ಆರ್ ಆರ್ ಆರ್ ಸಿನಿಮಾದ ನಾಟು ನಾಟು...ಹಾಡಿನ ಕ್ರೆಡಿಟ್ ಎಲ್ಲಾ ನೀವೆ ತಗೊಂಡ್ರಾ ಎನ್ನುವ ಆರೋಪಕ್ಕೆ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇತ್ತೀಚೆಗಷ್ಟೆ ಆರ್ ಆರ್ ಆರ್ ಸಿನಿಮಾದ ನಾಟು..ನಾಟು.. ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದಿದೆ. ಇದೀಗ ಆಸ್ಕರ್‌ನ ಅಂತಿಮ ರೇಸ್ ನಲ್ಲಿದೆ. ಈ ನಡುವೆ ನೆಟ್ಟಗರು ರಾಜಮೌಳಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಟು ನಾಟು...ಗಾಗಿ ಅನೇಕರರು ಕೆಲಸ ಮಾಡಿದ್ದಾರೆ. ಹಾಡಿನ ಡಾನ್ಸ್ ಕೂಡ ಫೇಮಸ್ ಆಗಿದೆ. ಹೀಗಿರುವಾಗ ಕ್ರೆಡಿಟ್ ಎಲ್ಲಾ ನೀವೆ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ.
ಆರ್ ಆರ್ ಆರ್ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನೇಕ ಈವೆಂಟ್ ಗಳಲ್ಲಿ ಸಿನಿಮಾತಂಡ ಭಾಗಿಯಾಗುತ್ತಿದೆ. ನಾಟು ನಾಟು ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಹಾಡಿನ ಡಾನ್ಸ್ ಮಾಸ್ಟರ್ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಅವರನ್ನು ಸೈಡ್ ಲೈನ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ. ದಿ ನ್ಯೂಯಾರ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಈ ಸಂದರ್ಶನದಲ್ಲಿ ರೌಜಮೌಳಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು ಚರ್ಚೆ ಕೂಡ ಆಗುತ್ತಿದೆ. ಇದೀಗ ನಾಟು ನಾಟು...ಹಾಡಿನ ಕ್ರೆಡಿಟ್ ವಿಚಾರವಾಗಿ ಉತ್ತರ ನೀಡಿದ್ದು ಡಾನ್ಸ್ ಮಾಸ್ಟರ್ ಪ್ರೇಮ್ ರಕ್ಷಿತ್ ನಿಜವಾದ ವಿಜೇತ ಎಂದು ಹೇಳಿದ್ದಾರೆ.
ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ; ಧರ್ಮದ ಬಗ್ಗೆ ಮಾತನಾಡಿದ್ದ ರಾಜಮೌಳಿಗೆ ಕಂಗನಾ ಬೆಂಬಲ
'ನಾನು, ಕೀರವಾಣಿ ಮತ್ತು ಚಂದ್ರಬೋಸ್ ಅವರು ಗೋಲ್ಡನ್ ಗ್ಲೋಬ್ಸ್ ಅಥವಾ ಇನ್ನಾವುದೇ ಪ್ರಶಸ್ತಿಯಲ್ಲಿ ನಾಟು ನಾಟುಗೆ ಮನ್ನಣೆ ಪಡೆಯಬಹುದು. ಆದರೆ ಪ್ರೇಮ್ ರಕ್ಷಿತ್ ನಿಜವಾದ ವಿನ್ನರ್. ಅವರ ನೃತ್ಯ ಸಂಯೋಜನೆಯು ಈ ಹಾಡನ್ನು ದೊಡ್ಡ ಪ್ರೇಕ್ಷಕರನ್ನು ತಲುಪುವಂತೆ ಮಾಡಿತು. ಹಾಡಿನ ನೃತ್ಯ ಸಂಯೋಜನೆಗೆ ಸಂಬಂಧಿಸಿದಂತೆ 4-5 ಸೆಟ್‌ಗಳ ಕಲ್ಪನೆಗಳನ್ನು ನೀಡಲು ಅವರು ಏಳು ವಾರಗಳನ್ನು ತೆಗೆದುಕೊಂಡರು' ಎಂದು ಹೇಳಿದ್ದಾರೆ.
ಪ್ರೇಮ್ ರಕ್ಷಿತ್, ನಾಟು ನಾಟು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು ಮಾತ್ರವಲ್ಲದೇ ಆರ್‌ಆರ್‌ಆರ್‌ನ ಪ್ರೀ-ಕ್ಲೈಮ್ಯಾಕ್ಸ್‌ನಲ್ಲಿ ಬರುವ ಎನ್‌ಟಿಆರ್, ಚರಣ್ ಅನ್ನು ತನ್ನ ಹೆಗಲ ಮೇಲೆ ಎತ್ತುವ ಫೈಟ್ ಕೂಡ ಪ್ರೇಮ್ ರಕ್ಷಿತ್ ನೀಡಿದ ಕಲ್ಪನೆಯಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. ಅವರ ಹೆಸರನ್ನು ಇಲ್ಲಿ ಹೇಳಲು ನಿಜಕ್ಕೂ ಅರ್ಹರಾಗಿದ್ದಾರೆ ಎಂದು ರಾಜಮೌಳಿ ಹೇಳಿದ್ದಾರೆ.
ನನಗೆ ಇತಿಹಾಸ ಗೊತ್ತಿಲ್ಲ, ಸ್ಕ್ರಿಪ್ಟ್ ಓದಿ ಅಳುನೇ ಬಂತು; ತಂದೆಯ RSS ಸ್ಕ್ರಿಪ್ಟ್‌ಗೆ ರಾಜಮೌಳಿ ರಿಯಾಕ್ಷನ್
ಆರ್ ಆರ್ ಆರ್ ಬಗ್ಗೆ
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡ ನಟಿಸಿದ್ದಾರೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾ ಸದ್ಯ ಆಸ್ಕರ್ ಅಂಗಳದಲ್ಲಿದೆ. ‘ನಾಟು ನಾಟು..' ಹಾಡು ಆಸ್ಕರ್ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ.