ಹಿಂದೊಮ್ಮೆ ಕುಡಿತದ ಚಟಿ ಅಂಟಿ ದೊಡ್ಡ ಕುಡುಕನಾಗಿದ್ದ ಬಗ್ಗೆ ನಟ ಆಮೀರ್ ಖಾನ್ ಮಾತನಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಟ ಹೇಳಿದ್ದೇನು?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಇದೀಗ ಮೂರನೆಯ ಮದುವೆಗೆ ರೆಡಿಯಾಗಿದ್ದಾರೆ. ಆಕೆಯ ಹೆಸರು ಗೌರಿ. ಅವರನ್ನು ಇದಾಗಲೇ ಆಮೀರ್ ಜನರಿಗೆ ಪರಿಚಯಿಸಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭಕ್ಕೆ ಕಿರಣ್ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
ಇವರು ಈಗ ಮೂರನೆಯ ಮದುವೆಯ ಬಗ್ಗೆ ತಯಾರಿ ನಡೆಸುತ್ತಿದ್ದಂತೆಯೇ, ಹಿಂದಿನ ಮದುವೆಯಿಂದ ಆಗಿರುವ ನೋವಿನ ಕುರಿತು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ತಾವು ತಮ್ಮ ಟಾಕ್ಸಿಕ್ ಸಂಬಂಧದಿಂದ ಕುಡುಕುನಾಗಿದ್ದ ಬಗ್ಗೆ ಮಾತನಾಡಿದ್ದಾರೆ. ಫುಲ್ ಬಾಟಲಿ ಖಾಲಿ ಮಾಡುತ್ತಿದ್ದೆ ಎಂದಿದ್ದಾರೆ. ಕೆಲವರು ಎರಡು ಪೆಗ್ ತೆಗೆದುಕೊಳ್ಳುತ್ತಾರೆ. ಆದರೆ ನಾನು ಹಾಗೆ ಇರಲಿಲ್ಲ. ನಾನು ಕುಡಿಯಲು ಕುಳಿತರೆ ಸಂಪೂರ್ಣ ಬಾಟಲಿಯನ್ನೇ ಕುಡಿದು ಮುಗಿಸುತ್ತಿದ್ದೆ. ಆದರೆ ಕೊನೆಗೆ ಜ್ಞಾನೋದಯ ಆಯಿತು. ಜೀವನದಲ್ಲಿ ಮತ್ತೆ ನಾನು ಎಂದಿಗೂ ಮದ್ಯವನ್ನು ಮುಟ್ಟಬಾರದು ಎಂದು ನಿರ್ಧರಿಸಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಮದ್ಯ ಸೇವಿಸಿಲ್ಲ ಎಂದಿದ್ದಾರೆ.
ಶಾರುಖ್, ಆಮೀರ್ ಖಾನ್ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?
ಆ ಸಮಯದ ಬಗ್ಗೆ ಹೇಳಿರುವ ಆಮೀರ್ ಖಾನ್ ಅದು ತಮ್ಮ ಮೊದಲ ಪತ್ನಿ ರೀನಾ ದತ್ತ ಅವರಿಂದ ದೂರವಾದಾಗ ಈ ನೋವು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಸುಮಾರು 2-3 ವರ್ಷಗಳ ಕಾಲ ನಾನು ಖಿನ್ನತೆಗೆ ಜಾರಿದ್ದೆ. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಸಿನಿಮಾ ಸ್ಕ್ರಿಪ್ಟ್‌ಗಳನ್ನು ಕೂಡ ಕೇಳುತ್ತಿರಲಿಲ್ಲ. ಒಂಟಿಯಾಗಿಯೇ ಇರುತ್ತಿದ್ದೆ. ನಾವಿಬ್ಬರೂ ದೂರ ದೂರ ಆದಮೇಲೆ ಮುಂದೇನು ಮಾಡಬೇಕು ಎಂಬುದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಯಾರ ಜೊತೆ ಬೆರೆಯುತ್ತಿರಲಿಲ್ಲ. ಒಂದೂವರೆ ವರ್ಷಗಳ ಕಾಲ ಕುಡಿತಕ್ಕೆ ದಾಸನಾಗಿಬಿಟ್ಟಿದ್ದೆ. ದೇವದಾಸನಾಗಿಬಿಟ್ಟಿದ್ದೆ. ಆಮೇಲೆ ಜ್ಞಾನೋದಯ ಆಯಿತು ಎಂದಿದ್ದಾರೆ ಆಮೀರ್ ಖಾನ್.
"ಕುಡಿದ ಬಳಿಕ ಅಮಲಿನಲ್ಲಿ ವ್ಯಕ್ತಿಗಳು ಏನು ಬೇಕಾದರೂ ಮಾಡುತ್ತಾರೆ, ಯಾವುದೇ ವಿಷಯ ಮಾತನಾಡಿ ಕೊನೆಗೆ ವಿಷಾದಿಸುತ್ತಾರೆ. ಆದರೆ ಅದರಿಂದ ಎಷ್ಟೋ ಅಮೂಲ್ಯ ಜನರನ್ನು ನೀವು ದೂರ ಮಾಡಿಕೊಂಡಿರುತ್ತಿರಿ. ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರುವುದಿಲ್ಲ ಎಂದಾದ ಮೇಲೆ ಕುಡಿಯುವುದು ಸರಿಯಲ್ಲ ಎಂದು ಅನ್ನಿಸಿತು. ನಿಮ್ಮ ನಿಯಂತ್ರಣದಲ್ಲಿ ನೀವಿರಲು ಸಾಧ್ಯವಾಗದೆ ಇರುವ ಯಾವುದಾದರೂ ಸರಿ ಅದರಿಂದ ದೂರ ಇರಬೇಕು. ಎಲ್ಲವೂ ನಿಮ್ಮ ನಿಯಂತ್ರಣದಲ್ಲಿ ಇರಬೇಕು. ನಾನು ಮದ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ನಾನು ಕುಡಿಯುವುದನ್ನು ಬಿಟ್ಟುಬಿಡುವುದು ಉತ್ತಮ ಎಂದು ನಿರ್ಧರಿಸಿದೆ" ಎಂದು ನಟ ಆಮೀರ್ ಖಾನ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಶಾರುಖ್ಗೂ ಗೌರಿ, ಆಮೀರ್ಗೂ ಗೌರಿ! 'ಗೌರಿ'ಗಳೇ ಖಾನ್ ನಟರಿಗೆ ಯಾಕಿಷ್ಟು ಪ್ರಿಯ? ಬಿಸಿಬಿಸಿ ಚರ್ಚೆ