ಮೈಸೂರಿನ ಯುವಕ ಆದಿಲ್ ಖಾನ್ ಅವರನ್ನು ಮದುವೆಯಾಗಿ ಮುಸ್ಲಿಂಗೆ ಮತಾಂತರಗೊಂಡಿರೋ ನಟಿ ರಾಖಿ ಸಾವಂತ್ ಮೊದಲ ರೋಜಾ ಆಚರಿಸುತ್ತಿದ್ದಾರೆ. ಅವರು ಹೇಳಿದ್ದೇನು?
ರಾಖಿ ಸಾವಂತ್ ಏನೇ ಮಾಡಿದರೂ ಬಹುತೇಕ ವಿವಾದವಾಗುತ್ತದೆ. ಅವರ ವೀಡಿಯೊ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ ಮತ್ತು ಅವರು ಇಂಟರ್ನೆಟ್ ಬಳಕೆದಾರರ ಗುರಿಗೆ ಒಳಗಾಗುತ್ತಾರೆ ಎನ್ನುವುದು ಹೊಸ ವಿಷಯವಲ್ಲ. ಡ್ರಾಮಾ ಕ್ವೀನ್ (Drama Queen) ಎಂದೇ ಫೇಮಸ್ ಆಗಿರೋ ರಾಖಿ, ಮೈಸೂರಿನ ಯುವಕ ಆದಿಲ್ ಖಾನ್ ದುರ್ರಾನಿ ಅವರನ್ನು ಮದುವೆಯಾಗಿ ಇಸ್ಲಾಂ ಸ್ವೀಕರಿಸಿ ಫಾತೀಮಾ ಆಗಿರುವುದು ಈಗ ಹಳೆಯ ಸುದ್ದಿ. ಪತಿಯ ವಿರುದ್ಧ ವಿವಿಧ ಆರೋಪ ಮಾಡಿ ಅವರನ್ನು ಜೈಲಿಗೆ ಅಟ್ಟಿರೋ ನಟಿ ರಂಜಾನ್ ಆಚರಣೆ ಮಾಡಲು ಹಾತೊರೆಯುವ ಬಗ್ಗೆ ಇದಾಗಲೇ ಹೇಳಿಕೊಂಡಿದ್ದಾರೆ. ಈ ರಂಜಾನ್ (Ramdan) ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತೇನೆ ಎಂದಿದ್ದರು. ಮುಸ್ಲಿಮರಲ್ಲಿ ಪವಿತ್ರ ಎಂದು ಪರಿಗಣಿಸಲಾಗಿರುವ ಹಜ್ (Hajj) ತೀರ್ಥ ಯಾತ್ರೆಯ ಕಿರು ಸ್ವರೂಪ ಉಮ್ರಾ (Umrah). ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ. ವೀಸಾ ಪಡೆಯುವ ಪ್ರಕ್ರಿಯೆಯಲ್ಲಿದ್ದು, ಅದು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದು ಖಚಿತವಿಲ್ಲ ಎಂದಿದ್ದ ನಟಿ, 'ನನ್ನ ಖಾಲಿದ್ ಮಾಮು, ವಾಹಿದ್ ಭಾಯ್, ಜಾಮಾ ಮಸೀದಿಯಲ್ಲಿ ನನ್ನ ಅಫಿಡವಿಟ್ ಅನ್ನು ವೀಸಾಗಾಗಿ ತಯಾರಿ ಮಾಡುತ್ತಿದ್ದಾರೆ. ಧರ್ಮ ಬದಲಾವಣೆಯ ಬಗ್ಗೆ ಅಫಿಡವಿಟ್ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಾನಿಗೆ ನಾನು ಉಮ್ರಾಗೆ ಹೋಗುವುದಕ್ಕೆ ಇಷ್ಟವಿದ್ದರೆ, ಖಂಡಿತವಾಗಿಯೂ ನನ್ನನ್ನು ಅಲ್ಲಿಗೆ ಕಳುಹಿಸುತ್ತಾನೆ' ಎಂದಿದ್ದರು.
ಇದೀಗ ಉಮ್ರಾಗೆ ರಾಖಿ (Rakhi Sawanth) ಹೋದಂತಿಲ್ಲ. ಆದರೆ, ನನ್ನ ಪಾಪಗಳು ತೊಳೆದು ಹೋಗುವಂತೆ ರೋಜಾವನ್ನು ಸರಿಯಾಗಿ ಮಾಡುತ್ತೇನೆ. ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ. ಇಡೀ ದಿನ ಹಸಿವಿನಿಂದ (hungry) ಇರಬೇಕು ಮತ್ತು ನಮಾಜ್ (Namaz) ಮಾಡಬೇಕಾಗುತ್ತದೆ, ಆದ್ದರಿಂದ ಜಿಮ್ ಗೆ ಹೋಗುವುದಿಲ್ಲ ಎಂದೂ ಹೇಳಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡಿರುವಂತೆ ಕಾಣುತ್ತಿದೆ. ಏಕೆಂದರೆ, ವಿಡಿಯೋ ಒಂದನ್ನು ಶೇರ್ ಮಾಡಿರುವ ರಾಖಿ, ತಾವು ರೋಜಾ ಮಾಡುತ್ತಿರುವುದನ್ನು ಘೋಷಿಸಿದ್ದಾರೆ. ರಂಜಾನ್ ಆರಂಭವಾದ ತಕ್ಷಣ, ರಾಖಿ ಸಾವಂತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ಅವರು ಗುಜಾಬಿ ಬಣ್ಣದ ಹಿಜಾಬ್ ಧರಿಸಿ ತಮ್ಮ ಮೊದಲ ರೋಸಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಪತಿ ಆದಿಲ್ ಖಾನ್ಗೆ ರಾಖಿ ಸಾವಂತ್ ಕ್ಷಮಾಪಣೆ! ರಂಜಾನ್ ಬರ್ತಿದೆ, ರಿಲೀಸ್ ಮಾಡಿ ಎಂದ ನಟಿ
ವಿಡಿಯೋ ಹಂಚಿಕೊಳ್ಳುವಾಗ, ರಾಖಿ ಅದರ ಶೀರ್ಷಿಕೆಯಲ್ಲಿ 'ನನ್ನ ಮೊದಲ ರೋಸಾ' ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ಅವರು, 'ಎಲ್ಲರಿಗೂ ಸಲಾಮ್ ವಾಲೇಕುಮ್. ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ, 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ ನನಗೆ ಹಸಿವಾಗುತ್ತಿಲ್ಲ. ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ. ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ' ಎಂದಿದ್ದಾರೆ.
ರಾಖಿಯ (Rakhi Sawanth) ವೀಡಿಯೊವನ್ನು ನೋಡಿದ ನಂತರ, ಇಂಟರ್ನೆಟ್ ಬಳಕೆದಾರರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಕ್ಕ... ನೀವು ಹುಟ್ಟಿದಾಗಿನಿಂದ ಹಿಂದೂ ಅನ್ನೋದನ್ನ ಮರೀಬೇಡಿ, ರೋಜಾ ಬೇಕಿದ್ರೆ ಮಾಡ್ಕೊಳ್ಳಿ, ನವರಾತ್ರಿ ಅಂತ ಒಂದು ಹಬ್ಬ ಇದೆ ಎನ್ನೋದನ್ನೂ ಮರೀಬೇಡಿ ಎಂದಿದ್ದಾರೆ. ಆದರೆ ಅವರ ಮುಸ್ಲಿಂ ಫ್ಯಾನ್ಸ್ ತುಂಬಾ ಖುಷಿಯಾಗಿದ್ದು, 'ಮುಬಾರಕ್ ಮಾಶಾ ಅಲ್ಲಾ. ಅಲ್ಲಾ ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ ಮತ್ತು ನಿಮಗೆ ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ' ಎಂದಿದ್ದಾರೆ. 'ಮೊದಲ ರೋಜಾ ಮುಬಾರಕ್ , ನೀವು ಬಲಶಾಲಿಯಾಗಿದ್ದೀರಿ. ಅಲ್ಲಾ ನಿಮ್ಮನ್ನು ಆಶೀರ್ವದಿಸಲಿ' ಎಂದು ಕಮೆಂಟ್ ಮಾಡಿದ್ದಾರೆ.
ಮುಂದಿನ ಆಸ್ಕರ್ ಅವಾರ್ಡ್ ನನಗೇನೇ ಎಂದ ನಟಿ Rakhi Sawant!