲುಗು ಚಿತ್ರರಂಗದ ಹಾಟೆಸ್ಟ್​ ಹಿರೋಯಿನ್ ಅಂತ ಗುರುತಿಸಿಕೊಂಡಿರೋದು.. ಗೆಲುವು ಇಲ್ಲದೇ ಇದ್ರೂ ಬಿಗ್​ ಬಜೆಟ್ ಸಿನಿಮಾಗಳಲ್ಲಿ ನಾಯಕಿ ಆಗ್ತಿರೋದು..

ಶ್ರೀಲೀಲಾ ಟಾಲಿವುಡ್​ನ ಟಾಪ್ ನಟಿ.. ಈಗ ಬಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದಾರೆ. ಈ ಕಿಕ್​ಬ್ಯೂಟಿಗೆ ವಕಾಶಗಳೇನೋ ಸಿಗುತ್ತಿವೆ. ಆದ್ರೆ ಗೆಲುವು ಮಾತ್ರ ಇಲ್ಲ. ಕಳೆದ ಮೂರು ವರ್ಷಗಳಲ್ಲಿ ಶ್ರೀಲೀಲಾ 8 ಸಿನಿಮಾಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದದ್ದು ಮಾತ್ರ ಒಂದೇ ಒಂದು ಚಿತ್ರ, ಅದು 'ಭಗವಂತ್ ಕೇಸರಿ''

ಹಾಗಂಥ, ಶ್ರೀಲೀಲಾಗೆ ಅವಕಾಶದ ಬರ ಖಂಡಿತ ಇಲ್ಲ. ಗೆಲುವು ದಕ್ಕದಿದ್ದರೂ ಸಿನಿಮಾ ಆಫರ್​ ಬರುತ್ತಿವೆ. ಆದಾಗ್ಯೂ ಶ್ರೀಲೀಲಾ ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ ಎನ್ನುವ ಚರ್ಚೆ ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ ಅವರ ತಾಯಿ ಡಾಕ್ಟರ್ ಸ್ವರ್ಣಲತಾ ಅನ್ನೋದು ಅನ್ನೋದು ಈಗ ಸುತ್ತುತ್ತಿರೋ ಗಾಸಿಪ್..!

ಮಗಳ ವಿಷಯದಲ್ಲಿ ಅತಿಯಾದ ಹಸ್ತಕ್ಷೇಪ.. ಕೈ ಚೆಲ್ಲಿವೆ ಸಿನಿಮಾ..!

ಕಿರಿಕ್ ಬ್ಯೂಟಿ ರಶ್ಮಿಕಾರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹು ಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಕೆಲವೊಂದು ಸಿನಿಮಾದಿಂದ ಶ್ರೀಲೀಲಾಗೆ ಗೇಟ್​ಪಾಸ್​ ಕೊಡಲಾಗ್ತಿದೆ. ಈ ಸಂಕಷ್ಟಕ್ಕೆ ಕಾರಣ ಶ್ರೀಲೀಲಾ ತಾಯಿ ತೆಗೆದುಕೊಳ್ಳೋ ಕೆಲವು ನಿರ್ಧಾರಗಳು ಅತಿಯಾದ ಹಸ್ತಕ್ಷೇಪ ಅಂತ ಹೇಳಲಾಗ್ತಿದೆ.

ನಾಗಾರ್ಜುನ್ ಮಗನ ಚಿತ್ರದಿಂದ ಶ್ರೀಲೀಲಾಗೆ ಗೇಟ್​ಪಾಸ್.!

ಸೀನಿಯರ್ ಸ್ಟಾರ್ ಇರಲಿ, ಹೊಸ ಹುಡುಗ ಇರಲಿ, ಎಲ್ಲರ ಮೊದಲ ಚಾಯ್ಸ್ ಆಗಿರುವ ಶ್ರೀಲೀಲಾ, ನಾಗಾರ್ಜುನ ಮಗ ಅಖಿಲ್ ಜೊತೆ 'ಲೆನಿನ್' ಚಿತ್ರದಲ್ಲಿ ತೆರೆ ಹಂಚಿಕೊಳ್ಳಬೇಕಿತ್ತು. ಆದ್ರೆ ಏಕಾಏಕಿ ಚಿತ್ರತಂಡ ಇವರ ಜಾಗಕ್ಕೆ ನಟಿ ಭಾಗ್ಯಶ್ರೀ ಬೋರ್ಸೆ ಅವರನ್ನು ತಂದು ಕೂರಿಸಿದೆ.

ತಲಾ ಅಜಿತ್ ಸಿನಿಮಾದಿಂದಲೂ ಶ್ರೀಲೀಲಾ ಕಿಕ್​ಔಟ್..!

ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ರೆ ತಮಿಳಿನ ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಬೇಕಿತ್ತು. ಈ ಸುದ್ದಿ ಕೇಳಿ ಶ್ರೀಲೀಲಾ ಭಕ್ತಗಣ ಖುಷಿ ಕೂಡ ಪಟ್ಟಿತ್ತು. ಆದ್ರೆ ಈಗ ತಲಾ ಅಜಿತ್ ಜತೆಗಿನ ಕಾಂಬಿನೇಷನ್ ನಿಂದ ಶ್ರೀಲೀಲಾ ಕಿಕ್​ಔಟ್ ಆಗಿದ್ದಾರೆ ಅನ್ನೋ ವಿಚಾರ ರಿವಿಲ್ ಆಗಿದೆ. ಶ್ರೀಲೀಲಾ ಜಾಗಕ್ಕೆ ನಟಿ ಕಯಾದು ಲೋಹರ್​ ಬಂದಿದ್ದಾರಂತೆ.

ಒಟ್ನಲ್ಲಿ ಸಾಲು ಸಾಲು ಸಿನಿಮಾಗಳು ಸಿಗುತ್ತಿದ್ರೂ ಗೆಲುವು ದಕ್ಕಿಸಿಕೊಳ್ಳಲು ಒದ್ದಾಡಿತ್ತಿರೋ ನಟಿ ಶ್ರೀಲೀಲಾ ಈಗ ಸಿನಿಮಾ ಆಫರ್​ಗಳನ್ನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ತಾಯಿ ಡಾಕ್ಟರ್ ಸ್ವರ್ಣಲತಾರ ಅತಿಯಾದ ಹಸ್ತಕ್ಷೇಪ ಅನ್ನೋ ಆರೋಪ ಎದ್ದಿದೆ. ಈ ಕಳಂಕದಿಂದ ಕಿಕ್​ಚೆಲುವೆ ಅದ್ಯಾವಾಗ ಹೊರ ಬರುತ್ತಾರೋ ಕಾದು ನೋಡಬೇಕು..!

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೇನಿನ ವಿಷ್ಯ ಮಾತನಾಡಿ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ ನಟಿ ಸಾರಾ ಅಲಿ ಖಾನ್​
Celebrities Marriage: ಮದುವೆಯಾಗಿದ್ದೇ ಆಗಿದ್ದು... ಸಮಂತಾ ಸೇರಿದಂತೆ ಈ ನಟರ ಅದೃಷ್ಟವೇ ಬದಲಾಯ್ತು!