ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಟೀಸರ್ ಶಾರುಖ್ ಅಭಿಮಾನಿಗಳ ಹೃದಯ ಗೆದ್ದಿದೆ. ಕಿಂಗ್ ಖಾನ್ ಅವರನ್ನು ತೆರೆಮೇಲೆ ನೋಡಲು ಪ್ಯಾನ್ಸ್ ಅನೇಕ ವರ್ಷಗಳಿಂದ ಕಾತರರಾಗಿದ್ದರು. ಇದೀಗ ಟ್ರೈಲರ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಶಾರುಖ್ 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನಿಗೆ ಅಭಿಮಾನಿಗಳು, ಸ್ನೇಹಿತರು, ಸಿನಿಮಾ ಗಣ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಂಗ್ ಖಾನ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಪಠಾಣ್ ಟೀಸರ್ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ.
Shah Rukh Khan Birthday; ಮಧ್ಯರಾತ್ರಿಯೇ 'ಮನ್ನತ್' ಮುಂದೆ ಜಮಾಯಿಸಿದ್ದ ಫ್ಯಾನ್ಸ್, ಶಾರುಖ್ ದರ್ಶನ ಹೀಗಿತ್ತು
ಟೀಸರ್‌ನಲ್ಲಿ ಶಾರುಖ್ ಹೈ ವೋಲ್ಟೇಜ್ ಅಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ ಮುಂದೆ ಅಬ್ಬರಿಸಿರುವ ಶಾರುಖ್ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಇನ್ನು ಈ ಟೀಸರ್ ನಟಿ ದೀಪಿಕಾ ಪಡುಕೋಣೆ ದರ್ಶನ ಕೂಡ ಆಗಿದೆ. ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ದೀಪಿಕಾ ಲುಕ್ ಕೂಡ ಗಮನ ಸೆಳೆಯುತ್ತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ದೀಪಿಕಾ ಕೂಡ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಹಾಗಾಗಿ ಪಠಾಣ್ ಫುಲ್ ಆಕ್ಷನ್ ಸಿನಿಮಾ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಮೂಲಕ ಶಾರುಖ್ ಬರೋಬ್ಬರಿ 4 ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಬಹುನಿರೀಕ್ಷೆಯ ಪಠಾಣ್ ಸಿನಿಮಾ ಮುಂದಿನ ವರ್ಷ 2023 ಜನವರಿ 25ರಂದು ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.
ಬ್ಯಾಕ್ ಟು ಬ್ಯಾಕ್ ಫ್ಲಾಪ್ ನಂತರವೂ ಶಾರುಖ್ ಮೇಲೆ ಹೂಡಿರುವ ಮೊತ್ತ ಕೇಳಿದರೆ ತಲೆ ತಿರುಗುತ್ತೆ
ಈ ಸಿನಿಮಾ ಜೊತೆಗೆ ಶಾರುಖ್ ಬಳಿ ಡಂಕಿ ಮತ್ತು ಜವಾನ್ ಸಿನಿಮಾ ಕೂಡ ಇದೆ. ಮುಂದಿನ ವರ್ಷ ಪಠಾಣ್ ರಿಲೀಸ್ ಆದ ಬಳಿಕ ಜೂನ್ ವೇಳೆಗೆ ಜವಾನ್ ಕೂಡ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರ್ಷಾಂತ್ಯಕ್ಕೆ ಡಂಕಿ ತೆರೆ ಕಾಣಲಿದೆ. ಹಾಗಾಗಿ 2023ರ ವರ್ಷ ಪೂರ್ತಿ ಅಭಿಮಾನಿಗಳ ಪಾಲಿಗೆ ಶಾರುಖ್ ಸಿನಿಮೋತ್ಸವ ಆಗಿರಲಿದೆ. ಶಾರುಖ್ ಸಿನಿಮಾಗಳನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ