ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಸಹೋದರಿ ನಾಗಮ್ಮ ನಿಧನ

By Shruiti G KrishnaFirst Published May 14, 2022, 6:16 PM IST
Highlights

ಕನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮ ಇಂದು (ಮೇ 14) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಕನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮ ಇಂದು (ಮೇ 14) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ತಿಳಿಸಿವೆ. ನಾಗಮ್ಮನವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿದ್ದರು.

ಪಾರ್ವತಮ್ಮನವರಿಗೆ ಬೆನ್ನೆಲುಬಾಗಿಯೂ ನಿಂತಿದ್ದ ನಾಗಮ್ಮನವರು ಇನ್ನು ನೆನಪು ಮಾತ್ರ. ಸಹೋದರಿ ಪಾರ್ವತಮ್ಮ ಅವರನ್ನು ಕಳೆದುಕೊಂಡ ನಂತರ ತುಂಬಾ ಬಳಲಿದ್ದರು. ನಾಗಮ್ಮ ನಿಧನಕ್ಕೆ ಗಣ್ಯರು ಮತ್ತು ಕುಟುಂಬದವರು ಸಂತಾಪ ಸೂಚಿಸುತ್ತಿದ್ದಾರೆ. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ ಮತ್ತು ಮಗ ಮಹೇಶ್ ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ. ಇಂದು ಸಂಜೆ ಅವರ ಅಂತ್ಯ ಕ್ರಿಯೆ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದು ಇಳಂದೂರಿನ ಕೆಸ್ತೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಬಂಗಾರದ ಮನುಷ್ಯನಿಗೆ ಸಂಗೀತ ಸ್ವರಾಭಿಷೇಕ: ಕಾರ್ಯಕ್ರಮದಿಂದ ಬಂದ ಹಣ ಶಕ್ತಿಧಾಮಕ್ಕೆ.!

Latest Videos

ಸಹೋದರ ಚಿನ್ನೇಗೌಡ ಸ್ಯಾಂಡಲ್ ವುಡ್‌ನ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ನಾಗಮ್ಮ ಅನೇಕ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅನೇಕ ದಿನಗಳಿಂದ ಅನಾರೋಗ್ಯದಿಂದ ನರಳಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Puneeth Raj Kumar Death: ಮನೆಯಿಂದ ಹೊರಬಂದ ಅಪ್ಪು ಕೊನೆ ಕ್ಷಣದ ವಿಡಿಯೋ

ಡಾ. ರಾಜ್ ಕುಮಾರ್ ಕುಟುಂಬಕ್ಕೆ ಆಘಾತದ ಮೇಲೆ ಆಘಾತ ಉಂಟಾಗುತ್ತಿದೆ. ಕಳೆದ ವರ್ಷ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ನೋವು ಮಾಸುವ ಮುನ್ನವೇ ಮತ್ತೊಂದು ಆಘಾತ ಉಂಟಾಗಿರುವುದು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಬೇಸರ ತಂದಿದೆ. ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ನಾಗಮ್ಮ ಕೂಡ ಅಪ್ ಸೆಟ್ ಆಗಿದ್ದರು. ಅದೇ ನೋವಿನಲ್ಲಿ ನಾಗಮ್ಮ ಇಹಲೋಕ ತ್ಯಾಜಿಸಿದ್ದಾರೆ.

 

click me!