ಕಮಲ್ ಹಾಸನ್ 'ಇಂಡಿಯನ್-2' ಸಿನಿಮಾದಲ್ಲಿ ಖ್ಯಾತ ಕ್ರಕೆಟರ್ ತಂದೆ

Published : Nov 02, 2022, 11:30 AM IST
 ಕಮಲ್ ಹಾಸನ್ 'ಇಂಡಿಯನ್-2' ಸಿನಿಮಾದಲ್ಲಿ ಖ್ಯಾತ ಕ್ರಕೆಟರ್ ತಂದೆ

ಸಾರಾಂಶ

ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ಇಂಡಿಯನ್ -2 ಸಿನಿಮಾದಲ್ಲಿ ಖ್ಯಾತ ಕ್ರಿಕೆಟರ್ ತಂದೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕ್ರಿಕೆಟ್‌ನಲ್ಲಿ ಮಿಂಚಿದ ಅನೇಕ ಸ್ಟಾರ್ ಆಟಗಾರರು ನಿವೃತ್ತಿ ಬಳಿಕ ಸಿನಿಮಾರಂಗದ ಕಡೆ ಮುಖ ಮಾಡುತ್ತಿದ್ದಾರೆ. ಇತ್ತೀಚಿಗೆ ಅನೇಕ ಆಟಗಾರರು ಬಣ್ಣದ ಲೋಕಕ್ಕೆ ಅದೃಷ್ಟ ಪರೀಕ್ಷಿಗೆ ನಿಂತಿದ್ದಾರೆ. ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಹಾಗೂ ನಿರ್ಮಾಕನಾಗಿ ಎಂ ಎಸ್ ಧೋನಿ ಕೂಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಮತ್ತೋರ್ವ ಖ್ಯಾತ ಕ್ರಿಕೆಟರ್ ತಂದೆ ತೆಲೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಅದು ಮತ್ಯಾರು ಅಲ್ಲ ಯುವರಾಜ್​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​.  ಅವರು ಕೂಡ ಮಾಜಿ ಕ್ರಿಕೆಟರ್​.

ಯೋಗರಾಜ್​ ಸಿಂಗ್ ಅವರಿಗೂ ಬಣ್ಣದ ಲೋಕದ ಜೊತೆ ನಂಟು ಇದೆ. ಕೆಲವು ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ಅವರು ಈಗ ಕಮಲ್​ ಹಾಸನ್​  ಜೊತೆ ಅಭಿನಯಿಸುತ್ತಿದ್ದಾರೆ. ಈ ಕುರಿತು ಅವರೇ ಅಪ್​ಡೇಟ್​ ನೀಡಿದ್ದಾರೆ. ಬಹುನಿರೀಕ್ಷಿತ ‘ಇಂಡಿಯನ್​ 2’ ಚಿತ್ರತಂಡದ ಸೆಟ್​ನಿಂದ ಯೋಗರಾಜ್​ ಸಿಂಗ್ ಅವರು ಫೋಟೋ ಹಂಚಿಕೊಂಡಿದ್ದಾರೆ.

ಅಂದಹಾಗೆ ಇಂಡಿಯನ್ -2 ಸಿನಿಮಾ ಪ್ರಾರಂಭವಾಗಿ ಅನೇಕ ವರ್ಷಗಳೇ ಆಗಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕಣ ನಿಂತುಹೋಗಿತ್ತು. ಅದೇ ಗ್ಯಾಪ್ ನಲ್ಲಿ ಕಮಲ್ ಹಾಸನ್ ವಿಕ್ರಮ್ ಸಿನಿಮಾ ಮಾಡಿ ಗೆದ್ದರು. ಇದೀಗ ವಿಕ್ರಮ್ ಚಿತ್ರದ ಯಶಸ್ಸಿನ ಬಳಿಕ ಕಮಲ್​ ಹಾಸನ್​ ‘ಇಂಡಿಯನ್​ 2’ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಇದೇ ಚಿತ್ರದಲ್ಲಿ ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಸಿಂಗ್​ ಕೂಡ ಪ್ರಮುಖ ಪಾತ್ರ ಮಾಡುತ್ತಿರುವುದು ವಿಶೇಷ.

ಕಮಲ್ ಹಾಸನ್ ಸಿನಿಮಾದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II; 1.5 ಕೋಟಿ ಖರ್ಚು ಮಾಡಿದ್ದ ನಟ

ಅಂದಹಾಗೆ ನವೆಂಬರ್​ 1ರಂದು ಚೆನ್ನೈನಲ್ಲಿ ಇಂಡಿಯನ್​ 2 ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಕಮಲ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಯೋಗರಾಜ್​ ಸಿಂಗ್​ ಕನ್ನಡಿ ಎದುರು ಕುಳಿತು ಮೇಕಪ್​ ಮಾಡಿಸಿಕೊಳ್ಳುತ್ತಿರುವ ಫೋಟೋ ಪೋಸ್ಟ್​ ಮಾಡಿದ್ದಾರೆ. ‘ಕ್ಯಾಮೆರಾ ಹಿಂದೆ ಕೆಲಸ ಮಾಡುವ ಎಲ್ಲ ದೊಡ್ಡ ಹೀರೋಗಳಿಗೆ ನನ್ನ ಕಡೆಯಿಂದ ಗೌರವ. ನನ್ನನ್ನು ಹೆಚ್ಚು ಸ್ಮಾರ್ಟ್​ ಆಗಿ ಕಾಣುವಂತೆ ಮಾಡಿದ ಮೇಕಪ್​ ಕಲಾವಿದರಿಗೆ ಧನ್ಯವಾದಗಳು. ಇಂಡಿಯನ್​ 2 ಚಿತ್ರದಲ್ಲಿ ಲೆಜೆಂಡರಿ ನಟ ಕಮಲ್​ ಹಾಸನ್​ ಜೊತೆ ನಟಿಸಲು ಪಂಜಾಬ್ ಸಿಂಹ ರೆಡಿ’ ಎಂದು ಯೋಗರಾಜ್​ ಸಿಂಗ್​ ಫೋಟೋ ಹಂಚಿಕೊಂಡು ಕ್ಯಾಪ್ಷನ್​ ನೀಡಿದ್ದಾರೆ.


ವಿಕ್ರಮ್‌ ಚಿತ್ರಕ್ಕೆ 35 ಕೋಟಿ ಸಂಭಾವನೆ ಪಡೆದುಕೊಂಡ್ರಾ ಕಮಲ್ ಹಾಸನ್ ?

ಇಂಡಿಯನ್-2 ಸಿನಿಮಾಗೆ ಖ್ಯಾತ ನಿರ್ದೇಶಕ ಶಂಕರ್ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಡಿಫರೆಂಟ್​ ಗೆಟಪ್​ನಲ್ಲಿ ಕಮಲ್​ ಹಾಸನ್​ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಯೋಗರಾಜ್​ ಸಿಂಗ್​ ಅವರ ಪಾತ್ರ ಹೇಗಿರಲಿದೆ, ಯಾವ ಪಾತ್ರ ಮಾಡುತ್ತಿದ್ದಾರೆ  ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನು ಈ ಚಿತ್ರದಲ್ಲಿ ಕಮಲ್​ ಹಾಸನ್ ಹಾಸನ್​ ಜೊತೆ ಕಾಜಲ್​ ಅಗರ್​ವಾಲ್​ ನಟಿಸುತ್ತಿದ್ದಾರೆ. ರಾಕುಲ್​ ಪ್ರೀತ್​ ಸಿಂಗ್​, ಸಿದ್ದಾರ್ಥ್​, ಸಮುದ್ರ ಕಣಿ, ಬಾಬಿ ಸಿಂಹ, ವೆನ್ನೆಲಾ ಕಿಶೋರ್​ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?