ಪಾಕಿಸ್ತಾನದ ಖಾನ್ ನಟರಿಂದ ಬಾಲಿವುಡ್ ಸೂಪರ್ಸ್ಟಾರ್ ಎನಿಸಿಕೊಂಡಿರೋ ಸಲ್ಮಾನ್, ಶಾರುಖ್ ಮತ್ತು ಆಮೀರ್ ಖಾನ್ಗಳಿವೆ ಅಭದ್ರತೆ ಕಾಡ್ತಿದೆಯಂತೆ. ಪಾಕ್ ನಟಿ ನಾದಿಯಾ ಹೇಳಿದ್ದೇನು ಕೇಳಿ...
ಸನ್ನಿ ಡಿಯೋಲ್ ಅವರ ಚಿತ್ರ ಗದರ್ 2 (Gadar-2) ಚಿತ್ರ ಬಿಡುಗಡೆಯಾದ ಬಳಿಕ, ಅದರಲ್ಲಿನ ಪಾಕಿಸ್ತಾನ ವಿರೋಧಿ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ತಾನದ ನಟಿ ನಾದಿಯಾ ಖಾನ್ ಮತ್ತೀಗ ಸದ್ದು ಮಾಡುತ್ತಿದ್ದಾರೆ. ಇದರಲ್ಲಿ ಇವರು ಬಾಲಿವುಡ್ನ ಖಾನ್ತ್ರಯರ ಘನತೆಗೆ ಕುಂದು ತರುವ ಮಾತನಾಡಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ನಟಿ ನಾದಿಯಾ ಖಾನ್ ಅವರು ಈ ಹೇಳಿಕೆ ನೀಡಿದ್ದು, ಇದು ಶಾರುಖ್, ಸಲ್ಮಾನ್ ಮತ್ತು ಆಮೀರ್ ಖಾನ್ ಅಭಿಮಾನಿಗಳನ್ನು ಕೆರಳಿಸಿದೆ. ನಟಿ ಹೇಳಿದ್ದೇನೆಂದರೆ, ಪಾಕಿಸ್ತಾನದ ನಟರಿಂದಾಗಿ ಈ ಖಾನ್ ತ್ರಯ ನಟರಿಗೆ ಅಭದ್ರತೆ ಕಾಡುತ್ತಿದೆಯಂತೆ! ಈ ವಿಷಯವನ್ನು ಪ್ರಸ್ತಾಪಿಸಿರುವ ನಟಿ ನಾದಿಯಾ, ಶಾರುಖ್ ಖಾನ್ ಸಲ್ಮಾನ್ ಖಾನ್, ಹಾಗೂ ಆಮಿರ್ ಖಾನ್ ಅವರಿಗೆ ಪಾಕ್ ನಟರಿಂದ ಅಭದ್ರತೆ ಕಾಡುತ್ತಿದೆ ಎಂದಿದ್ದಾರೆ.
ಅಷ್ಟಕ್ಕೂ ನಟಿ ಈ ಬಗ್ಗೆ ಕೆಲವು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ ಅದೇನೆಂದರೆ, ಭಾರತದ ಸಿನಿಮಾಗಳಲ್ಲಿ ಕೆಲವು ಪಾಕಿಸ್ತಾನದ ನಟರಿದ್ದಾರೆ. ಅವರು ಬಾಲಿವುಡ್ಗೆ ಪ್ರವೇಶಿಸಿದ ಬಳಿಕ ಅವರೇ ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದ ಸಲ್ಮಾನ್, ಶಾರುಖ್ ಮತ್ತು ಆಮೀರ್ ಅವರಿಗೆ ಅಭದ್ರತೆ ಕಾಡುತ್ತಿದೆ ಎನ್ನುವುದು. ಭಾರತದ ಸಿನಿಮಾಗಳಲ್ಲಿ ಪಾಕ್ ನಟರಾದ ಫವಾದ್ ಖಾನ್ ಮುಂತಾದವರು ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಕೀಯದ ವಿಷಯ ಇಟ್ಟುಕೊಂಡು ಎರಡು ದೇಶಗಳ ನಡುವೆ ಬ್ಯಾನ್ ಹೇರುವ ಮೂಲಕ ನಮ್ಮ ದೇಶದ ನಟರು ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬಾಲಿವುಡ್ ಮಂದಿ ನೋಡಿಕೊಂಡಿದ್ದಾರೆ ಎಂದು ಭಾರತ ಹಾಗೂ ಬಾಲಿವುಡ್ ವಿರುದ್ಧ ನಾದಿಯಾ ಹರಿಹಾಯ್ದಿದ್ದಾರೆ.
ಪಾಕ್ ವಿರೋಧಿಸಲು ಧರ್ಮೇಂದ್ರ-ಸನ್ನಿಗೂ ಇಷ್ಟವಿಲ್ವಂತೆ: ಪಾಕ್ ನಟಿಯಿಂದಲೇ ಬಹಿರಂಗ
ನಟಿಯ ಪ್ರಕಾರ, ಭಾರತೀಯ ಸಿನಿ ಪ್ರೇಕ್ಷಕರು ಪಾಕಿಸ್ತಾನದ ನಟರನ್ನು ಇಷ್ಟಪಡುತ್ತಾರಂತೆ. ಇದೇ ಕಾರಣಕ್ಕೆ ಭಾರತದ ರಾಜಕಾರಣಿಗಳಿಗೆ ಮಾತ್ರವಲ್ಲದೇ, ಅಲ್ಲಿನ ಟಾಪ್ ನಟರಿಗೂ ನಮ್ಮ ಬಗ್ಗೆ ಭಯ ಇದೆ ಎಂದಿದ್ದಾರೆ. ನಮ್ಮ ನಟರು ಬಾಲಿವುಡ್ನಲ್ಲಿ ಅವಕಾಶ ಪಡೆಯುತ್ತಾರೆ ಎಂಬುದು ಮಾತ್ರ ವಿಷಯವಲ್ಲ. ಭಾರತದವರು ಪಾಕಿಸ್ತಾನದ ನಟರನ್ನು ಇಷ್ಟಪಡುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ನಮ್ಮ ನಟರಾದ ವಹಾಜ್ ಅಲಿ ಮತ್ತು ಬಿಲಾಲ್ ಅಬ್ಬಾಸ್ ಖಾನ್ ಮುಂತಾದವರು. ಇವರಿಗೆಲ್ಲ ಭಾರತದ ನಟರಿಗಿಂತಲೂ ಹೆಚ್ಚಾದ ಫ್ಯಾನ್ಸ್ ಇದ್ದಾರೆ. ಇದೇ ಕಾರಣಕ್ಕೆ ಖಾನ್ ತ್ರಯರಿಗೆ ನಡುಕ ಉಂಟಾಗುತ್ತಿದೆ. ಒಂದಿಕ್ಕೊಂದು ಕಾರಣದಿಂದ ನಮ್ಮನ್ನು, ನಮ್ಮ ಚಿತ್ರಗಳನ್ನು ಬ್ಯಾನ್ ಮಾಡಲು ಹವಣಿಸುತ್ತಾರೆ ಎಂದಿದ್ದಾರೆ.
ಇದರ ವಿಡಿಯೋ ಭಾರತದಲ್ಲಿ ಸಕತ್ ಸದ್ದು ಮಾಡುತ್ತಿದ್ದು, ಶಾರುಖ್, ಸಲ್ಮಾನ್ ಮತ್ತು ಆಮೀರ್ ಖಾನ್ ಅಭಿಮಾನಿಗಳನ್ನು ಕೆರಳಿಸಿದೆ. ಈಕೆ ನೆಟ್ಟಗಿಲ್ಲ. ಪಾಕಿಸ್ತಾನದ ಸ್ಥಿತಿ ನೋಡಿದರೆ, ಇವಳಿಗೂ ಎಂಥ ಸ್ಥಿತಿ ಬಂದಿದೆ ಎಂದು ತಿಳಿಯುತ್ತದೆ. ಅಲ್ಲಿನ ಸ್ಥಿತಿ ಹದಗೆಟ್ಟು ಹೋಗಿರುವ ಕಾರಣ, ಹೀಗೆ ಟ್ರೋಲ್ ಮೂಲಕ ಪ್ರಚಾರಕ್ಕೆ ಬರಲು ಹವಣಿಸುತ್ತಿದ್ದಾಳೆ. ನಾದಿಯಾ ಸಿಕ್ಕಾಪಟ್ಟೆ ಭ್ರಮೆಯಲ್ಲಿ ಇದ್ದಾಳೆ ಎಂದೆಲ್ಲಾ ಹೇಳುತ್ತಿದ್ದಾರೆ. ಅಷ್ಟಕ್ಕೂ ಉರಿ ದಾಳಿ ಮತ್ತು ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಕಲಾವಿದರನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು, ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಆದರೆ ಇದಕ್ಕೆ ಬೇರೆಯದ್ದೇ ಅರ್ಥ ಕಲ್ಪಿಸುತ್ತಿದ್ದಾರೆ ನಟಿ.
ಅಮ್ಮನಾಗ್ತಿರೋ ನಟಿ ದೀಪಿಕಾ ಪಡುಕೋಣೆ ಇನ್ನೊಂದು ಗುಡ್ ನ್ಯೂಸ್: ಆಸ್ಕರ್ರಿಂದ ವಿಶೇಷ ಮನ್ನಣೆ
ಇಲ್ಲಿದೆ ನೋಡಿ ವಿಡಿಯೋ:
I need her delusion pic.twitter.com/TVDBuP754j
— Ash (@ashilikeit)