ಕನ್ನಡ ಸಿನಿಪ್ರೇಮಿಗಳಿಗೆ ಹಬ್ಬವೋ ಹಬ್ಬ; 2024ರ ಭರವಸೆಯ ಸಿನಿಮಾಗಳ ಪಟ್ಟಿ ಇಲ್ಲಿದೆ

By Ravi JanekalFirst Published Jan 1, 2024, 9:30 AM IST
Highlights

2024 ಕನ್ನಡ ಸಿನಿರಸಿಕರ ಪಾಲಿಗೆ ಪಕ್ಕಾ ಮನರಂಜನೆಯ ವರ್ಷವಾಗಲಿದೆ. ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಪ್ಯಾನ್ ಇಂಡಿಯಾಗಳು ಬರಲಿದ್ದು, ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗಳತ್ತ ಬೆರಗುಗಣ್ಣಿನಲ್ಲಿ ನೋಡುವುದು ಗ್ಯಾರೆಂಟಿ ಅಂತಹ ಬಹುನಿರೀಕ್ಷೆಯ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

 2024 ಕನ್ನಡ ಸಿನಿರಸಿಕರ ಪಾಲಿಗೆ ಪಕ್ಕಾ ಮನರಂಜನೆಯ ವರ್ಷವಾಗಲಿದೆ. ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಪ್ಯಾನ್ ಇಂಡಿಯಾಗಳು ಬರಲಿದ್ದು, ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗಳತ್ತ ಬೆರಗುಗಣ್ಣಿನಲ್ಲಿ ನೋಡುವುದು ಗ್ಯಾರೆಂಟಿ ಅಂತಹ ಬಹುನಿರೀಕ್ಷೆಯ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

1. ಕಾಂತಾರ ಚಾಪ್ಟರ್ 1

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ ಕಿರಗಂದೂರು ಈ ಚಿತ್ರ ನಿರ್ಮಿಸುತ್ತಿದ್ದಾರೆ. 7 ಭಾಷೆಗಳಲ್ಲಿ ಈ ವರ್ಷ ಸಿನಿಮಾ ತೆರೆಗೆ ಬರಲಿದೆ.

2. ಯುವ

ಡಾ. ರಾಜ್‌ ಕುಟುಂಬದ ಕುಡಿ ಯುವರಾಜ್‌ ಕುಮಾರ್‌ ನಟನೆಯ ಮೊದಲ ಸಿನಿಮಾ. ಕಾಂತಾರ ಬೆಡಗಿ ಸಪ್ತಮಿ ಗೌಡ ನಾಯಕಿ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್‌ ನಿರ್ಮಿಸುತ್ತಿದೆ.

ಸೂರ್ಯವಂಶದ ಚೆಲುವೆ ಬಾಳಲ್ಲಿ ಬಿರುಗಾಳಿ: ದಾಂಪತ್ಯಕ್ಕೆ ಗುಡ್‌ಬಾಯ್ ಹೇಳಿದ ಇಶಾ ಕೊಪ್ಪಿಕರ್

3. ಕೆಡಿ

ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್‌ ಕಾಂಬಿನೇಶನ್‌ ಸಿನಿಮಾ. ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ರಮೇಶ್‌ ಅರವಿಂದ್‌, ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಚಿತ್ರ ನಿರ್ಮಿಸುತ್ತಿದೆ.

4. ಮಾರ್ಟಿನ್

ಧ್ರುವ ಸರ್ಜಾ ನಟನೆಯ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಇದು. ಉದಯ್‌ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ ಪಿ ಅರ್ಜುನ್‌ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ.

5. ಮ್ಯಾಕ್ಸ್

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ಇದು. ತಮಿಳಿನ ವಿಜಯ್‌ ಕಾರ್ತಿಕೇಯನ್‌ ನಿರ್ದೇಶನದ ಈ ಚಿತ್ರವನ್ನು ಕಲೈಪುಲಿ ಎಸ್‌ ಧನು ನಿರ್ಮಿಸಿದ್ದಾರೆ. ಈಗಾಗಲೇ ಟೈಟಲ್‌ ಟೀಸರ್‌ ಬಿಡುಗಡೆ ಆಗಿದೆ.

6. ಬ್ಯಾಚುಲರ್ ಪಾರ್ಟಿ

ಜ.26ರಂದು ಬಿಡುಗಡೆಯಾಗುತ್ತಿರುವ ಅಡ್ವೆಂಚರ್‌ ಕಾಮಿಡಿ. ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದಾರೆ. ಅಭಿಜಿತ್ ಮಹೇಶ್‌ ನಿರ್ದೇಶಕರು. ಲೂಸ್‌ ಮಾದ ಯೋಗಿ, ಅಚ್ಯುತ ಕುಮಾರ್‌, ಸಿರಿ ರವಿಕುಮಾರ್‌ ನಟಿಸಿದ್ದಾರೆ.

7. ಕೋಳಿ ಎಸ್ರು

ಚಂಪಾ ಶೆಟ್ಟಿ ನಿರ್ದೇಶನದ ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದೆ. ಹೆಣ್ಣಿನ ಪ್ರತಿಭಟನೆಯನ್ನು ವಿಭಿನ್ನವಾಗಿ ದಾಖಲಿಸುವ ಚಿತ್ರ. ಅಕ್ಷತಾ ಪಾಂಡವಪುರ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜನವರಿ 26ಕ್ಕೆ ಚಿತ್ರ ಬಿಡುಗಡೆ ಆಗಲಿದೆ.

8. ಭೀಮ

ದುನಿಯಾ ವಿಜಯ್‌ ನಟನೆ, ನಿರ್ದೇಶನದ ಸಿನಿಮಾ. ಇದು ರಿಯಲಿಸ್ಟಿಕ್‌ ಕಂಟೆಂಟ್‌ ಇರುವ ಮಾಸ್‌ ಆ್ಯಕ್ಷನ್‌ ಚಿತ್ರ. ಜನವರಿಯಲ್ಲಿ ಬಿಡುಗಡೆ ಆಗಲಿದೆ. ಚರಣ್‌ ರಾಜ್ ಸಂಗೀತ ನಿರ್ದೇಶನದ ಹಾಡುಗಳು ಮೆಚ್ಚುಗೆ ಪಡೆದಿವೆ. ರಂಗಭೂಮಿ ಪ್ರತಿಭೆ ಅಶ್ವಿನಿ ನಾಯಕಿ.

9. ಇಬ್ಬನಿ ತಬ್ಬಿದ ಇಳೆಯಲಿ

ಇದೊಂದು ಕಾವ್ಯಾತ್ಮಕ ಪ್ರೇಮಕಥೆ. ಇಂದ್ರಜಿತ್‌ ಬೆಳ್ಳಿಯಪ್ಪ ಚೊಚ್ಚಲ ನಿರ್ದೇಶನದ ಚಿತ್ರವನ್ನು ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಅಂಕಿತಾ ಅಮರ್‌ ನಾಯಕಿ. ವಿಹಾನ್ ಗೌಡ ನಾಯಕ.

10. ಅಣ್ಣ ಫ್ರಮ್ ಮೆಕ್ಸಿಕೋ

ಇದು ‘ಬಡವ ರಾಸ್ಕಲ್‌’ ಸಿನಿಮಾ ಟೀಮ್‌ನ ಹೊಸ ಸಿನಿಮಾ. ಡಾಲಿ ಧನಂಜಯ ನಾಯಕ. ಶಂಕರ್‌ ಗುರು ನಿರ್ದೇಶಕ. ಸತ್ಯ ರಾಯಲ ನಿರ್ಮಾಪಕರು. ವಾಸುಕಿ ವೈಭವ್‌ ಸಂಗೀತ ನಿರ್ದೇಶನವಿದೆ.

11. ಕರಾವಳಿ

ಗುರುದತ್‌ ಗಾಣಿಗ ನಿರ್ದೇಶನ ಹಾಗೂ ನಿರ್ಮಾಣದ ಪ್ರಜ್ವಲ್‌ ದೇವರಾಜ್‌ ನಟನೆಯ ಕರ್ಮರ್ಷಿಯಲ್‌ ಸಿನಿಮಾ. ಕರಾವಳಿ ಹಿನ್ನೆಲೆಯಲ್ಲಿ ಕಂಬಳದ ಕಥೆಯೊಂದಿಗೆ ಆರಂಭವಾಗುವ ಚಿತ್ರವಿದು.

12. ಬುದ್ಧಿವಂತ 2

ಉಪೇಂದ್ರ ನಟನೆಯ ಈ ಚಿತ್ರಕ್ಕೆ ಜಯರಾಮ್ ಮಾಧವನ್ ನಿರ್ದೇಶಕರು. ಡಾ.ಟಿ.ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ.

13. ಕೇಸ್‌ ಆಫ್‌ ಕೊಂಡಾಣ

ವಿಜಯ ರಾಘವೇಂದ್ರ, ಭಾವನಾ ಮೆನನ್‌ ನಟನೆಯ ಚಿತ್ರ. ‘ಸೀತಾರಾಮ್ ಬಿನೋಯ್’ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ, ನಿರ್ಮಾಣದ ಸಿನಿಮಾ. ಇದೊಂದು ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್‌. ಖುಷಿ ರವಿ ವೈದ್ಯೆಯ ಪಾತ್ರದಲ್ಲಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

14. ಬಘೀರ

ಶ್ರೀಮುರಳಿ ನಟನೆಯ ಆ್ಯಕ್ಷನ್‌ ಚಿತ್ರ. ಪ್ರಶಾಂತ್‌ ನೀಲ್‌ ಕತೆ ಬರೆದಿದ್ದಾರೆ, ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ರುಕ್ಮಿಣಿ ವಸಂತ್‌ ನಾಯಕಿ. ಹೊಂಬಾಳೆ ಫಿಲಂಸ್ ನಿರ್ಮಾಣ.

Sandalwood: 2024ಕ್ಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಸಿನಿಮಾ ಹಬ್ಬ..! ಮುಂದಿನ ವರ್ಷ ಇಂಡಿಯಾದಲ್ಲಿ ಕನ್ನಡ ಚಿತ್ರಗಳದ್ದೇ ಸೌಂಡ್..!

 

15. ದೈಜಿ

ರಮೇಶ್‌ ಅರವಿಂದ್‌ ನಟನೆಯ ಚಿತ್ರ. ಈ ಸಿನಿಮಾದ ಫಸ್ಟ್‌ ಲುಕ್‌ ಕುತೂಹಲ ಮೂಡಿಸಿದೆ. ‘ಇದು ಗಂಡಸರ ಮೇಲೆ ದೆವ್ವ ಬರುವ ಕಥೆ’ ಎಂದು ರಮೇಶ್‌ ಅರವಿಂದ್‌ ಸಿನಿಮಾ ಬಗ್ಗೆ ಹೇಳಿದ್ದಾರೆ. ಆಕಾಶ್‌ ಶ್ರೀವತ್ಸ ನಿರ್ದೇಶನದ ಚಿತ್ರವನ್ನು ರವಿ ಕಶ್ಯಪ್‌ ನಿರ್ಮಿಸುತ್ತಿದ್ದಾರೆ.

click me!