EMERGENCY ಡೇಟ್​ ಫಿಕ್ಸ್​! ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎಂದ ಕಂಗನಾ

By Suvarna NewsFirst Published Jun 24, 2023, 6:01 PM IST
Highlights

ಬಹು ವಿವಾದಿತ ಎಮರ್ಜೆನ್ಸಿ​ ಚಿತ್ರದ ಬಿಡುಗಡೆಗೆ ಕೊನೆಗೂ ಡೇಟ್​ ಫಿಕ್ಸ್​ ಆಗಿದೆ. ಇದರ ಟೀಸರ್​ ಬಿಡುಗಡೆಯಾಗಿದ್ದು, ಅದರಲ್ಲಿ ಏನಿದೆ? 
 

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ನಟಿ ಕಂಗನಾ ರಣಾವತ್​. ನೇರ ದಿಟ್ಟ ಮಾತಿನಿಂದ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗ್ತಿರೋ ನಟಿ ಕಂಗನಾ ಅವರ ನಟನಾ ಕೌಶಲಕ್ಕೆ ಅವರೇ ಸಾಟಿ. ಇದೀಗ ಅವರ ಬಹು ನಿರೀಕ್ಷಿತ ಹಾಗೆಯೇ ಬಹು ಚರ್ಚಿತ ಎಮರ್ಜೆನ್ಸಿ ಚಿತ್ರದ ಬಿಡುಗಡೆಯ ಡೇಟ್​ ಫಿಕ್ಸ್​ ಆಗಿದೆ. ಕಳೆದ ಎರಡು ವರ್ಷಗಳಿಂದ  ಬಹಳ ಚರ್ಚೆಗೆ ಗ್ರಾಸವಾಗಿರೋ ಈ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.  ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಕಂಗನಾ ರಣಾವತ್ (Kangana Ranaut) ಅವರ ಈ ಚಿತ್ರವೂ ಸಕತ್​ ಸುದ್ದಿ ಮಾಡುತ್ತಲೇ ಇದೆ. ಚಿತ್ರದ ಆರಂಭದ ಕುರಿತು ಚರ್ಚೆ ಶುರುವಾದಾಗಿನಿಂದಲೂ ಈ ಚಿತ್ರ ಹಾಗೂ ಕಂಗನಾ  ಇಬ್ಬರೂ ಸಕತ್​ ಸುದ್ದಿಯಲ್ಲಿದ್ದಾರೆ. 
 
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ ನಟಿಸಿರುವ ಟ್ರೇಲರ್​ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ

Latest Videos

ಅಂದಹಾಗೆ ಕಂಗನಾ ಅವರ ಎಮರ್ಜೆನ್ಸಿ ಚಿತ್ರವು  ಇದೇ ವರ್ಷದ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಟೀಸರ್ ಅನ್ನು ಟ್ವೀಟರ್​ನಲ್ಲಿ (Twitter) ಕಂಗನಾ ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ 48 ವರ್ಷಗಳ ನಂತರ ಅದೇ ದಿನದಂದು ಈ ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇದೊಂದು ನಿರ್ಣಾಯಕ ಕಥೆಯಾಗಿದ್ದು,  ಸಿನಿಮಾ ಆರಂಭಿಸಿದ್ದಕ್ಕಾಗಿ  ಪ್ರತಿಭಾವಂತ ನಟರಾದ ದಿವಂಗತ ಸತೀಶ್ ಜಿ, ಅನುಪಮ್ ಜಿ, ಶ್ರೇಯಸ್, ಮಹಿಮಾ ಮತ್ತು ಮಿಲಿಂದ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ಇತಿಹಾಸದಿಂದ ಈ ಅಸಾಧಾರಣ ಸಂಚಿಕೆಯನ್ನು ದೊಡ್ಡ ಪರದೆಯ ಮೇಲೆ ತರಲು  ಉತ್ಸುಕಳಾಗಿದ್ದೇನೆ ಜೈ ಹಿಂದ್ ಎಂದು ಕಂಗನಾ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ  ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
 
ಎಮರ್ಜೆನ್ಸ್ಸಿನಿಮಾ ಮೂಲಕ ಕಂಗನಾ ರಣಾವತ್ ನಿರ್ದೇಶಕರಾಗಿದ್ದಾರೆ. ಈಗ ಬಿಡುಗಡೆಯಾಗಿರುವ ಟೀಸರ್​ನಲ್ಲಿ   ಸಾರ್ವಜನಿಕರು  ಸರ್ಕಾರದ ತುರ್ತು ನಿರ್ಧಾರವನ್ನು ವಿರೋಧಿಸುವುದನ್ನು ನೋಡಬಹುದು.  ದೇಶದಲ್ಲಿ ತುರ್ತುಪರಿಸ್ಥಿತಿಯ ಜಾರಿಯ ಬಗ್ಗೆ ತಿಳಿಸುತ್ತಿರುವ ಪತ್ರಿಕೆಗಳ ಸುದ್ದಿಗಳ ಝಲಕ್​ ಟೀಸರ್​​ನಲ್ಲಿದೆ. ನಂತರ, ಅನುಪಮ್ ಖೇರ್ ಜೈಲಿನ ಕಂಬಿಗಳ ಹಿಂದೆ ಕಾಣಿಸಿಕೊಂಡಿದ್ದಾರೆ. ಇದು ವಿರೋಧ ಪಕ್ಷದ ಜನರನ್ನು ಬಂಧಿಸುವುದನ್ನು ಸೂಚಿಸಿದೆ. ವಿರೋಧ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಇದು ನಮ್ಮದಲ್ಲ, ಈ ದೇಶದ ಸಾವು ಎಂದು   ಅನುಪಮ್ ಖೇರ್  ಹೇಳುತ್ತಿದ್ದಾರೆ.  ಪ್ರತಿಭಟನಾಕಾರರ ಮೇಲೆ  ಗುಂಡು ಹಾರಿಸುವ ದೃಶ್ಯ ನೋಡಬಹುದು. 

ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು

ಇದೇ ವೇಳೆ, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್ ಅವರ ಧ್ವನಿ ಟೀಸರ್​ನಲ್ಲಿ (Teaser) ಹೊರ ಬಂದಿದೆ, ಈ ದೇಶವನ್ನು ರಕ್ಷಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಏಕೆಂದರೆ ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂಬ ಘೋಷಣೆ ಕೂಡ ಕೇಳಿ ಬರುತ್ತದೆ. ಕಾಶ್ಮೀರಿ ಫೈಲ್ಸ್​, ದಿ ಕೇರಳ ಸ್ಟೋರಿಯಂತೆಯೇ ಈ ಚಿತ್ರದ ವಿರುದ್ಧವೂ ಇದಾಗಲೇ ಕೂಗು ಕೇಳಿಬರತೊಡಗಿದೆ. 

click me!