ನನಗೆ, ಮಗಳಿಗೆ ಮುಂಬೈನಲ್ಲಿ ಕಿರುಕುಳ ಹೆಚ್ಚಾಗಿದೆ; ನಟಿ ಪ್ರೀತಿ ಜಿಂಟಾ ಅಳಲು

Published : Apr 10, 2023, 11:02 AM IST
ನನಗೆ, ಮಗಳಿಗೆ ಮುಂಬೈನಲ್ಲಿ ಕಿರುಕುಳ ಹೆಚ್ಚಾಗಿದೆ; ನಟಿ ಪ್ರೀತಿ ಜಿಂಟಾ ಅಳಲು

ಸಾರಾಂಶ

ನನ್ನ ಮಕ್ಕಳು ನೆಮ್ಮದಿಯಾಗಿ ಜೀವನ ಮಾಡಲು ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡು ನಟಿ ಪ್ರೀತಿ ಜಿಂಟಾ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಟಿ....  

ಬಾಲಿವುಡ್‌ನ ಡಿಂಪಲ್ ಹುಡುಗಿ ಪ್ರೀತಿ ಜಿಂಟಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಮುಂಬೈನಲ್ಲಿ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ. ಯಾರೂ ಸಹಾಯ ಮಾಡುವುದಿಲ್ಲ ಬದಲಿಗೆ ವಿಡಿಯೋ ಕ್ಲಿಕ್ ಮಾಡಿಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದಾರೆ.

'ಈ ವಾರ ನಡೆದ ಎರಡು ಘಟನೆಗಳಿಂದ ಆಘಾತವಾಗಿದೆ. ಮೊದಲ ಘಟನೆ ಏನೆಂದರೆ ನನ್ನ ಪುತ್ರಿ ಜಿಯಾ ಜೊತೆ ಫೋಟೋ ತೆಗೆದುಕೊಳ್ಳಲು ಮಹಿಳೆಯೊಬ್ಬರು ತುಂಬಾ ಆಸೆ ಪಟ್ಟರು. ತುಂಬಾ ಗೌರವದಿಂದ ಬೇಡ ಫೋಟೋ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಾಗ ಸುಮ್ಮನೆ ಅಲ್ಲಿಂದ ಮುಂದೆ ಹೊರಟರು ಆದರೆ ಇದ್ದಕ್ಕಿದ್ದಂತೆ ಹಿಂದೆ ಬಂದು ಮಗುವನ್ನು ಎತ್ತಿಕೊಂಡು ಮುದ್ದಾಡಲು ಆರಂಭಿಸಿದಳು. ನನ್ನ ಮಗಳ ತುಟಿಗಳಿಗೆ ಮುತ್ತು ಕೊಟ್ಟು ಓಡಿ ಹೋದರು ಯಾವ ರೀತಿ ಮುತ್ತು ಕೊಟ್ಟರು ಅಂದ್ರೆ ಮುಖಕ್ಕೆ ಜೊಲ್ಲು ತಾಗಿಸಿ ಹೋಗಿದ್ದಾರೆ. ಈ ಮಹಿಳೆ ಎಲಿಟ್‌ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದಾರೆ, ಗಾರ್ಡ್‌ನಲ್ಲಿ ಮಕ್ಕಳು ಆಟವಾಡುವಾಗ ಪ್ರತ್ಯಕ್ಷವಾಗುತ್ತಾಳೆ. ನಾನು ಸೆಲೆಬ್ರಿಟಿ ಆಗಿರಲಿಲ್ಲ ಅಂದಿದ್ರೆ ತುಂಬಾ ಕೆಟ್ಟ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಿದ್ದೆ ಆದರೆ ದೊಡ್ಡ ಸೀನ್ ಕ್ರಿಯೇಟ್ ಮಾಡುವುದು ಬೇಡ ಎಂದಿ ಕೂಲ್ ಆಗಿ ಹ್ಯಾಂಡಲ್‌ ಮಾಡಿರುವೆ' ಎಂದು ಪ್ರೀತಿ ಬರೆದುಕೊಂಡಿದ್ದಾರೆ.

ನೆಲ ಒರೆಸಿದ ಪ್ರೀತಿ ಜಿಂಟಾ ಪುತ್ರ, ಕೇಸ್​ ಹಾಕೋದಾಗಿ ಫ್ಯಾನ್ಸ್​ ಎಚ್ಚರಿಕೆ!

'ನಾನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಎರಡನೇ ಘಟನೆ. ನನ್ನ ವಿಮಾನ ಪ್ರಯಾಣಕ್ಕೆ ತಡವಾಗುತ್ತಿತ್ತು ಬೇಗ ಬೇಗ ಓಡಿ ಕಾರು ಏರುತ್ತಿದ್ದೆ ಅಷ್ಟರಲ್ಲಿ ಅಂಕವಿಲ ವ್ಯಕ್ತಿಯೊಬ್ಬ ನನ್ನ ಕಾರನ್ನು ನಿಲ್ಲಿಸುವುದಕ್ಕೆ ಪ್ರಯತ್ನ ಪಟ್ಟರು. ಹಣ ನೀಡುವಂತೆ ಕೆಲವು ವರ್ಷಗಳಿಂದ ಈ ವ್ಯಕ್ತಿ ಕಿರುಕುಳ ನೀಡುತ್ತಿದ್ದಾರೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡಿರುವೆ. ಈ ವಿಡಿಯೋದಲ್ಲಿ ನೀವು ನೋಡುವ ಪ್ರಕಾರ ಆತ ನನ್ನನ್ನು ಹಣ ಕೇಳುತ್ತಾರೆ ನನ್ನ ಬಳಿ ಕ್ಯಾಶ್‌ ಇಲ್ಲ ಎಂದು ಹೇಳಿ ಮುಂದೆ ಸಾಗುವೆ. ಏಕೆಂದರೆ ನನ್ನ ಬಳಿ ಕಾರ್ಡ್‌ ಮಾತ್ರ ಇತ್ತು. ನನ್ನ ಜೊತೆಗಿದ್ದ ಮಹಿಳೆ ಅಕೆ ಪರ್ಸ್‌ನಿಂದ ಹಣ ತೆಗೆದುಕೊಂಡು ಆತನಿಗೆ ಕೊಟ್ಟರು. ಇಷ್ಟು ಹಣ ಸಾಲುವುದಿಲ್ಲ ಎಂದು ಆತ ಅದನ್ನು ಆಕೆ ಮೇಲೆ ಎಸೆದ. ಕೆಟ್ಟ ರೀತಿಯಲ್ಲಿ ವರ್ತಿಸಲು ಆರಂಭಿಸಿದ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಿರುವ ಪ್ರಕಾರ ಆತ ಕೆಲವು ನಿಮಿಷ ನಮ್ಮನ್ನು ಫಾಲೋ ಮಾಡುತ್ತಾರೆ ಹಾಗೂ ಧಾಳಿಮಾಡುವ ಉದ್ದೇಶ ಹೊಂದಿದ್ದಾರೆ' ಎಂದು ಪ್ರೀತಿ ಹೇಳದ್ದಾರೆ.

'ವಿಡಿಯೋ ಮತ್ತು ಫೋಟೋಗ್ರಾಫರ್‌ಗಳು ಈ ಘಟನೆಯಲ್ಲಿ ತಮಾಷೆಯಾಗಿ ಸ್ವೀಕರಿಸಿದ್ದಾರೆ. ಈ ಘಟನೆಯಿಂದ ನಮಗೆ ಸಹಾಯ ಮಾಡುವ ಬದಲು ವಿಡಿಯೋ ಮಾಡಿಕೊಂಡು ತಮಾಷೆ ತೆಗೆದುಕೊಳ್ಳುತ್ತಿದ್ದರು. ಇಲ್ಲಿ ಯಾರಿಗೆ ಬೇಕಿದ್ದರೂ ಪೆಟ್ಟು ಆಗಬಹುದಿತ್ತ ನಮ್ಮನ್ನು ಫಾಲೋ ಮಾಡದಂತೆ ನಮ್ಮ ಜೊತೆ ಆ ರೀತಿ ವರ್ತಿಸಬಾರದು ಎಂದು ಅಲ್ಲಿದ ಯಾರೂ ಹೇಳಿಲ್ಲ. ಸಣ್ಣ ಹೆಚ್ಚು ಕಡಿಮೆ ಆಗಿದ್ದರೂ ನನ್ನ ಮೇಲೆ ದೂರುತಿದ್ದರು. ಸೆಲೆಬ್ರಿಟಿಗ ಆಗಿರುವುದಕ್ಕೆ ನೂರಾರು ರೀತಿಯಲ್ಲಿ ಪ್ರಶ್ನೆ ಕೇಳುತ್ತಿದ್ದರು. ಇಡೀ ಬಾಲಿವುಡ್ ಚಿತ್ರರಂಗವನ್ನು ದೂರುತಿದ್ದರು ಅಲ್ಲದೆ ನಾನ್ ಸ್ಟಾಪ್ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದರು' ಎಂದಿದ್ದಾರೆ ಪ್ರೀತಿ.

Preity Zinta: ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ಅಮ್ಮನಾದ ಬಾಲಿವುಡ್ ನಟಿ

'ಇಷ್ಟಾದರೂ ಜನರು ನಾವು ಕೂಡ ಮನುಷ್ಯರು ಅನ್ನೋದನ್ನು ಮರೆತು ವರ್ತಿಸುತ್ತಾರೆ ಇದರಿಂದ ತುಂಬಾ ಬೇಸರವಾಗುತ್ತದೆ. ಈ ವಿಚಾರವಾಗಿ ಆ ವ್ಯಕ್ತಿ ಅಥವಾ ಯಾರೂ ಕ್ಷಮೆ ಕೇಳುವುದು ಬೇಡ ಆದರೆ ಕಷ್ಟ ಪಟ್ಟು ದುಡಿದು ಹೆಸರು ಮಾಡಿರುವ ವ್ಯಕ್ತಿ ನಾನು ನನಗೆ ಯಾಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಇತರರಂತೆ ಈ ದೇಶದಲ್ಲಿ ಬದುಕಲು ನನಗೂ ಸ್ವಾತಂತ್ರ್ಯವಿದೆ. ನಮ್ಮ ಜಡ್ಜ ಮಾಡುವ ಮೊದಲು ಯೋಚನೆ ಮಾಡಿ ಆನಂತರ ದೊಡ್ಡವರು ಚಿಕ್ಕವರು ಎಂದು ಲೆಕ್ಕಚಾರ ಮಾಡಿ. ಸುಮ್ಮನೆ ಎಲ್ಲಾದಕ್ಕೂ ಸೆಲೆಬ್ರಿಟಿಳು ಕಾರಣ ಅನ್ನೋ ರೀತಿ ವರ್ತಿಸಬೇಡಿ. ಪ್ರತಿ ಸ್ಟೋರಿಗೂ ಎರಡು ಸೈಡ್‌ಗಳಿರುತ್ತದೆ.  ನನ್ನ ಮಕ್ಕಳು ಈ ಲಿಸ್ಟ್‌ಗೆ ಸೇರಿಕೊಳ್ಳುವುದಿಲ್ಲ ಯಾಕೆ ಇದರಿಂದ ಅವರ ಜೀವನ ಹಾಳು ಮಾಡುತ್ತೀರಾ? ಇಷ್ಟು ಚಿಕ್ಕ ವಯಸ್ಸಿಗೆ ಕಿರುಕುಳ ನೀಡುತ್ತೀರಾ?  ಪುಟ್ಟ ಮಕ್ಕಳನ್ನು ಪುಟ್ಟ ಮಕ್ಕಳ ರೀತಿ ನೋಡಿದರೆ ಖುಷಿಯಾಗಿ ಬೆಳೆಯುತ್ತಾರೆ ದಯವಿಟ್ಟು ಫೋಟೋ ವಿಡಿಯೋ ಎಂದು ಬಂದು ಅವರ ಜೀವನ ಹಾಳು ಮಾಡಬೇಡಿ. ಜನರಿಗೆ ಸಹಾಯ ಸಗತ್ಯವಿದ್ದರೆ ದಯವಿಟ್ಟು ಅವರ ಪರ ನಿಂತುಕೊಳ್ಳಿ ವಿಡಿಯೋ ಮಾಡಿಕೊಂಡು ತಮಾಷೆ ತೆಗೆದಿಕೊಳ್ಳಬೇಡಿ' ಎಂದು ಪ್ರೀತಿ ಮನವಿ ಮಾಡಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!