ಜಾನ್ವಿ ಕಪೂರ್ ಇತ್ತೀಚಿಗಷ್ಟೆ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದರು. ಅಲ್ಲಿನ ಮಲ್ಟಿಪ್ಲೆಕ್ಸ್ನಲ್ಲಿ ಅವರು ಪಾಪ್‌ಕಾರ್ನ್ ಮಾರಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಜಾನ್ವಿ ಕಪೂರ್ ಸದ್ಯ ಮಿಲಿ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಜಾನ್ವಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಮಾಡುವುದು ಎಷ್ಟು ಕಷ್ಟವೋ ಪ್ರಚಾರ ಕೂಡ ಅಷ್ಟೆ ಕಷ್ಟ. ಜಾನ್ವಿ ತನ್ನ ಸಿನಿಮಾದ ಬಗ್ಗೆ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಆಗಲಿ ಅನೇಕ ವರ್ಷಗಳಾಗಿವೆ. ಆದರೆ ಇದುವರೆಗೂ ಜಾನ್ವಿಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿಲ್ಲ. ಹಾಗಾಗಿ ಜಾನ್ವಿ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ.
ಸಾಲು ಸಾಲು ಸಿನಿಮಾ ಮಾಡಿದರೂ ಅವರಿಗೆ ಜನಮೆಚ್ಚುಗೆ ಸಿಗುತ್ತಿಲ್ಲ. ಪದೇ ಪದೇ ಅವರು ರಿಮೇಕ್ ಸಿನಿಮಾವನ್ನೇ ಮಾಡುತ್ತಿದ್ದಾರೆ. ಈಗ ಜಾನ್ವಿ ಕಪೂರ್ ನಟಿಸಿರುವ ‘ಮಿಲಿ’ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಹಾಗಾಗಿ ಜಾನ್ವಿ ಕಪೂರ್ ಅವರು ವಿಶೇಷ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ನೆಟ್ಟಿಗರು ಇದು ಪ್ರಚಾರಕ್ಕಾಗಿ ಬರಿ ಗಿಮಿಕ್ ಎನ್ನುತ್ತಿದ್ದಾರೆ. ಜಾನ್ವಿ ಇತ್ತೀಚಿಗಷ್ಟೆ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದರು. ಅಲ್ಲಿನ ಮಲ್ಟಿಪ್ಲೆಕ್ಸ್ನಲ್ಲಿ ಅವರು ಪಾಪ್‌ಕಾರ್ನ್ ಮಾರಿದ್ದರು. ಖ್ಯಾತ ನಿರ್ಮಾಪಕ ಮತ್ತು ನಟಿಯ ಪುತ್ರಿ ಹೀಗೆ ಪಾಪ್‌ಕಾರ್ನ್ ಮಾರುತ್ತಿದ್ದಾರೆ ಅಂತ ಜನರು ಒಂದು ಕ್ಷಣ ಅಚ್ಚರಿಪಟ್ಟಿದ್ದರು. ಆದರೆ ಇದೆಲ್ಲ ಪ್ರಚಾರದ ಗಿಮಿಕ್ ಎಂಬುದು ಜನರಿಗೆ ಗೊತ್ತಾಗಿದೆ.
ಸೌತ್ ಸಿನಿರಂಗದ ಕಡೆ ಜಾನ್ವಿ ಕಪೂರ್ ಒಲವು; ತೆಲುಗಿನ ಈ ಸ್ಟಾರ್ ಜೊತೆ ನಟಿಸಬೇಕೆಂದ ಶ್ರೀದೇವಿ ಪುತ್ರಿ
ಜಾನ್ವಿ ಕಪೂರ್ ಅವರು ಪಾಪ್ ಕಾರ್ನ್ ಮಾರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಅದಕ್ಕೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆವರು ಜಾನ್ವಿಯನ್ನು ಹೊಗಳಿದರೆ ಇನ್ನು ಅನೇಕರು ಜಾನ್ವಿ ಕೆಲಸಕ್ಕೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. 'ಇವರು ಶ್ರೀದೇವಿ-ಬೋನಿ ಕಪೂರ್ ದಂಪತಿಯ ಪುತ್ರಿ ಆಗಿರದೇ ಇದ್ದರೆ ಪಾಪ್‌ಕಾರ್ನ್ ಮಾರುವ ಕೆಲಸವನ್ನೇ ಮಾಡಬೇಕಿತ್ತುಟ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊರ್ವ 'ಸಿನಿಮಾದ ಪ್ರಚಾರಕ್ಕೆ ಟಾಯ್ಲೆಟ್ ಬೇಕಾದರೂ ತೊಳೀತಾರೆ' ಎಂದು ಟೀಕಿಸಿದ್ದಾರೆ. 'ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಇವರಿಗೆ ಜನರ ನೆನಪಾಗುತ್ತದೆ. ಬಾಕಿ ಸಮಯದಲ್ಲಿ ನೆನಪು ಇರುವುದಿಲ್ಲ' ಎಂದು ಅನೇಕರು ಹೇಳಿದ್ದಾರೆ.
Janhvi Kapoor ಏನೇ ಸಾಧನೆ ಮಾಡಿದ್ದರೂ ಅವಮಾನ ತಪ್ಪಿದಲ್ಲ: ಕಷ್ಟ ದಿನಗಳನ್ನು ನೆನೆದು ಜಾನ್ವಿ ಕಣ್ಣೀರು
ಮಿಲಿ ಸಿನಿಮಾದ ಬಗ್ಗೆ ಹೇಳುವುದಾದರೆ, ಮಲಯಾಳಂನ ಸೂಪರ್ ಹಿಟ್ ‘ಹೆಲೆನ್’ ಸಿನಿಮಾದ ರಿಮೇಕ್. ಈ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈ ಚಿತ್ರಕ್ಕೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಮಿಲಿ ನವೆಂಬರ್ 4ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸನ್ನಿ ಕೌಶಲ್ ಹಾಗೂ ಮನೋಜ್ ಪಾಹ್ವಾ ಅವರು ನಟಿಸಿದ್ದಾರೆ.