ಪತ್ನಿ ಸೌಂದರ್ಯ ನೋಡಿ ಮೂಡಿಗೆ ಬಂದ ಇಕ್ಬಾಲ್, ಶರ್ಟ್ ಬಿಚ್ಚಿ ಮುತ್ತಿಟ್ಟ ಸೋನಾಕ್ಷಿ ಸಿನ್ಹಾ ಪತಿ

By Roopa Hegde  |  First Published Jul 10, 2024, 3:40 PM IST

ಸೋನಾಕ್ಷಿ ಸಿನ್ಹಾ ಹಾಗೂ ಇಕ್ಬಾಲ್ ಸರಳವಾಗಿ ಮದುವೆಯಾದ್ರೂ ಅದ್ಧೂರಿ ಆರತಕ್ಷತೆ ಮಾಡ್ಕೊಂಡು ಹನಿಮೂನ್ ಗೆ ಹಾರಿದ್ದಾರೆ. ಅಲ್ಲಿನ ಕೆಲ ರೋಮ್ಯಾಂಟಿಕ್ ಫೋಟೋಗಳನ್ನು ಸೋನಾಕ್ಷಿ ಹಂಚಿಕೊಂಡಿದ್ದಾರೆ. ಈಗ ಮದುವೆ ಸಮಯದ, ಇಕ್ಬಾಲ್ ಶರ್ಟ್ ಲೆಸ್ ಫೋಟೋ ವೈರಲ್ ಆಗಿದೆ.
 


ಬಾಲಿವುಡ್ ನ ನವ ವಿವಾಹಿತ ಜೋಡಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮೇಲೆ ಸದ್ಯ ಅಭಿಮಾನಿಗಳ ಕಣ್ಣಿದೆ. ಅವರ ಹನಿಮೂನ್ ಬಗ್ಗೆ ಕುತೂಹಲ ಹೊಂದಿದ್ದ ಅಭಿಮಾನಿಗಳಿಗೆ ಸೋನಾಕ್ಷಿ ಕೆಲವೊಂದು ಫೋಟೋ ಝಲಕ್ ನೀಡಿ ಮನತಣಿಸುವ ಪ್ರಯತ್ನ ಮಾಡ್ತಿದ್ದಾರೆ. ಸೋನಾಕ್ಷಿ ಸಿನ್ಹಾ ತಮ್ಮ ಪತಿ ಇಕ್ಬಾಲ್ ಜೊತೆಗಿರುವ ಅನೇಕ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿದ್ದಾರೆ. ಮದುವೆ ವಿಡಿಯೋ ಹಂಚಿಕೊಂಡ ಅವರು ನಂತ್ರ ಹನಿಮೂನ್ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ಒಂದು ಫೋಟೋ ಎಲ್ಲರ ಗಮನ ಸೆಳೆದಿದೆ. ಶರ್ಟ್ ಬಿಚ್ಚಿ, ಬಾಡಿ ತೋರಿಸಿರುವ ಇಕ್ಬಾಲ್, ಮುದ್ದಿನ ಹೆಂಡತಿಗೆ ಮುತ್ತಿಡುತ್ತಿದ್ದಾರೆ. 

Aslisona ಹೆಸರಿನ ಇನ್ಸ್ಟಾ (Insta) ಖಾತೆಯಲ್ಲಿ ಸೋನಾಕ್ಷಿ ಸಿನ್ಹಾ (Sonakshi Sinha)  ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಇಕ್ಬಾಲ್ (Iqbal) ಶರ್ಟ್ ಲೆಸ್ ಆಗಿರೋದು, ರೋಮ್ಯಾಂಟಿಕ್ ಆಗಿ ಪತ್ನಿಗೆ ಮುತ್ತಿಡುತ್ತಿರುವ ಫೋಟೋ ಎಲ್ಲರನ್ನು ಆಕರ್ಷಿಸಿದೆ. ಸೀರೆಯುಟ್ಟು, ಮುಡಿಕಟ್ಟಿ, ಹೂ ಮುಡಿದಿರುವ ಪತ್ನಿ ಕೆನ್ನೆಗೆ ಇಕ್ಬಾಲ್ ಕಿಸ್ ಮಾಡ್ತಿರುವ ಫೋಟೋ ಇದಾಗಿದೆ.

Tap to resize

Latest Videos

ಲವ್ ಲೀ ಗೆದ್ದರೂ ಬೇಸರಗೊಂಡ ಚಿಟ್ಟೆ ವಸಿಷ್ಠ ಸಿಂಹ ! ಸಿನಿಮಾವನ್ನ ಕೆಟ್ಟ ಟೈಂನಲ್ಲಿ ಬಿಡುಗಡೆ ಮಾಡಿದ್ವಿ ಎಂದ ಡೈರೆಕ್ಟರ್!

ಸೋನಾಕ್ಷಿ ಸಿನ್ಹಾ, ಇನ್ಸ್ಟಾಗೆ ಹಾಕಿರುವ ಪ್ರತಿಯೊಂದು ಫೋಟೋಕ್ಕೂ ಶೀರ್ಷಿಕೆ ನೀಡಿದ್ದಾರೆ. ಮದುವೆಯು ಅಸ್ತವ್ಯಸ್ತವಾಗಿರಬಹುದು… ಆದರೆ ನೀವು ಆ ಕ್ಷಣಗಳನ್ನು ಕದಿಯಬೇಕು, ಅದು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದಿರುವ ಸೋನಾಕ್ಷಿ ಸಿನ್ಹಾ, ನಾನು ಯಾವ ಫೋಟೋವನ್ನು ವಾಲ್ ಪೇಪರ್ ಮಾಡಿಕೊಂಡಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಇಕ್ಬಾಲ್ ಎರಡು ಫೋಟೋದಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಫೋಸ್ ನೀಡಿದ್ದಾರೆ. ಮುಂದಿನ ಎರಡು ಫೋಟೋಗಳಲ್ಲಿ ಸೋನಾಕ್ಷಿ ಸಿನ್ಹಾ ಸಿದ್ಧವಾಗ್ತಿದ್ದು, ಇಕ್ಬಾಲ್ ಅದನ್ನು ವೀಕ್ಷಿಸುತ್ತಿದ್ದಾರೆ. ಮುಂದಿನ ಫೋಟೋದಲ್ಲಿ ಇಬ್ಬರೂ ಮೊಬೈಲ್ ಮೂಲಕ ತಮಗೆ ಬಂದ ಶುಭಾಶಯಗಳ ರೆಕಾರ್ಡ್ ಕೇಳ್ತಿದ್ದಾರೆ. 

ಆರನೇ ಫೋಟೋದಲ್ಲಿ ಸೋನಾಕ್ಷಿ ಸಿನ್ಹಾ, ತನ್ನ ವರನಿಗಿಂತ ಮೊದಲು ತಯಾರಾದ ವಧುವಿನ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲ? ಸರಿ, ಇಲ್ಲಿ ನೋಡಿ ಎಂದು ಶೀರ್ಷಿಕೆ ಹಾಕಿದ್ದಾರೆ. ಇದೇ ಫೋಟೋದಲ್ಲಿ ಇಕ್ಬಾಲ್, ಶರ್ಟ್ ಬಿಚ್ಚಿ ಸೋನಾಕ್ಷಿಗೆ ಮುತ್ತಿಡುತ್ತಿದ್ದಾರೆ. ಮುಂದಿನ ಫೋಟೋದಲ್ಲಿ ಅಲಂಕಾರಗೊಂಡ ತನ್ನನ್ನು ನೋಡ್ತಾ ಸೋನಾಕ್ಷಿ ಭಾವುಕರಾಗಿರೋದನ್ನು ನೋಡ್ಬಹುದು. ಸೋನಾಕ್ಷಿ 10 ಫೋಟೋಗಳನ್ನು ಹಂಚಿಕೊಂಡಿದ್ದು,  ಎಲ್ಲ ಫೋಟೋಗಳಿಗೆ ಸಾಕಷ್ಟು ಕಮೆಂಟ್ ಬಂದಿದೆ.

ಸೋನಾಕ್ಷಿ ಪೋಸ್ಟಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. ಅವರಿಬ್ಬರ ಈ ರೊಮ್ಯಾಂಟಿಕ್ ಫೋಟೋವನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ. ಏನು ವಿಷಯ, ಬಾವ ತುಂಬಾ ರೊಮ್ಯಾಂಟಿಕ್ ಎಂದು ಹೇಳಿದರೆ, ಇನ್ನೊಬ್ಬರು ಮಾಶಾ ಅಲ್ಲಾ, ತುಂಬಾ ಸುಂದರವಾದ ಜೋಡಿ ಎಂದು ಹೇಳಿದ್ದಾರೆ.

 ನಿಜವಾದ ಪ್ರೀತಿಗೆ ಧರ್ಮ, ಜಾತಿ ಇರುವುದಿಲ್ಲ. ಪ್ರೀತಿ ಎಂದರೆ ಭಾವನೆಗಳು ಮತ್ತು ಭಾವನೆಗಳಂತಹ ಆಕರ್ಷಣೆ. ನಿಮ್ಮ ಭಾವನೆಗಳು, ಭಾವನೆಗಳು ಮತ್ತು ಆಲೋಚನೆಗಳು ಯಾರೊಂದಿಗಾದರೂ ಹೊಂದಿಕೆಯಾಗುತ್ತಿದ್ದರೆ, ನೀವು ಆ ವ್ಯಕ್ತಿಯಿಂದ ಆಕರ್ಷಿತರಾಗುತ್ತೀರಿ. ಅದು ಪ್ರೀತಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಅಭಿಮಾನಿಗಳ ಜೊತೆಗೆ ತಾರೆಯರು ಕೂಡ ಉದ್ದನೆಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. 

22ನೇ ವಯಸ್ಸಿಗೆ ಮದ್ವೆ ಮಾಡಿಬಿಟ್ಟರು, ಸುಮಾರು ಒಡವೆ ಕಳೆದುಬಿಟ್ಟಿದ್ದೀನಿ: ನಟ ಕೋಮಲ್

ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಜೂನ್ 23 ರಂದು ವಿವಾಹವಾಗಿದ್ದಾರೆ. ಅದೇ ದಿನ ಸಂಜೆ ಅದ್ಧೂರಿ ಆರತಕ್ಷತೆ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಸೋನಾಕ್ಷಿ ಸಿನ್ಹಾ ಅವರು ಕೆಂಪು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣ್ತಿದ್ದರು. ಮದುವೆ ನಂತ್ರ ಆಸ್ಪತ್ರೆಗೆ ಹೋಗಿದ್ದ ಸೋನಾಕ್ಷಿ ಗರ್ಭಿಣಿ ಎನ್ನುವ ಸುದ್ದಿ ಬಂದಿತ್ತು. ಆದ್ರೆ ತಂದೆ ನೋಡಲು ಹೋಗಿದ್ದ ಸೋನಾಕ್ಷಿ ನಂತ್ರ ಹನಿಮೂನ್ ಗೆ ತೆರಳಿದ್ದರು. 

 
 
 
 
 
 
 
 
 
 
 
 
 
 
 

A post shared by Sonakshi Sinha (@aslisona)

click me!