ತೆರೆ ಮೇಲೆ KGF ಮೇಕರ್ಸ್ ಸೃಷ್ಟಿಯ 'ಸಲಾರ್' ದರ್ಶನ: ಪ್ಯಾನ್ ಇಂಡಿಯಾ ನೀಲ್-ಪ್ರಭಾಸ್ ಬೆಸ್ಟ್ ರಿವ್ಯೂ!

By Govindaraj S  |  First Published Dec 23, 2023, 11:58 AM IST

ದೊಡ್ಡ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್.. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಬಹು ದೊಡ್ಡ ಸ್ಟಾರ್ ಕಾಸ್ಟ್... ಇಂಡಿಯಾದಲ್ಲಿರೋ ಬೆಸ್ಟ್ ಟೆಕ್ನೀಷಿಯನ್ಸ್ ಕೆಲಸ.. ಆ ಸಿನಿಮಾವೇ ಸಲಾರ್. 


ದೊಡ್ಡ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್.. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಬಹು ದೊಡ್ಡ ಸ್ಟಾರ್ ಕಾಸ್ಟ್... ಇಂಡಿಯಾದಲ್ಲಿರೋ ಬೆಸ್ಟ್ ಟೆಕ್ನೀಷಿಯನ್ಸ್ ಕೆಲಸ.. ಆ ಸಿನಿಮಾವೇ ಸಲಾರ್. ವೈಟ್ ಈಸ್ ಓವರ್. ಬಿಗ್ ಸ್ಕ್ರೀನ್ ಮೇಲೆ ಅರೈವ್ ಆಗಿದೆ ಸಲಾರ್.. ಯೆಸ್, ಕೆಜಿಎಫ್ ಸಿನಿ ಮೇಕರ್ಸ್ ಸೃಷ್ಟಿಯ ಸಲಾರ್ ಸಿನಿಮಾ ಇಂದು ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ತೆರೆ ಮೇಲೆ ಡೈನೋಸಾರ್ ಬಂದಾಗಿದೆ. ದೇವ-ವರದರಾಜ ಮನ್ನಾರ್ ದೋಸ್ತಿ, ಕುಸ್ತಿಯ ಕಥೆ ರಿವೀಲ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ಹೇಗಿರುತ್ತೆ..? ಅದಕ್ಕೂ ಉತ್ತರ ಸಿಕ್ಕಿದೆ. 

ಸಲಾರ್ ದೋಸ್ತಿಗಳ ಭರ್ಜರಿ ಆಕ್ಷನ್ ಡ್ರಾಮ ಅನ್ನೋದು ಪ್ರ್ಯೂ ಆಗಿದೆ. ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್ಹೀಗೆ ಪ್ರತಿ ಪ್ರೇಮ್ನಲ್ಲೂ ಸಲಾರ್ ಹಲ್ಚೆಲ್ ಎಬ್ಬಿಸಿತ್ತು. ಹಾಗಾದ್ರೆ ಸಲಾರ್ ಕಥೆ ಏನು.? ಅದೇ ಇಂಟ್ರೆಸ್ಟಿಂಗ್.. ಈ ಸಿನಿಮಾದಲ್ಲಿ ದೋಸ್ತ್ಗಳ ದರ್ಬಾರ್ ಇದೆ. ಬಡಿದಾಟ ಇದೆ. ದೋಸ್ತ್ಗಳಾಗಿ ಪ್ರಭಾಸ್ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದಾರೆ. ಪ್ರಭಾಸ್ರದ್ದು ದೇವ ಅನ್ನೋ ಪಾತ್ರ. ಪೃಥ್ವಿರಾಜ್ ಸುಕುಮಾರನ್ ರದ್ದು ವರದರಾಜ ಮನ್ನಾರ್ ಅನ್ನೋ ರೋಲ್. ಖಾನ್ಸರ್ ಅನ್ನೋ ಊರಿನಲ್ಲಿ ಇವರಿಬ್ಬರು ಬಾಲ್ಯದ ಗೆಳೆಯರು. ಆದ್ರೆ ಕಾರಣಾಂತರಗಳಿಂದ ದೇವ ಖಾನ್ಸರ್ ಬಿಟ್ಟು ತಾಯಿ ಜೊತೆ ಅಸ್ಸಾಂ ಹೋಗ್ತಾನೆ. 

Tap to resize

Latest Videos

ತಾಯಿಗೆ ಕೊಟ್ಟ ಮಾತಿನಂತೆ ಆತ ಆಯುಧ ಹಿಡಿಯಲ್ಲ. ಯಾರ ಮೇಲೂ ಕೋಪಿಸಿಕೊಳ್ಳೋಲ್ಲಾ ಹೀಗಿರುವಾಗ ಆದ್ಯ ಅನ್ನೋ ರೋಲ್ ಮಾಡಿರೋ ನಟಿ ಶೃತಿ ಹಾಸನ್ ವಿದೇಶದಿಂದ ಕೊಲ್ಕತ್ತಾಗೆ ಬರುತ್ತಾಳೆ ಆ ನಂತರ ಏನೆಲ್ಲಾ ಆಗುತ್ತೆ ಅನ್ನೋದೆ ಸಲಾರ್ನ ಇಂಟ್ರೆಸ್ಟಿಂಗ್ ಕಹಾನಿ. ಟಾಲಿವುಡ್ 'ಡಾರ್ಲಿಂಗ್' ಪ್ರಭಾಸ್ ಫ್ಯಾನ್ಸ್ಗೆ 'ಸಲಾರ್' ಸಿನಿಮಾ ಭರ್ಜರಿ ಬಾಡೂಟವೇ ಸರಿ. ಮೂರ್ನಾಲ್ಕು ವರ್ಷಗಳಿಂದ ಫ್ಯಾನ್ಸ್ ಎಂಜಾಯ್ಮಾಡುವಂತಹ ಸಿನಿಮಾ ಪ್ರಭಾಸ್ ಕೊಟ್ಟಿಲ್ಲ. ಆದ್ರೆ ಆ ಎಲ್ಲಾ ನಿರಾಸೆಯನ್ನ ಸಲಾರ್ ನೀಗಿಸುತ್ತೆ. ಫ್ರಭಾಸ್ ಆಕ್ಷನ್ ಧಮಾಕ ಮೈ ಜುಮ್ ಎನ್ನಿಸುತ್ತೆ. ಈ ಸಿನಿಮಾ ಪ್ರಭಾಸ್ ಸಿನಿ ಕರಿಯರ್ನ ಬೆಸ್ಟ್ ಮೂವಿಗಳಲ್ಲೊಂದು ಅಂತ ಫ್ಯಾನ್ಸ್ ರಿವ್ಯೂ ಮಾಡ್ತಿದ್ದಾರೆ. 

BBK10: 'ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ': ವಿನಯ್​ಗೆ ಖಡಕ್​ ವಾರ್ನಿಂಗ್​ ಕೊಟ್ಟ ಶ್ರುತಿ!

ಸಲಾರ್ನಲ್ಲಿ ಪ್ರಭಾಸ್‌ ಆರ್ಭಟಿಸಿದ್ದಕ್ಕಿಂತ ಕೊಚ್ಚುವುದೇ ಹೆಚ್ಚು. ಇದರ ಜೊತೆಗೆ ಪ್ರಶಾಂತ್ ನೀಲ್ ಸೃಷ್ಟಿಸಿರೋ ಅದ್ಧೂರಿ ಮೇಕಿಂಗ್ ಮತ್ತೆ ವಾವ್ಹ್ ಅನಿಸುತ್ತೆ. ಭುವನ್ ಗೌಡ ಕ್ಯಾರೆಮಾ ಕೈ ಚಳಕ ಇಲ್ಲೂ ಸೂಪರ್ ಆಗಿದೆ. ರವಿ ಬಸ್ರೂರು ಮ್ಯೂಸಿಕ್ ಬಗ್ಗೆ ಎರಡು ಮಾತಿಲ್ಲ. ಹಾಗೆ ಪ್ರಭಾಸ್, ಪೃತ್ವಿರಾಜ್, ಶೃತಿ ಹಾಸನ್ ಜೊತೆಗೆ ಜಗಪತಿ ಬಾಬು, ಈಶ್ವರಿ ರಾವ್, ಜಾನ್ ವಿಜಯ್, ಟಿನ್ನು ಆನಂದ್, ಬ್ರಹ್ಮಾಜಿ, ಮೈಮ್ ಗೋಪಿ, ಬಾಬಿ ಸಿಂಹ ಸಿನಿಮಾದಲ್ಲಿ ಹೈಲೆಟ್ ಆಗಿದ್ದಾರೆ. 'ಸಲಾರ್' ನಲ್ಲಿ ಕನ್ನಡ ಕಲಾವಿದರಿಗೆ ಸ್ಕೋಪ್ಸಿಕ್ಕಿದೆ. ಪೃಥ್ವಿರಾಜ್ತಮ್ಮನ ರೋಲ್ ಮಾಡಿರೋ ಪ್ರಮೋದ್ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದಾರೆ. 

ನವೀನ್ ಶಂಕರ್ ರೋಲ್ಗೆ ಜಾಸ್ತಿ ಡೈಲಾಗ್ ಇಲ್ಲದೇ ಇದ್ರೂ ಇಂಟ್ರೆಸ್ಟಿಂಗ್ ರೋಲ್ ಅನ್ನಿಸುತ್ತೆ. ಇನ್ನು ಗರುಡ ರಾಮ್, ದೇವರಾಜ್, ಮಧು ಗುರುಸ್ವಾಮಿ, ರವಿ ಭಟ್, ಭಜರಂಗಿ ಲೋಕಿ, ಅಶ್ವಿನ್ ಹಾಸನ್ ಸಲಾರ್ನಲ್ಲಿ ಜಳಪಿಸಿದ್ದಾರೆ. ಸಲಾರ್ ಕನ್ನಡದ ಉಗ್ರಂ ರಿಮೇಕ್ ಅನ್ನೋ ಟಾಕ್ ಇತ್ತು. ಈ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಮಾತನಾಡಿ, ಉಗ್ರಂ ಸ್ಟೋರಿ ಲೈನ್ಅನ್ನ ಬದಲಿಸಿಕೊಂಡು ದೊಡ್ಡ ಕ್ಯಾನ್ವಾಸ್ನಲ್ಲಿ ಈ ಸಿನಿಮಾ ಮಾಡಿದ್ದೇವೆ ಅಂದಿದ್ರು. ಇದು ನಿಜ ಕೂಡ ಹಾಗಂತ ಇದು ಯಥಾವತ್ 'ಉಗ್ರಂ' ಕಾಪಿನಾ ಅಂದ್ರೆ ಖಂಡಿತಾ ಅಲ್ಲವೇ ಅಲ್ಲ. ಇದು ಪಕ್ಕಾ ಪ್ರಶಾಂತ್ ನೀಲ್ ಸ್ಟೈಲ್ ಸಿನಿಮಾ. 

ಕಲರ್‌ಫುಲ್ ಸೀರೆ, ತೋಳಿಲ್ಲದ ಬ್ಲೌಸ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ: ಕಿವಿ ಹುಷಾರು ತಾಯಿ ಎಂದ ಫ್ಯಾನ್ಸ್‌!

ತಾಯಿ ಸೆಂಟಿಮೆಂಟ್, ಲವ್ ಸ್ಟೋರಿ, ಫ್ರೆಂಡ್ಶಿಪ್ ಎಳೆಗಳನ್ನು ಮಾತ್ರ 'ಉಗ್ರಂ' ಸಿನಿಮಾದಿಂದ ತೆಗೆದುಕೊಂಡಿರುವ ಪ್ರಶಾಂತ್ನೀಲ್ ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಸಲಾರ್ ಎರಡು ಪಾರ್ಟ್ ಸಿನಿಮಾ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಹೀಗಾಗಿ ಡೈರೆಕ್ಟರ್ ಪ್ರಶಾಂತ್ ನೀಲ್ ಸಲಾರ್ ಚಾಪ್ಟರ್ ಒನ್ ಕ್ಲೈಮ್ಯಾಕ್ಸ್ನಲ್ಲಿ ಭಾರಿ ಟ್ವಿಸ್ಟ್ ಕೊಟ್ಟು, ಪಾರ್ಟ್ 2 ಮೇಲೆ ಎಕ್ಸ್ಪಟೇಷನ್ ಹೆಚ್ಚಿಸಿದ್ದಾರೆ. ಪ್ರಭಾಸ್ಫ್ಯಾನ್ಸ್ಗೆ, ಆಕ್ಷನ್ ಇಷ್ಟ ಪಡೋರಿಗೆ ಸಲಾರ್ ನಿಜ್ವಾಗ್ಲು ಹಬ್ಬವೇ ಸರಿ. ಈ ಮೂಲಕ ಕನ್ನಡಿಗರ ಹೊಂಬಾಳೆ ಫಿಲಮ್ಸ್ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಶೈನ್ ಆಗ್ತಿದ್ದು, ಡಾರ್ಲಿಂಗ್ ಪ್ರಭಾಸ್ ಗೆಲುವಿನ ಟ್ರ್ಯಾಕ್ಗೆ ಕಮ್ ಬ್ಯಾಕ್ ಆಗಿದ್ದಾರೆ.

click me!