ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!

Published : Feb 26, 2023, 10:35 PM IST
ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!

ಸಾರಾಂಶ

ಈ ವರ್ಷ ಹಲವು ಬಾಲಿವುಡ್​ ತಾರೆಯರ ಮದುವೆಯ ಬೆನ್ನಲ್ಲೇ ನಟಿ ಪರಿಣಿತಿ ಚೋಪ್ರಾ ಕೂಡ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಂದರ್ಶನದೊಂದರಲ್ಲಿ ಅವರು ಹೇಳಿದ್ದೇನು?   

2022-23  ಬಾಲಿವುಡ್​ನಲ್ಲಿ ಗಟ್ಟಿಮೇಳ, ಮಕ್ಕಳ ನಿನಾದ ಕೇಳಿದ ವರ್ಷ. ಕೆಎಲ್ ರಾಹುಲ್-ಅಥಿಯಾ ಶೆಟ್ಟಿಯಿಂದ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ, ಅಭಿಷೇಕ್ ಪಾಠಕ್-ಶಿವಲೀಕಾ ಒಬೆರಾಯ್​ವರೆಗೆ ಮಾನ್ವಿ ಗಗ್ರೂ-ವರುಣ್ ಕುಮಾರ್ ಮತ್ತು ಸ್ವರಾ ಭಾಸ್ಕರ್-ಫಹಾದ್ ಅಹ್ಮದ್... ಹೀಗೆ ಅನೇಕ ಮಂದಿ ದಾಂಪತ್ಯಕ್ಕೆ ಕಾಲಿಟ್ಟರೆ, ಅಪ್ಪ-ಅಮ್ಮನಾದವರೂ ಹಲವರು. ಇದೇ ಕಾರಣಕ್ಕೆ ಮದುವೆಯಾಗದೇ ಇದ್ದ ಬೆಡಗಿಯರು ಸದ್ಯ ಎಲ್ಲಿಯೇ ಹೋದರೂ ಮದುವೆ ಯಾವಾಗ ಎಂಬ ಪ್ರಶ್ನೆ ಅವರ ಬೆನ್ನು ಹತ್ತುತ್ತದೆ. ಅಂಥದ್ದೇ ಪ್ರಶ್ನೆಯೊಂದು ಕ್ಯೂಟ್​ ತಾರೆ ಎನಿಸಿಕೊಂಡಿರುವ ಬಾಲಿವುಡ್​ನ ಪರಿಣಿತಿ ಚೋಪ್ರಾ (Parineeti Chopra) ಅವರ ಬೆನ್ನನ್ನೂ ಹತ್ತಿದೆ. ನಿಮ್ಮ ಚಿತ್ರರಂಗದ ಸ್ನೇಹಿತ- ಸ್ನೇಹಿತೆಯರೆಲ್ಲಾ ಮದುವೆಯಾದರು, ನಿಮ್ಮದು ಯಾವಾಗ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಇದೀಗ ಎಲ್ಲರ ಬಾಯಿಯನ್ನು ಮುಚ್ಚಿಸಿರೋ ಪರಿಣಿತಿ ತಮಗೆ ಹುಡುಗನನ್ನು ಹುಡುಕಿ ಕೊಡಿ ಎಂದಿದ್ದಾರೆ.

34 ವರ್ಷದ ಈ ಬೆಡಗಿ ಸಂದರ್ಶನವೊಂದರಲ್ಲಿ (Interview) ನೀವೇ ಹುಡುಗನನ್ನು ಹುಡುಕಿ ಕೊಡಿ ಎಂದು ಜನರಿಗೆ ಹೇಳಿದ್ದಾರೆ. ಈ ಮೂಲಕ ಮದುವೆಯಾಗುವ ಆಸೆಯನ್ನು  ವ್ಯಕ್ತಪಡಿಸಿದ್ದಾರೆ. ಇನ್ನೂ ತಾವು ಸಿಂಗಲ್ ಇರುವುದಾಗಿ ಹೇಳಿಕೊಂಡಿರುವ ನಟಿ, ಮಿಂಗಲ್ ಆಗೋಕೆ ರೆಡಿ ಎಂದಿದ್ದಾರೆ.  ಬಾಲಿವುಡ್​ನಲ್ಲಿ  ನಡೆಯುತ್ತಿರುವ ತಾರಾ ಮದುವೆಗಳನ್ನು ಕಂಡಾಗ ತಮಗೂ ಮದುವೆ ಆಗಬೇಕು ಎನ್ನುವ ಆಸೆ ಮೂಡುತ್ತಿದೆ ಎಂದಿರುವ ಪರಿಣಿತಿ,  ಒಳ್ಳೆಯ ಹುಡುಗ ಇದ್ದರೆ ತಿಳಿಸಿ ಎಂದಿದ್ದಾರೆ. 'ಮದುವೆಯಾಗಬೇಕು ಎಂದರೆ  ಒಳ್ಳೆಯ ಹುಡುಗ ಸಿಗಬೇಕಲ್ಲ. ಬೇಗ ಒಬ್ಬ ಹುಡುಗನನ್ನು ಹುಡುಕಿ ಕೊಡಿ' ಎಂದಿದ್ದಾರೆ. ‘ಅನೇಕ ನಟ ನಟಿಯರು ಮದುವೆ ಆಗುತ್ತಿದ್ದಾರೆ. ಅವರನ್ನೆಲ್ಲ ನೋಡುತ್ತಿದ್ದರೆ, ನನಗೂ ಮದುವೆ ಆಗುವ ಆಸೆ ಆಗುತ್ತದೆ. ಮಕ್ಕಳನ್ನು ಹೊಂದಬೇಕು ಅನಿಸುತ್ತದೆ. ನಾನಿನ್ನೂ ಸಿಂಗಲ್. ಮಿಂಗ್ ಆಗುವುದಕ್ಕೆ ತಯಾರಿದ್ದೇನೆ. ಹುಡುಗ ಸಿಗಬೇಕು ಅಷ್ಟೇ’ ಎಂದು ತಮಾಷೆಯಾಗಿ ಹೇಳಿದ್ದಾರೆ. 

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?

ಸದ್ಯ  ಪರಿಣಿತಿ ಚೋಪ್ರಾ ಅವರ ಕೈಯಲ್ಲಿ ಹೇಳಿಕೊಳ್ಳುವಂಥ ಸಿನಿಮಾಗಳೇನೂ ಇಲ್ಲ. ಅಂದಹಾಗೆ ಈಕೆ ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ. ಪ್ರಿಯಾಂಕಾ (Priyanka Chopra) ಕೂಡ ಈಗ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದು, ತಂಗಿಯ ಮದುವೆಯ ಬಗ್ಗೆ ಪ್ರಶ್ನೆ ಆರಂಭವಾಗಿದೆ. ಹಾಗಿದ್ದರೆ ಡೇಟಿಂಗ್​ ಅಂತ ಯಾರ ಜೊತೆನೂ ಹೋಗ್ತಿಲ್ವಾ ಎಂದು ಕೇಳಿದಾಗ, ಪರಿಣಿತಿ ನೋ ವೇ ಎಂದಿದ್ದಾರೆ. 'ಸದ್ಯ ನಾನು ಯಾರ ಜೊತೆಯೂ  ಡೇಟಿಂಗ್ ಮಾಡುತ್ತಿಲ್ಲ. ಈಗ ಮದುವೆಯಾಗಿರುವ ನನ್ನ ಸಿನಿಮಾ  ಸ್ನೇಹಿತ-ಸ್ನೇಹಿತೆಯರೆಲ್ಲರೂ  ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದವರು. ಈಗ ಮದುವೆಯಾಗಿದ್ದಾರೆ. ಸದ್ಯ ನಾನು ಯಾರನ್ನೂ ಪ್ರೀತಿಸುತ್ತಿಲ್ಲ. ಡೇಟಿಂಗ್ ವಿಚಾರದಲ್ಲಿ ನಾನು ದೂರ. ಯಾರೊಂದಿಗೂ ನನ್ನ ಹೆಸರು ತಳುಕು ಹಾಕಿಕೊಂಡಿಲ್ಲ. ಆ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಬಂದಿದ್ದೇನೆ. ಹಾಗಾಗಿ ಒಳ್ಳೆಯ ಹುಡುಗ ಸಿಗುತ್ತಾನೆ ಎನ್ನುವ ನಂಬಿಕೆ ನನಗಿದೆ.  ನಾನು ನನ್ನ ಹುಡುಗನನ್ನು ನೋಡಿದಾಗ, ಆತನೊಟ್ಟಿಗೆ ಪ್ರೀತಿಲಿ ಬಿದ್ದಾಗ ಮದುವೆ ಆಗುತ್ತೇನೆ" ಎಂದು ಪರಿಣಿತಿ ಚೋಪ್ರಾ ನಗುತ್ತಾ ಹೇಳಿದ್ದಾರೆ. 

ಬಿಸಿಲಿಗೆ ಮೈಯೊಡ್ಡಿ ಕುಳಿತ ಪ್ರಿಯಾಂಕಾ ಚೋಪ್ರ ತಂಗಿ; ಅಬ್ಬಾ! ಸಖತ್ ಹಾಟ್ ಎಂದ ಫ್ಯಾನ್ಸ್

'ಲೇಡಿಸ್ ವರ್ಸಸ್ ರಿಕ್ಕಿಬೇಹ್ಲ್' ಸಿನಿಮಾ ಮೂಲಕ ಬಾಲಿವುಡ್ (Bollywood) ಪ್ರವೇಶಿಸಿದ ಪರಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಗ್ಲಾಮರ್ ಡಾಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ 'ಉನ್ಚೈ' ಸಿನಿಮಾದಲ್ಲಿ ಕೊನೆಯ ಬಾರಿಗೆ ಪರಿಣಿತಿ ಚೋಪ್ರಾ ನಟಿಸಿದ್ದರು. ಸದ್ಯ 'ಕ್ಯಾಪ್ಸ್ಯುಲ್ ಗಿಲ್' ಹಾಗೂ 'ಚಮ್ಕಿಲಾ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ (Cinema) ನಟಿಸಿರುವ ಅವರು, ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಇದ್ದರೂ, ಹ್ಯಾಪಿ ಜೀವನ ಕಳೆಯುತ್ತಿದ್ದಾರಂತೆ. ಸಿಕ್ಕಿರುವ ಪಾತ್ರಗಳು ತಮಗೆ ಖುಷಿ ಕೊಟ್ಟಿರುವುದರಿಂದ ತಮಗೆ ಯಾವುದೇ ನೋವಿಲ್ಲ ಎಂದಿದ್ದಾರೆ. 

ಅಕ್ಕ ಪ್ರಿಯಾಂಕಾ ಚೋಪ್ರಾರ ಮಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಪರಿಣಿತಿ,  'ಈ ಜನರೇಷನ್‌ನಲ್ಲಿ ಚೋಪ್ರಾ ಫ್ಯಾಮಿಲಿಯ ಮೊದಲ ಮಗು ಅವಳು. ನಾನು ನಮ್ಮ ಮನೆಯ ಮುದ್ದು ಬಂಗಾರಿಯನ್ನು ಭೇಟಿ ಆಗಿದ್ದೆ, ತುಂಬಾ ಕ್ಯೂಟ್​ ಆಗಿದ್ದಾಳೆ.  ಆಕೆ ನಮ್ಮ ಮನೆಯ ಸುಂದರವಾದ ಅದ್ಭುತ" ಎಂದಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?