ಅಮ್ಮನನ್ನು ಒಮ್ಮೆ ಕೂಡ ಹಗ್ ಮಾಡಿರಲಿಲ್ಲ, ನನ್ನ ಪ್ರಪಂಚದಲ್ಲಿಯೇ ತೇಲಾಡುತ್ತಿದ್ದೆ; ಪ್ರಿಯಾಂಕಾ ಚೋಪ್ರಾ

By Shriram Bhat  |  First Published Jan 1, 2024, 1:29 PM IST

ನಾನು ಟೀನ್ ಏಜ್‌ನಲ್ಲಿ ಇದ್ದಾಗ ನನಗೆ ಅಮ್ಮನ ಬಗ್ಗೆ ಪ್ರೀತಿಯಾಗಲಿ ಗೌರವವಾಗಲೀ ಇರಲಿಲ್ಲ. ಸಾಮಾನ್ಯವಾಗಿ ಎಲ್ಲರಂತೆ ನಾನು ಪೋಷಕರನ್ನು 'ಟೇಕನ್‌ ಫಾರ್ ಗ್ರಾಂಟೆಡ್' ಎಂಬಂತೆ ಇದ್ದೆ. 


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಂದರ್ಶನವೊಂದರಲ್ಲಿ ತಮ್ಮ ತಾಯಿ ಬಗ್ಗೆ ಮಾತನಾಡಿದ್ದಾರೆ. ಹಾಲಿವುಡ್ ಇಂಟರ್‌ವ್ಯೂ ಒಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಪ್ರಿಯಾಂಕಾ 'ಹೌದು ಈಗ ನನಗೆ ನನ್ನ ತಾಯಿಯ ಮಹತ್ವ ಗೊತ್ತಾಗಿದೆ' ಎಂದಿದ್ದಾರೆ. ಸದ್ಯಕ್ಕೆ ನಿಕ್ ಜೊನಾಸ್ ಜತೆ ಅಮೆರಿಕಾದಲ್ಲಿ ವಾಸವಿರುವ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಆಗಾಗ ಸಂದರ್ಶನಗಳಲ್ಲಿ ಭಾಗವಹಿಸುತ್ತ, ತಮ್ಮ ಲೈಫ್ ಅನುಭವಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. 

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ 'ನಾನು ಟೀನ್ ಏಜ್‌ನಲ್ಲಿ ಇದ್ದಾಗ ನನಗೆ ಅಮ್ಮನ ಬಗ್ಗೆ ಪ್ರೀತಿಯಾಗಲಿ ಗೌರವವಾಗಲೀ ಇರಲಿಲ್ಲ. ಸಾಮಾನ್ಯವಾಗಿ ಎಲ್ಲರಂತೆ ನಾನು ಪೋಷಕರನ್ನು 'ಟೇಕನ್‌ ಫಾರ್ ಗ್ರಾಂಟೆಡ್' ಎಂಬಂತೆ ಇದ್ದೆ. ಅಮ್ಮ ಎಂದರೆ ನನ್ನ ಸೇವೆ ಮಾಡುವವಳು, ನನ್ನ ಬೇಕು-ಬೇಡುಗಳನ್ನು ನೋಡಿಕೊಳ್ಳುವವಳು, ನಾನು ಕೇಳಿದರೆ ಕೊಡಿಸಬೇಕು' ಎಂಬ ಭಾವನೆ ನನ್ನಲ್ಲಿತ್ತು. ಅಪ್ಪ ಮಿಲಿಟರಿಯಲ್ಲಿ ಸೇವೆ ಮಾಡುತ್ತಿದ್ದರಿಂದ ಅಷ್ಟಾಗಿ ಮನೆಗೆ ಬರುತ್ತಿರಲಿಲ್ಲ. ನನ್ನ ಸರ್ವಸ್ವವನ್ನೂ ನೋಡಿಕೊಳ್ಳವವಳು ಅಮ್ಮನೇ ಆಗಿದ್ದರಿಂದ ನನ್ನ ಪಾಲಿಗೆ ಪೇರೆಂಟ್ಸ್ ಎಂದರೆ ಅಮ್ಮ ಎಂಬಂತಾಗಿತ್ತು. 

Tap to resize

Latest Videos

ಪೋಸ್ಟ್‌ಪೋನ್ ಆಯ್ತು ಬಿಗ್ ಬಾಸ್ ಕನ್ನಡ ಫಿನಾಲೆ; ಅಸಲಿ ಕಾರಣವೇನು, ಕಾಣದ ಕೈ ಯಾವುದು?

ಆದರೆ, ಅಪ್ಪ ಬಂದಷ್ಟೇ ಕಾಲದಲ್ಲಿ ನಾನು ಅಪ್ಪನಿಂದ ಶಿಸ್ತು, ಸಂಯಮ ಕಲಿತುಕೊಂಡಿದ್ಧೇನೆ. ಅಮ್ಮ ನನ್ನೆಲ್ಲ ಬೇಕು, ಬೇಡಗಳನ್ನು ನೋಡಿಕೊಳ್ಳುತ್ತಿದ್ದರೂ ನಾನು ಯಾವತ್ತು ಕೂಡ ಅವರಿಗೆ ಒಂದು ಕೃತಜ್ಞತೆಯನ್ನು ಹೇಳಿರಲಿಲ್ಲ. ಆ ಭಾವನೆಯೇ ಇರಲಿಲ್ಲ ನನಗೆ. ಆದರೆ, ಇಂದು ನನಗೆ ಅಮ್ಮನ ಮೌಲ್ಯ, ಯೋಗ್ಯತೆ ಅರ್ಥವಾಗುತ್ತಿದೆ. ನಾನು ಟೀನ್‌ ಏಜ್‌ನಲ್ಲಿ ಇದ್ದಾಗ ನನ್ನ ಪ್ರಪಂಚವೇ ಬೇರೆ, ಅಮ್ಮನ ಪ್ರಪಂಚವೇ ಬೇರೆ ಎಂಬಂತಿದ್ದೆ. ಅಮ್ಮನ ಪ್ರಪಂಚ ನಾನು, ಆದರೆ ನನ್ನ ಪ್ರಪಂಚ ನನ್ನ ಫ್ರೆಂಡ್ಸ್ ಎಂಬ ಭಾವನೆಯೇ ನನಗೆ ಇತ್ತು. 

ನಿಮ್ಮ ನಿಜವಾದ ಮನೆ ಅಲ್ಲೆಲೋ ಇದೆ, ನಿಮ್ಮ ದೇಹವೂ ನಿಮ್ಮದಲ್ಲ; ಕಂಗನಾ ರಣಾವತ್

ಆದರೆ, ಇಂದು ನನಗೆ ಅರ್ಥವಾಗಿದ್ದು ಬಹಳ. ಅಮ್ಮ ಎಂದರೆ ಅದು ಅಳತೆಗೂ ಮೀರಿದ್ದು, ಒಲವಿನ ಆಸರೆ. ಅಮ್ಮನ ಪ್ರೀತಿಗೆ ಜಗತ್ತಿನ ಯಾವುದೇ ಪ್ರೀತಿಯನ್ನು ಹೋಲಿಸಲು ಸಾಧ್ಯವಿಲ್ಲ. ಅಂದು ನಾನು ನನ್ನ ಅಮ್ಮನನ್ನು ಒಮ್ಮೆ ಕೂಡ ಹಗ್ ಮಾಡಿಕೊಂಡಿರಲಿಲ್ಲ. ಆದರೆ ಇಂದು, ಅಮ್ಮ ಸಿಕ್ಕಿದರೆ ಸಾಕು ನಾನು ಮೊದಲು ಮಾಡುವ ಕೆಲಸವೇ ಹಗ್. ಅಷ್ಟೊಂದು ನಾನು ಬದಲಾಗಲು ಕಾರಣ, ಅಮ್ಮನ ಪ್ರೀತಿ-ಮಮತೆಯ ಮೌಲ್ಯ ಇಂದು ನನಗೆ ಅರ್ಥವಾಗಿದೆ. ಅಮ್ಮನ ಹತ್ತಿರ ಇದ್ದಾಗ ನನಗೆ ಅಮ್ಮನ ಬೆಲೆ ಗೊತ್ತಿರಲಿಲ್ಲ. ಈಗ ದೂರ ಇರುವುದಕ್ಕೋ ಏನೋ ಚೆನ್ನಾಗಿ ಅರ್ಥವಾಗಿದೆ. 

click me!