'ಅನಿಮಲ್​' ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ವಿಲನ್​ ಮಾಡಿದ್ಯಾಕೆ? ನಿರ್ದೇಶಕ ಕೊಟ್ರು ಈ ಉತ್ತರ...

By Suvarna News  |  First Published Dec 23, 2023, 10:16 AM IST

'ಅನಿಮಲ್​' ಚಿತ್ರದಲ್ಲಿ ವಿಲನ್​ ಆಗಿ ನಟಿಸಿರುವ, ಅತ್ಯಂತ ಕ್ರೂರಿ ಎನಿಸಿರುವ ಬಾಬಿ ಡಿಯೋಲ್​ ಪಾತ್ರವನ್ನು ಮುಸ್ಲಿಂ ಆಗಿ ಮಾಡಿದ್ದು ಏಕೆ? ನಿರ್ದೇಶಕ ಹೇಳಿದ್ದೇನು? 


'ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್​ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ.   ಈ ಚಿತ್ರದಲ್ಲಿ  ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ.  ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್‌ ಕಪೂರ್‌   ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್‌ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ.  ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇದೇ ಡಿಸೆಂಬರ್ ​1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ  ಜಗತ್ತಿನಾದ್ಯಂತ 800 ಕೋಟಿ ರೂಪಾಯಿ ದಾಟಿದೆ. ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ. 

ಇದರಲ್ಲಿ ವಿಲನ್​ ಆಗಿ ನಟಿಸಿರುವುದು ಬಾಬಿ ಡಿಯೋಲ್​. ಇಲ್ಲಿ ಅವರ ಪಾತ್ರದ ಹೆಸರು  ಅಬ್ರಾರ್​ ಹಖ್ ಅಂದ್ರೆ ಇದು ಮುಸ್ಲಿಂ ಪಾತ್ರ. ಚಿತ್ರದಲ್ಲಿ ಅಬ್ರಾರ್​ ಹಖ್​ ಮೂವರು ಪತ್ನಿಯರನ್ನು ಹೊಂದಿದ್ದಾನೆ.  ಆ ಪತ್ನಿಯರ ಮೇಲೆ ಆತ ದೌರ್ಜನ್ಯ ಎಸಗುತ್ತಾನೆ. ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಾನೆ. ಅತಿ ಎನ್ನುವಷ್ಟು ಕ್ರೌರ್ಯ ಇದರಲ್ಲಿ ತುಂಬಿದೆ. ಇಂಥ ಕ್ರೌರ್ಯ, ರಕ್ತಪಾತ, ಪತ್ನಿಯರ ಮೇಲಿನ ದೌರ್ಜನ್ಯದ ಪಾತ್ರವನ್ನು ಇದಾಗಲೇ ಬಾಬಿ ಡಿಯೋಲ್​ ಸಮರ್ಥಿಸಿಕೊಂಡಿದ್ದರು. ‘ನನ್ನ ಆ ಪಾತ್ರವನ್ನು ನಾನು ವಿಲನ್​ ಎಂದು ಪರಿಗಣಿಸುವುದಿಲ್ಲ. ಅಜ್ಜ ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿ ಆಘಾತಕ್ಕೆ ಒಳಗಾದ ಮಗು ಆತ. ಹಾಗಾಗಿ ಅವನಿಗೆ ಮಾತು ಹೊರಟು ಹೋಗುತ್ತದೆ. ಅಜ್ಜನ ಸಾವಿಗೆ ಸೇಡು ತೀರಿಸಿಕೊಳ್ಳಲು ಆತ ಕಾದಿರುತ್ತಾನೆ. ಅವನು ಫ್ಯಾಮಿಲಿ ಮ್ಯಾನ್​. ಆತನಿಗೆ ಮೂವರು ಹೆಂಡತಿಯರು. ಹಾಗಾಗಿ ಅವನು ರೊಮ್ಯಾಂಟಿಕ್​ ವ್ಯಕ್ತಿ. ಕುಟುಂಬಕ್ಕಾಗಿ ಅವನು ಪ್ರಾಣ ತೆಗೆಯಬಲ್ಲ ಮತ್ತು ಪ್ರಾಣ ಕೊಡಬಲ್ಲ’ ಎಂದು ಬಾಬಿ ಡಿಯೋಲ್​ ಹೇಳಿದ್ದರು. 

Tap to resize

Latest Videos

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!

ಇದೀಗ ವಿಲನ್​ ಪಾತ್ರಕ್ಕೆ ಮುಸ್ಲಿಂ ಹೆಸರು ಇಟ್ಟಿದ್ದೇಕೆ ಎನ್ನುವ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆ ಕೇಳುತ್ತಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ನಿರ್ದೇಶಕ ಸಂದೀಪ್​ ವಂಗಾ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಮರು ಕೆಟ್ಟವರು ಎಂದು ಬಿಂಬಿಸುವ ಪ್ರಯತ್ನವನ್ನು ನಿರ್ದೇಶಕ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ  ವಂಗಾ ಉತ್ತರ ನೀಡಿದ್ದಾರೆ. ಪಾತ್ರಕ್ಕೆ ಅಗತ್ಯವಾಗಿ ವಿಲನ್​ ಅನ್ನು ಮುಸ್ಲಿಂ ವ್ಯಕ್ತಿ ಮಾಡಲಾಗಿದೆ. ಇದಕ್ಕೆ ಕೆಲವು ಕಾರಣವಿದೆ. ಅದೇನೆಂದರೆ, ಸಾಮಾನ್ಯವಾಗಿ ಜನರು ಕ್ರೈಸ್ತ ಧರ್ಮ ಮತ್ತು  ಇಸ್ಲಾಂಗೆ ಮತಾಂತರವಾಗುತ್ತಾರೆಯೇ ವಿನಾ ಹಿಂದೂ ಧರ್ಮಕ್ಕೆ ಮತಾಂತರ ಆಗುವುದು ಕಡಿಮೆ. ಈ ಚಿತ್ರಕ್ಕೆ ಅದರ ಅಗತ್ಯವಿತ್ತು. ಅಷ್ಟೇ ಅಲ್ಲದೇ ಇಲ್ಲಿ ವಿಲನ್​ಗೆ ಮೂವರು ಪತ್ನಿಯರು.  ಇಸ್ಲಾಂನಲ್ಲಿ ಮಾತ್ರ ಬಹುಪತ್ನಿತ್ವಕ್ಕೆ ಅವಕಾಶ ಇದೆ. ಇದೇ ಕಾರಣಕ್ಕೆ ಮುಸ್ಲಿಂ ಹೆಸರು ಇಡಲಾಗಿದೆಯೇ ವಿನಾ  ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸುವ ಕಾರಣದಿಂದ ಅಲ್ಲ ಎಂದಿದ್ದಾರೆ.

ಸಿನಿಮಾದಲ್ಲಿ ರಶ್ಮಿಕಾ ಹಾಗೂ ರಣ್​ಬೀರ್ ಪಾತ್ರಗಳು ಅಂತರ್ಜಾತೀಯ ವಿವಾಹ ಆಗುವ ಬಗ್ಗೆಯೂ ಕೆಲವರು ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂದೀಪ್ ರೆಡ್ಡಿ ವಂಗಾ, ‘‘ದೆಹಲಿಯಲ್ಲಿ ಹಲವು ತಮಿಳು ಹಾಗೂ ತೆಲುಗು ಕುಟುಂಬಗಳು ನೆಲೆಗೊಂಡಿರುವುದನ್ನು ನಾನು ನೋಡಿದ್ದೇನೆ. ಅಲ್ಲದೆ ವೈಯಕ್ತಿಕವಾಗಿ ನನಗೂ ಅಂತರ್​ ಧರ್ಮೀಯ, ಅಂತರ್ ಜಾತೀಯ ವಿವಾಹಗಳ ಬಗ್ಗೆ ಒಲವಿದೆ ಹಾಗಾಗಿ ಕತೆಯನ್ನು ಹಾಗೆ ಮಾಡಿದ್ದೇನೆ’’ ಎಂದಿದ್ದಾರೆ.

'ಅನಿಮಲ್'​ ರಿಲೀಸ್​ ಆಗ್ತಿದ್ದಂತೆಯೇ ಇಂಟರ್​ನೆಟ್​ ಸೆನ್ಸೇಷನ್​ ಆದ 'ಜಮಾಲ್ ಕುಡು’ ಬೆಡಗಿ ಯಾರು?
 
ಅದೇ ಇನ್ನೊಂದೆಡೆ, ಈ ಚಿತ್ರದ ಕೆಲವು ದೃಶ್ಯ ತಮಗೆ ಇಷ್ಟ ಆಗಿಲ್ಲ ಎಂದು ಬಾಬಿ ಡಿಯೋಲ್​​ ಸಹೋದರ ಸನ್ನಿ ಡಿಯೋಲ್​ ಹೇಳಿದ್ದರೆ,  ಬಾಬಿ ಡಿಯೋಲ್​ಗೆ ಮಾತ್ರ ಪತ್ನಿಯರ ಮೇಲಿನ ದೌರ್ಜನ್ಯದಲ್ಲಿಯೂ ರೊಮ್ಯಾನ್ಸ್​ ಕಂಡಿದೆಯಂತೆ!  ಅದೇನೇ ಇದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆಯನ್ನು ಜನರು ಎಷ್ಟು ಇಷ್ಟಪಟ್ಟು ನೋಡುತ್ತಾರೆ, ಜನರ ಮನಸ್ಸು ಎಷ್ಟು ಹೀನಸ್ಥಿತಿಗೆ, ಹಿಂಸಾತ್ಮಕ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಅನಿಮಲ್​ ಚಿತ್ರದ ಭರ್ಜರಿ ಕಲೆಕ್ಷನ್​ ನೋಡಿದರೆ ತಿಳಿಯುತ್ತದೆ. 
 

click me!