Gauri Khan: ಇಷ್ಟು ಸುಂದರಿ ಯಾವಾಗಾದ್ರಿ? ಫೋಟೋದಿಂದ ಟ್ರೋಲ್​ ಆದ ಶಾರುಖ್​ ಪತ್ನಿ!

By Suvarna News  |  First Published Feb 20, 2023, 10:53 AM IST

ಶಾರುಖ್​ ಖಾನ್​ ಅವರ ಪತ್ನಿ ಗೌರಿ ಖಾನ್​ ಇತ್ತೀಚೆಗೆ ಇನ್ಸ್​ಟಾಗ್ರಾಮ್​ನಲ್ಲಿ ಚೆಂದಗಿನ ಫೋಟೋ ಹಾಕಿದ್ದು, ಭಾರಿ ಟ್ರೋಲಿಗೆ ಒಳಗಾಗಿದ್ದಾರೆ. ಏಕೆ? 
 


ಮುಂಬೈ: ಬಾಲಿವುಡ್‌ನ  ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan)  ಅವರ ಹೆಸರು ಈಗ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ತಮ್ಮ ಮಗಳ ವಯಸ್ಸಿನ ದೀಪಿಕಾ ಪಡುಕೋಣೆ ಜೊತೆ ಪಠಾಣ್​ ಸೇರಿದಂತೆ ಇತ್ತೀಚಿನ ನಟಿಯರ ಜೊತೆಯೂ ನಾಯಕನಾಗಿ ನಟಿಸುವ ಮೂಲಕ ಇವರು ಎವರ್​ಗ್ರೀನ್​ ಸ್ಟಾರ್​ (Evergreen star) ಎನಿಸಿಕೊಂಡವರು. ಬಹುತೇಕ ಚಿತ್ರನಟರಂತೆ ಇವರು ಕೂಡ ಹಿಂದೂ ಹುಡುಗಿಯನ್ನೇ ಮದುವೆಯಾಗಿದ್ದರೂ ಅವರ ಹೆಸರನ್ನು ಬದಲಿಸಲಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿಗಳ ನೆಚ್ಚಿನ ನಾಯಕರಾಗಿದ್ದಾರೆ. ಜೊತೆಗೆ ಈಗಿನ ನಾಯಕರಂತೆ ಹೆಚ್ಚೆಚ್ಚು ಮದುವೆಯಾಗುವ ಗೋಜಿಗೆ ಹೋಗದ ಕಾರಣ, ಶಾರುಖ್​ ಮತ್ತು  ಅವರ ಪತ್ನಿ ಗೌರಿ ಖಾನ್ (Gauri Khan)  ಬಾಲಿವುಡ್​ನ ಅತ್ಯಂತ ರೋಮಾಂಟಿಕ್​  ಜೋಡಿ ಎನಿಸಿಕೊಂಡಿದೆ.   ಈ ಜೋಡಿ ಮದುವೆಯಾಗಿ 32 ವರ್ಷಗಳಾದರೂ ಸುಮಧುರ ಬಾಂಧವ್ಯ ಉಳಿಸಿಕೊಂಡಿದೆ.
 
ಅಂದಹಾಗೆ   ಗೌರಿ ಖಾನ್ (Gouri Khan) ಇಂಟೀರಿಯರ್ ಡಿಸೈನರ್​ (Interior Designer). ವರ್ಷ 52 ಆದರೂ  ಇಂದಿಗೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ಅವರ ಫೋಟೋ ವೈರಲ್​ ಆಗಿದ್ದು, ಅದು ಭಾರಿ ಟ್ರೋಲ್​ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಷ್ಟೇ ಸುಂದರವಾಗಿದ್ದರೂ, ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ಫೋಟೋ ಎಡಿಟ್​ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವುದು ಮಾಮೂಲು. ಅದೇ ರೀತಿ ಗೌರಿ ಖಾನ್​ ಅವರ ಎಡಿಟೆಡ್​ ಫೋಟೋ ಶೇರ್​ (Edited photo share) ಆಗಿದ್ದು, ಅದೀಗ ವೈರಲ್​ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬದವರ ಮೇಲೆ ನೆಟ್ಟಿಗರ ಕಣ್ಣು ಯಾವಾಗಲೂ ನೆಟ್ಟಿರುತ್ತದೆಯಲ್ಲವೆ? ಅದಕ್ಕಾಗಿಯೇ ಗೌರಿ ಖಾನ್​ ಅವರ ಫೋಟೋ  (Photo) ಸ್ವಲ್ಪ ಹೆಚ್ಚೇ ಎಡಿಟ್ ಆಗಿದ್ದು ಅದೀಗ ಟ್ರೋಲಿಗರ (Troll) ಬಾಯಿಗೆ ಆಹಾರವಾಗಿದೆ.

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

Tap to resize

Latest Videos

 ನೆಟ್ಟಿಗರು ಗೌರಿ ಖಾನ್​ ಅವರ ಒರಿಜಿನಲ್​ ಮತ್ತು ಶೇರ್​ ಮಾಡಿರುವ ಎರಡೂ ಫೋಟೋಗಳನ್ನು  ಕಂಪೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೋವನ್ನು ಗೌರಿ  ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ (instagram)ಶೇರ್​ ಮಾಡಿದ್ದರು. ದುಬೈ ಇವೆಂಟ್​ನ (Dubai Event) ಫೋಟೋ ಶೇರ್ ಮಾಡಲಾಗಿತ್ತು.  ಇದೀಗ ಒರಿಜಿನಲ್ ಫೋಟೋ ಜೊತೆಗೆ ಇದನ್ನು ಕಂಪೇರ್​ ಮಾಡಲಾಗುತ್ತಿದೆ. ತುಸು ಕಪ್ಪು ಬಣ್ಣದ ಗೌರಿ ಖಾನ್​ ಅವರ ಮುಖವನ್ನು ಸ್ವಲ್ಪ ಹೆಚ್ಚಿಗೆ ಎನ್ನುವ ಹಾಗೆ ಬಿಳಿ ಮಾಡಿದ್ದಾರೆ ಎನ್ನುವುದು ಟ್ರೋಲಿಗರ ಆಕ್ಷೇಪ. ಎಡಿಟ್ ಮಾಡಿರುವ ಫೋಟೋದಲ್ಲಿ ಎಕ್ಸ್​ಪೋಷರ್ ಹೆಚ್ಚಿದೆ. ಗೌರಿ ಖಾನ್ ಅವರ ಮುಖದ ಚರ್ಮವೂ ತುಂಬಾ ಸಾಫ್ಟ್ (Soft) ಆಗಿ ಕಾಣಿಸಿದೆ. ಕಣ್ಣುಗಳು ಹೆಚ್ಚು ಸುಂದರವಾಗಿ ಕಾಣಿಸುತ್ತಿದ್ದು, ಬಾಯಿಯ ಸಮೀಪ ನೆರಿಗೆ ಬೀಳದಂತೆ ಎಡಿಟ್​ ಮಾಡಲಾಗಿದೆ ಎಂದು ನೆಟ್ಟಿಗರು ಬರೆದು ಇದನ್ನು ವೈರಲ್​ ಮಾಡುತ್ತಿದ್ದಾರೆ.  ಬಾಲಿವುಡ್ ಸೆಲೆಬ್ರಿಟಿಗಳು (Celebrity) ಇತ್ತೀಚಿನ ದಿನಗಳಲ್ಲಿ ತಮ್ಮ ಫೋಟೋಗಳನ್ನೇಕೆ ಇಷ್ಟೊಂದು ಎಡಿಟ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಇಂದು ಎಡಿಟ್​ ಮಾಡುವುದು ಸಾಮಾನ್ಯ. ಇವರು ಶಾರುಖ್​ ಅವರ ಪತ್ನಿ ಎನ್ನುವ ಕಾರಣಕ್ಕೆ ಈ ರೀತಿ ಟ್ರೋಲ್​ ಮಾಡುವುದು ಸರಿಯಲ್ಲ ಎಂದು ಒಂದು ವರ್ಗ ಹೇಳಿದರೆ, ಈ ವಯಸ್ಸಿಗೆ ಇಂಥದ್ದೆಲ್ಲಾ ಯಾಕೆ ಬೇಕು? ವಯಸ್ಸಾಗಿದ್ದು ಎಲ್ಲರಿಗೂ ತಿಳಿದದ್ದೇ. ಎಡಿಟ್​ ಮಾಡುವುದಾದರೆ ಸ್ವಲ್ಪ ಮಾಡಿ, ಹೀಗೆಲ್ಲಾ ಮಾಡಿ ಟ್ರೋಲ್​ ಆಗಬೇಡಿ ಎಂದಿದ್ದಾರೆ ಇನ್ನು ಕೆಲವರು. ಇನ್ನು ಕೆಲವರು ವಯಸ್ಸು 52 ಆದರೂ ಇಷ್ಟು ಸುಂದರಿ ಯಾವಾಗಾದ್ರಿ ಎಂದು ಕಾಲೆಳೆದಿದ್ದಾರೆ! 

Shehzada vs Pathaan: ಚೆನ್ನಾಗಿ ಓಡ್ತಿದ್ರೂ 'ಪಠಾಣ್'​ಗೆ ಯಾಕಪ್ಪಾ ಈ ಕಂತ್ರಿ ಬುದ್ಧಿ ಅಂತಿದ್ದಾರೆ ಜನ...

click me!