
ಕನ್ನಡ ಕಿರುತೆರೆಯಲ್ಲಿ ಅನೇಕ ಕಾಮಿಡಿ ಶೋಗಳು ಪ್ರಸಾರವಾಗುತ್ತಿವೆ. ಒಂದೊಂದು ಶೊಗಳು ಸಹ ಒಂದೊಂದು ರೀತಿಯಲ್ಲಿ ಮನರಂಜನೆ ನೀಡುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ(Gicchi Gili Gili) ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಶೋನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ರೀನಾ ಡಿಸೋಜಾ ಮತ್ತು ಮಂಜು ಪಾವಗಡ(Manju Pavagada and Reena D'souza) ಶೋನಿಂದ ಹೊರನಡಿದ್ದಾರೆ. ಈ ರಿಯಾಲಿಟಿ ಶೋ ಪ್ರಾರಂಭ ಆದಾಗಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿತ್ತು. ಅಲ್ಲದೇ ರೀನಾ ಮತ್ತು ಮಂಜು ಇಬ್ಬರು ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿರುವುದು ಅಭಿಮಾನಿಗಳು ಭಾರಿ ಮನರಂಜನೆ ನಿರೀಕ್ಷೆ ಮಾಡಿದ್ದರು.
ಆದರೀಗ ಶೋ ಅರ್ಧದಲ್ಲಿಯೇ ಇಬ್ಬರೂ ಹೊರ ನಡೆದಿದ್ದಾರೆ. ಅಂದಹಾಗೆ ಇವರಿಬ್ಬರ ಜಾಗಕ್ಕೆ ಮತ್ತೋರ್ವ ನಿರೂಪಕ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಿರಂಜನ್ ದೇಶಪಾಂಡೆ(Niranjan Deshpande). ನಿರಂಜನ್ ಇನ್ಮುಂದೆ ಈ ಶೋ ನಡೆಸಿಕೊಡಲಿದ್ದಾರೆ. ಈಗಾಗಲೇ ಹೊಸ ಪ್ರೋಮೋ ಬಿಡುಗಡೆಯಾಗಿದ್ದು ನಿರಂಜನ್ ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ. ಅಂದಹಾಗೆ ಇದೇ ಶೋನಲ್ಲಿ ನಿರಂಜನ್ ಪತ್ನಿ ಯಶಸ್ವಿನಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ.
ಹಾಗಾಗಿ ಜಡ್ಜ ಸ್ಥಾನದಲ್ಲಿ ಕುಳಿತಿರುವ ಸೃಜನ್ ಲೋಕೇಶ್ ಮತ್ತು ಶ್ರುತಿ ಇಬ್ಬರು ನಿರಂಜನ್ ಕಾಲೆಳೆಯುತ್ತಾರೆ. ಈ ಬಗ್ಗೆ ಮಾತನಾಡಿದ ನಿರಂಜನ್ ಈ ಶೋ ಮುಗಿಯುವ ವರೆಗೂ ನಾನು ಸಿಂಗಲ್ ನನಗೂ ಯಶಸ್ವಿನಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸದ್ಯ ಬದಲಾದ ನಿರೂಪಕರಿಂದ ಮತ್ತಷ್ಟು ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.
ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ 'ಗಿಚ್ಚಿ ಗಿಲಿಗಿಲಿ'; ಪ್ರೇಕ್ಷಕರ ಅಸಮಾಧಾನ
ಅಂದಹಾಗೆ ಖ್ಯಾತ ನಿರೂಪಕಿ ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ ಆಂಕರ್ ಆಗಿದ್ದಾರೆ. ಆಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ರೀನಾ ತನ್ನ ಅದ್ಭುತ ನಿರೂಪಣಾ ಶೈಲಿ ಮೂಲಕ ನೋಡುಗರ ಮನಗೆದ್ದಿದ್ದರು. ಗಿಚ್ಚಿಗಿಲಿಗಿಲಿ ಶೋ ಮೂಲಕ ರೀನಾ ಮೊದಲ ಬಾರಿಗೆ ಮನರಂಜನಾ ವಾಹಿನಿ ಕಡೆ ಮುಖ ಮಾಡಿದ್ದರು. ಆದರೆ ರೀನಾ ನಿರೂಪಣೆಗೆ ಇಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೆ ಮಂಜು ಪಾವಗಡ ಅವರೇ ಹೆಚ್ಚು ವೇದಿಕೆ ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಈ ನಡುವೆ ಇಬ್ಬರು ದಿಢೀರ್ ಶೋನಿಂದ ಹೊರ ನಡೆದಿರುವುದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಅಂದಹಾಗೆ ಇಬ್ಬರು ಗಿಚ್ಚಿ ಗಿಲಿಗಿಲಿ ಶೋನಿಂದ ಹೊರ ನಡೆಯಲು ಕಾರಣ ಬೇರೆ ಬೇರೆ ಕಮಿಂಟ್ ಮೆಂಟ್ ಕಾರಣದಿಂದ ಶೋನಿಂದ ಹೊರನಡೆಯಲಾಗಿದೆ ಎನ್ನಲಾಗಿದೆ. ಮಂಜು ಪಾವಗಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೆ ಬರುತ್ತಾ ಮಜಾ ಟಾಕೀಸ್; ಟಾಕಿಂಗ್ ಸ್ಟಾರ್ ಸೃಜನ್ ಹೇಳಿದ್ದೇನು?
ಅಂದಹಾಗೆ ಈ ರಿಯಾಲಿಟಿ ಶೋನಲ್ಲಿ ಎಲ್ಲಾ ಕ್ಷೇತ್ರದವರು ಭಾಗವಹಿಸಿದ್ದಾರೆ. ಪತ್ರಿಕೋದ್ಯಮ, ಐಟಿ, ಸಿನಿಮಾ, ಕಿರುತೆರೆ ಸೇರಿದಂತೆ ಎಲ್ಲಾ ಕ್ಷೇತ್ರವರು ಇದ್ದಾರೆ. ನಿವೇದಿತಾ ಗೌಡ, ವಂಶಿಕಾ ಅಂಜನಿ ಕಶ್ಯಪ, ಮಜಾ ಭಾರತ ಖ್ಯಾತಿಯ ಜಗ್ಗಪ್ಪ, ಕಿಶೋರ್, ಮಾನಸಾ ರಾಜಾ ರಾಣಿ ಶೋ ಖ್ಯಾತಿಯ ಶ್ರೀಕಾಂತ್, ಎನ್ ಸಿ ಅಯ್ಯಪ್ಪ ಹಾಗೂ ಗಾಯಕಿ ಜೋಡಿ ಸುನೀತಾ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.