
ಚೆನ್ನೈ: ಕಾಲಿವುಡ್ ನಟಿ ನಯನತಾರಾ ಅಭಿಮಾನಿಯೋರ್ವನ ಫೋಟೋ ಹುಚ್ಚಿಗೆ ಬೇಸತ್ತು ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದ ಘಟನೆ ನಡೆದಿದೆ. ನಟ ವಿಘ್ನೇಶ್ ಶಿವನ್ ಜೊತೆ ಮದ್ವೆಯಾಗಿ ಇಬ್ಬರು ಅವಳಿ ಮಕ್ಕಳನ್ನು ಹೊಂದಿರುವ ನಯನತಾರಾ ತಮ್ಮ ಫ್ಯಾಮಿಲಿ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಪತಿ ಹಾಗೂ ಮುದ್ದಾದ ಮಕ್ಕಳೊಂದಿಗೆ ಆಗಾಗ ದೇಗುಲಗಳಿಗೆ ಭೇಟಿ ನೀಡುತ್ತಿರುವ ಮೂಲಕ ಸುದ್ದಿಯಲ್ಲಿರುವ ನಯನತಾರಾ ಈಗ ಅಭಿಮಾನಿಯೊಬ್ಬನ ಮೇಲೆ ಸಿಟ್ಟಿಗೆದ್ದು ಸುದ್ದಿಯಾಗಿದ್ದಾರೆ.
ನಯನತಾರಾ ಹಾಗೂ ಪತ್ನಿ ವಿಘ್ನೇಶ್ ಶಿವನ್ (Vignesh Shivan) ಅವರು ಕುಂಬಕೋಣಂನಲ್ಲಿರುವ ಕಾಮಾಕ್ಷಿ ಅಮ್ಮನ್ (Kamakshi amman) ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಲು ಬಯಸಿದ್ದರು. ಆದರೆ ಈ ವೇಳೆ ಲೇಡಿ ಸೂಪರ್‌ಸ್ಟಾರ್ ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮುಗಿಬಿದ್ದ ಕಾರಣ ಅವರಿಗೆ ಸರಿಯಾಗಿ ದೇವಿಯ ದರ್ಶನ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೇ ನಟಿಯ ಜೊತೆ ಫೋಟೋ ತೆಗೆಸಿಕೊಳ್ಳಲು ಜನ ನೂಕುನುಗ್ಗಲು ಮಾಡಿದ್ದರಿಂದ ಪೊಲೀಸರಿಗೂ ಜನರನ್ನು ನಿಯಂತ್ರಿಸಲು ಕಷ್ಟವಾಗಿದೆ. ಈ ವೇಳೆ ಸಿಟ್ಟಿಗೆದ್ದ ನಟಿ ವಿಚಿತ್ರವಾಗಿ ವರ್ತಿಸಿದ ಅಭಿಮಾನಿಗಳ ವಿರುದ್ಧ ಸಿಟ್ಟಿಗೆದ್ದರು.
ಮತ್ತೆ ಒಂದಾದ 'ಪಠಾಣ್' ಜೋಡಿ; ಶಾರುಖ್ 'ಜವಾನ್'ಗೆ ದೀಪಿಕಾ ಪಡುಕೋಣೆ ಎಂಟ್ರಿ
ಅಭಿಮಾನಿಗಳ ನೂಕುನುಗ್ಗಲಿನ ನಡುವೆಯೇ ಕಾಮಾಕ್ಷಿ ಅಮನ್ ದರ್ಶನ ಪಡೆದ ನಂತರ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮತ್ತೊಂದು ದೇಗುಲ ದರ್ಶನ ಪಡೆಯಲು ಹೊರಟಿದ್ದರು. ಅವರನ್ನು ರೈಲು ನಿಲ್ದಾಣದಲ್ಲಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದರೆ ಇದಾದ ಬಳಿಕ ನಟಿ ತಾಳ್ಮೆ ಕಳೆದುಕೊಂಡಿದ್ದು, ಆಕೆಯನ್ನು ವಿಡಿಯೋ ಮಾಡುತ್ತಿದ್ದ ಅಭಿಮಾನಿಯೊಬ್ಬರಿಗೆ ಮೊಬೈಲ್ ಫೋನ್ ಒಡೆದು ಹಾಕುವ ಬೆದರಿಕೆಯೊಡ್ಡಿದ್ದಾರೆ.
ಅವಳಿ ಮಕ್ಕಳ ಪೂರ್ಣ ಹೆಸರು ರಿವೀಲ್ ಮಾಡಿದ ನಯನತಾರಾ; ಫೋಟೋ ಹಂಚಿಕೊಂಡ ವಿಘ್ನೇಶ್
ತಮಿಳು ಸಿನಿಮಾ ರಂಗದಲ್ಲಿ ಅತ್ಯಂತ ದೊಡ್ಡ ಹೆಸರು ಹೊಂದಿರುವ ನಯನತಾರಾ ಕೊನೆಯದಾಗಿ 'ಕನೆಕ್ಟ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಒಳ್ಳೆಯ ಸ್ಪಂದನೆ ವ್ಯಕ್ತವಾಗಿತ್ತು. ಅಶ್ವಿನಿ ಶರವಣನ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಅವರು ಹಿಂದಿ ಸಿನಿಮಾ ಜವಾನ್‌ದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಮಣಿ (Priyamani) ಹಾಗೂ ವಿಜಯ್ ಸೇತುಪತಿ (Vijay Sethupathi) ಮುಖ್ಯ ಭೂಮಿಕೆಯಲ್ಲಿದ್ದಾರೆ. ಜವಾನ್ ಸಿನಿಮಾ ಈ ವರ್ಷ ತೆರೆ ಕಾಣುವ ಸಾಧ್ಯತೆ ಇದೆ. ಇದರ ಜೊತೆ ಇರವಿಯನ್ ಎಂಬ ಸಿನಿಮಾವೂ ನಯನತಾರಾ ಕೈಯಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.