ಸಿನಿ ಇಂಡಸ್ಟ್ರಿಯಲ್ಲಿ ಕಾಸ್ಟ್ ಕೌಚಿಂಗ್ ಕುರಿತು ಇದಾಗಲೇ ಹಲವಾರು ನಟ ನಟಿಯರು ಮಾತನಾಡಿದ್ದಾರೆ. ಇದೀಗ ಲೈಂಗಿಕ ಕಿರುಕುಳದ ಕುರಿತು ನಟಿ ನರ್ಗೀಸ್ ಫಕ್ರಿ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು?
ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್ ಉದ್ಯಮದಲ್ಲಿರುವ ನಟಿ ನರ್ಗೀಸ್ ಫಕ್ರಿ (Nargis Fakhri). ತಮ್ಮ ಅಭಿನಯದಿಂದ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಗಳಿಸಿದ್ದಾರೆ. 2011 ರಲ್ಲಿ ಇಮ್ತಿಯಾಜ್ ಅಲಿ ಅವರ 'ರಾಕ್‌ಸ್ಟಾರ್' ಚಿತ್ರದೊಂದಿಗೆ ನರ್ಗಿಸ್ ಫಕ್ರಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. ಇದರ ನಂತರ ಅವರು 'ಮದ್ರಾಸ್ ಕೆಫೆ', (Madras Cafe) 'ಫಟಾ ಪೋಸ್ಟರ್ ನಿಖಲಾ ಹೀರೋ', 'ಕಿಕ್' ಮುಂತಾದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿನಿರಂಗದಲ್ಲಿನ ಕಾಸ್ಟ್ ಕೌಚಿಂಗ್ (Caste couching) ಕುರಿತು ಹಲವಾರು ನಟ ನಟಿಯರು ಬಹಿರಂಗವಾಗಿ ಚರ್ಚಿಸಿರುವುದುಂಟು. ತಮಗೆ ಅವಕಾಶ ನೀಡಲು ಚಿತ್ರರಂಗದ ಗಣ್ಯರು ಹೇಗೆಲ್ಲಾ ಬಳಸಿಕೊಳ್ಳಲು ಹವಣಿಸಿದ್ದರು ಎಂದು ಇವರು ಹೇಳಿಕೊಂಡಿದ್ದುಂಟು. ಇದೀಗ ಸರದಿ ನರ್ಗೀಸ್ ಫಕ್ರಿ ಅವರದ್ದು. ಅವರು ಈಗ ಬಾಲಿವುಡ್‌ನಲ್ಲಿ ತಮ್ಮ ಪ್ರಯಾಣದ ಬಗ್ಗೆ ಹಾಗೂ ತಾನು ಅನುಭವಿಸಿರುವ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ (Interview) ನರ್ಗಿಸ್ ಅವರು ತಾವು ಬಾಲಿವುಡ್‌ನಲ್ಲಿ (Bollywood) ಅನುಭವಿಸಿದ ಏರಿಳಿತದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್‌ನಲ್ಲಿ ಲೈಂಗಿಕ ಶೋಷಣೆ ಯಾವ ರೀತಿ ಇದೆ ಎಂಬ ಬಗ್ಗೆಯೂ ಮಾತನಾಡಿದರು. ಲೈಂಗಿಕ ಕಿರುಕುಳದಿಂದ (Sexual herrasement) ಅಪಾರ ನೋವು ಅನುಭವಿಸಿದ್ದೇನೆ ಎಂದಿರುವ ನಟಿ, 'ನಾನು ಇತರರನ್ನು ನಿರ್ಣಯಿಸುವುದಿಲ್ಲ. ಪ್ರತಿಯೊಬ್ಬರೂ ತನಗೆ ಬೇಕಾದುದನ್ನು ಮಾಡಬೇಕು. ಸರ್ವೈವಲ್ ಆಫ್ ದಿ ಫಿಟೆಸ್ಟ್ ತತ್ವ ಇಲ್ಲಿ ಅನ್ವಯಿಸುತ್ತದೆ ಎಂದು ಜನರು ಹೇಳುತ್ತಾರೆ, ಆದರೆ ನಾನು ನನ್ನ ವ್ಯಕ್ತಿತ್ವವನ್ನು ಮಾರಿಕೊಳ್ಳಲು ಇಷ್ಟಪಡದಾಕೆ. ಇಲ್ಲಿ ಭವಿಷ್ಯ ಕಂಡುಕೊಳ್ಳಲು ಬೇರೆಯವರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ನಾನು ಹೇಳುವುದಿಲ್ಲ. ಅದು ಅವರ ಆಯ್ಕೆ ಎಂದಿದ್ದಾರೆ.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!
' ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವು ಅಗ್ರಸ್ಥಾನದಲ್ಲಿದೆ. ನಾನು ಯಾರೆಂದು ನನಗೆ ತಿಳಿದಿದೆ ಮತ್ತು ನಾನು ನನ್ನೊಂದಿಗೆ ಸಂತೋಷವಾಗಿರಲು ಬಯಸುತ್ತೇನೆ. ನಾನು ನನ್ನ ಬಗ್ಗೆ ಒಳ್ಳೆಯದನ್ನು ಅನುಭವಿಸಲು ಬಯಸುತ್ತೇನೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಳಜಿ ವಹಿಸುವುದಕ್ಕಿಂತ ಹೆಚ್ಚು ಮುಖ್ಯವಾದುದು ಯಾವುದೂ ಇಲ್ಲ. ಯಶಸ್ಸಿನ (success) ಉತ್ತುಂಗಕ್ಕೆ ಏರಲು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಮಟ್ಟಿಗೆ ನಾನು ಹೋದವಳಲ್ಲ' ಎಂದಿದ್ದಾರೆ.
ಇನ್ನು ಕೆಲವರಿಗೆ ಇರುವಂತಹ ಭಯಾನಕ ಕಥೆಗಳು ನನ್ನ ಬಳಿ ಇಲ್ಲ ಎನ್ನುವುದಷ್ಟೇ ಸಂತೋಷ. ಅದು ನನ್ನ ಅದೃಷ್ಟ ಕೂಡ. ಈ ಇಂಡಸ್ಟ್ರಿಗೆ (Industry) ಬಂದ ಮೇಲೆ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಜನರು ಅವರ ಮೇಲೆ ಇಡುವ ನಿರೀಕ್ಷೆಗಳು ಹೆಚ್ಚಿದಂತೆ ಎಲ್ಲದಕ್ಕೂ ರೆಡಿಯಾಗುವ ಮಟ್ಟಿಗೆ ಬಂದು ನಿಲ್ಲುತ್ತಾರೆ. ಆದರೆ ನಾನು ಆ ನಟ ನಟಿಯರ ಸ್ಥಾನದಲ್ಲಿ ನಿಲ್ಲಲಿಲ್ಲ ಎನ್ನುವ ಸಂತೋಷವಿದೆ. ಇದೆಲ್ಲದರಿಂದ ದೂರವಿರಲು ನಾನು ಪ್ರಯತ್ನಿಸಿದ್ದೇನೆ. ಇವಾವುದಕ್ಕೂ ಒಲ್ಲೆ ಎಂದಾಗ ಇಲ್ಲಿ ಬದುಕುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತು. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಗಡಿಗಳನ್ನು ಹೇಗೆ ಹೊಂದಿಸಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ ನಟಿ ನರ್ಗೀಸ್.
ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
ಇತ್ತೀಚೆಗೆ ನಟಿ 'ಶಿವಶಾಸ್ತ್ರಿ ಬಲ್ಬೋವಾ' (ShivaShastri Balbova) ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಅನುಪಮ್ ಖೇರ್ ಮತ್ತು ನೀನಾ ಗುಪ್ತಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.