ಗರ್ಭಿಣಿ ರಿಚಾ ಚಡ್ಡಾಗೆ ಕಾಡ್ತಿದೆ ಈ ಸಮಸ್ಯೆ, ಟ್ರೀಟ್ ಮಾಡದೇ ಕೈ ಎತ್ತಿದ್ರಾ ಡಾಕ್ಟರ್?

By Roopa HegdeFirst Published Jul 10, 2024, 4:02 PM IST
Highlights

ಬಾಲಿವುಡ್ ನಟಿ ರಿಚಾ ಚಡ್ಡಾ ಗರ್ಭಿಣಿಯಾಗಿದ್ದು, ಅನೇಕ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಳ್ತಾರೆ. ಈ ಬಾರಿ ತಮ್ಮ ಸಮಸ್ಯೆಯೊಂದನ್ನು ಅವರು ಎಲ್ಲರ ಮುಂದಿಟ್ಟಿದ್ದಾರೆ. ಗರ್ಭಾವಸ್ಥೆಯಲ್ಲಿ ಇದು ಕಾಮನ್ ಆದ್ರೂ ಅದರಿಂದ ಹೊರಗೆ ಬರೋದು ಹೇಗೆ ಗೊತ್ತಾ?
 

ಬಾಲಿವುಡ್ ನಟಿ ರಿಚಾ ಚಡ್ಡಾ ತುಂಬು ಗರ್ಭಿಣಿ. ಶೀಘ್ರವೇ ಅವರ ಮನೆಗೆ ಮಗುವೊಂದು ಬರಲಿದೆ. ಒಂಭತ್ತನೇ ತಿಂಗಳಿನಲ್ಲಿ ರಿಚಾ ಚಡ್ಡಾ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈ ವಿಷ್ಯವನ್ನು ರಿಚಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುಂದರ ಚೂಡಿದಾರ್ ಧರಿಸಿ ಒಂದಿಷ್ಟು ಫೋಟೋ ಹಂಚಿಕೊಂಡಿರುವ ರಿಚಾ ಚಡ್ಡಾ (Richa Chadha) , ಮೂರನೇ ತ್ರೈಮಾಸಿಕವು ಅಸ್ವಸ್ಥತೆ, ನಿದ್ರಾಹೀನತೆ (Insomnia) , ಆಸಿಡ್ ಟ್ರಿಪ್ಪಿ ಕನಸುಗಳು, ಬೆನ್ನುನೋವು, ಮೈಗ್ರೇನ್ ಮತ್ತು ಅಳುವ ಮನಸ್ಥಿತಿಗಳೊಂದಿಗೆ ಬರುತ್ತದೆ ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯರಿಗೆ ಮಾತ್ರವಲ್ಲ ಗರ್ಭಾವಸ್ಥೆ (Pregnancy) ಯಲ್ಲಿ ಮಾನಸಿಕ ಸಮಸ್ಯೆ, ಒತ್ತಡ ಸೆಲೆಬ್ರಿಟಿಗಳನ್ನು ಕಾಡುತ್ತದೆ. ರಿಚಾ ಚಡ್ಡಾ ಕೂಡ ಈ ಸ್ಥಿತಿಯನ್ನು ಎದುರಿಸುತ್ತಿದ್ದು, ಇನ್ಸ್ಟಾಗ್ರಾಮ್ ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯ ಎಂದ ಅಭಿಮಾನಿಗಳು, ನೀವು ಇಷ್ಟೊಂದು ಸುಂದರವಾಗಿ ಕಾಣಲು ಕಾರಣವೇನು ಎಂದಿದ್ದಾರೆ. ಸದಾ ನೇರ ಉತ್ತರ ನೀಡುವ ರಿಚಾ ಚಡ್ಡಾ ಇದಕ್ಕೂ ಉತ್ತರ ನೀಡಿದ್ದಾರೆ. ನನ್ನ ಬಳಿ ಸ್ಪೆಷಲಿಸ್ಟ್ ಇದ್ದು, ಅವರ ಸಲಹೆ ಮೇರೆಗೆ ಮೇಕಪ್ ಮಾಡಿಕೊಳ್ತೇನೆ. ಬೆಳಿಗ್ಗೆ ಎದ್ದಾಗ ನನ್ನ ಮುಖ ಹೀಗಿರೋದಿಲ್ಲ. ಸೋ ಅದ್ರ ಬಗ್ಗೆ ಟೆನ್ಷನ್ ಬೇಡ ಎಂದಿದ್ದಾರೆ. 

Latest Videos

ಹೆಚ್ಚು ಸಮಯ ಸೆಕ್ಸ್ ಎಂಜಾಯ್ ಮಾಡೋದು ಹೇಗೆಂದು ಗೂಗಲ್ ಮಾಡೋರಿಗೆ ನ್ಯಾಚುರಲ್ ಟಿಪ್ಸ್!

ಒಂಬತ್ತು ತಿಂಗಳ ಗರ್ಭಾವಸ್ಥೆ ಎಲ್ಲ ಮಹಿಳೆಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಅವರ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಇದರಿಂದಾಗಿ ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಮೂಡ್ ಸ್ವಿಂಗ್‌ಗಳಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ. ಚಿಕ್ಕಪುಟ್ಟ ವಿಷ್ಯಕ್ಕೂ ಕಿರಿಕಿರಿ, ಅಸಮಾಧಾನ ಸಾಮಾನ್ಯ. ಸಣ್ಣ ವಿಷ್ಯವನ್ನು ದೊಡ್ಡದು ಮಾಡ್ಕೊಂಡು ಕೋಪ, ಅಳುವಿನಿಂದ ಮಹಿಳೆಯರು ಬಳಲುತ್ತಾರೆ. 

ಗರ್ಭಾವಸ್ಥೆಯಲ್ಲಿ ಕಾಡುವ ಮೂಡ್ ಸ್ವಿಂಗ್ ನಿಂದ ಪರಿಹಾರ ಹೇಗೆ? : 

ಸರಿಯಾದ ಆಹಾರ (Proper Food) : ಗರ್ಭಾವಸ್ಥೆಯಲ್ಲಿ ಮನಸ್ಥಿತಿ ಹಾಳಾಗದಂತೆ ನೋಡಿಕೊಳ್ಳಲು ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವನೆ ಮಾಡಬೇಕು. ಹಣ್ಣು, ತರಕಾರಿ, ಧಾನ್ಯ, ಪ್ರೋಟೀಸ್ ಸೇವನೆಗೆ ಮಹತ್ವ ನೀಡಬೇಕು. ಸಕ್ಕರೆ ಹಾಗೂ ಕೆಫೀಸ್ ಆಹಾರ ಮೂಡನ್ನು ಮತ್ತಷ್ಟು ಹದಗೆಡಿಸುತ್ತದೆ. ಸಕ್ಕರೆ ಮಟ್ಟ ದೇಹದಲ್ಲಿ ಸರಿಯಾಗಿರಬೇಕೆಂದ್ರೆ ಆಗಾಗ ಸ್ವಲ್ಪ ಆಹಾರ ಸೇವನೆ ಮಾಡ್ತಿರಿ. 

ನಿಯಮಿತ ವ್ಯಾಯಾಮ (Regular Exercise) : ವ್ಯಾಯಾಮ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಬಹಳ ಮುಖ್ಯ. ಗರ್ಭಿಣಿಯರಿಗೆ ಲಘು ವ್ಯಾಯಾಮ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಇದು ಒತ್ತಡ ಕಡಿಮೆ ಮಾಡಿ, ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸೂಕ್ತ ನಿದ್ರೆ (Sufficient Sleep): ಗರ್ಭಾವಸ್ಥೆಯಲ್ಲಿ ದೇಹ ಆಯಾಸಗೊಳ್ಳುವ ಕಾರಣ ಅದಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ಸಾಧ್ಯವಾದಷ್ಟು ನಿದ್ರೆ ಮಾಡುವುದು ಮುಖ್ಯ. ರಾತ್ರಿ ಕನಿಷ್ಠ 8 ಗಂಟೆ ನಿದ್ರೆ ಮಾಡ್ಬೇಕು. ಹಗಲಿನಲ್ಲೂ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ. 

ಧ್ಯಾನ – ಪ್ರಾಣಾಯಾಮ : ಮನಸ್ಸಿನ ಸಮಸ್ಯೆಗೆ ಧ್ಯಾನ ಮದ್ದು. ನೀವು ಗರ್ಭಾವಸ್ಥೆಯಲ್ಲಿ ಧ್ಯಾನ, ಪ್ರಾಣಾಯಾಮವನ್ನು ಮಾಡಬಹುದು. ಇದು ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸಿ, ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚು ಒತ್ತಡ ತೆಗೆದುಕೊಂಡು ಕೆಲಸ ಮಾಡುವ ಬದಲು ಸಂತೋಷದ ಕ್ಷಣಗಳನ್ನು ಆನಂದಿಸುವುದು ಮುಖ್ಯ. ಇದ್ರಿಂದ ನಿಮ್ಮ ಮಾನಸಿಕ ಸ್ಥಿತಿ ಸುಧಾರಿಸುವುದಲ್ಲದೆ ಹೊಟ್ಟೆಯಲ್ಲಿರುವ ಮಗು ಕೂಡ ಆರೋಗ್ಯವಾಗಿರುತ್ತದೆ.

ವಿಪರೀತ ಹೊಟ್ಟೆ ನೋವಿಗೆ ಕ್ಯಾನ್ಸರ್ ಟೆಸ್ಟ್‌ ಮಾಡಿಸಿದ ನಟಿ ಶಾನ್ವಿ; ಆ 6 ತಿಂಗಳಲ್ಲಿ ಆಗಿದ್ದೇನು?

ನಿಮಗಾಗಿ ಸಮಯ ಮೀಸಲಿಡಿ (Time for Yourself) : ಸಾಮಾನ್ಯ ದಿನಗಳಲ್ಲಿರುವಂತೆ ಈ ದಿನಗಳಲ್ಲೂ ಇರಬೇಡಿ. ಗರ್ಭಾವಸ್ಥೆಯಲ್ಲಿ ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮಿಷ್ಟದ ಕೆಲಸ ಮಾಡಬಹುದು. ಪುಸ್ತಕ ಓದಿ, ಸಂಗೀತ ಕೇಳಿ ಇಲ್ಲವೆ ನಿಮ್ಮಿಷ್ಟದ ಹವ್ಯಾಸದಲ್ಲಿ ಸಮಯ ಕಳೆದರೆ ನಿಮಗೆ ಯಾವುದೇ ಕಿರಿಕಿರಿ ಕಾಡೋದಿಲ್ಲ. 

click me!