ಆಪರೇಷನ್​ ಸಿಂದೂರ: ಬಾಲಿವುಡ್​ ಖಾನ್​ಗಳು ಬಹುದೂರ ​! ವೈರಲ್​ ಆಯ್ತು ವಾಜಪೇಯಿ ಹೇಳಿದ್ದ ಮಾತು...

Published : May 09, 2025, 10:13 PM ISTUpdated : May 12, 2025, 12:31 PM IST
ಆಪರೇಷನ್​ ಸಿಂದೂರ: ಬಾಲಿವುಡ್​ ಖಾನ್​ಗಳು ಬಹುದೂರ ​! ವೈರಲ್​ ಆಯ್ತು ವಾಜಪೇಯಿ ಹೇಳಿದ್ದ ಮಾತು...

ಸಾರಾಂಶ

ಚಿತ್ರಗಳಲ್ಲಿ ದೇಶಭಕ್ತಿ ಮೆರೆಯುವ ನಟರು ವಾಸ್ತವದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಸಿಂದೂರ ಕಳೆದುಕೊಂಡ ಭಾರತೀಯರಿಗೆ ಬೆಂಬಲ ಸೂಚಿಸದೆ ಖಾನ್ ತ್ರಿಮೂರ್ತಿಗಳು ಟ್ರೋಲ್ ಆಗುತ್ತಿದ್ದಾರೆ. ವಾಜಪೇಯಿ ಅವರು ಕಾರ್ಗಿಲ್ ಸಂದರ್ಭದಲ್ಲಿ ನಟರೂ ಕಾರ್ಯಪ್ರವೃತ್ತರಾಗಬೇಕೆಂದಿದ್ದ ಮಾತು ಇಂದು ಪ್ರಸ್ತುತ. ಜನರಿಗೆ ಹತ್ತಿರವಿರುವ ನಟರು ಮಾದರಿಯಾಗಬೇಕೆಂಬುದು ಅವರ ಆಶಯವಾಗಿತ್ತು. ಆದರೆ ಇಂದು ಬಹುತೇಕ ನಟರು ಮೌನವಹಿಸಿ ತಮ್ಮ ನಿಲುವು ಸಾರಿದ್ದಾರೆ.

ಸಿನಿಮಾಗಳಲ್ಲಿ ಅಬ್ಬಬ್ಬಾ ಅದೇನು ದೇಶಭಕ್ತಿ. ಅಭಿಮಾನಿಗಳು ಸೀಟಿ ಹೊಡೆಯೋದೇ ಹೊಡೆಯೋದು. ದೇಶ ಭಕ್ತಿಯ ಒಂದೊಂದು ಡೈಲಾಗ್​ ಹೇಳುವಾಗಲೂ ಸಿನಿಮಾ ಮಂದಿರಗಳ ತುಂಬಾ ದೇಶ ಪ್ರೇಮದ ಕೋಲ್ಮಿಂಚು. ಸೇನೆಯ ವೇಷ ತೊಟ್ಟು, ಕೈಯಲ್ಲಿ ಗನ್​ ಹಿಡಿದು ದೇಶಕ್ಕಾಗಿ ಪ್ರಾಣ ಕೊಡುವೆ ಎನ್ನುವ ಡೈಲಾಗ್​ ಹೇಳಿದರಂತೂ ಮುಗಿದೇ ಹೋಯ್ತು... ನಮ್ಮ ದೇಶಕ್ಕೆ ಬೇಕಿರುವುದು ಇಂಥ ನಟರೇ ಎಂದು ಖುದ್ದು ಅವರೇ ಯುದ್ಧಕ್ಕೆ ಹೋಗುವಂತೆ ಬಿಂಬಿಸುವ ಅತಿರೇಕದ ಅಭಿಮಾನಿಗಳಿಗೇನೂ ಕಡಿಮೆ ಇಲ್ಲ. ಸಿನಿಮಾ ತಾರೆಯರೇ ದೇವರು, ಸಿನಿಮಾ ತಾರೆಯರೇ ದೇಶ ಪ್ರೇಮಿಗಳು, ಅವರೇ ಆದರ್ಶರು. ಅದರಲ್ಲಿಯೂ ದೇಶ ಭಕ್ತಿಯನ್ನು ಸಾರುವ ಹಾಡು ಬಂದರೆ ಅಭಿಮಾನಿಗಳ ಕಣ್ಣಲ್ಲಿ ಗಳಗಳ ನೀರು...

ಆದರೆ ಇಂದು ಬಾಲಿವುಡ್​ನ ಅಲ್ಲೊಬ್ಬ ಇಲ್ಲೊಬ್ಬ ನಟ- ನಟಿ ಬಿಟ್ಟರೆ ಇಡೀ ಬಾಲಿವುಡ್ಡೇ ಗಪ್​ಚುಪ್​! ಅದರಲ್ಲಿಯೂ ದೇಶಪ್ರೇಮವನ್ನು ಅಭಿಮಾನಿಗಳಲ್ಲಿ ಸಾರಿ ಸಾರಿ ಹೇಳುವ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ಖಾನ್​ತ್ರಯರು ಆಪರೇಷನ್​ ಸಿಂದೂರದ ವಿಷಯದಲ್ಲಿ ಫುಲ್ ಸೈಲೆಂಟ್​ ಆಗುವ ಮೂಲಕ ಸೋಷಿಯಲ್​  ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಉಗ್ರರನ್ನು ಪೋಷಿಸುತ್ತಿರುವ, ಭಾರತದ ಹೆಣ್ಣುಮಕ್ಕಳ ಸಿಂದೂರನ್ನು ಕಿತ್ತುಕೊಂಡಿರುವ ಪಾಕಿಗಳ ಪರವಾಗಿ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದರೆ, ಬೇರೆ ಯಾವುದೇ ವಿಷಯಗಳಿಗೆ  ಥಟ್​ ಎಂದು ರಿಯಾಕ್ಟ್​ ಮಾಡುವ ಖಾನ್​ತ್ರಯರು ಮಾತ್ರ ಸುಮ್ಮನೇ ಇರುವುದು ಅವರ ಅಭಿಮಾನಿಗಳಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ! ಕೊನೆಯ ಪಕ್ಷ ಪಾಕಿಸ್ತಾನದ ವಿರುದ್ಧವಾದರೂ ಒಂದಾದರೂ ಮಾತನಾಡಬೇಕಲ್ವಾ? ಇದು ಯಾವ ದೇಶದ ಪ್ರೇಮ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು!

Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್​

ಇದರ ನಡುವೆ, ಅಂದಿನ ಪ್ರಧಾನಿ, ಭಾರತ ಕಂಡ ಅಪರೂಪದ ದಿಟ್ಟ ಪ್ರಧಾನಿಗಳಲ್ಲಿ ಒಬ್ಬರು  ಎನಿಸಿರುವ ಅಟಲ್​ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಮಾತೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. 1999ರ ಕಾರ್ಗಿಲ್​ ಯುದ್ಧದ ಸಮಯದಲ್ಲಿ, ಅಟಲ್​ ಅವರು ಭಾಷಣ ಮಾಡುವ ಸಮಯದಲ್ಲಿ ಭಾರತವು ಶಾಂತಿಯನ್ನು ಬಯಸುತ್ತದೆ. ಆದರೆ ಶಾಂತಿಯನ್ನು ಕದಡಲು ಬಂದವರಿಗೆ ಹೇಗೆ ಅವರದ್ದೇ ಆದ ಭಾಷೆಯಲ್ಲಿ ತಿರುಗೇಟು ಕೊಡಬೇಕು ಎನ್ನುವುದೂ ಭಾರತೀಯರಿಗೆ ಗೊತ್ತಿದೆ ಎಂದಿದ್ದರು. ಇದೇ ಸಂದರ್ಭದಲ್ಲಿ ನಟ ಆಮೀರ್​ ಖಾನ್​ ಅವರು, ವಾಜಪೇಯಿ ಅವರ ಬಳಿ 'ನೇತಾ ಖುಚ್​ ಕರ್ನಾ ಚಾಹಿಯೇ' ಎಂದಿದ್ದರು. ಯುದ್ಧದ ಭೀತಿ ಉಂಟಾಗಿದ್ದರಿಂದ ರಾಜಕಾರಣಿಗಳು ಏನಾದರೂ ಮಾಡಬೇಕು ಎನ್ನುವುದು ಅವರ ಮಾತಾಗಿತ್ತು. ಅದಕ್ಕೆ ಮಾತಿನ ಚತುರ ವಾಜಪೇಯಿ ಅವರು, 'ಕೇವಲ್​ ನೇತಾ ನಹಿ... ಅಭಿನೇತಾ ಭೀ ಕುಛ್​ ಕರ್​ ಸಕತಾ ಹೈ' (ಕೇವಲ ರಾಜಕಾರಣಗಳು ಮಾತ್ರವಲ್ಲ ಅಭಿನೇತಾ ಅಂದ್ರೆ ನಟರೂ ಏನಾದರೂ ಮಾಡಲು ಸಾಧ್ಯ) ಎಂದಿದ್ದರು.

ಏಕೆಂದರೆ, ರಾಜಕಾರಣಿಗಳಿಗಿಂತಲೂ ಜನರಿಗೆ ಹೆಚ್ಚು ಹತ್ತಿರವಾದವರು, ಅನುಯಾಯಿಗಳು, ದೇವರು ಎಂದು ನಂಬುವುದು ಚಿತ್ರನಟರನ್ನು ಮಾತ್ರ. ಅವರು ಒಂದು ಹೆಜ್ಜೆ ಮುಂದೆ ಹೋದರೆ ಅವರ ಹಿಂದೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ.  ಏಕೆಂದರೆ ಇವರಿಗೆ ಅವರೇ  ಆದರ್ಶ. ಕೊಡಲಿ, ಲಾಂಗು, ಮಚ್ಚು ಹಿಡಿಯುವುದರಿಂದ ಹಿಡಿದು ದೇಶಪ್ರೇಮವನ್ನು ಬಿತ್ತುವವರೆಗೂ ಸಿನಿ ತಾರೆಯರೇ ಹಲವರಿಗೆ ಆದರ್ಶಪ್ರಾಯ ಆಗಿದ್ದಾರೆ. ಆದ್ದರಿಂದ ನೇತಾಗಳ ಜೊತೆಗೆ ಅಭಿನೇತಾಗಳೂ ಏನಾದ್ರೂ ಮಾಡಿ ಎಂದು ವಾಜಪೇಯಿ ಹೇಳಿದ್ದರು. ಆದರೆ ಇಂದು ಬಹುತೇಕ ಅಭಿನೇತಾಗಳು ಸೈಲೆಂಟ್​  ಆಗುವ ಮೂಲಕ ತಮ್ಮ ಸಂದೇಶವನ್ನು ಸಾರಿದ್ದಾರೆ! 

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!