ಭಾರತ-ಪಾಕ್​ ನಡುವೆ ಘರ್ಷಣೆ ನಡುವೆಯೇ ದೇಶಾದ್ಯಂತ ವಿಜಯ ದೇವರಕೊಂಡ ಫ್ರೀ ಐಸ್​ಕ್ರೀಮ್​!

Published : May 09, 2025, 09:15 PM ISTUpdated : May 12, 2025, 12:00 PM IST
ಭಾರತ-ಪಾಕ್​ ನಡುವೆ ಘರ್ಷಣೆ ನಡುವೆಯೇ ದೇಶಾದ್ಯಂತ ವಿಜಯ ದೇವರಕೊಂಡ ಫ್ರೀ ಐಸ್​ಕ್ರೀಮ್​!

ಸಾರಾಂಶ

ಭಾರತ-ಪಾಕ್ ಉದ್ವಿಗ್ನತೆಯ ನಡುವೆ, ವಿಜಯ್ ದೇವರಕೊಂಡ ಹುಟ್ಟುಹಬ್ಬದಂದು ಹಲವು ನಗರಗಳಲ್ಲಿ ಉಚಿತ ಐಸ್‌ಕ್ರೀಮ್ ವಿತರಿಸುತ್ತಿದ್ದಾರೆ. ಯೋಧರಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿರುವ ಅವರು, ಹೈದರಾಬಾದ್, ಚೆನ್ನೈ, ಬೆಂಗಳೂರು ಸೇರಿದಂತೆ ಹಲವೆಡೆ ಫುಡ್ ಟ್ರಕ್‌ಗಳ ಮೂಲಕ ಈ ವಿತರಣೆ ನಡೆಸಲಿದ್ದಾರೆ. ಆದರೆ, ಬೆಟ್ಟಿಂಗ್ ಆ್ಯಪ್ ಪ್ರಚಾರದ ಆರೋಪದಲ್ಲಿ ದೇವರಕೊಂಡ ಸೇರಿದಂತೆ ಹಲವು ನಟರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಇದೀಗ ಯುದ್ಧಭೀತಿ ಶುರುವಾಗಿದೆ. ಇದಾಗಲೇ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತಿದ್ದು, ಪಾಕ್​ ತತ್ತರಿಸಿ ಹೋಗಿದೆ. ಯುದ್ಧ ಎನ್ನುವುದು ಅಧಿಕೃತವಾಗಿ ಘೋಷಿಸಲಾಗದಿದ್ದರೂ, ಯುದ್ಧವೇ ನಡೆಯುತ್ತಿರುವುದು ನಿಜ. ಅದರ ನಡುವೆಯೇ, ಇದೀಗ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಕಾರಣಕ್ಕೆ ತನ್ನ ರಾಜ್ಯದ ಜನರ ಹಿತರಕ್ಷಣೆಗೆ ಸರ್ಕಾರಗಳು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಇದಾಗಲೇ ಸೂಚನೆಯನ್ನೂ ಕೊಟ್ಟಾಗಿದೆ. ಇದರ ನಡುವೆಯೇ ನಟ  ವಿಜಯ್ ದೇವರಕೊಂಡ ಅವರು ದೇಶದ ಹಲವು ನಗರಗಳಲ್ಲಿ ಹುಟ್ಟುಹಬ್ಬದ ನಿಮಿತ್ತ ಉಚಿತ ಐಸ್​ಕ್ರೀಂ ವಿತರಣೆಗೆ ಮುಂದಾಗಿದ್ದಾರೆ.

ಈ ಕುರಿತು ಖುದ್ದು,  ವಿಜಯ್ ದೇವರಕೊಂಡ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಇದೇ ರೀತಿ ಐಸ್​​ಕ್ರೀಮ್​ ವಿತರಣೆ ಮಾಡುತ್ತಿದ್ದೇನೆ. ಸದ್ಯ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಘರ್ಷ ಇರುವ ಹಿನ್ನೆಲೆಯಲ್ಲಿ, ದೇಶದ ಯೋಧರಿಗೆ ಸಲಾಂ ಹೇಳುವ ಮೂಲಕ, ಐಸ್​ಕ್ರೀಂ ಹಂಚುವ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳು ಇದ್ದ ಜಾಗದಲ್ಲೇ ಲೈಟ್ ಫುಡ್ ನೀಡುವ ವ್ಯವಸ್ಥೆಯನ್ನು ಈ ಹಿಂದೆಯೂ ನಟ ಮಾಡಿದ್ದು, ಈ ಬಾರಿಯೂ ಅದನ್ನು ಮಾಡುವುದಾಗಿ ಹೇಳಿದ್ದಾರೆ.

'ಕನ್ಯತ್ವ ಮಾರಾಟಕ್ಕಿದೆ' ಜಾಹೀರಾತು: ಖರೀದಿಗೆ ಶ್ರೀಮಂತರ ದೌಡು! 18 ಕೋಟಿಗೆ ನಟನ ಪಾಲು...

ಇವರ ಹೆಸರಿನ  ಫುಡ್ ಟ್ರಕ್​ಗಳು ಅನೇಕ ನಗರಗಳಲ್ಲಿ ಓಡಾಡ್ತಿದ್ದು, ಇಂದು ಬರ್ತ್ ಡೇ ಸಂಭ್ರಮದಲ್ಲಿ ಜನರಿಗೆ ಐಸ್ ಕ್ರೀಮ್ ವಿತರಣೆ ಮಾಡಲು ಮುಂದಾಗಿದ್ದಾರೆ.  ಹುಟ್ಟುಹಬ್ಬದ ಪ್ರಯುಕ್ತ ಹೈದರಾಬಾದ್, ಚೆನ್ನೈ, ಬೆಂಗಳೂರು, ಪುಣೆ, ಮುಂಬೈ, ಡೆಲ್ಲಿ, ವೈಜಾಗ್ ಗಳಲ್ಲಿ ದೇವರಕೊಂಡ ಬರ್ತ್ ಡೇ ಟ್ರಕ್​ಗಳನ್ನು ಕಳುಹಿಸಿಕೊಡಲಿದ್ದಾರೆ. ಕಳೆದ ಬಾರಿಯೂ ಇದು ಸಕತ್​ ಟ್ರೆಂಡ್​ ಆಗಿತ್ತು.  ಮನೆಗಳ ಹತ್ತಿರ, ಕಾಲೇಜಿನ ಬಳಿ ಸಂಚರಿಸುವ ಈ ಟ್ರಕ್ ಫ್ಯಾನ್ಸ್​ಗೆ ಉಚಿತ ಐಸ್ ಕ್ರೀಮ್ ವಿತರಿಸಲಾಗಿತ್ತು.  ವಿಜಯ್ ದೇವರಕೊಂಡ ಫುಡ್ ಟ್ರಕ್ ಸಿಬ್ಬಂದಿಗಳು ನೀಡುವ ಐಸ್ ಕ್ರೀಮ್ ತಿನ್ನುತ್ತಿರುವ ಜನರು, ಟ್ರಕ್ ಎದುರಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದರು.   ಐಸ್​​ಕ್ರಿಂ ಜೊತೆ ವಿಜಯ್ ದೇವರಕೊಂಡ ಒಡೆತನದ ರೌಡಿ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಕೂಡ ಇಂದು ವಿಶೇಷ ಆಫರ್​ಗಳನ್ನು ಸಹ ಬಿಡಲಾಗಿತ್ತು.
 
ಈ ಬಾರಿ ಅದೇನೂ ಆಫರ್​ ಇಲ್ಲ. ಬದಲಿಗೆ ಐಸ್​ಕ್ರೀಂ ಮಾತ್ರ ಸವಿಯಬಹುದಾಗಿದೆ. ಇದಕ್ಕೆ ಅಭಿಮಾನಿಗಳು ಪುಲ್​ ಖುಷ್​ ಆಗಿದ್ದಾರೆ. ಅಂದಹಾಗೆ. ಸದ್ಯ ವಿಜಯ ದೇವರಕೊಂಡ ಸೇರಿದಂತೆ  ಕೆಲವು ಸೆಲೆಬ್ರಿಟಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ ಸೇರಿದಂತೆ 25 ಸೆಲೆಬ್ರಿಟಿಗಳ ವಿರುದ್ಧ ತೆಲಂಗಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ದೂರು ದಾಖಲಿಸಿದ ನಂತರ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. 

ಸಾಹಿಲ್​ನ ಬಲೆಗೆ ಬಿದ್ದ 12 ಬಾಲೆಯರು ಕೊನೆಗೆ ಕಂಡದ್ದು ಪೋ* ವೆಬ್​ಸೈಟ್​ನಲ್ಲಿ! ಪೊಲೀಸರು ಗಪ್​ಚುಪ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!