ಟ್ವಿಟರ್‌ನಲ್ಲಿ ಅಭಿಮಾನಿಗಳು ಕೇಳಿದ ತರ್ಲೆ ಪ್ರಶ್ನೆಗಳಿಗೆ ನಟ ಶಾರುಖ್ ಖಾನ್ ಕೊಟ್ಟ ಉತ್ತರವೇನು?
ಪಠಾಣ್ ಚಿತ್ರದ ವಿವಾದದಿಂದ ಕಂಗೆಟ್ಟು ಹೋಗಿರುವ ಶಾರುಖ್ ಖಾನ್, ಹೇಗಾದರೂ ಮಾಡಿ ಜನರಿಗೆ ಹತ್ತಿರವಾಗಲು ಸರ್ಕಸ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದ ಬಾಲಿವುಡ್ ಬಾದ್‌ಶಾ, ನಿಮಗೆ ಏನು ಪ್ರಶ್ನೆ ಬೇಕೋ ಕೇಳಿ ಎಂದಿದ್ದರು. AskSRK ಎಂಬ ಹ್ಯಾಷ್‌ಟ್ಯಾಗ್ ಅಡಿ ಫ್ಯಾನ್ಸ್‌ಗೆ ಪ್ರಶ್ನೆ ಕೇಳಿ ಎಂದಿದ್ದರು. ಟ್ವಿಟರ್‌ನಲ್ಲಿ ತಾವು 13 ವರ್ಷ ಪೂರೈಸಿದ್ದರಿಂದ ಈ ಒಂದು ಅವಕಾಶ ನೀಡಲಾಗ್ತಿದೆ ಎಂದೂ ಶಾರುಖ್ ಹೇಳಿದ್ರು. ಸ್ಟಾರ್ ನಟನೊಬ್ಬ ಹೀಗೆ ಆಹ್ವಾನ ಕೊಟ್ರೆ ಅಭಿಮಾನಿಗಳು (Fans) ಸುಮ್ಮನೆ ಬಿಡುತ್ತಾರೆಯೇ? ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದ್ದು, ಹಲವು ಪ್ರಶ್ನೆಗಳಿಗೆ ಶಾರುಖ್ ಉತ್ತರ ಕೊಟ್ಟಿದ್ದಾರೆ.
ಕೆಲವರು ತರ್ಲೆ ಪ್ರಶ್ನೆಗಳನ್ನು ಕೇಳಿದ್ದು, ಶಾರುಖ್ ಖಾನ್ (Sharukh Khan) ಅಷ್ಟೇ ನಯವಾಗಿ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇನ್ನು ಕೆಲವಕ್ಕೆ ತರ್ಲೆಯಾಗಿಯೇ ಉತ್ತರ ಕೊಟ್ಟಿದ್ದು, ಕೆಲವು ಪ್ರಶ್ನೆಗಳಿಗೆ ತುಸು ಕಸಿವಿಸಿಯೂಗೊಂಡಿದ್ದಾರೆ.
ನೆಟ್ಟಿಗರ ಪ್ರಶ್ನೆಗಳಲ್ಲಿ ಗಮನ ಸೆಳೆದಿರೋದು ರೌಡಿ ಎಂಬ ಹೆಸರು ಇರುವ ನೆಟ್ಟಿಗನೊಬ್ಬ ಕೇಳಿರುವ ಪ್ರಶ್ನೆ. "ಪಠಾಣ್ (Pathaan) ಚಿತ್ರದಿಂದ ದುರಂತ ಅನುಭವಿಸಿದ್ದೀರಿ. ಸಾಕು, ಇನ್ನು ನಿವೃತ್ತಿ ತಗೋಳಿ" ಎಂದಿದ್ದಾರೆ. ಅದಕ್ಕೆ ಸ್ವಲ್ಪ ಸಿಟ್ಟಿನಿಂದ ಉತ್ತರಿಸಿರೋ ಬಾಲಿವುಡ್ ಬಾದಶಾಹ್, "ಲೇ ಹುಡುಗಾ, ದೊಡ್ಡವರ ಬಳಿ ಹೀಗೆಲ್ಲಾ ಮತನಾಡಬಾರದು" ಎಂದಿದ್ದಾರೆ.
ಇನ್ನೊಬ್ಬ, "ಬಾಸ್ ನಿಮ್ ಇನ್‌ಕಮ್ ಎಷ್ಟು" ಎಂದು ಕೇಳಿದ್ದಾನೆ. ಅದಕ್ಕೆ ಶಾರುಖ್ ಜಾಣ್ಮೆಯಿಂದ ಉತ್ತರಿಸಿದ್ದು, " "ನಾನು ಪ್ರತಿದಿನ ಸಾಕಷ್ಟು ಪ್ರೀತಿ (Love) ಗಳಿಸುತ್ತೇನೆ. ಅದೇ ನನ್ನ ಇನ್‌ಕಮ್" ಎಂದಿದ್ದಾರೆ! ಈ ಉತ್ತರಕ್ಕೆ ಹಲವರು ವ್ಹಾರೆವ್ಹಾ ಎನ್ನುತ್ತಿದ್ದಾರೆ.
ಸೋನಮ್ ಕಪೂರ್ ಪದೇ ಪದೇ ಎದೆ ತೋರಿಸೋದ್ಯಾಕೆ? ಹೃದಯ ಗೆದ್ದ ನೆಟ್ಟಿಗನ ಉತ್ತರ!
ಒಬ್ಬ ತರ್ಲೆ ನೆಟ್ಟಿಗ, "ನಿಮ್ಮ ಮೂಲ ಕಾಶ್ಮೀರ (Kashmir). ಹಾಗಿದ್ದ ಮೇಲೆ ಶಾರುಖ್ ಹೆಸರಿನ ಮುಂದೆ 'ಖಾನ್' ಯಾಕೆ ಬಂತು?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಯವಾಗಿ ಉತ್ತರಿಸಿರೋ ಶಾರುಖ್, "ಇಡೀ ವಿಶ್ವವೇ ನನಗೆ ಕುಟುಂಬ ಇದ್ದಂತೆ. ಕುಟುಂಬ ನಿಮಗೆ ಹೆಸರು ನೀಡೋದಿಲ್ಲ, ಬದಲಿಗೆ ನೀವು ಮಾಡೋ ಕೆಲಸ ನಿಮಗೆ ಹೆಸರು ನೀಡುತ್ತದೆ, ಸುಖಾ ಸುಮ್ಮನೆ ಇಂಥ ವಿಷಯಗಳನ್ನೆಲ್ಲಾ ಮನಸ್ಸಲ್ಲಿ ತುಂಬಿಸಿಕೊಂಡು ಸಮಯ ಹಾಳು ಮಾಡಬೇಡಿ" ಎಂದಿದ್ದಾರೆ.
ಇನ್ನೊಬ್ಬ ನೆಟ್ಟಿಗ, "ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ಒಂದು ಮಾತಲ್ಲಿ ಹೇಳಿ" ಎಂದು ಕೇಳಿದ್ದಕ್ಕೆ ಶಾರುಖ್, "ಶೀ ಈಸ್ ಸೋ ನೈಸ್’’ ಎಂದಿದ್ದಾರೆ. ಮತ್ತೊಬ್ಬ "ದಳಪತಿ ವಿಜಯ್ ಬಗ್ಗೆ ಹೇಳಿ" ಎಂಬ ಪ್ರಶ್ನೆಗೆ ‘ವಿಜಯ್ ತುಂಬಾ ಸ್ವೀಟ್ ಮತ್ತು ಸೈಲೆಂಟ್. ನನಗಾಗಿ ಡಿನ್ನರ್ ಮಾಡಿಸಿದ್ದರು’ ಎಂದು ಖಾನ್ ಉತ್ತರಿಸಿದ್ದಾರೆ.
ಅಮ್ಮನ 'ಏಮೋಷನಲ್' ಸಪೋರ್ಟ್ ತುಂಬಾ ಇದೆ: ನಟಿ ಸಪ್ತಮಿ ಗೌಡ
ಪಠಾಣ್ ಬಗ್ಗೆಯೇ ಪ್ರಶ್ನೆ ಕೇಳಿರೋ ಇನ್ನೊಬ್ಬ ಫ್ಯಾನ್, "ಸರ್ ನಿಮ್ಮ ಈ ಚಿತ್ರವನ್ನು ಯಾರಾದರೂ ಏಕೆ ನೋಡಬೇಕು" ಎಂದು ಪ್ರಶ್ನಿಸಿದ್ದಾರೆ. ಅದಕ್ಕೂ ಶಾರುಖ್ ಖಾನ್ ಸ್ವಲ್ಪ ಕಸಿವಿಸಿಗೊಂಡಂತೆ ಕಾಣುತ್ತಿದೆ. "ಅಬ್ಬಾ... ದೇವರೇ ಈ ಜನರೆಲ್ಲಾ ಯಾಕೋ ತುಂಬಾ ಡೀಪ್ ಆಗಿ ಚಿಂತಿಸುತ್ತಿದ್ದಾರೆ. ಜೀವನದ ಉದ್ದೇಶವೇನು? ಯಾವುದರ ಉದ್ದೇಶವೇನು ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಕ್ಷಮಿಸಿ ನಾನು ಅಂತಹ ಆಳವಾದ ಪ್ರಶ್ನೆಗೆ ಉತ್ತರಿಸುವಷ್ಟು ದೊಡ್ಡವನಲ್ಲ" ಎಂದು ಹೇಳಿ ಜಾರಿಕೊಂಡಿದ್ದಾರೆ.
"ಸಿನಿ ತಾರೆಯರು ಹಾಗೂ ಅಭಿಮಾನಿಗಳೆಲ್ಲಾ ನಿಮ್ಮನ್ನು ಶಾರುಖ್ ಖಾನ್, ಶಾರುಖ್ ಖಾನ್ ಎಂದು ಸಂಬೋಧಿಸುತ್ತಾರೆ. ಕೆಲವರು ಎಸ್‌ಆರ್‌ಕೆ ಎನ್ನುತ್ತಾರೆ. ಆದರೆ ಆಲಿಯಾ ಭಟ್ ಮಾತ್ರ ಭಿನ್ನವಾಗಿ 'ಎಸ್‌ಆರ್' ಎಂದಷ್ಟೇ ಕರೆಯುತ್ತಾರಲ್ಲ, ಅದ್ಯಾಕೆ" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಎಸ್‌ಆರ್ ಎಂದರೆ ಸ್ವೀಟ್ ಮತ್ತು ರೋಮ್ಯಾಂಟಿಕ್ (Romantic) ಎಂದು. ಅದಕ್ಕೇ ಕರೆಯುತ್ತಿರಬಹುದು ಎಂದು ತಮಾಷೆ ಉತ್ತರ ಕೊಟ್ಟಿದ್ದಾರೆ. ಇದಲ್ಲದೇ ಹೋದರೆ ಸೀನಿಯರ್ & ರೆಸ್ಪೆಕ್ಟೆಡ್" ಅಂಥನೂ ಆಗಿರಬಹುದು ಎಂದಿದ್ದಾರೆ.ಇದೇ ವಿಷಯವಾಗಿ ನಟಿ ಆಲಿಯಾ ಭಟ್ ಕೂಡ ಟ್ವಿಟರ್ (Twitter) ಮೂಲಕ ಪ್ರತಿಕ್ರಿಯೆ ನೀಡಿದ್ದು 'SR' ಎಂದರೆ ಸ್ವೀಟ್ & ರೆಸ್ಪೆಕ್ಟೆಡ್ ಅಂತ. ಆದರೆ ಇಲ್ಲಿಯವರೆಗೆ ನಾನು ಅವರಿಗೆ ಹೀಗೆ ಕರೀತಿದ್ದೆ. ಆದರೀಗ ನಾನು ಬೇರೆ ರೀತಿ ಕರೆಯುತ್ತೇನೆ. ಜನವರಿ 25 ರಿಂದ ಎಸ್‌ಆರ್ ಬದ್ಲು ಪಠಾಣ್ ಎಂದು ಕರೆಯುತ್ತೇನೆ. ನೋಡಿ ನಾನು ಎಷ್ಟು ಕ್ರಿಯೇಟಿವ್' ಎಂದಿದ್ದಾರೆ.