ಆಲಿಯಾ ಮದುವೆ ಮೆಹಂದಿ ಡಿಸೈನ್​ಗಾಗಿ ಮಹಿಳೆಯರ ಕಿತ್ತಾಟ! ವಾದ-ಪ್ರತಿವಾದಗಳ ಸುರಿಮಳೆ

By Suvarna News  |  First Published Aug 10, 2023, 5:59 PM IST

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿ ಆಲಿಯಾ ಭಟ್​ ಹಚ್ಚಿಸಿಕೊಂಡಿರುವ ಮೆಹಂದಿಗಾಗಿ ಇಬ್ಬರು ಕಲಾವಿದೆಯರ ನಡುವೆ ಜಟಾಪಟಿ ನಡೀತಿದೆ. ಏನಪ್ಪಾ ಇದು? 
 


 ಕಳೆದ ವಾರ ತೆರೆಕಂಡ  ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky aur Rani ki Prem Kahani)  ಸಕತ್​ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ರೆಸ್​ಪಾನ್ಸ್​ ಸಿಗುತ್ತಿರುವ ನಡುವೆಯೇ, ಚಿತ್ರದಲ್ಲಿ  ಆಲಿಯಾ ಭಟ್ ಹಾಕಿರುವ ಮೆಹಂದಿಯಿಂದಾಗಿ ಭಾರಿ ಗದ್ದಲ ನಡೆಯುತ್ತಿದೆ. ಈ ಚಿತ್ರದಲ್ಲಿ ಆಲಿಯಾ ಹಾಕಿಸಿಕೊಂಡಿರುವ ಮೆಹಂದಿಯು ಇಬ್ಬರು ಕಲಾವಿದೆಯರ ಜಗಳಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಆಲಿಯಾ ಭಟ್​ ಕೈಯಲ್ಲಿರುವ ಹಾಕಿರುವ ಮೆಹಂದಿ ಡಿಸೈನ್​ ಅವರು ಮದುವೆಯಲ್ಲಿ ಹಾಕಿರುವ ಡಿಸೈನ್​ನ ಪ್ರತಿರೂಪವಾಗಿದೆ ಎನ್ನುವುದೇ ಸಮಸ್ಯೆ ಹುಟ್ಟುಹಾಕಲು ಕಾರಣವಾಗಿದೆ.

ಅಷ್ಟಕ್ಕೂ ನಡೆದಿದ್ದೇನೆಂದರೆ,  ಆಲಿಯಾ ಭಟ್​ ಕಳೆದ ಏಪ್ರಿಲ್​ ತಿಂಗಳಿನಲ್ಲಿ ಆಲಿಯಾ ಭಟ್​ (Alia Bhatt) ರಣಬೀರ್​ ಕಪೂರ್​ ಅವರನ್ನು ವಿವಾಹವಾಗಿದ್ದು, ನವೆಂಬರ್​ನಲ್ಲಿಯೇ ಮಗುವಿಗೆ ಜನ್ಮ ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈ ನಡುವೆಯೇ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೂ ಆಲಿಯಾ ಸಹಿ ಹಾಕಿದ್ದರು. ಈ ಚಿತ್ರದ ಶೂಟಿಂಗ್​ ನಡೆಯುತ್ತಿದ್ದುದು ಮದುವೆಯಾದ ಹೊಸತರಲ್ಲಿಯೇ. ಅಂದರೆ ಆಲಿಯಾ ಅವರು ತಮ್ಮ ಮದುವೆಯ ಸಂದರ್ಭದಲ್ಲಿ ಧರಿಸಿದ್ದ ಮೆಹಂದಿ ಇನ್ನೂ ಕೈಯಲ್ಲಿಯೇ ಇತ್ತು. ಅದು ಸಂಪೂರ್ಣ ಮಾಸಿ ಹೋಗಿರಲಿಲ್ಲ. ಇದೇ ಈಗ ಚಿತ್ರದಲ್ಲಿನ ಮೆಹಂದಿ ವಿವಾದಕ್ಕೆ ಕಾರಣವಾಗಿದೆ. 

Tap to resize

Latest Videos

RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

  ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಾಯಕಿ ಆಲಿಯಾ ಭಟ್​ ಹಾಗೂ ನಾಯಕ ರಣವೀರ್​ ಸಿಂಗ್  ಮದುವೆ ಸನ್ನಿವೇಶವಿದೆ. ಆಗ ಈ ಸನ್ನಿವೇಶಕ್ಕಾಗಿ ಆಕೆಗೆ ಮೆಹಂದಿಯನ್ನು ಹಾಕಲಾಗಿದೆ. ಇದು ದೊಡ್ಡ ವಿವಾದ ಸೃಷ್ಟಿಸಿದೆ.  ಆಲಿಯಾ ಭಟ್​ ಅವರ ಮದುವೆಯ ಸಂದರ್ಭದಲ್ಲಿ ಮೆಹಂದಿ ಹಾಕಿದ್ದ ಕಲಾವಿದೆ ವೀಣಾ ನಗ್ಡಾ ಈಗ ತಕರಾರು ತೆಗೆದಿದ್ದಾರೆ.  ಮದುವೆಯ ಮೆಹಂದಿ ಡಿಸೈನ್ ಅನ್ನೇ ಸಿನಿಮಾದ ಚಿತ್ರೀಕರಣಕ್ಕೂ ಬಳಸಿಕೊಳ್ಳಲಾಗಿದೆ ಎನ್ನುವುದು ಆಕೆಯ ಗಂಭೀರ ಆರೋಪ. ತಾವು ಹಾಕಿರುವ ಡಿಸೈನ್​ ಅನ್ನೇ ಚಿತ್ರದ ಕಲಾವಿದೆಯೂ ಹಾಕಿದ್ದರೂ ತಮಗೆ ಅದರ ಕ್ರೆಡಿಟ್​ ನೀಡಲಿಲ್ಲ ಎನ್ನುವ ಗಲಾಟೆ ಆಕೆ ಶುರು ಮಾಡಿದ್ದಾರೆ. ಈ ಗಲಾಟೆ ತಾರಕಕ್ಕೇರಿದೆ.

  ಕಲಾವಿದೆ ವೀಣಾ ಮಾಡುತ್ತಿರುವ ಆರೋಪಕ್ಕೆ ಸಿನಿಮಾದಲ್ಲಿ ಮೆಹಂದಿ (Mehandi) ಡಿಸೈನ್​ ಮಾಡಿರುವ ಕಲಾವಿದೆ ಜ್ಯೋತಿ ಚೆಡ್ಡಾ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ಆಲಿಯಾ ಅವರಿಗೆ ಮಂಡಲದ ಡಿಸೈನೇ ಬೇಕಿತ್ತು. ಮದುವೆಗೂ ಅದೇ ಡಿಸೈನ್​ ಹಾಕಲಾಗಿತ್ತು. ಅದಿನ್ನೂ ಸಂಪೂರ್ಣವಾಗಿ ಮಾಸಿರಲಿಲ್ಲ. ಆದ್ದರಿಂದ ಮದುವೆಗೆ ಹಾಕಲಾಗಿದ್ದ ಮೆಹಂದಿಯ ಕೆಲ ಭಾಗವನ್ನು ಉಳಿಸಿಕೊಂಡು ಅದರ ಮೇಲೆ ಬಣ್ಣದಿಂದ ತಿದ್ದಿದ್ದೇವೆ. ಆದರೆ ನಾವು ಮುಂಗೈನಿಂದ ಮೊಣಕೈ ವರೆಗೆ ಹೊಸ ಡಿಸೈನ್ ಹಾಕಿದ್ದೇವೆ ಅಲ್ಲದೆ ಬೆರಳುಗಳಿಗೂ ಮೂಲ ಡಿಸೈನ್ ಉಳಿಸಿಕೊಳ್ಳದೆ ಬೇರೆ ಡಿಸೈನ್ ಹಾಕಿದ್ದೇವೆ, ಆ ಮೂಲಕ ಹೊಸ ಲುಕ್ ಅನ್ನು ಮೆಹಂದಿಗೆ ನೀಡಿದ್ದೇವೆ ಎಂದಿದ್ದಾರೆ. ಈ ಪ್ರತಿಕ್ರಿಯೆಗೆ ಸುಮ್ಮನಾಗದ ಕಲಾವಿದೆ ವೀಣಾ,  ಮೂಲ ಮೆಹಂದಿಗೆ ಮೆರುಗು ತುಂಬುವ ಕಾರ್ಯವನ್ನು ಚೆನ್ನಾಗಿ ಮಾಡಿದ್ದೀರಿ.  ನಾನು ಆಗ ಮಾಡಿದ್ದ ಮೆಹಂದಿಯನ್ನು ಬ್ಲೂ ಪ್ರಿಂಟ್ ಅನ್ನಾಗಿ ಬಳಸಿಕೊಂಡಿದ್ದೀರಿ. ನನ್ನ ಕಲೆಯನ್ನು ಆಧಾರವಾಗಿಟ್ಟುಕೊಂಡು  ತಮ್ಮ ಕಲಾಪ್ರದರ್ಶನ ಮಾಡಿದ್ದೀರಿ.  ಆದರೆ ಮೂಲ ಕಲೆಗಾರರನ್ನು ಗುರುತಿಸುವ ಸೌಜನ್ಯವನ್ನು  ತೋರಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಹೆಣ್ಣಿನ ಎಲ್ಲ ಪಾರ್ಟ್ಸ್​ ಮುಗೀತು, ಈ ಹುಡುಗೀಯ ಕಾಲು ವರ್ಣಿಸಿದ ರಾಮ್ ಗೋಪಾಲ್ ವರ್ಮಾ!
 
ಅದಕ್ಕೆ ಪುನಃ ಪ್ರತಿಕ್ರಿಯೆ ನೀಡಿರುವ ಜ್ಯೋತಿ, ಬೇಕಿದ್ದರೆ ಆಲಿಯಾ ಅವರ ಮದುವೆಯ (marriage) ನಂತರದ ಕೊನೆಯ ಫೋಟೋಗಳನ್ನು ನೋಡಿ. ಅದರಲ್ಲಿ ಅವರ ಮಣಿಕಟ್ಟಿನಲ್ಲಿ ಮೆಹಂದಿ ಇರಲಿಲ್ಲ. ಅದನ್ನು ಚಿತ್ರಕ್ಕಾಗಿ ವಿಭಿನ್ನ ರೀತಿಯಲ್ಲಿ  ವಿನ್ಯಾಸ ಗೊಳಿಸಿದ್ದೇನೆ.  ಬೆರಳುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿನ್ಯಾಸದಲ್ಲಿ ಬದಲಾವಣೆ ಆಗಿರುವುದನ್ನು ನೋಡಬಹುದು ಎಂದಿದ್ದಾರೆ. ಸದ್ಯ ಇವರಿಬ್ಬರು ಕಲಾವಿದೆಯರ ಈ ಜಟಾಪಟಿ ಯಾವ ಹಂತಕ್ಕೆ ಹೋಗುತ್ತದೋ ನೋಡಬೇಕು. 

click me!