ನೋರಾ ಆಯ್ತು ಈಗ ಸಾದಿಯಾನಾ? 35 ವರ್ಷದವಳ ಜತೆ ಶಾರುಖ್‌ ಪುತ್ರಂದು ಇದೆಂಥ ಸುದ್ದಿ?

By Suvarna News  |  First Published Jan 8, 2023, 12:08 PM IST

ನಟಿ ನೋರಾ ಫತೇಹಿ ಜೊತೆ ಡೇಟಿಂಗ್‌ ಸುದ್ದಿಯಾಯ್ತು, ಈಗ ಪಾಕಿಸ್ತಾನದ ಬೆಡಗಿ ಜೊತೆ ಆರ್ಯನ್‌ ಸದ್ದು
 


ಆರ್ಯನ್ ಖಾನ್ ತಮಗಿಂತ ಐದು ವರ್ಷ ಹಿರಿಯರಾಗಿರುವ ನಟಿ ನೋರಾ ಫತೇಹಿ (Nora Fatehi ) ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದೆ. 25 ವರ್ಷದ ಆರ್ಯನ್‌, 30 ವರ್ಷದ ನಟಿಯ ಜೊತೆ ಡೇಟಿಂಗಾ ಎಂದು ಅಭಿಮಾನಿಗಳೂ ಹುಬ್ಬೇರಿಸುತ್ತಿದ್ದಾರೆ. ಇವರಿಬ್ಬರ ಡೇಟಿಂಗ್‌ ಸುದ್ದಿ ಶುರುವಾದದ್ದು, ಇಬ್ಬರೂ ದುಬೈನಲ್ಲಿ (Dubai) ಪಾರ್ಟಿ ಮಾಡುವ ಫೋಟೋಗಳು ವೈರಲ್ ಆದುದ್ದಕ್ಕೆ.

ಖ್ಯಾತ ಡ್ಯಾನ್ಸರ್​ ಕಮ್​ ನಟಿ ನೋರಾ ಫತೇಹಿ ಜೊತೆಗೆ ಆರ್ಯನ್​ ಖಾನ್ (Aryan Khan) ಡೇಟಿಂಗ್​ ಮಾಡುವ ಸುದ್ದಿ ಫ್ಯಾನ್ಸ್‌ಗೆ ನುಂಗಲಾರದ ತುತ್ತಾಗಿದೆ.  ಆರ್ಯನ್​ ಖಾನ್​ ಮತ್ತು ನೋರಾ ಫತೇಹಿ ಯಾವುದೇ ಸಿನಿಮಾದಲ್ಲೂ ಜೊತೆಯಾಗಿ ಕೆಲಸ ಮಾಡಿಲ್ಲ. ಹಾಗಿದ್ದರೂ ಅವರ ನಡುವೆ ಪ್ರೀತಿ ಚಿಗುರಿರುವುದು ಹೇಗೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಸಾಲದು ಎಂಬುದಕ್ಕೆ ಶಾರುಖ್‌ ಖಾನ್‌ ದಂಪತಿಗೆ ಪ್ರಶ್ನೆಗಳ ಸುರಿಮಳೆಯನ್ನೂ ಹಾಕುತ್ತಿದ್ದಾರೆ. ನಿಮ್ಮ ಸೊಸೆ ಸಖತ್‌ ಸುಂದರಿ. ಮದುವೆ ಯಾವಾಗ? ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.

Tap to resize

Latest Videos

ಈ ಡೇಟಿಂಗ್‌ ಸುದ್ದಿ ಎಷ್ಟು ನಿಜನೋ, ಸುಳ್ಳೋ ಗೊತ್ತಿಲ್ಲ. ಇದು ಡೇಟಿಂಗಾ, ಬರೀ ಫೋಟೋಗೆ ಪೋಸಾ ಎನ್ನುವುದೂ ಸ್ಪಷ್ಟವಾಗಿಲ್ಲ. ಆದರೆ ಡ್ರಗ್ಸ್‌ ಕೇಸ್‌ನಲ್ಲಿ (Drugs case) ಸಿಲುಕಿ ಭಾರಿ ಸದ್ದು ಮಾಡಿದ್ದ ಶಾರುಖ್‌ ಪುತ್ರ ಆರ್ಯನ್‌ ಮಾತ್ರ ಈಗ ಮತ್ತೆ ಹಾಟ್‌ ಟಾಪಿಕ್‌ ಆಗಿದ್ದಾರೆ. ಏಕೆಂದರೆ  ಪಾಕಿಸ್ತಾನದ ನಟಿ ಸಾದಿಯಾ ಖಾನ್ ಜತೆಗೆ ಆರ್ಯನ್ ಖಾನ್ ಪಾರ್ಟಿ ಮಾಡಿದ್ದು ಅವುಗಳ ಫೋಟೋಗಳು ವೈರಲ್‌ ಆಗುತ್ತಿವೆ! ಹಾಗಿದ್ರೆ ನಿಜಕ್ಕೂ ಆರ್ಯನ್‌ ಖಾನ್‌ ಯಾರ ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಬಗ್ಗೆ ಫ್ಯಾನ್ಸ್ ಮತ್ತೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. 

ನಿಮ್ ಇನ್‌ಕಮ್‌ ಎಷ್ಟು ಬಾಸ್‌? ಕಾಶ್ಮೀರಿಯಾದ ನೀವು ಖಾನ್​ ಹೇಗಾದ್ರಿ? ಫ್ಯಾನ್ಸ್‌ ತರ್ಲೆಗಳಿಗೆ ಶಾರುಖ್‌ ಉತ್ರ ನೋಡಿ

ಅಷ್ಟಕ್ಕೂ ಈ ಫೋಟೋ ಶೇರ್‌ ಮಾಡಿಕೊಂಡಿರುವುದು ಖುದ್ದು ಸಾದಿಯಾ ಖಾನ್‌ (Sadia Khan) ಅವರು  ಇನ್​ಸ್ಟಾಗ್ರಾಮ್‌ನಲ್ಲಿ ಆರ್ಯನ್  ಜೊತೆ ತಾವು ಇರುವ ಫೋಟೋ ಶೇರ್‌ ಮಾಡಿಕೊಂಡಿದ್ದರು.  ಈ ಫೋಟೋಗೆ ‘ನ್ಯೂ ಇಯರ್‌ನಲ್ಲಿ  ತೆಗೆದ ಫೋಟೋ’ ಎಂದು ಕ್ಯಾಪ್ಶನ್ ನೀಡಿದ್ದರು. ಸಾದಿಯಾ ಕಪ್ಪು ಬಣ್ಣದ ಬಟ್ಟೆಯಲ್ಲಿದ್ದರೆ, ಆರ್ಯನ್  ಬಿಳಿ ಬಣ್ಣದ ಕೋಟ್​ ಧರಿಸಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಪೋಸ್ಟ್‌ ಮಾಡಿದ 24 ಗಂಟೆಯ ಒಳಗೇ ಅದನ್ನು ಸಾದಿಯಾ ಇನ್‌ಸ್ಟಾಗ್ರಾಮ್‌ ಖಾತೆಯಿಂದ ತೆಗೆದು ಹಾಕಿದ್ದಾರೆ. 

ಅವರು ಏಕೆ ಫೋಟೋ ತೆಗೆದುಹಾಕಿದ್ದಾರೆ ಎಂದು ತಿಳಿದಿಲ್ಲ. ಆದರೆ ಈ ಫೋಟೋಗಳು ತೆಗೆದದ್ದು ದುಬೈನ ಪಾರ್ಟಿಯಲ್ಲಿ ಎನ್ನುವುದು ಸ್ಪಷ್ಟವಾಗಿದೆ. ಆರ್ಯನ್ ಖಾನ್ ಹಾಗೂ ಅವರ ಸಹೋದರಿ ಸುಹಾನಾ ಖಾನ್ (Suhana Khan) ಹೊಸ ವರ್ಷ ಆಚರಣೆಗೆ ದುಬೈಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನೋರಾ ಕೂಡ ಇದ್ದರು. ಇವರಿಬ್ಬರೂ ಪಾರ್ಟಿ ಮಾಡಿರುವ ಚಿತ್ರ ವೈರಲ್‌ ಆಗಿ ಡೇಟಿಂಗ್‌ (Dating) ಸುದ್ದಿಯಾಗಿತ್ತು. ಆದರೆ ಅಸಲಿಗೆ ಇದೇ ಪಾರ್ಟಿಯಲ್ಲಿ ಸಾದಿಯಾ ಖಾನ್‌ ಕೂಡ ಇದ್ದರು. ಈಗ ಅವರಿಬ್ಬರ ಫೋಟೋ ವೈರಲ್‌ ಆಗಿದೆ. ಹಾಗಿದ್ದರೆ ಇದು ಬರೀ ಪಾರ್ಟಿನಾ, ಡೇಟಿಂಗಾ ಎನ್ನುವುದು ಅಭಿಮಾನಿಗಳ ಪ್ರಶ್ನೆ! 

ನೋರಾ ಫತೇಹಿ ಕುರಿತು ಹೇಳುವುದಾದರೆ, ಈಕೆ ಪ್ರಸಿದ್ಧ ಬಾಲಿವುಡ್‌ ಡಾನ್ಸರ್‌. ಅನೇಕ ಐಟಂ ಸಾಂಗ್‌ಗಳಲ್ಲಿ ನಟಿಸಿದ್ದಾರೆ. ನೃತ್ಯದ ಮೂಲಕ ಮೋಡಿ ಮಾಡಿರುವ ಈಕೆ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. 'ಬಾಹುಬಲಿ' ಸಿನಿಮಾದ ಮನೋಹರಿ.... ಹಾಡಿನಲ್ಲಿ ನಟಿಸಿರುವ ಮೂವರು ಚೆಲುವೆಯರಲ್ಲಿ ನೋರಾ ಫತೇಹಿ ಕೂಡಾ ಒಬ್ಬರು.

ಹೊಸ ಬ್ಯುಸಿನೆಸ್ ಆರಂಭಿಸಿದ ಆರ್ಯನ್ ಖಾನ್; ಐಷಾರಾಮಿ ವೋಡ್ಕಾ ಬ್ರಾಂಡ್ ಲಾಂಚ್ ಮಾಡಿದ ಶಾರುಖ್ ಪುತ್ರ

ಇನ್ನು ಸಾದಿಯಾ ರಿಯಾಲಿಟಿ ಷೋ ನಡೆಸುತ್ತಾರೆ.   ಹಲವು ಟಿ.ವಿ ಷೋಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕಿರುತೆರೆ ನಟಿ ಕೂಡ ಹೌದು. 2019ರ ಧಾರಾವಾಹಿ​ ಒಂದರಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ನಂತರ  ಯಾವುದೇ ಧಾರಾವಾಹಿಗಳಲ್ಲಿ ನಟಿಸಿಲ್ಲ. ನೋರಾ ಫತೇಹಿಯಂತೆ ಇವರ ವಯಸ್ಸು ಈಗ 35.

ಇನ್ನು ಆರ್ಯನ್ ಖಾನ್ ಬಗ್ಗೆ ಹೇಳುವುದಾದರೆ, ಇವರು ವೆಬ್​ ಸೀರಿಸ್ ಮಾಡುತ್ತಿದ್ದಾರೆ.  ಶಾರುಖ್ ಖಾನ್ ಒಡೆತನದ ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಮಾಡುತ್ತಿದ್ದು ಇದನ್ನು ಖುದ್ದು ಶಾರುಖ್‌ ಖಾನ್‌ ಹೇಳಿಕೊಂಡಿದ್ದರು.  ‘ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಇನ್ನು ಆ್ಯಕ್ಷನ್​ ಕಟ್ (Action Cut) ಹೇಳಬೇಕಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದರು.

click me!