ಹಲವು ದಾಖಲೆಗಳನ್ನು ಉಡೀಸ್ ಮಾಡಿ ಮೆರೆದಿದ್ದ ದಿ ಕೇರಳ ಸ್ಟೋರಿ ಚಿತ್ರವನ್ನು ಖರೀದಿ ಮಾಡಲು ಓಟಿಟಿ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣವೇನು?
ಕಳೆದ ಮೇ 5ರಂದು ಬಿಡುಗಡೆಯಾಗಿದ್ದ ಸುದೀಪ್ತೋ ಸೇನ್ (Sudipto Sen) ನಿರ್ದೇಶನದ ದಿ ಕೇರಳ ಸ್ಟೋರಿ ಸೃಷ್ಟಿಸಿದ ಕೋಲಾಹಲ ಅಷ್ಟಿಷ್ಟಲ್ಲ. ಮತಾಂತರದ ಕುರಿತು ಇರುವ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಕಾಂಗ್ರೆಸ್ಸಿಗರು ಸೇರಿದಂತೆ ಒಂದು ವರ್ಗ ಬಹಳ ವಿರೋಧ ವ್ಯಕ್ತಪಡಿಸಿದೆ. ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ಅತಿ ಹೆಚ್ಚು ಚರ್ಚೆ ಹುಟ್ಟುಹಾಕಿದ ಚಿತ್ರ ಎಂದು ಇದು ಎನಿಸಿಕೊಂಡಿದೆ. ಕೆಲವು ರಾಜ್ಯಗಳಲ್ಲಿ ಚಿತ್ರವನ್ನು ಬ್ಯಾನ್ ಕೂಡ ಮಾಡಲಾಗಿತ್ತು. ಆದರೆ ಇವೆಲ್ಲವುಗಳ ನಡುವೆ ಚಿತ್ರ 240 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕೇವಲ 25 ಕೋಟಿ ರೂಪಾಯಿ ವೆಚ್ಚದಲ್ಲಿ ತೆರೆ ಕಂಡ ಈ ಚಿತ್ರ ದಾಖಲೆ ಮೇಲೆ ದಾಖಲೆ ಬರೆದಿದೆ. ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರಿಗೆ ಭರ್ಜರಿ ಲಾಭದ ಜೊತೆಗೆ ಗೆಲುವೂ ಸಿಕ್ಕಿದೆ. ಜೊತೆಗೆ, ನಟಿ ಅದಾ ಶರ್ಮಾ ಅವರಿಗೆ ಈ ಚಿತ್ರದಿಂದ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ.
ಆದರೆ ಇದೀಗ ಒಂದು ಶಾಕಿಂಗ್ ಸುದ್ದಿ ಹೊರಬರುತ್ತಿದೆ. ಅದೇನೆಂದರೆ, ದಿ ಕೇರಳ ಸ್ಟೋರಿ (The Kerala Story) ಚಿತ್ರವನ್ನು ಖರೀದಿಸಲು ಇದೀಗ ಯಾವ ಒಟಿಟಿ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂಬ ಮಾತು ಹೇಳಿ ಬರುತ್ತಿದೆ. ಈ ಚಿತ್ರದಲ್ಲಿ ವಿವಾದಿತ ಅಂಶಗಳು ಇರುವ ಹಿನ್ನೆಲೆಯಲ್ಲಿ ಓಟಿಟಿ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ ಎನ್ನಲಾಗುತ್ತಿದೆ. ಈ ಕುರಿತು ಬಿ-ಟೌನ್‌ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ರಾಜಕೀಯ ವಿವಾದದ ಕಂಟೆಂಟ್ ಇರುವ ಕಾರಣ ಈ ಚಿತ್ರವನ್ನು ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
The Kerala Story: ಈಕೆ ಅದಾ ಶರ್ಮಾ ಅಲ್ಲ... ಚಾಮುಂಡೇಶ್ವರಿ ಅಯ್ಯರ್! ಅಸಲಿ ವಿಷ್ಯ ಬಯಲು
ಆದರೆ ಇದಕ್ಕೆ ನಿರ್ದೇಶಕ ಸುದೀಪ್ತೋ ಸೇನ್ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಯಶಸ್ಸನ್ನು ಕಂಡು ಕೆಲವರಿಗೆ ಹೊಟ್ಟೆಯುರಿ. ಆ ಕಾರಣಕ್ಕೆ ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಸಿನಿಮಾದ ಯಶಸ್ಸನ್ನು ಸಹಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗಿಲ್ಲ. ಅಂಥವರೆಲ್ಲ ಒಟ್ಟಾಗಿ ಒಟಿಟಿ ಸಂಸ್ಥೆಗಳಿಗೆ ಚಾಡಿ ಹೇಳಿದ್ದಾರೆ. ಹಾಗಾಗಿ ಯಾರೂ ಕೂಡ ಈ ಸಿನಿಮಾವನ್ನು ಖರೀದಿಸಲು ಸಿದ್ಧರಿಲ್ಲ’ ಎಂದು ಹೇಳಿದ್ದಾರೆ. ಈ ಬಗ್ಗೆ ಚಿತ್ರತಂಡದವರು ವಿಚಾರಿಸಿದಾಗ, ‘ರಾಜಕೀಯವಾಗಿ ಕಾಂಟ್ರವರ್ಸಿ ಹೊಂದಿರುವ ಚಿತ್ರ ನಮಗೆ ಬೇಡ’ ಎಂಬ ಉತ್ತರ ಒಟಿಟಿ ಸಂಸ್ಥೆಗಳ ಕಡೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿಗೆ ನಡೆದಿರುವುದೇ ಬೇರೆ ಎಂದಿದ್ದಾರೆ. ಇದರ ಹೊರತಾಗಿಯೂ ಈಗಾಗಲೇ ಕೆಲವು ಒಟಿಟಿಗಳಿಂದ (OTT) ನಮ್ಮ ಸಿನಿಮಾ ಖರೀದಿಸಲು ಬೇಡಿಕೆ ಬಂದಿದೆ. ಆದರೆ, ಯೋಗ್ಯ ಬೆಲೆಗೆ ಯಾರೂ ಕೇಳುತ್ತಿಲ್ಲ. ಹಾಗಾಗಿ ಯೋಗ್ಯ ಬೆಲೆ ಸಿಕ್ಕ ಮೇಲೆಯೇ ಒಟಿಟಿಗೆ ನೀಡಲಿದ್ದೇವೆ. ಇವೆಲ್ಲವೂ ಸತ್ಯ ಘಟನೆಯನ್ನು ಸಹಿಸದವರು ನಡೆಸುತ್ತಿರುವ ಷಡ್ಯಂತ್ರ ಎಂದಿದ್ದಾರೆ.
ಅಂದಹಾಗೆ ವಿಮರ್ಶಕ ತರಣ್ ಆದರ್ಶ್ (Taran Adarsh) ಪ್ರಕಾರ, ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಸ್ಥಾನವನ್ನು ದಿ ಕೇರಳ ಸ್ಟೋರಿಗೆ ಸಲ್ಲುತ್ತದೆ. ಶಾರುಖ್ ಖಾನ್ ಅವರ ಪಠಾಣ್ ಮೊದಲ ಸ್ಥಾನದಲ್ಲಿದೆ. ದಿ ಕೇರಳ ಸ್ಟೋರಿ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ರಿಲೀಸ್ ಆಗಿತ್ತು.
ಶೂಟಿಂಗ್ ಸ್ಪಾಟ್ಗೆ ಮೊದಲು ನಟಿ ಬಂದ್ರೆ ಏನಾಗತ್ತೆ? ಕೆಟ್ಟ ಅನುಭವ ಬಿಚ್ಚಿಟ್ಟ ಅದಾ ಶರ್ಮಾ