ಅತಿ ಹೆಚ್ಚು ಸಂಭಾವನೆ ಮಾಡುವ ನಟಿ ಯಾರು ಎಂಬ ಪ್ರಶ್ನೆ ಬಂದಾಗ ದೀಪಿಕಾ ಹೆಸರು ಕೇಳಿ ಬರುತ್ತೆ. ಆದ್ರೆ ಈಗ ದೀಪಿಕಾ ಈ ವಿಷ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ಆರು ವರ್ಷ ಸಿನಿಮಾ ಮಾಡ್ದೆ ಹೋದ್ರೂ ಈ ನಟಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Desi Girl Priyanka Chopra) ಮತ್ತೆ ಭಾರತೀಯ ಸಿನಿಮಾ (Indian Cinema) ರಂಗಕ್ಕೆ ವಾಪಸ್ ಆಗ್ತಿದ್ದಾರೆ. ಪ್ರಿಯಾಂಕಾ ಎಂಟ್ರಿ ಧಮಾಲ್ ಮಾಡಲಿದೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪ್ರಿಯಾಂಕ ಪಾತ್ರರಾಗಲಿದ್ದಾರೆ. ಸಿನಿಮಾದಲ್ಲಿ ಹಿರೋಗಳ ಸಂಪಾದನೆ 100 ಕೋಟಿಗಿಂತ ಹೆಚ್ಚಿದೆ. ಅವ್ರಿಗೆ ಹೋಲಿಸಿದ್ರೆ ಹೀರೋಯಿನ್ ಸಂಪಾದನೆ ಕಡಿಮೆ. ಈ ಬಗ್ಗೆ ಸಾಕಷ್ಟು ವಿರೋಧ, ಚರ್ಚೆಗಳು ಕೇಳಿ ಬರ್ತಾನೇ ಇರುತ್ವೆ. ಈ ಮಧ್ಯೆ ಪ್ರಿಯಾಂಕ 30 ಕೋಟಿ ಸಂಭಾವನೆ ಪಡೆದು ಚರ್ಚೆಗೆ ಬಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸುಮಾರು ಆರು ವರ್ಷಗಳ ನಂತರ ಎಸ್.ಎಸ್. ರಾಜಮೌಳಿ (S.S. Rajamouli) ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಮೌಳಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವ ಪ್ರಿಯಾಂಕ, 20 ವರ್ಷಗಳಿಗೂ ಹೆಚ್ಚು ಸಮಯದ ನಂತರ ದಕ್ಷಿಣದ ಚಿತ್ರರಂಗಕ್ಕೆ ವಾಪಸ್ ಆಗ್ತಿದ್ದಾರೆ. ಪ್ರಿಯಾಂಕಾ ಈ ಚಿತ್ರಕ್ಕಾಗಿ 30 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಮಾಡಲಾಗಿದೆ. ಇದು ಭಾರತೀಯ ನಟಿಯೊಬ್ಬರು ಚಿತ್ರವೊಂದಕ್ಕೆ ಪಡೆದ ಅತ್ಯಧಿಕ ಸಂಭಾವನೆಯಾಗಿದೆ.
ಅಪ್ಪ-ಅಮ್ಮನ್ನ ಯಾರಾದ್ರೂ ಬದಲಾಯಿಸೋಕೆ ಆಗುತ್ತೇನ್ರೀ..? ರವಿಚಂದ್ರನ್ ಮಾತಿಗೆ ಏನಂತೀರಾ..?
ಪ್ರಿಯಾಂಕಾ ಈ ಹಿಂದೆ ತಮ್ಮ ಅಮೆಜಾನ್ ಪ್ರೈಮ್ ವಿಡಿಯೋ ಶೋ ಸಿಟಾಡೆಲ್‌ಗಾಗಿ 5 ಮಿಲಿಯನ್ ಡಾಲರ್ ಅಂದ್ರೆ ಸುಮಾರು 41 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ಅದು ಆರು ಗಂಟೆಗಳ ರನ್‌ಟೈಮ್ ಹೊಂದಿತ್ತು. ರಾಜಮೌಳಿ ಜೊತೆ ಪ್ರಿಯಾಂಕ ಮಾಡ್ತಿರುವ ಮುಂದಿನ ಚಿತ್ರದ ಹೆಸರು SSMB29 ಎನ್ನಲಾಗ್ತಿದೆ. ಮಾಧ್ಯಮದ ವರದಿಯಂತೆ ಪ್ರಿಯಾಂಕ ಈ ಸಿನಿಮಾಕ್ಕೆ 30 ಕೋಟಿ ರೂಪಾಯಿ ಪಡೆದ್ರೆ ಇದು ಭಾರತೀಯ ಹೀರೋಯಿನ್ ಗೆ ಸಿಕ್ಕ ಅತ್ಯಂತ ಅಧಿಕ ಸಂಭಾವನೆಯಾಗಲಿದೆ.
ಪ್ರಿಯಾಂಕ ಮೊದಲು ಪಟ್ಟಿಯಲ್ಲಿ ಇದ್ದಿದ್ದು ಯಾರು? : ರಾಜಮೌಳಿ ಅವರ ಕಾಡಿನ ಸಾಹಸ ಚಿತ್ರಕ್ಕೆ ಪ್ರಿಯಾಂಕಾ ಸಹಿ ಹಾಕುವ ಮೊದಲು, ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯಾಗಿದ್ದರು. 2898 ರ ಕಲ್ಕಿ ಚಿತ್ರಕ್ಕೆ ದೀಪಿಕಾ ಪಡುಕೋಣೆ 20 ಕೋಟಿ ಸಂಭಾವನೆ ಪಡೆದಿದ್ದರು. ಆಲಿಯಾ ಭಟ್ ಪ್ರತಿ ಚಿತ್ರಕ್ಕೆ 15 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಕರೀನಾ ಕಪೂರ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಪ್ರತಿ ಸಿನಿಮಾಕ್ಕೆ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.
ಸೂರ್ಯ-ತ್ರಿಷಾ ಜೋಡಿಗೆ ಮಹಾನ್ ಕಷ್ಟ..! 500 ಜನರ ಮಧ್ಯೆ ಅದೇನೋ ಮಾಡ್ಬೇಕಂತೆ..!
ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಗೆ ಹಾರಿದ್ಮೇಲೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಅವರು 2016ರಲ್ಲಿ ಜೈ ಗಂಗಾಜಲ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ್ಮೇಲೆ 2019ರಲ್ಲಿ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ನಟಿಸಿದ್ದರು. ಇದಾದ್ಮೇಲೆ ಅವರು ಬಾಲಿವುಡ್ ನ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹಾಲಿವುಡ್ ನಲ್ಲಿ ಬ್ಯುಸಿಯಿದ್ದ ನಟಿ ಭಾರತಕ್ಕೆ ಬಂದಿದ್ದೇ ಅಪರೂಪ. ಪ್ರಿಯಾಂಕಾ ಹಾಲಿವುಡ್ ಚಿತ್ರಗಳಾದ ದಿ ವೈಟ್ ಟೈಗರ್, ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್, ಲವ್ ಎಗೇನ್ ನಲ್ಲಿ ಕೆಲಸ ಮಾಡಿದರು ಮತ್ತು ಸಿಟಾಡೆಲ್ ನಂತಹ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಅವರು ಇದ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಅವರೊಂದಿಗೆ ಹೆಡ್ಸ್ ಆಫ್ ಸ್ಟೇಟ್‌ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ರಾಜಮೌಳಿ ಚಿತ್ರದಲ್ಲಿ ಪ್ರಿಯಾಂಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ಇದು ಅವರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಾ ಕಾದು ನೋಡಬೇಕಿದೆ.