ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ಮತ್ತು ಸಚಿನ್ ಲವ್ ಸ್ಟೋರಿ ಈಗ ಸಿನಿಮಾ ಆಗುವ ಹಂತದಲ್ಲಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಯಾರಿಗೆ ತಾನೆ ಗೊತ್ತಿಲ್ಲ. ಭಾರತದ ಯುವಕನ ಜತೆ ಪಬ್‌ಜಿ ಆಡಿ ಲವವ್ ಆಯಿತೆಂದು ತನ್ನ 4 ಮಕ್ಕಳ ಸಮೇತ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಮೇಲೆ ಒಂದೆಡೆ ಅನುಮಾನಗಳ ಹುತ್ತವೇ ಹರಡಿದೆ. ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದೂ ಆಗಿದೆ. ಈ ವೇಳೆ, ಆಕೆ ಬಳಿ ಇದ್ದ ಐದು ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್‌ಗಳು, ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು (Identity card) ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇವುಗಳ ನಡುವೆಯೇ ಇದೀಗ ಸೀಮಾಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಂದಿದೆ.
ಸೀಮಾ ಹೈದರ್ ಮತ್ತು ಆಕೆಯ ಪ್ರಿಯಕರ ಸಚಿನ್ ಮೀನಾ (Sachin Meena) ಅವರಿಗೆ ಗುಜರಾತ್ ಉದ್ಯಮಿಯೊಬ್ಬರು ಉದ್ಯೋಗದ ಆಫರ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಅದೇನೆಂದರೆ, ಇದೀಗ ಇವರ ಲವ್ ಸ್ಟೋರಿಯೇ ಈ ಚಿತ್ರದ ಕಥೆಯಂತೆ! ಹೌದು. ನಿರ್ಮಾಪಕ ಅಮಿತ್ ಜಾನಿ ಅವರು ಇವರ ಕುತೂಹಲದ ಲವ್ ಸ್ಟೋರಿ ಇಟ್ಟುಕೊಂಡೇ ಚಿತ್ರ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಸೀಮಾಳೇ ನಾಯಕಿ. ನಾಯಕ ಯಾರು ಎಂದು ಇನ್ನಷ್ಟೇ ತಿಳಿಯಬೇಕಿದೆ. ಈಗಾಗಲೇ ಇದರ ಆಡಿಷನ್ ಕೂಡ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಸೀಮಾ ಮತ್ತು ಸಚಿನ್ (Sachin) ಇಬ್ಬರಿಗೂ ಗುಜರಾತ್ ಉದ್ಯಮಿ ಆಫರ್ ನೀಡಿದ್ದರು ಎಂದು ಸುದ್ದಿಯಾಗಿತ್ತು. ಈ ದಂಪತಿ ತಮ್ಮ ಬಳಿ ಯಾವಾಗ ಬೇಕಾದರೂ ಬಂದು ಕೆಲಸ ಮಾಡಬಹುದು, ಪ್ರತಿಯಾಗಿ ತಲಾ ಐವತ್ತು ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಉದ್ಯಮಿ ಪರವಾಗಿ ಹೇಳಲಾಗಿದೆ ಎನ್ನಲಾಗಿತ್ತು. ಜೊತೆಗೆ ಸಿನಿಮಾ ನಿರ್ದೇಶಕರೊಬ್ಬರು ಸೀಮಾ ಅವರಿಗೆ ಸಿನಿಮಾದಲ್ಲಿ ಕೆಲಸ ಮಾಡಲು ಆಫರ್ ಕೂಡ ನೀಡಿರುವುದಾಗಿ ಹೇಳಲಾಗಿತ್ತು. ಆದರೆ ಈಗ ಅವರ ಲವ್ ಸ್ಟೋರಿಯೇ ಚಿತ್ರವಾಗುತ್ತಿರುವುದು ಕುತೂಹಲ ಮೂಡಿಸಿದೆ.
ಪಾಕ್‌ನ 'ನಿಗೂಢ ಲೇಡಿ' ಸೀಮಾ ಹೈದರ್ಗೆ ಬಾಲಿವುಡ್ಗೆ ಆಫರ್? ಆರು ಲಕ್ಷ ರೂ. ಸಂಬಳ !
ಸದ್ಯ ಸೀಮಾ ವಿರುದ್ಧ ತನಿಖೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಬಗ್ಗೆ ಸೀಮಾ ಸದ್ಯ ಯೋಚಿಸುವಂತೆ ಇಲ್ಲ. ಸದ್ಯ ಸೀಮಾ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಪ್ರಸ್ತುತ, ಉತ್ತರ ಪ್ರದೇಶದ ಎಟಿಎಸ್ ಸೀಮಾ ಹೈದರ್ ಪ್ರಕರಣದ ತನಿಖೆಯಲ್ಲಿ ತೊಡಗಿದೆ. ಈ ನಡುವೆಯೇ ಚಿತ್ರದ ಆಡಿಷನ್ ಕೂಡ ನಡೆಯುತ್ತಿದೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ವರದಿಗಳನ್ನು ನಂಬುವುದಾದರೆ, ಸೀಮಾ ಹೈದರ್ ಮತ್ತು ಸಚಿನ್ ಪ್ರೇಮಕಥೆಯನ್ನು ಆಧರಿಸಿದ ಚಿತ್ರಕ್ಕೆ 'ಕರಾಚಿ ಟು ನೋಯ್ಡಾ' ಎಂದು ಹೆಸರಿಡಲಾಗಿದೆ. ವರದಿಗಳನ್ನು ನಂಬುವುದಾದರೆ, 'ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್' ಸೀಮಾ ಹೈದರ್ ಮತ್ತು ಸಚಿನ್ ಅವರ ಪ್ರೇಮಕಥೆಯನ್ನು ಚಿತ್ರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈಗಾಗಲೇ ಈ ಚಿತ್ರದ ಆಡಿಷನ್ ಶುರುವಾಗಿದೆ. ಇತ್ತೀಚೆಗಷ್ಟೇ ಸೀಮಾ ಹೈದರ್ ಮತ್ತು ಸಚಿನ್‌ನಲ್ಲಿ ಮಾಡಲಿರುವ ಚಿತ್ರದ ಆಡಿಷನ್ ಕ್ಲಿಪ್ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.
ಈಕೆಯ ವಿರುದ್ಧ ಹಲವು ಗುಮಾನಿಗಳು ಸುತ್ತುತ್ತಿವೆ. ಅದಕ್ಕೆ ತಕ್ಕಂತೆ ಆಕೆಯ ಬಳಿ ಸಿಕ್ಕಿರುವ ಸಾಕ್ಷ್ಯಗಳು ಬೇರೆಯದ್ದೇ ಕಥೆ ಹೇಳುತ್ತಿದೆ. ಈಕೆಯನ್ನು ವಾಪಸ್ ತಮ್ಮ ದೇಶಕ್ಕೆ ಕಳುಹಿಸುವ ಬಗ್ಗೆ ಹಲವರು ಮಾತನಾಡುತ್ತಿರುವಾಗಲೇ 'ಗದರ್ 2' ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ಮತ್ತು ಸನ್ನಿ ಡಿಯೋಲ್ ಕೂಡ ಇವರ ಪ್ರೀತಿಗೆ ಬೆಂಬಲವಾಗಿದ್ದಾರೆ. ಅದೇ ಇನ್ನೊಂದೆಡೆ, ಜಾನಿ ಪ್ರೊಡಕ್ಷನ್ ಕೂಡ ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಆಡಿಷನ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಹೈದರ್ ಪಾತ್ರಕ್ಕಾಗಿ ಸೀಮಾ ಅವರು ಮಾಡೆಲ್ ಆಡಿಷನ್ ನೀಡುತ್ತಿರುವುದನ್ನು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ನೋಡಬಹುದು.
ಸೀಮಾ ಹೈದರ್ ಬಳಿ ಪಾಕ್‌ನ 5 ಅಧಿಕೃತ ಪಾಸ್‌ಪೋರ್ಟ್, ಗುರುತಿನ ಚೀಟಿ ವಶಕ್ಕೆ