Rajkumar Hirani: ಶಾರುಖ್​ ಕುರಿತ ಸೀಕ್ರೇಟ್​ ಬಹಿರಂಗಗೊಳಿಸಿದ ನಿರ್ಮಾಪಕ !

By Suchethana Naik  |  First Published Feb 26, 2023, 10:38 PM IST

ಡುಂಕಿ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ ನಿರ್ಮಾಪಕ ರಾಜ್​ಕುಮಾರ್​ ಹಿರಾನಿ ಹಾಗೂ ನಟ ಶಾರುಖ್​ ಖಾನ್​. ಈ ಸಂದರ್ಭದಲ್ಲಿ ಶಾರುಖ್​ ಕುರಿತು ಕೆಲವೊಂದು ರಹಸ್ಯಗಳನ್ನು ಹಿರಾನಿ  ಬಹಿರಂಗಗೊಳಿಸಿದ್ದಾರೆ. ಏನದು?
 


ಬಾಲಿವುಡ್‌ನಲ್ಲಿ ‘ಮುನ್ನಾ ಭಾಯ್ ಎಂಬಿಬಿಎಸ್’ (Munna Bai MBBS), ‘ಲಗೇ ರಹೋ ಮುನ್ನಾ ಭಾಯ್’, ‘3 ಈಡಿಯಟ್ಸ್’ (3 Idiots) ‘ಪಿಕೆ’, ‘ಸಂಜು’ ಅಂತ ಸೂಪರ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Rajkumar Hirani) ಇದೀಗ ಬಾಲಿವುಡ್ ಬಾದ್‌ಷಾ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿರುವ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ಅವರು ಇದೇ ಮೊದಲ ಬಾರಿಗೆ  ಶಾರುಖ್ ಖಾನ್ (Shahrukh Khan) ಜೊತೆ ಕೈಜೋಡಿಸಿದ್ದಾರೆ. ಇವರು ಡುಂಕಿ ಚಿತ್ರದಲ್ಲಿ ಒಟ್ಟಿಗೇ ಕೆಲಸ ಮಾಡಲಿದ್ದಾರೆ. ಇದಾಗಲೇ ಪಠಾಣ್​ ಚಿತ್ರ ಯಶಸ್ಸಿನಿಂದ ಬೀಗುತ್ತಿರುವ ನಟ ಶಾರುಖ್​ ಅವರಿಗೆ ಡುಂಕಿ ಚಿತ್ರವನ್ನೂ ಇಷ್ಟೇ ಯಶಸ್ಸಿನತ್ತ ಕೊಂಡೊಯ್ಯುವ ಚಾಲೆಂಜ್​ ಕೂಡ ಇದೆ. ಈಗಾಗಲೇ ‘ಡುಂಕಿ’ ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪಣ್ಣು ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಬರುವ ಡಿಸೆಂಬರ್​ 22ರಂದು ಬಿಡುಗಡೆಯಾಗಲಿದೆ.

ಈಗ ಈ ಚಿತ್ರದ ಕುರಿತು ರಾಜ್​ಕುಮಾರ್​ ಹಿರಾನಿ ಮಾತನಾಡಿದ್ದು, ಇದುವರೆಗೆ ಶಾರುಖ್​ ಅವರ ಬಗ್ಗೆ ಯಾರಿಗೂ ತಿಳಿದಿರದ ಕೆಲವೊಂದು ಕುತೂಹಲದ ಅಂಶವನ್ನು ಅವರು ಹೇಳಿದ್ದಾರೆ. ಈ ಹಿಂದೆ ತಮ್ಮ ಮುಂಬರುವ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ಅವರು ನಿರ್ಮಾಪಕರು ಎಂದು ತಿಳಿದಿದ್ದಾಗ, ಶಾರುಖ್​ ಖಾನ್​ ಅವರು,‘ಡಿಯರ್ ರಾಜ್ ಕುಮಾರ್ ಹಿರಾನಿ ಸರ್... ನೀವು ನನ್ನ ಪಾಲಿಗೆ ಸಾಂಟಾ ಕ್ಲಾಸ್. ನೀವು ಸಿನಿಮಾ ಕೆಲಸಗಳನ್ನು ಶುರು ಮಾಡಿಕೊಳ್ಳಿ. ನಾನು ಟೈಮ್‌ಗೆ ಸರಿಯಾಗಿ ಹಾಜರ್ ಆಗುತ್ತೇನೆ.  ನಿಮ್ಮ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿ ಇದೆ. ‘ಡಂಕಿ’ ಚಿತ್ರ ಡಿಸೆಂಬರ್ 22, 2023 ರಂದು ಬಿಡುಗಡೆಯಾಗಲಿದೆ’’ ಎಂದು ಇನ್​ಸ್ಟಾಗ್ರಾಮ್​ನಲ್ಲಿ (Instagram) ಬರೆದುಕೊಂಡಿದ್ದರು.

Tap to resize

Latest Videos

ಆದಾಯ ತೆರಿಗೆ ಪಾವತಿಯ ಗುಟ್ಟು ರಟ್ಟು ಮಾಡಿದ ನಟ Akshay Kumar
 
ಇದೀಗ ಇವರ ಈ ರೀತಿಯ ಶ್ರದ್ಧೆಯ ಕುರಿತೇ ರಾಜ್​ಕುಮಾರ್​ ಅವರು ಮಾತನಾಡಿದ್ದಾರೆ.  ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ರಾಜ್‌ಕುಮಾರ್  ಅವರು, ಶಾರುಖ್ ಖಾನ್ ಅವರೊಂದಿಗೆ ಡುಂಕಿಯಲ್ಲಿ ಕೆಲಸ ಮಾಡುತ್ತಿರುವ ವಿಷಯದ ಕುರಿತು ಮಾಹಿತಿ ನೀಡುತ್ತಾ ಕೆಲವೊಂದು ವಿಷಯಗಳನ್ನು ಹೇಳಿಕೊಂಡಿದ್ದಾರೆ.  ಶಾರುಖ್ ಖಾನ್ ಕಠಿಣ ಪರಿಶ್ರಮಿ ಮತ್ತು ತಮ್ಮ ಪಾತ್ರಕ್ಕಾಗಿ ಸಾಕಷ್ಟು ಮುಂಚಿತವಾಗಿ ತಯಾರಿ ನಡೆಸುತ್ತಾರೆ ಎಂದು ರಾಜ್​ಕುಮಾರ್​  ಹೇಳಿದ್ದಾರೆ.  'ಎಸ್‌ಆರ್‌ಕೆ (SRK) ಅವರೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ. ಈ ಪಠಾಣ್ ನಕ್ಷತ್ರ ನಿಜಕ್ಕೂ ನಕ್ಷತ್ರವೇ' ಎಂದು ಹಿರಾನಿ ಶಾರುಖ್​ ಅವರನ್ನು ಶ್ಲಾಘಿಸಿದ್ದಾರೆ. 

ಶಾರುಖ್​ ಅವರು  ಸೆಟ್‌ಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತಾರೆ.  ಯಾವಾಗಲೂ ತಮ್ಮ ಸುತ್ತಲಿನ ಪ್ರತಿಯೊಬ್ಬರೂ ಸಂತೋಷವಾಗಿರಲಿ ಎಂದು ಹಾರೈಸುತ್ತಾರೆ. ಶಾರುಖ್​ ಅವರು ತಮ್ಮ ಪಾತ್ರಕ್ಕಾಗಿ ತುಂಬಾ ತಯಾರಿ ನಡೆಸುತ್ತಾರೆ. ಅವರು ಇಷ್ಟೊಂದು ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ ನನಗೆ  ತಿಳಿದೇ ಇರಲಿಲ್ಲ ಎಂದಿದ್ದಾರೆ. ಡುಂಕಿಗಾಗಿ ಶಾರುಖ್ ಖಾನ್ ತಮ್ಮ ಪಾತ್ರಕ್ಕಾಗಿ ಹೇಗೆ ತಯಾರಿ ನಡೆಸಿದ್ದರು ಎಂಬುದನ್ನು ರಾಜ್‌ಕುಮಾರ್ ಬಹಿರಂಗಪಡಿಸಿದ್ದಾರೆ. 'ಸೂಪರ್‌ಸ್ಟಾರ್  ದೃಶ್ಯವನ್ನು (scene) ಹೇಗೆ ನಿರ್ವಹಿಸುತ್ತಾರೆ  ಎಂಬುದಕ್ಕೆ 15 ಮಾರ್ಗಗಳಿವೆ' ಎಂದು ರಾಜ್​ಕುಮಾರ್​ ಹಿರಾನಿ ಹೇಳಿದರು. 'ನಾನು ಚಿತ್ರೀಕರಣಕ್ಕಾಗಿ ಎರಡು ದಿನಗಳನ್ನು ಇಟ್ಟುಕೊಂಡರೆ,  ಎಸ್‌ಆರ್‌ಕೆ ಎರಡು ಗಂಟೆಗಳಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಬಿಡುತ್ತಾರೆ. ಅವರೊಬ್ಬ ಮೋಡಿಗಾರ' ಎಂದಿದ್ದಾರೆ.  'ಅವರು ಭಾಷೆಯ ಮೇಲೆ ಹೆಚ್ಚಿನ ಹಿಡಿತ ಹೊಂದಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಸೆಟ್‌ಗೆ ಬರುವ ಮೂಲಕ ಶಾರುಖ್​ ತಮ್ಮನ್ನು ಆಶ್ಚರ್ಯಗೊಳಿಸುತ್ತಾರೆ' ಎಂದು ಬಹಿರಂಗಪಡಿಸಿದರು.

Anchor Anushree: ತಮಿಳು ನಟನ ಜೊತೆ ಅನುಶ್ರೀ ಫೋಟೋ ವೈರಲ್, ಕನ್ನಡಿಗರ ತರಾಟೆ
 

click me!