ಆಮೀರ್ ಖಾನ್ ತಮ್ಮ ವೃತ್ತಿಜೀವನದ ಬೆಸ್ಟ್ ಸಿನಿಮಾ ದಂಗಲ್‌ನಲ್ಲಿನ ಒಂದು ತಪ್ಪನ್ನು ಅಮಿತಾಬ್ ಬಚ್ಚನ್ ಗುರುತಿಸಿದ್ದರು. ರೆಡ್ ಲೋರಿ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಯಾಗಿದ್ದ ವೇಳೆ ಆಮೀರ್ ಖಾನ್, ತಮ್ಮ ದಂಗಲ್ ಸಿನಿಮಾದ ಬಗ್ಗೆ ಮಾತನಾಡಿದ್ದರು
ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್, 2016ರ ಬ್ಲಾಕ್‌ಬಸ್ಟರ್ ದಂಗಲ್ ಚಿತ್ರವನ್ನು (Dangal Cinema) ತನ್ನ ವೃತ್ತಿಜೀವನದ ಬೆಸ್ಟ್ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ತಾವು ಮಾಡಿದ ಒಂದು ತಪ್ಪನ್ನು ಅಮಿತಾಬ್ ಬಚ್ಚನ್ ನೋಟಿಸ್ ಮಾಡಿದ್ದರು. ನಂತರ ಆ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಆ ಸಿಂಗಲ್ ಶಾಟ್‌ನಲ್ಲಿ ನನ್ನ ಪಾತ್ರದಿಂದ ತಪ್ಪಾಗಿತ್ತು ಎಂದು ಹೇಳಿದ್ದಾರೆ. ಮಹಾವೀರ್ ಸಿಂಗ್ ಪೋಗಟ್ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದರು. ದಂಗಲ್ ಇದುವರೆಗಿನ ಅತಿ ಹೆಚ್ಚು ಗಳಿಕೆಯ ಸಿನಮಾಗಳಲ್ಲಿ ಒಂದಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್ ಖಾನ್ (Aamir Khan), ದಂಗಲ್ ನಾನು ನಟಿಸಿದ್ದ ಚಿತ್ರಗಳಲ್ಲಿ ಬೆಸ್ಟ್ ಸಿನಿಮಾ ಆಗಿದೆ. ಆದ್ರೆ ಈ ಚಿತ್ರದಲ್ಲಿ ನಾನು ಮಾಡಿದ ತಪ್ಪು ಹೇಳಲು ಸ್ವಲ್ಪ ಕಷ್ಟವಾಗುತ್ತಿದೆ. ಚಿತ್ರದ ಆ ಒಂದು ದೃಶ್ಯದಲ್ಲಿ ನನ್ನಿಂದಾದ ತಪ್ಪನ್ನು ಅಮಿತಾಬ್ ಬಚ್ಚನ್ (Megastar Amitabh Bachchan) ಗಮನಿಸಿದ್ದರು. ಆ ತಪ್ಪನ್ನು ಹೇಗೆ ನೀವು ಗಮನಿಸಿದ್ದೀರಿ ಎಂದು ಕೇಳಿದ್ದಕ್ಕೆ, ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟನೆ ಮಾಡಿದ್ದು, ಆ ಒಂದು ದೃಶ್ಯದಲ್ಲಿ ನೀವು ಪಾತ್ರದಿಂದ ಹೊರಗೆ ಬಂದಿರೋದು ನನ್ನ ಗಮನಕ್ಕೆ ಬಂತು ಎಂದು ಹೇಳಿದ್ದಾರೆ.
ಚಿತ್ರದ ಕುಸ್ತಿಯ ದೃಶ್ಯವೊಂದರಲ್ಲಿ ನಾನು ಎದ್ದು ನಿಂತು 'ಯೆಸ್' ಎಂದು ಜೋರಾಗಿ ಹೇಳುತ್ತೇನೆ. ಆದ್ರೆ ಅದು ತಪ್ಪಾಗಿತ್ತು. ನಿಜ ಜೀವನದಲ್ಲಿ ಮಹಾವೀರ್ ಫೋಗಟ್ ಎಂದಿಗೂ ಈ ರೀತಿಯಾಗಿ ಹೇಳಲ್ಲ. ಮಹಾವೀರ್ ಫೋಗಟ್ ಕುಸ್ತಿಯ ಸಂದರ್ಭದಲ್ಲಿ 'ವ್ಹಾ' ಅಥವಾ 'ಶಹಬ್ಬಾಸ್' ಎಂಬ ಪದಗಳನ್ನು ಬಳಕೆ ಮಾಡುತ್ತಾರೆ. ನಾನು ದಂಗಲ್ ಸಿನಿಮಾದಲ್ಲಿ ಈ ಎರಡು ಪದಗಳ ಬದಲಾಗಿ ಯೆಸ್ ಎಂದು ಜೋರಾಗಿ ಹೇಳಿದ್ದೆ. ಈ ರೀತಿಯಾಗಿ ಹೇಳುವುದು ಮುಂಬೈ ಮತ್ತು ಇಂದಿನ ಆಟಗಾರರ ಟ್ರೆಂಡ್ ಅನ್ನೋದನ್ನು ಅಮಿತಾಭ್ ಬಚ್ಚನ್ ನನಗೆ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಇಂತಹ ಸಣ್ಣ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಂದು ನಾನು ಯಾವುದೇ ಸಿನಿಮಾ ಪರ್ಫೆಕ್ಟ್ ಆಗಿರಲ್ಲ ಎಂದು ತಿಳಿದುಕೊಂಡೆ. ಎಷ್ಟೇ ಎಚ್ಚರಿಕೆಯಿಂದ ಮಾಡಿದ್ರೂ ಸಣ್ಣಪುಟ್ಟ ತಪ್ಪುಗಳಾಗಿರುತ್ತವೆ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ʼನನ್ನ ಮಗನ ಸಿನಿಮಾ ಸೋತಿದ್ದೇ ಒಳ್ಳೇದಾಯ್ತುʼ; ಮೊದಲ ಪತ್ನಿ ಪುತ್ರನ ಬಗ್ಗೆ ಆಮಿರ್ ಖಾನ್ ಇಂಥಾ ಮಾತಾಡಿದ್ರಾ?
ರೆಡ್ ಲೋರಿ ಫಿಲಂ ಫೆಸ್ಟಿವಲ್ ( Red Lorry Film Festival) ಕಾರ್ಯಕ್ರಮದಲ್ಲಿ ಭಾಯಾಗಿದ್ದ ವೇಳೆ ಆಮೀರ್ ಖಾನ್, ತಮ್ಮ ದಂಗಲ್ ಸಿನಿಮಾದ ಬಗ್ಗೆ ಮಾತನಾಡಿದ್ದರು. ಈ ಫಿಲಂ ಫೆಸ್ಟಿವಲ್‌ನಲ್ಲಿ ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ನಟನೆಯ 1988ರ 'ಖಯಾಮತ್ ಸೇ ಖಯಾಮತ್ ತಕ್' (Qayamat Se Qayamat Tak) ಸಿನಿಮಾ ಪ್ರದರ್ಶನವಾಯ್ತು.
ದಂಗಲ್ ಸಿನಿಮಾ ಫೋಗಟ್ ಕುಟುಂಬದ ಕಥೆಯನ್ನು ಒಳಗೊಂಡಿದ್ದು, ಮಹಾವೀರ್ ತಮ್ಮ ಇಬ್ಬರು ಮಕ್ಕಳಾದ ಗೀತಾ ಮತ್ತು ಬಬಿತಾರನ್ನು ಹೇಗೆ ಕುಸ್ತಿ ಕ್ರೀಡಾಪಟುಗಳನ್ನಾಗಿ ಮಾಡ್ತಾರೆ ಅನ್ನೋದನ್ನು ತೋರಿಸಲಾಗಿದೆ. ಗೀತಾ, ಬಬಿತಾ ಪಾತ್ರದಲ್ಲಿ ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ್ದರು. ಝೈರಾ ವಾಸೀಮ್, ಸುಹಾನಿ ಭಟ್ನಾಗರ್ , ಸಾಕ್ಷಿ ತನ್ವರ ಮತ್ತು ಅಪಾರಶಕ್ತಿ ಖುರಾನ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.
ಇದನ್ನೂ ಓದಿ: ಶಾರುಖ್, ಆಮೀರ್ ಖಾನ್ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?