ಸಿಹಿ ತುಂಬಿರುವ ಮೊಟ್ಟೆ ತಿನ್ನು; ನನ್ನ ಮುದ್ದಾದ ಮೊಲ ನೀನು ಎಂದು ಜೈಲಿನಿಂದ ನಟಿ ಜಾಕ್ವೆಲಿನ್‌ಗೆ ಪತ್ರ ಬರೆದ ಸುಕೇಶ್

Published : Apr 10, 2023, 12:18 PM IST
 ಸಿಹಿ ತುಂಬಿರುವ ಮೊಟ್ಟೆ ತಿನ್ನು; ನನ್ನ ಮುದ್ದಾದ ಮೊಲ ನೀನು ಎಂದು ಜೈಲಿನಿಂದ ನಟಿ ಜಾಕ್ವೆಲಿನ್‌ಗೆ ಪತ್ರ ಬರೆದ ಸುಕೇಶ್

ಸಾರಾಂಶ

ಈಸ್ಟರ್‌ ಹಬ್ಬದ ದಿನ ಗರ್ಲ್‌ಫ್ರೆಂಡ್‌ ಜಾಕ್ವೆಲಿನ್‌ಗೆ ಪತ್ರ ಬರೆದ ವಂಚಕ ಸುಕೇಶ್. ಇಷ್ಟೆಲ್ಲಾ ಸೀನ್ ಆದ್ರೂ ಪ್ರತಿಕ್ರಿಯೆ ಕೊಟ್ಟಿಲ್ಲ ಜಾಕ್ವೆಲಿನ್...

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್‌ ಈಸ್ಟರ್ ಹಬ್ಬದಂದು ಮಾಜಿ ಗರ್ಲ್‌ಫ್ರೆಂಡ್‌ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಮತ್ತೊಂದು ಪತ್ರ ಬರೆದಿದ್ದಾರೆ. ಸಿಹಿ ಮೊಟ್ಟೆ ತಿನ್ನು ನನ್ನ ಮುದ್ದಿನ ಮೊಲ ಎಂದು ಬರೆದಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪಾತ್ರದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ...

'ನನ್ನ ಬನ್ನಿ ಮೊಲ..ಏನೇ ಆಗಲಿ ನಾನು ನೀನು ಎಂದು ಎಂದೆಂದಿಗೂ ಒಟ್ಟಿಗೆ.  ಈಸ್ಟರ್ ಹಬ್ಬದ ಶುಭಾಶಯಗಳು. ಈ ವರ್ಷ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ ಆದರೆ ಮುಂದಿನ ವರ್ಷ ತುಂಬಾ ಚೆನ್ನಾಗಿರಲಿದೆ. ಈ ವರ್ಷ ಮಿಠಾಯಿ ತುಂಬಿದ ಮೊಟ್ಟೆಯನ್ನು ಒಡೆದು ಅದರ ಸಿಇ ತಿನ್ನುತ್ತಿದ್ದನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೀನಿ. ಮೈ ಬೇಬಿ ನೀನು ಎಷ್ಟು ಸುಂದರವಾಗಿದ್ದೀಯ ಎಂಬ ಕಲ್ಪನೆ ನಿನಗೆ ಇದೆಯಾ? ಈ ಗ್ರಹದಲ್ಲಿ ನಿನ್ನಷ್ಟು ಸುಂದರ ಯಾರೂ ಇಲ್ಲ ನನ್ನ ಮುದ್ದಿನ ರಾಬಿಟ್ ಐ ಲವ್ ಯು ಮೈ ಬೇಬಿ . ನಿನ್ನನ್ನು ನೆನಪಿಸಿಕೊಳಳದ ಕ್ಷಣವೇ ಇಲ್ಲ. ನಿನ್ನನ್ನು ಅಪಾರವಾಗಿ ಮಿಸ್ ಮಾಡಿಕೊಳ್ಳುತ್ತೀನೆ' ಅಲ್ಲದೆ ಲಕ್ಸ್ ಕಾಜಿ (ಪುರುಷರ ಒಳ ಉಡುಪು ಕಂಪನಿಯ ಜಾಹೀತಾರು) ನೋಡುವಾಗ ನೀನು ನೆನಪಾಗುತ್ತೀಯ' ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. 

ಜಾಕ್ವೆಲಿನ್‌ಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ ಸುಕೇಶ್ ಚಂದ್ರಶೇಖರ್: 'ಗೋಲ್ಡ್ ಡಿಗ್ಗರ್' ಎಂದಿದ್ದು ಯಾರಿಗೆ?

ಮತ್ತೊಂದು ಪತ್ರ ಬರೆದಿದ್ದರು:

ಈ ಹಿಂದೆಯೂ ತಮ್ಮ ಹುಟ್ಟುಹಬ್ಬದ ದಿನ ಜಾಕ್ವೆಲಿನ್‌ಗೆ ಪ್ರೀತಿಯಿಂದ ಸುಕೇಶ್ ಪತ್ರ ಬರೆದಿದ್ದರು.  'ನನ್ನ ಬೊಮ್ಮಾ, ನನ್ನ ಹುಟ್ಟುಹಬ್ಬದ ಈ ದಿನದಂದು ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ, ನಿನ್ನ ಎನರ್ಜಿ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಇದನ್ನು ಪದಗಳಲ್ಲಿ ಹೇಳಲ್ಲ ಸಾಧ್ಯವಿಲ್ಲ. ನನಗೆ ಗೊತ್ತು ನನ್ನ ಮೇಲಿನ ನಿನ್ನ ಪ್ರೀತಿಗೆ ಯಾವತ್ತು ಕೊನೆ ಇಲ್ಲ. ನಿನ್ನ ಸುಂದರ ಹೃದಯದಲ್ಲಿ ಏನಿದೆ ಎಂದು ನನಗೆ ಗೊತ್ತಿದೆ ಇದಕ್ಕೆ ಪುರಾವೆ ಅಗತ್ಯವಿಲ್ಲ ಬೇಬಿ' ಎಂದು ಹೇಳಿದ್ದಾರೆ. 

ನಾನು ನಿನಗಾಗಿ ಇಲ್ಲಿದ್ದೇನೆ ಎಂದು ನಿನಗೆ ತಿಳಿದಿದೆ. ಲವ್ ಯು ಮೈ ಬೇಬಿ, ನನಗೆ ನನ್ನ ಹೃದಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಜನ್ಮದಿನದಂದು ನನಗೆ ಶುಭಾಶಯ ತಿಳಿಸಿದ ನನ್ನ ಬೆಂಬಲಿಗರು ಮತ್ತು ಸ್ನೇಹಿತರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಾನು ನೂರಾರು ಪತ್ರಗಳಗನ್ನು ಸ್ವೀಕರಿಸಿದ್ದೇನೆ. ಧನ್ಯವಾದಗಳು' ಎಂದು ಪತ್ರ ಬರೆದಿದ್ದಾರೆ. 

ಮನೆ ಖರೀದಿಸಲು ನನ್ನಿಂದ ಹಣ ತೆಗೆದುಕೊಂಡಿದ್ದಾಳೆ;ನೋರಾ ಫತೇಹಿ ಹೇಳಿಕೆಗೆ ಸುಕೇಶ್ ಚಂದ್ರಶೇಖರ್ ತಿರುಗೇಟು

ಜೈಲಿನಲ್ಲಿ ಐಷಾರಾಮಿ ವಸ್ತು:

ಸುಕೇಶ್‌ ಇದ್ದ ತಿಹಾರ್‌ ಜೈಲಿನ ಸೆಲ್‌ ಮೇಲೆ ಪೊಲೀಸರು ಕೆಲವು ದಿನಗಳ ಹಿಂದೆ ದಾಳಿ ಮಾಡಿದ್ದರು. . 8 ರಿಂದ 9 ಜನ ಅಧಿಕಾರಿಗಳು ಶೋಧ ನಡೆಸಿ 5 ಲಕ್ಷ ಮೌಲ್ಯದ ಚಪ್ಪಲಿ 80 ಸಾವಿರ ಮೌಲ್ಯದ ಮೂರು ಜೀನ್ಸ್‌ ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?