ಭಾರತಕ್ಕೆ ವಾಪಾಸಾಗುತ್ತಿದ್ದಂತೆ ಪ್ರಭಾಸ್‌ಗೆ ಶಾಕ್ ನೀಡಿದ ಹ್ಯಾಕರ್ಸ್: ವೈರಲ್ ವಿಡಿಯೋ ಹರಿಬಿಟ್ಟ ಕಿರಾತಕರು

By Shruthi KrishnaFirst Published Jul 28, 2023, 5:52 PM IST
Highlights

ಭಾರತಕ್ಕೆ ವಾಪಾಸಾಗುತ್ತಿದ್ದಂತೆ ಸಲಾರ್ ಸ್ಟಾರ್  ಪ್ರಭಾಸ್‌ಗೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ.  ಕಿರಾತಕರು ವೈರಲ್ ವಿಡಿಯೋ ಹರಿಬಿಟ್ಟಿದ್ದಾರೆ. 

ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ ಸಲಾರ್ ಮತ್ತು ಕಲ್ಕಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್ ಸೋಲಿನ ಬಳಿಕ ಪ್ರಭಾಸ್ ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಪ್ರಭಾಸ್ ಕೈಯಲ್ಲಿರುವ ಎರಡು ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಸಹ ವೈರಲ್ ಆಗಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಆದಿಪುರುಷ್ ರಿಲೀಸ್ ಆಗುತ್ತಿದ್ದಂತೆ ಪ್ರಭಾಸ್ ವಿದೇಶಕ್ಕೆ ಹಾರಿದ್ದರು. ಅಮೆರಿಕಾದಲ್ಲಿದ್ದ ಪ್ರಭಾಸ್ ಮೊನ್ನೆಯಷ್ಟೆ ಭಾರತಕ್ಕೆ ವಾಪಾಸ್ ಆಗಿದ್ದಾರೆ. ತಾಯ್ನಾಡಿಗೆ ಬರುತ್ತಿದ್ದಂತೆ ಪ್ರಭಾಸ್‌ಗೆ ದೊಡ್ಡ ಶಾಕ್ ಎದುರಾಗಿದೆ. ಹ್ಯಾಕರ್ಸ್‌ಗಳು ಪ್ರಭಾಸ್ ಅವರನ್ನು ಬಿಟ್ಟಿಲ್ಲ.

ಪ್ರಭಾಸ್ ಫೇಸ್‌ಬುಕ್ ಖಾತೆಯನ್ನು ಕಿರಾತಕರು ಹ್ಯಾಕ್ ಮಾಡಿದ್ದಾರೆ. ಪ್ರಭಾಸ್ ಖಾತೆ ಹ್ಯಾಕ್ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ 'ಮನುಷ್ಯರು ದುರಾದೃಷ್ಟವಂತರು' ಎನ್ನುವ ಸಾಲನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋ ಜೊತೆಗೆ ಪೋಸ್ಟ್ ಮಾಡಲಾಗಿದೆ. ಇದನ್ನು ಅಭಿಮಾನಿಗಳು ಶಾಕ್ ಆಗಿದ್ದಾರೆ. ಪ್ರಭಾಸ್ ಯಾಕೆ ಇಂಥ ವಿಡಿಯೋ ಶೇರ್ ಮಾಡಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದರು. 

Latest Videos

ಪ್ರಭಾಸ್ ಅವರಿಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ತಕ್ಷಣ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ಬಹಿರಂಗ ಪಡಿಸಿದರು. ತಕ್ಷಣ ಪ್ರಭಾಸ್ ತಂಡ ಎಚ್ಚೆತ್ತುಕೊಂಡು ಆ ಕಡೆ ಗಮನ ಹರಿಸಿದ್ದಾರೆ.  ಅದನ್ನು ಸರಿಪಡಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಬಳಿಕ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಭಾಸ್ ತಮ್ಮ ಎಫ್‌ಬಿ ಪೇಜ್‌ನಲ್ಲಿ 24 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಫಾಲೋ ಮಾಡುವ ಏಕೈಕ ವ್ಯಕ್ತಿ ಎಂದರೆ ಎಸ್ ಎಸ್ ರಾಜಮೌಳಿ.

ಪ್ರಭಾಸ್ ಸಿನಿಮಾಗೆ ‘ಕಲ್ಕಿ 2898-ಎಡಿ’ ಟೈಟಲ್ ಫಿಕ್ಸ್: ಟೀಸರ್ ನೋಡಿ ಪ್ರಶ್ನೆ ಕೇಳಿದ ರಾಜಮೌಳಿ

ಕಲ್ಕಿ 2898 AD ಬಗ್ಗೆ 

ಅಂದಹಾಗೆ ಅಮೆರಿಕಾದಲ್ಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಕಲ್ಕಿ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಕಲ್ಕಿ 2898 AD ಟ್ರೈಲರ್ ರಿಲೀಸ್ ಮಾಡಲಾಗಿದ್ದು ಆ ಸಮಾರಂಭದಲ್ಲಿ ಪ್ರಭಾಸ್ ಭಾಗಿಯಾಗಿದ್ದರು. ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

'ಆದಿಪುರುಷ್' ರಿಲೀಸ್ ಬೆನ್ನಲ್ಲೇ ದೇಶ ಬಿಟ್ಟಿದ್ದ ಪ್ರಭಾಸ್ ಭಾರತಕ್ಕೆ ವಾಪಾಸ್: ಮತ್ತೆ ಶುರು 'ಸಲಾರ್' ಕೆಲಸ

ಸಲಾರ್ ಸಿನಿಮಾದ ನಿರೀಕ್ಷೆ 

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಸಲಾರ್ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದು ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಹಾಗಾಗಿ ಭಾರಿ ನಿರೀಕ್ಷೆ ಮೂಡಿಸಿದೆ. ಸಲಾರ್ ಎರಡು ಪಾರ್ಟ್‌ನಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಭಾಗ ಸೆಪ್ಟಂಬರ್ 28ಕ್ಕೆ ರಿಲೀಸ್ ಆಗುತ್ತಿದೆ. 

click me!