ಸಿನಿಮಾಕ್ಕೆ ಬಂದ ಆರಂಭದ ದಿನಗಳಲ್ಲಿ ಬಿಕಿನಿ ಧರಿಸಲು ಫೋಟೋಗ್ರಾಫರ್ ಒಬ್ಬರು ಕೊಟ್ಟ ಹಿಂಸೆಯ ಕುರಿತು ನಟಿ ಮನಿಷಾ ಕೊಯಿರಾಲಾ ಹೇಳಿದ್ದೇನು?
ಇದಾಗಲೇ ಚಿತ್ರರಂಗದ ಹಲವಾರು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾಹಿತಿ ನೀಡಿದ್ದಾರೆ. ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟರು, ನಿರ್ದೇಶಕರು, ನಿರ್ಮಾಪಕರು, ಸಹ ನಟರು... ಹೀಗೆ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಇಚ್ಛೆಪಟ್ಟವರ ದೊಡ್ಡ ಪಟ್ಟಿಯನ್ನೇ ಹಲವು ನಟಿಯರು ತೆರೆದಿಟ್ಟಿದ್ದಾರೆ. ಇದೀಗ ಬಾಲಿವುಡ್ ಹಿರಿಯ ನಟಿ, ಮನಿಷಾ ಕೊಯಿರಾಲಾ ತಮಗೆ ಫೋಟೋಗ್ರಾಫರ್ ಒಬ್ಬರಿಂದ ಆಗಿರುವ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಅವರು ತಮ್ಮ ಐಕಾನಿಕ್ ಚಿತ್ರಗಳ ಮೂಲಕ ಪ್ರೇಕ್ಷಕರ ದೊಡ್ಡ ವರ್ಗವನ್ನು ಆಕರ್ಷಿಸಿದವರು, ಅವರ ಸೌಂದರ್ಯಕ್ಕೆ ಮಾರು ಹೋದವರು, ಈಕೆಯನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದುಕೊಂಡವರು, ಒಮ್ಮೆಯಾದರೂ ಈಕೆಯನ್ನು ಬದುಕಬೇಕು ಎಂದವರು, ನನ್ನ ಬಾಳಸಂಗಾತಿಯಾಗಿ ಈಕೆಯೇ ಬರಬಾರದೇ ಎಂದುಕೊಂಡವರಿಗೆ ಲೆಕ್ಕವೇ ಇಲ್ಲ. ಆದರೆ ಮನಿಷಾ ಕೊಯಿರಾಲಾ ಅವರ ಬದುಕು ದುರಂತಗಳ ಸರಮಾಲೆ. ಬಹುತೇಕ ಎಲ್ಲಾ ಚಿತ್ರ ತಾರೆಯರ ಬಾಳೂ ಇದೇ ರೀತಿ ಇರುತ್ತದೆ. ಆದರೆ ಬಣ್ಣದ ಲೋಕದ ಈ ಬಣ್ಣದ ಬದುಕು ಮೇಕಪ್ ಕಳಚಿದ ಮೇಲೆ ಮರೆಯಾಗುತ್ತದೆ. ಒಂದಷ್ಟು ವರ್ಷ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ ಎಂದ ತಕ್ಷಣ, ಅವರನ್ನು ಹಾಡಿ ಹೊಗಳಿದವರೇ ಕಾಲ ಕಸಕ್ಕಿಂತಲೂ ನೋಡಿರುವ ಎಷ್ಟೋ ಉದಾಹರಣೆಗಳಿವೆ. ಹಲವು ಚಿತ್ರ ತಾರೆಯರಂತೆಯೇ ಮನಿಷಾ ಅವರ ಬಾಳಲ್ಲೂ 12ಕ್ಕೂ ಅಧಿಕ ಮಂದಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈಗ 53ನೇ ವಯಸ್ಸಿನಲ್ಲಿ ಎಲ್ಲರೂ ದೂರವಾಗಿ ಒಂಟಿಯಾಗಿ ಬಾಳುತ್ತಿದ್ದಾರೆ ನಟಿ.
ಇದೀಗ ನಟಿ, ತಮಗೆ ಛಾಯಾಚಿತ್ರಕಾರರೊಬ್ಬರಿಂದ ಆಗಿರುವ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನಾನು ಆಗಷ್ಟೇ ಎಂಟ್ರಿ ಕೊಟ್ಟಿದ್ದೆ. ಇನ್ನೂ ಚಿತ್ರರಂಗದಲ್ಲಿ ನೆಲೆಯೂರುವ ತವಕದಲ್ಲಿದ್ದೆ. ಆರಂಭದಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಬೇಕಿತ್ತು. ಆಗ ಖ್ಯಾತ ಫೋಟೋಗ್ರಾಫರ್ ಒಬ್ಬರು ಬಂದರು. ಅಮ್ಮನ ಜೊತೆ ನಾನು ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗಿದ್ದೆ. ಆತ ನನ್ನನ್ನು ನೋಡಿ ನೀವೇ ಮುಂದಿನ ಸ್ಟಾರ್ ಎಂದು ಉಬ್ಬಿಸಿದರು. ಬಳಿಕ ಬಿಕಿನಿ ಧರಿಸಿ ಬರುವಂತೆ ಹೇಳಿದರು. ಹೀಗೆ ಬಿಕಿನಿ ಧರಿಸುವುದು ಕೇಳಿ ನನಗೆ ಶಾಕ್ ಆಯಿತು, ಸಾಧ್ಯವೇ ಇಲ್ಲ ಎಂದೆ. ನಾನು ಒಪ್ಪದಾಗ ಬಹಳ ಒತ್ತಾಯಿಸಿದರು. ಆದರೆ ನಾನು ಸುತರಾಂ ಒಪ್ಪಲಿಲ್ಲ ಎಂದು ಅಂದು ನಡೆದ ಘಟನೆ ಮೆಲುಕು ಹಾಕಿದ್ದಾರೆ ನಟಿ.
ನಾಯಕ ತೊಡೆ ಮೇಲೆ ಕೈಯಿಟ್ಟಾಗ ಪವಿತ್ರಾ ಗೌಡ ರಿಯಾಕ್ಷನ್ ಹೇಗಿತ್ತು? ಘಟನೆ ವಿವರಿಸಿದ ನಿರ್ದೇಶಕಿ ಚಂದ್ರಕಲಾ
ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಎಂದೆ. ಆದರೆ ಆತ ಹೇಳಿದ ಮಾತು ನನಗೆ ಇನ್ನೂ ನೆನಪಿದೆ. ಮಣ್ಣು ಹದವಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ ಮೇಡಂ.. ಸಿನಿಮಾದಲ್ಲಿ ಬೆಳೆಯಬೇಕು ಎಂದ್ರೆ ಎಲ್ಲದ್ದಕ್ಕೂ ಸಿದ್ಧ ಇರ್ಬೇಕು, ಬಿಕಿನಿ ಹಾಕಬೇಕು, ಹಾಕಲ್ಲ ಅಂದ್ರೆ ನಿಮ್ ಹಣೆಬರಹ... ಎಂದಿದ್ದರು. ನನಗೆ ಶಾಕ್ ಆಗಿ ಅದಕ್ಕೆ ನಾನು ಒಪ್ಪಿರಲಿಲ್ಲ ಎಂದಿದ್ದಾರೆ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ಫೋಟೊಗ್ರಫರ್ ನನ್ನ ಫೋಟೋ ಕ್ಲಿಕ್ಕಿಸಲು ನನ್ನ ಬಳಿ ಬಂದಿದ್ದರು. ಹಿಂದಿನದ್ದೆಲ್ಲಾ ನನಗೆ ನೆನಪಾದರೂ ನಾನು ಅವಮಾನ ಮಾಡದೇ ಕಳುಹಿಸಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ಇಂದಿಗೂ ಮದುವೆಗಾಗಿ ಹುಡುಕನ ಹುಡುಕಾಟದಲ್ಲಿದ್ದಾರೆ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ, “ಕೆಲವರು ಅದೃಷ್ಟವಂತರು. ಆದರೆ ಹಲವರಿಗೆ ಈ ಅದೃಷ್ಟ ಇರುವುದಿಲ್ಲ. ನಾನು ನನ್ನ ಜೀವನದಲ್ಲಿ ಕಹಿ- ಸಿಹಿಗಳ ಅನುಭವಗಳ ದೊಡ್ಡ ಸಮ್ಮಿಲನವನ್ನು ಹೊಂದಿದ್ದೇನೆ. ಒಂದು ರೀತಿಯಲ್ಲಿ ಸಿಹಿಯೇ ನನಗೆ ಸಿಕ್ಕಿದೆ. ನಾನು ಅದೃಷ್ಟಶಾಲಿ. ಜೀವನದಲ್ಲಿ ಎಷ್ಟೇ ಕಹಿ ಬಂದರೂ, ನನ್ನ ಜೀವನದ ಬಗ್ಗೆ ನನ್ನ ದೃಷ್ಟಿಕೋನವು ಕಹಿಯಾಗಿಲ್ಲ ಎಂದಿದ್ದರು. ಮದುವೆಯಾಗಿ ಡಿವೋರ್ಸ್ ಆಯ್ತು. ಬೆನ್ನಲ್ಲೇ ಕ್ಯಾನ್ಸರ್ ಅಂಟಿಕೊಂಡಿತು. ನಂತರ ಅದನ್ನು ಜಯಿಸಿ ಬಂದರು ನಟಿ ಮನಿಷಾ. ಜೀವನದೊಂದಿಗೆ ಹೋರಾಡುವ ಗುಣ ಕ್ಯಾನ್ಸರ್ ಕಲಿಸಿಕೊಟ್ಟಿದೆ ಎಂದು ಸಂದರ್ಶನದಲ್ಲಿ ಅವರು ಹೇಳಿದ್ದರು. ನಾನು ಗಾಜಿನ ಖಾಲಿಯಾದ ಅರ್ಧ ಭಾಗ ನೋಡುವುದಿಲ್ಲ. ತುಂಬಿರುವ ಅರ್ಧಭಾಗ ನೋಡುತ್ತೇನೆ. ಜೀವನ ಹಲವಾರು ರೀತಿಯ ಪೆಟ್ಟು ಕೊಟ್ಟಿವೆ. ಅದರಿಂದ ಸಾಕಷ್ಟು ಕಲಿತಿದ್ದೇನೆ. ಇಂಥ ಆಘಾತಗಳಿಂದಲೇ ಅನುಭವಗಳ ಶ್ರೀಮಂತಿಕೆಯನ್ನು ಪಡೆದುಕೊಂಡಿದ್ದೇನೆ ಎಂದಿದ್ದರು.
ಜಹೀರ್ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್? ಒಂದು ಫೋಟೋ, ಹತ್ತಾರು ಪ್ರಶ್ನೆ!