ದಿ ನೈಟ್ ಮ್ಯಾನೇಜರ್ ವೆಬ್ಸೀರೀಸ್ನಲ್ಲಿ ನಟ ಅನಿಲ್ ಕಪೂರ್ ಅವರು ತಮ್ಮ ಮಗಳಿಗಿಂತಲೂ ಚಿಕ್ಕ ವಯಸ್ಸಿನ ನಟಿಯ ಜೊತೆ ಲಿಪ್ಲಾಕ್ ಮಾಡಿದ್ದು, ಅದು ಸಕತ್ ಟ್ರೋಲ್ ಆಗುತ್ತಿದೆ.
ಸಿನಿ ಇಂಡಸ್ಟ್ರಿಯಲ್ಲಿ ಚಿಕ್ಕ ವಯಸ್ಸಿನ ನಟಿಯರ ಜೊತೆ ಸ್ಟಾರ್ ನಟರು ಫ್ಲರ್ಟ್ (Flirt) ಮಾಡುವುದು ಮಾಮೂಲು. ಇಂಡಸ್ಟ್ರಿಯಲ್ಲಿ ಒಂದು ಮಟ್ಟದ ಖ್ಯಾತಿ ಪಡೆದ ಬಳಿಕ ಅವರ ಜೊತೆ ಕೆಲಸ ಮಾಡಲು ಹೊಸದಾಗಿ ಸಿನಿಮಾಕ್ಕೆ ಎಂಟ್ರಿ ಕೊಡುವ ನಟಿಯರೂ ಇಷ್ಟಪಡುವ ಕಾರಣ, ಇಲ್ಲಿ ವಯಸ್ಸಿನ ಅಂತರವೇ ಇರುವುದಿಲ್ಲ. ನಟಿಯರಿಗೆ ವಯಸ್ಸು 35 ದಾಟಿದರೆ ಅವರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಕಷ್ಟವೇ. ಇನ್ನು ವಯಸ್ಸು 40 ಮೀರಿದರಂತೂ ಅವರಿಗೆ ಸಿಗುವುದು ಅಮ್ಮನ ರೋಲೋ ಇಲ್ಲವೇ ನಾಯಕಿಯ ತಂಗಿಯ ರೋಲ್ ಅಷ್ಟೇ. ಬೆರಳೆಣಿಕೆ ನಟಿಯರನ್ನು ಹೊರತುಪಡಿಸಿ ಉಳಿದವರಿಗೆ ಸಿಗುವುದು ಇಂಥ ಪಾತ್ರಗಳೇ. ಇದು ಹಿರಿತೆರೆ ಮಾತ್ರವಲ್ಲದೇ ಕಿರಿತೆರೆಗೂ ಮೀಸಲು. ಆದರೆ ನಾಯಕ ನಟರಾದವರು ವಯಸ್ಸು 60 ದಾಟಿದರೂ ನಾಯಕರಾಗಿಯೇ ಮೆರೆಯುತ್ತಾರೆ. ಅವರು ಎಂದಿಗೂ ತಮ್ಮ ಇಮೇಜನ್ನು ಸಣ್ಣಪುಟ್ಟ ಪಾತ್ರ ಮಾಡಿ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದೇ ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ನೆಲೆಯೂರಲು ಬಯಸುವ ಯುವ ನಟಿಯರೂ ಇಂಥ ಹಿರಿಯ ನಟರ ಜೊತೆ ರೊಮ್ಯಾನ್ಸ್ ಮಾಡಲು ಹಿಂಜರಿಯುವುದಿಲ್ಲ. ಇದು ಹಲವು ಬಾರಿ ಟ್ರೋಲ್ಗೆ ಒಳಗಾಗುವುದೂ ಇದೆ. ಅದರಲ್ಲಿ ಒಂದು ನೈಟ್ ಮ್ಯಾನೇಜರ್.
ಆಂಧ್ರ ನಾಡಲ್ಲಿ ಜನಿಸಿ ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಯುವ ನಟಿ ಶೋಭಿತಾ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ಗಳನ್ನು ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೇರ್ಇದೆ ಎಂಬ ಗುಸುಗುಸು ಜೋರಾಗಿಯೇ ಕೇಳಿಬರುತ್ತಲೇ ಇದೆ. ಇದೀಗ ಮತ್ತೊಂದು ವಿಚಾರದಿಂದ ಶೋಭಿತಾ ಸಖತ್ ಸುದ್ದಿಯಾಗಿದ್ದಾರೆ. ಅದು 66 ವರ್ಷದ ಸೀನಿಯರ್ ನಟನೊಂದಿಗೆ ರೊಮ್ಯಾನ್ಸ್ (Romance) ಮಾಡುವ ಮೂಲಕ ಆಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ದಿ ನೈಟ್ ಮ್ಯಾನೇಜರ್ ಪಾರ್ಟ್ 2ನಲ್ಲಿ ಅನಿಲ್ ಕಪೂರ್ ನಟಿ ಶೋಭಿತಾ (Shobhita Dhulipala) ಜೊತೆ ಲಿಪ್ಲಾಕ್ ಮಾಡಿ ರೊಮ್ಯಾನ್ಸ್ ಮಾಡಿರುವ ಫೋಟೋಗಳು ಸಕತ್ ವೈರಲ್ ಆಗಿದ್ದು, ಟ್ರೋಲ್ಗೂ ಒಳಗಾಗುತ್ತಿದೆ. ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಶೋಭಿತಾ ಧೂಲಿಪಾಲ ನಟಿಸಿರುವ ದಿ ನೈಟ್ ಮ್ಯಾನೇಜರ್ ವೆಬ್ ಸೀರಿಸ್ನ ಎರಡನೇ ಭಾಗವು ಡಿಸ್ನಿ ಪ್ಲಸ್ ಹಾಟ್ ಸ್ಪಾರ್ಟ್ನಲ್ಲಿ ಜೂನ್ 30ರಂದು ಸ್ಟ್ರೀಮ್ ಆಗಿದೆ. ನೌಕಾಪಡೆಯ ಮಾಜಿ ಅಧಿಕಾರಿ ಶಾನ್ ಸೇನ್ ಗುಪ್ತಾ ಅವರ ಸುತ್ತ ಕಥೆ ಸುತ್ತುತ್ತದೆ. ಢಾಕಾದಲ್ಲಿ ಬಾಲಕಿಯ ದುರಂತ ಸಾವು ಸರಣಿಯ ವಿಷಯವಾಗಿದೆ.
ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ Sobhita Dhulipala
ಇದರಲ್ಲಿನ ಸೀನ್ಗಳು ಹಾಗೂ ವೆಬ್ ಸೀರೀಸ್ (Web series) ಹೊರತಾಗಿ ಹೊರಗಡೆಯಲ್ಲಿಯೂ ನಟ ಅನಿಲ್ ಕಪೂರ್, ನಟಿ ಶೋಭಿತಾ ಅವರನ್ನು ಕಿಸ್ ಮಾಡಿರುವುದನ್ನು ಹಲವರು ಸಹಿಸುತ್ತಿಲ್ಲ. ಇದೇನು ಬಾಲಿವುಡ್ ಇಂಡಸ್ಟ್ರಿಯೋ ಅಥವಾ ಚರಂಡಿವುಡ್ ಇಂಡಸ್ಟ್ರಿಯೋ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗೆ ಪ್ರಶ್ನಿಸಲು ಕಾರಣವೂ ಇದೆ. ಅದೇನೆಂದರೆ ಅನಿಲ್ ಕಪೂರ್ ಅವರಿಗೆ ಈಗ 66 ವರ್ಷ ವಯಸ್ಸು. ನೋಡಲು ಯುವಕರನ್ನು ನಾಚಿಸುವ ಮೈಮಾಟ ಹೊಂದಿದ್ದಾರೆ ಎನ್ನುವುದು ನಿಜವಾದರೂ ಇವರು 38 ವರ್ಷದ ನಟಿ ಸೋನಂ ಕಪೂರ್ (Sonam Kapoor) ಅವರ ಅಪ್ಪ ಎನ್ನುವುದು ಅಷ್ಟೇ ಸತ್ಯ. ಆದರೆ ನೈಟ್ ಮ್ಯಾನೇಜರ್ ವೆಬ್ ಸೀರಿಸ್ನಲ್ಲಿ ಅನಿಲ್ ಕಪೂರ್ ತಮ್ಮ ಮಗಳಿಗಿಂತಲೂ ಚಿಕ್ಕವಳಾಗಿರುವ 31 ವರ್ಷ ವಯಸ್ಸಿನ ನಟಿ ಶೋಭಿತಾ ಜೊತೆ ಲಿಪ್ ಲಾಕ್ ಮಾಡಿದ್ದು, ಅದರ ಫೋಟೋ ನೋಡಿ ನಟನಿಗೆ ಹೆಚ್ಚಿನವರು ಛೀಮಾರಿ ಹಾಕುತ್ತಿದ್ದಾರೆ. ಸ್ವಲ್ಪವಾದರೂ ಬುದ್ಧಿಬೇಡವೆ, ಈ ರೀತಿಯ ಅಸಹ್ಯ ಮಾಡಲು ಎನ್ನುತ್ತಿದ್ದಾರೆ.
ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ನಟಿಗೇ ಏನೂ ತೊಂದರೆ ಇಲ್ಲದ ಮೇಲೆ ನಿಮಗೇನು ತೊಂದರೆ ಎಂದು ಅನಿಲ್ ಕಪೂರ್ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಇದು ನಟನೆ ಅಷ್ಟೇ. ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನುವುದು ಅವರ ವಾದ. ಆದರೆ ವೆಬ್ ಸೀರಿಸ್ನಲ್ಲಿ ಮಾತ್ರವಲ್ಲದೇ ಹೊರಗಡೆ ಕೂಡ ಅನಿಲ್ ಕಪೂರ್ (Anil Kapoor) ತಮ್ಮ ಪುತ್ರಿಗಿಂತಲೂ ಚಿಕ್ಕ ವಯಸ್ಸಿನ ಈ ನಟಿಯ ಜೊತೆ ಫ್ಲರ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಅಸಹ್ಯದ ಪರಮಾವಧಿ. ಬಾಲಿವುಡ್ ಬರಬರುತ್ತಾ ಚರಂಡಿ ಆಗುತ್ತಿದೆ ಎನ್ನುತ್ತಿದ್ದಾರೆ.
JAWAN: 'ಜಿಂದಾ ಬಂದಾ' ಹಾಡಲ್ಲಿ ಸಾವಿರಾರು ಲಲನೆಯರು- ಖರ್ಚು 15 ಕೋಟಿ ರೂ!