ಮಗಳ ಮೈ ಬಣ್ಣದ ಬಗ್ಗೆ ಕಾಮೆಂಟ್‌ ಮಾಡುವವರಿಗೆ ಬೆವರಿಳಿಸಿದ ನಟ ಶಾರುಖ್ ಖಾನ್!

Published : Jan 08, 2023, 12:26 PM IST
ಮಗಳ ಮೈ ಬಣ್ಣದ ಬಗ್ಗೆ ಕಾಮೆಂಟ್‌ ಮಾಡುವವರಿಗೆ ಬೆವರಿಳಿಸಿದ ನಟ ಶಾರುಖ್ ಖಾನ್!

ಸಾರಾಂಶ

ಸ್ಕಿನ್‌ ಪ್ರಾಡಕ್ಟ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಶಾರುಖ್ ಖಾನ್ ಮೊದಲ ಸಲ ಮಗಳ ಮೈ ಬಣ್ಣದ ಬಗ್ಗೆ ಮಾತನಾಡಿದ್ದಾರೆ. 

ಸಿನಿಮಾ ಸ್ಟಾರ್ ಅಂದ್ಮೇಲೆ ಫಿಟ್ನೆಸ್‌ ಆಂಡ್ ಸ್ಕಿನ್-ಹೇರ್‌ ಕೇರೆ ಹೆಚ್ಚಿಗೆ ಮಾಡಬೇಕು. ಕೈಯಲ್ಲಿ ಸಿನಿಮಾ ಕಡಿಮೆ ಇದ್ದರೂ ಜಾಹೀರಾತುಗಳನ್ನು ಮಾಡಿಕೊಂಡು ಸಂಪಾದನೆ ಮಾಡಿಕೊಳ್ಳಬಹುದು. ಇದನ್ನೇ ಮಾಡಿಕೊಂಡು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡವರು ಕೂಡ ಇದ್ದಾರೆ. ಧೂಮಪಾನ ಮಧ್ಯಪಾನದಿಂದ ಮಾತ್ರ ಅಭಿಮಾನಿಗಳಿಗೆ ಪ್ರಚೋದನೆ ಆಗತ್ತದೆ ಎಂದುಕೊಳ್ಳಬೇಡಿ ಸೆಲೆಬ್ರಿಟಿಗಳು ಧರಿಸುವ ಬಟ್ಟೆ, ಮಾಡಿಸಿಕೊಳ್ಳುವ ಹೇರ್‌ ಕಟ್ ಹಾಗೂ ಬಳಸುವ ಕ್ರೀಮ್‌ ಕೂಡ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇದನ್ನು ಫಾಲೋ ಮಾಡುವವರು ಲಕ್ಷಾಂತರ ಜನರಿರುತ್ತಾರೆ. ಸ್ಕಿನ್‌ ಕೇರ್‌ ಮತ್ತು ಫೇರ್ನೆಸ್ ಜಾಹೀರಾತುಗಳನ್ನು ಮಾಡುವ ಶಾರುಖ್‌ ಮಕ್ಕಳ ಮೈ ಬಣ್ಣದ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ.

ಬಾಲಿವುಡ್‌ ಕಿಂಗ್ ಶಾರುಖ್ ಖಾನ್‌ ವೃತ್ತಿ ಜೀವನದಲ್ಲಿ ಸಾಕಷ್ಟು ಫೇರ್ನೆಸ್‌ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ ಇದ್ದಾರೆ ಎಂದೇ ಕೆಲವರು ಆ ಪ್ರಾಡೆಕ್ಟ್‌ಗಳನ್ನು ಖರೀದಿ ಮಾಡಿದ್ದಾರೆ. ಆದರೆ ಇದರಿಂದ ಪಾಸಿಟಿವ್ ಆಗಿರುವುದಕ್ಕಿಂತ ನೆಗೆಟಿವ್ ಆಗಿರುವುದೇ ಹೆಚ್ಚು. ಹಣ ಬಂತು ಅಂತ ಶಾರುಖ್ ಸುಮ್ಮನೆ ಕೂರಲು ಆಗುತ್ತಿಲ್ಲ ಏಕೆಂದರೆ ಶಾರುಖ್ ಪುತ್ರಿ ಸುಹಾನ ಖಾನ್ ಮೈ ಬಣ್ಣಕೂಡ ಗೋದಿಬಣ್ಣ ಆಗಿರುವ ಕಾರಣ ಮೊದಲು ನಿಮ್ಮ ಮಗಳಿಗೆ ಹೇಳಿ ಎಂದು ಗೇಲಿ ಮಾಡುತ್ತಾರೆ. ಈ ವಿಚಾರಗಳ ಬಗ್ಗೆ ಶಾರುಖ್ ಮೊದಲ ಸಲ ಮಾತನಾಡಿದ್ದಾರೆ. 

'ಸಮಾಜದಲ್ಲಿ ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ನಡುವೆಯೂ ನಾನು ಸತ್ಯ ಹುಡುಕಬೇಕು ಅಂದ್ರೆ ನಂಬಿದರೆ ನಂಬಿ ನಾನು ಎಂದೂ ಯಾರೊಂದಿಗೂ ಅಪ್ರಾಮಾಣಿಕವಾಗಿರಲಿಲ್ಲ. ನಾನು ಯಾರು ಜನರಿಗೆ ಸುಳ್ಳು ಮಾಹಿತಿ ನೀಡುವುದಕ್ಕೆ? ನಾನು ಎಂದೂ ನೋಡಲು ಚೆನ್ನಾಗಿರಲಿಲ್ಲ ಉದ್ದವಿರಲಿಲ್ಲ ಅಲ್ಲದೆ ಫಿಟ್ನೆಸ್‌ನಿಂದ ದೂರ ದೂರ.ಸೂಪರ್ ಆಗಿ ಡ್ಯಾನ್ಸ್‌ ಮಾಡಲು ಬರುತ್ತಿರಲಿಲ್ಲ ನನ್ನ ಕೂದಲು ನೋಡಲು ಚೆನ್ನಾಗಿರಲಿಲ್ಲ ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ಆಕ್ಟಿಂಗ್‌ ಸ್ಕೂಲ್‌ಗಳಿಂದ ಬಂದವನಲ್ಲ. ಹಿಂದಿ ಚಿತ್ರರಂಗದಲ್ಲಿ ಹೀರೋ ಆಗಬೇಕು ಎಂದು ಯಾರೂ ಹೇಳಿಕೊಟ್ಟಿಲ್ಲ. ಹೇಗೆ ನಾನು ಎಲ್ಲಾ ಕ್ವಾಲಿಟಿಗಳನ್ನು ಹೊಂದಿರುವ ವ್ಯಕ್ತಿಯಾಗಿರಲಿ?' ಎಂದು ಶಾರುಖ್ ಮಾತನಾಡಿದ್ದಾರೆ. 

ಜನರನ್ನು ಒಂದೊಂದು ಗುಣಗಳನ್ನು ಹಿಡಿದುಕೊಂಡು ನಾನು ಜಡ್ಜ್‌ ಮಾಡಲು ಆಗುವುದಿಲ್ಲ ಏಕೆಂದರೆ ನನ್ನ ಹೆಂಡತಿ ಮಕ್ಕಳು ಬಂದಿರುವುದು ನಾರ್ಮಲ್ ಕುಟುಂಬದಿಂದ ಎಂದು ಶಾರುಖ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ನಾನು ಮಿಡಲ್ ಕ್ಲಾಸ್‌ ಮನೆಯಿಂದ ಬಂದಿರುವ ವ್ಯಕ್ತಿ ಈ ರೀತಿ ಯಾವ ಟ್ರ್ಯಾಪ್‌ಗಳನ್ನು ನಾನು ಎದುರಿಸಿಲ್ಲ. ಜೀವನದಲ್ಲಿ ನನಗೆ ಒಂದು ವರ್ಕ್ ಆಗಿದೆ ಅಂದ್ರೆ ಅದು ಕೇವಲ ಪ್ರಾಮಾಣಿಕತೆ. ಆದರೆ ಈಗ ನನ್ನನ್ನು ನೀವು ನೋಡಿ, ನನ್ನ ಸ್ಟಾರ್‌ಡಮ್‌ನಿಂದ ನೋಡಲು ಇಷ್ಟು ಸುಂದರವಾಗಿರುವೆ. ಈಗ ಎಲ್ಲಿ ನೋಡಿದ್ದರು ನನ್ನ ಪೋಸ್ಟರ್‌, ನಾನು ಪೋಸ್ಟರ್ ಬಾಯ್ ಆಗಿರುವೆ. ಇದೆಲ್ಲಾ ಎಂಥ ಜೋಕ್ ಅಲ್ವಾ? ದೊಡ್ಡ ಹಾಲಿವುಡ್ ಮತ್ತು ಬಾಲಿವುಡ್‌ ಸ್ಟಾರ್‌ಗಳ ಪೋಸ್ಟರ್‌ಗಳನ್ನು ನನ್ನ ರೂಮಿನಲ್ಲಿ ಇಟ್ಟಿಕೊಳ್ಳುತ್ತಿದ್ದೆ. ಇದೆಲ್ಲಾ ನನ್ನ ಫ್ಯಾಮಿಲಿ ಮತ್ತು ಜೀವನವೇ ಅಲ್ಲ ಸಿನಿಮಾದಿಂದ ನಾನು ಇದಕ್ಕೆ ಮಾಡುತ್ತಿರುವುದು ಅದು ಜನರು ಪ್ರೀತಿ' ಎಂದು ಶಾರುಖ್ ಖಾನ್ ಹೇಳಿದ್ದಾರೆ. 

ಅವಳ್ಯಾಕೆ ಮಲೈಕಾ ಹಾಗೆ ನಡೀತಿದ್ದಾಳೆ; ಕೆಂಪು ಬಟ್ಟೆ ಧರಿಸಿ ಬಂದ ಶಾರುಖ್ ಪುತ್ರಿ ಸುಹಾನಾ ಸಖತ್ ಟ್ರೋಲ್

ಶಾರುಖ್ ಖಾನ್‌ ಕುಟುಂಬದಲ್ಲಿ ಎಲ್ಲರೂ ಫೇರ್‌ ಆಗಿದ್ದಾರೆ ಆದರೆ ಪುತ್ರಿ ಸುಹಾನ್ ಮಾತ್ರ ಕಡಿಮೆ ಬಣ್ಣ ಇರುವ ಕಾರಣ ಅನೇಕ ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ವಿಚಾರಕ್ಕೆ ಕಿಂಗ್ ರಿಯಾಕ್ಟ್ ಮಾಡಿದ್ದಾರೆ. 'ನಾನು ಸತ್ಯ ಹೇಳುವೆ ನನ್ನ ಮಗಳು ಮೈ ಬಣ್ಣ ಗೋದಿ ಬಣ್ಣ ಆದರೂ ಆಕೆ ಈ ಪ್ರಪಂಚದಲ್ಲಿರುವ ಅತಿ ಸುಂದರವಾದ ವ್ಯಕ್ತಿ. ಯಾರು ಇದರ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುವುದಾಗಲಿ ಅಥವಾ ನನ್ನ ಜೊತೆ ಮಾತನಾಡುವ ಧೈರ್ಯ ಮಾಡುವುದಿಲ್ಲ' ಎಂದಿದ್ದಾರೆ ಶಾರುಖ್. 

ಈ ವರ್ಷ ಸುಹಾನ್ ಖಾನ್ 18 ವರ್ಷಕ್ಕೆ ಕಾಲಿಟ್ಟರು ಈ ಮೂಲಕ ಬಣ್ಣದ ಪ್ರಪಂಚಕ್ಕೆ ಪರಿಚಯವಾದ್ದರು. ಜನಪ್ರಿಯ ಫ್ಯಾಷನ್ ಮ್ಯಾಗಜಿನ್ ಆಗಿರುವ ವೋಗ್‌ನ ಲವರ್‌ ಪೇಜ್‌ನಲ್ಲಿದ್ದರು ಹಾಗೇ ಸಿನಿಮಾ ಪ್ರಪಂಚದ ಬಗ್ಗೆ ಸಣ್ಣ ಸಂದರ್ಶನ ನೀಡಿದ್ದರು. ಲಂಡನ್‌ನ ಪ್ರೈವೇಟ್ ಬೋರ್ಡಿಂಗ್ ಸ್ಕೂಲ್‌ನಲ್ಲಿ ಸುಹಾನ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 16ನೇ ವಯಸ್ಸಿಗೆ ಮನೆ ಬಿಟ್ಟು ಹೋಗುವುದು ಎಷ್ಟು ಕಷ್ಟ ಎಂದು ಈ ಹಿಂದೆ ಹೇಳಿಕೊಂಡಿದ್ದರು. '16ನೇ ವಯಸ್ಸಿಗೆ ಮನೆಯಿಂದ ಹೊರನಡೆದು ಮತ್ತೊಂದು ದೇಶದಲ್ಲಿ ಓದಬೇಕು ಎಂದು ನಾನು ತೆಗೆದುಕೊಂಡ ಬೆಸ್ಟ್‌ ನಿರ್ಧಾರ. ಅಲ್ಲಿ ಮತ್ತೊಂದು ಪ್ರಪಂಚದಲ್ಲಿ ಬದುಕಬೇಕು ಅಲ್ಲಿ ವಿವಿಧ ಜನರನ್ನು ಭೇಟಿ ಮಾಡಿದ್ದಾರೆ ಅಲ್ಲಿದ್ದ ಕಾರಣ ನನ್ನ ಕಾನ್ಫಿಡೆನ್ಸ್ ಹೆಚ್ಚಾಗಿತ್ತು. ಸಣ್ಣ ಪುಟ್ಟ ವಿಚಾರಗಳನ್ನು ನಾವೇ ಮಾಡಿಕೊಳ್ಳುವುದರಲ್ಲಿ ಖುಷಿ ಇದೆ. ಅಲ್ಲಿ ರಸ್ತೆಯಲ್ಲಿ ನೆಮ್ಮದಿಯಾಗಿ ವಾಕಿಂಗ್ ಮಾಡಬಹುದು ಟ್ರೈನ್ ತೆಗೆದುಕೊಂಡು ಪ್ರಯಾಣ ಮಾಡುವೆ. ಮುಂಬೈನಲ್ಲಿ ಏನೆಲ್ಲಾ ಮಾಡಲು ಕಷ್ಟ ಆಗುತ್ತದೆ ಅದನ್ನು ನಾನು ಲಂಡನ್‌ನಲ್ಲಿ ಮಾಡುವೆ. ದೂರ ಇರುವುದಕ್ಕೆ ಮನೆ ಮತ್ತು ಕುಟುಂಬವನ್ನು ಹೆಚ್ಚಿಗೆ ಮಿಸ್ ಮಾಡಿಕೊಂಡು ಅವರನ್ನು ಗೌರವಿಸಲು ಶುರು ಮಾಡಿರುವೆ' ಎಂದು ಸುಹಾನಾ ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್