Sakshi Chopra: ರಿಯಾಲಿಟಿ ಷೋನ ಲೈಂಗಿಕ ದೌರ್ಜನ್ಯ ಬಿಚ್ಚಿಟ್ಟ ರಮಾನಂದ್​ ಸಾಗರ್​ ಮರಿಮೊಮ್ಮಗಳು!

Published : Jun 25, 2023, 11:36 AM IST
 Sakshi Chopra: ರಿಯಾಲಿಟಿ ಷೋನ ಲೈಂಗಿಕ ದೌರ್ಜನ್ಯ ಬಿಚ್ಚಿಟ್ಟ ರಮಾನಂದ್​ ಸಾಗರ್​ ಮರಿಮೊಮ್ಮಗಳು!

ಸಾರಾಂಶ

ರಿಯಾಲಿಟಿ ಷೋನಲ್ಲಿ ತಾವು ಅನುಭವಿಸಿರುವ ಲೈಂಗಿಕ ದೌರ್ಜನ್ಯದ ಕುರಿತು ರಾಮಾಯಣದ ನಿರ್ದೇಶಕ ದಯಾನಂದ ಸಾಗರ್ ಅವರ ಮರಿಮೊಮ್ಮಗಳು ಸಾಕ್ಷಿ ಚೋಪ್ರಾ ಮಾತನಾಡಿದ್ದಾರೆ.   

ಆದಿಪುರುಷ್​ ಗಲಾಟೆ ಬೆನ್ನಲ್ಲೇ 1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಸಕತ್​ ಸುದ್ದಿ ಮಾಡುತ್ತಿದೆ. ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದವರೂ ಹಲವರಿದ್ದರು  ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ, ಲಕ್ಷ್ಮಣನಾಗಿದ್ದ ಸುನಿಲ್​ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್​ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದ್ದಾರೆ.  ವೀಕ್ಷಕರು ಮನರಂಜನೆಗಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಈ ಧಾರಾವಾಹಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಇಂಥದ್ದೊಂದು ಅಪರೂಪದ ಧಾರಾವಾಹಿ ನೀಡಿರುವ ಕೀರ್ತಿ ನಿರ್ದೇಶಕ ರಮಾನಂದ್​ ಸಾಗರ್​ ಅವರಿಗೆ ಸಲ್ಲುತ್ತದೆ. ಪೌರಾಣಿಕ ಧಾರಾವಾಹಿ ನೀಡಿ ಜನಮನ ಗೆದ್ದಿರೋ ರಮಾನಂದ್​ ಸಾಗರ್​ ಅವರ ಮರಿ ಮೊಮ್ಮಗಳು ಈಗ ಸಕತ್​ ಸುದ್ದಿಯಾಗುತ್ತಿದ್ದಾಳೆ. ಇದಕ್ಕೆ ಕಾರಣ ಈಕೆಯ ಡ್ರೆಸ್​ಗಳು!

ಹೌದು. ರಮಾನಂದ್​ ಸಾಗರ್​ ಅವರ ಮರಿಮೊಮ್ಮಗಳು ಈಗ ಸುದ್ದಿಯಲ್ಲಿದ್ದಾರೆ. ಈಕೆಯ ಹೆಸರು  ಸಾಕ್ಷಿ ಚೋಪ್ರಾ (Sakshi Chopra). ಇವರು ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಸಂಪೂರ್ಣ ಬೆತ್ತಲಾಗಿಯೂ ಈಕೆ ಫೋಟೋಶೂಟ್​ ಮಾಡಿಸಿಕೊಂಡದ್ದು ಇದೆ. ಹೀಗೆ  ಬೋಲ್ಡ್​ ಲುಕ್ ಫೋಟೋಗಳನ್ನು ಇನ್ಸ್​​ಟಾಗ್ರಾಂನಲ್ಲಿ ಹರಿಬಿಟ್ಟು ಗಮನ ಸೆಳೆಯುತ್ತಿರುತ್ತಾರೆ. ಈಕೆ ರಮಾನಂದ್​ ಸಾಗರ್​ ಕರುಳ ಕುಡಿಯೇ ಎಂದು ಹಲವರು ಅಚ್ಚರಿ ಪಟ್ಟುಕೊಂಡದ್ದೂ ಉಂಟು. 

ದೀಪಿಕಾ ಪಡುಕೋಣೆ ಇದ್ಯಾವ ಯೋಗದ ಪೋಸ್ ಅಂತ​ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಇಂಥ ಸಾಕ್ಷಿ ಚೋಪ್ರಾ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಅದೇನೆಂದರೆ, ಲೈಂಗಿಕ ಕಿರುಕುಳದ ಕುರಿತು ಈಗ ಅವರು ಮಾತನಾಡಿದ್ದಾರೆ.  ರಿಯಾಲಿಟಿ ಷೋ ಒಂದರ ನಿರ್ಮಾಪಕರ ವಿರುದ್ಧ ಇವರ ಆರೋಪವಿದೆ.  ಶೂಟಿಂಗ್ ಸಂದರ್ಭದಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಸಾಕ್ಷಿ  ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅವರು ಹೇಳಿದ್ದೇನೆಂದರೆ, 'ನಾನು ರಿಯಾಲಿಟಿ ಷೋ (Reality Show) ಒಂದರಲ್ಲಿ ಭಾಗವಹಿಸಿದ್ದೆ. ಅದರ  ಒಪ್ಪಂದದ ಪ್ರಕಾರ ಪ್ರತಿದಿನ ಒಮ್ಮೆ ಅಮ್ಮನ ಜೊತೆ ಮಾತನಾಡುವ ಅವಕಾಶವಿತ್ತು.  ಆದರೆ ಸೆಟ್​ನಲ್ಲಿ ಷೋ ಮೇಕರ್​ಗಳ ವರ್ತನೆ ಕಂಡು ಅಚ್ಚರಿಗೊಂಡೆ. ನನಗೆ ಮಾತನಾಡಲು ಕೊಡುತ್ತಿರಲಿಲ್ಲ. ಅಲ್ಲಿರುವ ಅಪರಿಚಿತರು ನನ್ನನ್ನು ಅಸಹ್ಯವಾಗಿ ಸ್ಪರ್ಶಿಸುತ್ತಿದ್ದರು. ಊಟ ಪಡೆದುಕೊಳ್ಳುವಾಗ ಅಶ್ಲೀಲ ಪದ ಬಳಸುತ್ತಿದ್ದರು, ಕೆಲವೊಂದು ಕೆಟ್ಟ  ದೃಶ್ಯಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಕಿರುಕುಳ ಅನುಭವಿದ್ದೇನೆ ಎಂದು ಸಾಕ್ಷಿ ಚೋಪ್ರಾ ಗಂಭೀರ ಆರೋಪ ಮಾಡಿದ್ದಾರೆ.
 
ರಿಯಾಲಿಟಿ ಷೋ ಒಳಗೆ ಏನಾಗುತ್ತಿದೆ ಎಂಬುದು ನನ್ನ ತಾಯಿಗೆ ಗೊತ್ತಾಗುತ್ತಿರಲಿಲ್ಲ. ಸಾಕಷ್ಟು ಬಾರಿ ದೂರು ನೀಡಿದ ನಂತರ ಸಭೆಗಳನ್ನು ನಡೆಸಿ ನಿಮಗೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲದೇ ಅದ್ಯಾವ ರಿಯಾಲಿಟಿ ಷೋ ಎನ್ನುವುದನ್ನೂ ನನಗೆ ಸರಿಯಾಗಿ ಹೇಳಿರಲಿಲ್ಲ. ಅದು  ಕೇವಲ ಹಾಡುಗಾರಿಕೆ ಹಾಗೂ ಮನರಂಜನಾ ಕಾರ್ಯಗಳಿರುವ ರಿಯಾಲಿಟಿ ಷೋ ಎನ್ನಲಾಗಿತ್ತು. ಆದರೆ ಅಲ್ಲಿ  ಗಾಸಿಪ್ ಇತ್ತು, ನಾಟಕ ಮಾಡಬೇಕಿತ್ತು. ಇದರಿಂದ ಮಾನಸಿಕವಾಗಿ ನಾನು ನೊಂದುಕೊಂಡೆ. ಅಲ್ಲಿರುವವರೂ  ನನ್ನ ದೇಹದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ.  ಷೋ  ನಿರ್ಮಾಪಕರು  ಕೊಳಕು ಮನರಂಜನೆಗಾಗಿ ಏನು ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಇದು ತೋರಿಸಿದೆ ಎಂದು ಸಾಕ್ಷಿ ಚೋಪ್ರಾ ಹೇಳಿದ್ದಾರೆ.

Casting Couch: ನನ್ನನ್ನೇ ಮಂಚಕ್ಕೆ ಕರೆದಿದ್ದ ಆತ, ಇನ್ನು ನಟಿಯರ ಗತಿ? ಎಂದ ನಟ ರಾಜೀವ್​
 
ಅಂದಹಾಗೆ ಸಾಕ್ಷಿ, ಲಂಡನ್‌ ಟ್ರಿನಿಟಿ ಕಾಲೇಜಿನಲ್ಲಿ (Trinity college) ವೋಕಲ್‌ ಸಂಗೀತದಲ್ಲಿ ಪದವಿ ಪಡೆದಿದ್ದಾರೆ. 17 ನೇ ವಯಸ್ಸಿನಲ್ಲಿ ತನ್ನ ಮೊದಲ ಸಂಗೀತ ಕಾರ್ಯಕ್ರಮದ ಮೂಲಕ ವೇದಿಕೆ ಏರಿದರು. ಇವರ ಒಂದು ಸ್ಪೆಷ್ಯಾಲಿಟಿ ಎಂದರೆ ಈಕೆ  ಒಂದೇ ಮೂಗಿನಿಂದ ಉಸಿರಾಡುವ ಶಕ್ತಿ ಹೊಂದಿದ್ದಾರೆ. ಪ್ರಾಣಿಗಳನ್ನು ಪ್ರೀತಿಸುವ ಸಾಕ್ಷಿ ತಮ್ಮ ನಿವಾಸದಲ್ಲಿ 7 ಆಮೆ ಹಾಗೂ 2 ನಾಯಿ ಸಾಕಿದ್ದಾರೆ. ಈಕೆ  ಬ್ಯಾಡ್ಮಿಂಟನ್ ಹಾಗೂ ಲಾಂಗ್ ಟೆನ್ನಿಸ್ ಆಟಗಾರ್ತಿ ಕೂಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ