ಪೂನಾಂ ಪಾಂಡೆ ತಲೆ ಮುಟ್ಟಿ ಆಶೀರ್ವದಿಸಿದ ವೃದ್ಧ: ಗಲೀಜಾಗಿ ಕಾಮೆಂಟ್‌ ಮಾಡಿದ ನೆಟ್ಟಿಗರು

Published : Aug 11, 2023, 11:52 AM ISTUpdated : Aug 11, 2023, 01:29 PM IST
ಪೂನಾಂ ಪಾಂಡೆ ತಲೆ ಮುಟ್ಟಿ ಆಶೀರ್ವದಿಸಿದ ವೃದ್ಧ: ಗಲೀಜಾಗಿ ಕಾಮೆಂಟ್‌ ಮಾಡಿದ ನೆಟ್ಟಿಗರು

ಸಾರಾಂಶ

2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿದ್ದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಾಡೆಲ್, ಬಾಲಿವುಡ್ ನಟಿ ಪೂನಾಂ ಪಾಂಡೆಗೆ ಹಿರಿಯ ವಯಸ್ಕರೊಬ್ಬರು ಮನದುಂಬಿ ಹರಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Instagram Account) ವೈರಲ್ ಆಗಿದೆ.

2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿದ್ದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಾಡೆಲ್, ಬಾಲಿವುಡ್ ನಟಿ ಪೂನಾಂ ಪಾಂಡೆಗೆ ಹಿರಿಯ ವಯಸ್ಕರೊಬ್ಬರು ಮನದುಂಬಿ ಹರಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Instagram Account) ವೈರಲ್ ಆಗಿದೆ. ಆದರೆ ಆಕೆಯನ್ನು ಹರಸಿರುವುದನ್ನು ಜನ ಮಾತ್ರ ಸಕರಾತ್ಮಕವಾಗಿ ತೆಗೆದುಕೊಳ್ಳದೇ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ. ಪಾಪರಾಜಿ (Paparazzi) ಇನ್ಸ್ಟಾಗ್ರಾಮ್ ಖಾತೆ ವೈರಲ್ ಭಯಾನಿಯಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಪೂನಾಂ ಪಾಂಡೆ ನಿಲ್ಲಿ ಬಿಳಿ ಮಿಶ್ರಿತ  ಬ್ಯಾಕ್‌ಲೆಸ್ ಪ್ಲೋರಲ್ ಲಾಂಗ್ ಗವಾನ್ ಧರಿಸಿದ್ದು, ಪಾಪರಾಜಿ ಕ್ಯಾಮರಾಗಳಿಗೆ ಫೋಸ್ ನೀಡ್ತಿದ್ದಾರೆ.  ಕ್ಯಾಮರಾಗಳಿಗೆ ಫೋಸ್ ನೀಡಿದ ನಂತರ ಸೀದಾ ಬಂದು ಅವರು ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ಮಧ್ಯವಯಸ್ಸು ದಾಟಿದ ವ್ಯಕ್ತಿಯೊಬ್ಬರು ಆಕೆಯ ತಲೆ ಮುಟ್ಟಿ ನೀವು ಸದಾ ಖುಷಿ ಖುಷಿಯಾಗಿರಿ ನಗುತ್ತಿರಿ ಎಂದು ಮನದುಂಬಿ ಹರಸುತ್ತಾರೆ. ಇದಕ್ಕೆ ಪೂನಾಂ ಖುಷಿ ಖುಷಿಯಿಂದಲೇ ಪ್ರತಿಕ್ರಿಯಿಸಿದ್ದು, ಎರಡು ಕೈಗಳನ್ನು ಮುಗಿದು, ಧನ್ಯವಾದ ಹೇಳುತ್ತಾ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಇದೇ ವೇಳೆ ಅನೇಕರು ಆಕೆಯ ಜೊತೆ ಫೋಟೋವನ್ನು ತೆಗೆಸಿಕೊಳ್ಳುತ್ತಾರೆ. 

ಆದರೆ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಆಕೆಗೆ ಆಶೀರ್ವಾದಿಸಿದ ಅಂಕಲ್‌ನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಈ ವೀಡಿಯೋ ಶೇರ್ ಮಾಡಿರುವ ವೈರಲ್ ಭಯಾನಿ (Viral Bhayani) ಇನ್ಸ್ಟಾಗ್ರಾಮ್ ಖಾತೆ, ಸಮಯಾತೀತವಾದ ಆಶೀರ್ವಾದ, ವಯಸ್ಸಾದ ಅಭಿಮಾನಿಯೊಬ್ಬರು ಪೂನಾಂ ಪಾಂಡೆಗೆ  ಹೃದಯದಾಳದಿಂದ ಆಶೀರ್ವದಿಸಿದರು. ಇದೊಂದು ನೆನಪಿಕೊಳ್ಳುವಂತಹ ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ. ಖುಷಿಯಾಗಿರಿ, ಸಂತೋಷವಾಗಿರಿ ಎಂದು ಅವರು ಪಿಸುಗುಟ್ಟಿದರು, ಇದೊಂದು ಬೆಚ್ಚನೆಯ ಸ್ಪರ್ಶ ಎಂದು ಬರೆದಿದೆ. 

ಒಟಿಟಿಗಾಗಿ ಹೋಟೆಲಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ಕುಂದ್ರಾ: ಸೈಬರ್ ಪೊಲೀಸರಿಂದ ಚಾರ್ಜ್‌ಶೀಟ್

ಆದರೆ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ಸುಮ್ಮನೇ ಕುಳಿತಿಲ್ಲ, ಅಜ್ಜ ಮಜಾ ತೆಗೆದುಕೊಳ್ಳುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯವನ್ನು ಮೆಚ್ಚದರಿಗೆ ಇಲ್ಲಿ ಡಿಸ್‌ಲೈಕ್ ಬಟನ್ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಆಕೆ ಹಾಕಿರುವ ಧಿರಿಸಿನಿಂದ ಕೆಟ್ಟದಾಗಿ ಕಾಣಿಸುತ್ತಿದ್ದಾಳೆ. ಕನಿಷ್ಠ ಆಕೆ ಬ್ರಾ ಕೂಡ ಧರಿಸಿಲ್ಲ. ಆಂಕಲ್ ಆಶೀರ್ವಾದ ನೀಡಿದ್ದಾರೆ ಎಂದಾದ ಮೇಲೆ ಆಕೆ ನರಕದಲ್ಲೂ ಖುಷಿಯಾಗಿರ್ತಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ತರಹೇವಾರಿ ಕಾಮೆಂಟ್ ಮಾಡಿದ್ದು ಎಲ್ಲಾ ಕಾಮೆಂಟ್‌ಗಳನ್ನು ಇಲ್ಲಿ ಬರೆಯಲಾಗದು..!

ಮಾಡೆಲ್ (Model) ಆಗಿ ಕೆರಿಯರ್ ಶುರು ಮಾಡಿದ್ದ ಈ ಪೂನಾಂಪಾಂಡೆ 2013ರಲ್ಲಿ ತೆರೆಕಂಡ ಬಾಲಿವುಡ್‌ನ ನಶಾ (Nasha) ಸಿನಿಮಾದಲ್ಲಿ ನಟಿಸಿದ್ದರು. ನಂತರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅರೆಬೆತ್ತಲೆ ಫೋಟೋಗಳನ್ನು ಹಾಕುವ ಮೂಲಕ ಕ್ರಮೇಣ ಸುದ್ದಿಗೆ ಹೆಚ್ಚು ಗ್ರಾಸವಾದರು. 2011ರ ಕ್ರಿಕೆಟ್ ವಿಶ್ವಕಪ್ ವೇಳೆ ಭಾರತ ತಂಡ ಗೆದ್ದರೆ ತಾನು ಟಾಪ್‌ಲೆಸ್ ಆಗುವುದಾಗಿ ಹೇಳಿಕೆ ನೀಡುವ ಮೂಲಕ ಇವರು ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದರು. ಆದರೆ ಭಾರತವೇನೋ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಪೂನಾಂ ಮಾತ್ರ ತಮ್ಮ ಮಾತಿನಂತೆ ನಡೆದುಕೊಳ್ಳಲೇ ಇಲ್ಲ..!

ಬಾಲಿವುಡ್‌ನ Single Mothers ತಮ್ಮ ತಾಯ್ತನದ ಬಗ್ಗೆ ಹೇಳುವುದೇನು?

ನಂತರ ಬೆತ್ತಲಾಗುವುದಕ್ಕೆ ನನಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನನಗೆ ಅವಕಾಶ ನೀಡಲಿಲ್ಲ ಎಂದು ಹೇಳಿ ಪೂನಾಂ ಪಾಂಡೆ ಜಾರಿಕೊಂಡಿದ್ದರು. ಅದೇನೆ ಇರಲಿ ನೀಲಿ ಚಿತ್ರಗಳ ತಾರೆಯರನ್ನು, ಬೆತ್ತಲಾಗುವ ನಾರಿಯರನ್ನು ಗೌರವಿಸುವ ಆಶೀರ್ವದಿಸುವ ನಮ್ಮ ಜನ ಅತ್ಯಾಚಾರಕ್ಕೊಳಗಾದ ನಾರಿಯರನ್ನು ಅಸಹ್ಯದಂತೆ ನಡೆಸಿಕೊಳ್ಳುವುದು ಈ ಸಮಾಜದ ದೌರ್ಭಾಗ್ಯ ಎಂದರೆ ತಪ್ಪಾಗದು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!