ನನ್ನ ಬೊಮ್ಮಾ, ಬೇಬಿ, ನೀನು ನನಗೆ ಬೆಸ್ಟ್ ಗಿಫ್ಟ್; ಜಾಕ್ವೆಲಿನ್‌ಗೆ ಮತ್ತೆ ಲವ್ ಲೆಟರ್ ಬರೆದ ಸುಕೇಶ್ ಚಂದ್ರಶೇಖರ್

By Shruthi KrishnaFirst Published Mar 25, 2023, 2:51 PM IST
Highlights

ನನ್ನ ಬೊಮ್ಮಾ, ಬೇಬಿ, ನೀನು ನನಗೆ ಬೆಸ್ಟ್ ಗಿಫ್ಟ್ ಎಂದು ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್‌ಗೆ ಮತ್ತೆ ಲವ್ ಲೆಟರ್ ಬರೆದಿದ್ದಾರೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಆಗಾಗ ನಟಿ ಜಾಕ್ವೆಲಿನ್ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ. ಜೈಲಿನಲ್ಲಿ ಇದ್ದುಕೊಂಡೆ ಜಾಕ್ವೆಲ್‌ಗೆ ಪ್ರೀತಿ ಮಾತುಗಳನ್ನು ಹೇಳುತ್ತಿರುತ್ತಾರೆ. ಇತ್ತೀಚೆಗಷ್ಟೆ ಹೋಳಿ ಹಬ್ಬದ ಸಮಯದಲ್ಲಿ ಜಾಕ್ವೆಲಿನ್ ಮೇಲಿನ ಪ್ರೀತಿ ವ್ಯಕ್ತಪಡಿಸಿ ಪತ್ರ ಬರೆದಿದ್ದ ಸುಕೇಶ್ ಇದೀಗ ಮತ್ತೆ ಲವ್ ಲೆಟರ್ ಬರೆದಿದ್ದಾರೆ. ಸುಕೇಶ್ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಜಾಕ್ವೆಲಿನ್ ಅವರಿಗೆ ಪ್ರೀತಿಯ ಪತ್ರ ಬರೆದಿದ್ದಾರೆ. ತುಂಬಾ ಮಿಸ್ ಮಾಡಿಕೊಂಡೆ ಎಂದು ಹೇಳಿದ್ದಾರೆ. ತನ್ನ ಸುತ್ತ ಜಾಕ್ವೆಲಿನ್ ಎನರ್ಜಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಸುಕೇಶ್ ಚಂದ್ರಶೇಖರ್ ಬರೆದಿರುವ ಪತ್ರದಲ್ಲಿ, 'ನನ್ನ ಬೊಮ್ಮಾ, ನನ್ನ ಹುಟ್ಟುಹಬ್ಬದ ಈ ದಿನದಂದು ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ, ನಿನ್ನ ಎನರ್ಜಿ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಇದನ್ನು ಪದಗಳಲ್ಲಿ ಹೇಳಲ್ಲ ಸಾಧ್ಯವಿಲ್ಲ. ನನಗೆ ಗೊತ್ತು ನನ್ನ ಮೇಲಿನ ನಿನ್ನ ಪ್ರೀತಿಗೆ ಯಾವತ್ತು ಕೊನೆ ಇಲ್ಲ. ನಿನ್ನ ಸುಂದರ ಹೃದಯದಲ್ಲಿ ಏನಿದೆ ಎಂದು ನನಗೆ ಗೊತ್ತಿದೆ ಇದಕ್ಕೆ ಪುರಾವೆ ಅಗತ್ಯವಿಲ್ಲ ಬೇಬಿ' ಎಂದು ಹೇಳಿದ್ದಾರೆ. 

Latest Videos

ಜಾಕ್ವೆಲಿನ್ ಪ್ರೀತಿಯನ್ನು ತನ್ನ ಜೀವನದ ಅತ್ಯುತ್ತಮ ಉಡುಗೊರೆ ಎಂದು ಸುಕೇಶ್ ಹೇಳಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸುಕೇಶ್ ಹೇಳಿದ್ದಾರೆ.  

ನಾನು ನಿನಗಾಗಿ ಇಲ್ಲಿದ್ದೇನೆ ಎಂದು ನಿನಗೆ ತಿಳಿದಿದೆ. ಲವ್ ಯು ಮೈ ಬೇಬಿ, ನನಗೆ ನನ್ನ ಹೃದಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಜನ್ಮದಿನದಂದು ನನಗೆ ಶುಭಾಶಯ ತಿಳಿಸಿದ ನನ್ನ ಬೆಂಬಲಿಗರು ಮತ್ತು ಸ್ನೇಹಿತರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಾನು ನೂರಾರು ಪತ್ರಗಳಗನ್ನು ಸ್ವೀಕರಿಸಿದ್ದೇನೆ. ಧನ್ಯವಾದಗಳು' ಎಂದು ಪತ್ರ ಬರೆದಿದ್ದಾರೆ. 



ನನ್ನ ಬ್ಯೂಟಿಫುಲ್ ಬೇಬಿ ಗರ್ಲ್; ಹೋಳಿ ಹಬ್ಬಕ್ಕೆ ಜೈಲಿನಿಂದನೇ ಜಾಕ್ವೆಲಿನ್‌ಗೆ ಲವ್ ಲೆಟರ್ ಬರೆದ ಸುಕೇಶ್

ಹೋಳಿ ಹಬ್ಬಕ್ಕೆ ಜಾಕ್ವೆಲಿನ್‌ಗೆ ಪತ್ರ ಬರೆದಿದ್ದ ಸುಕೇಶ್ 

'ಅತ್ಯಂತ ಅದ್ಭುತ, ನನ್ನ ಸುಂದರ ಜಾಕ್ವೆಲಿನ್‌ಗೆ ನಾನು ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಈ ದಿನ, ಬಣ್ಣಗಳ ಹಬ್ಬ, ನಾನು ನಿಮಗೆ ಭರವಸೆ ನೀಡುತ್ತೇನೆ, ಮರೆಯಾದ ಅಥವಾ ಕಣ್ಮರೆಯಾದ ಬಣ್ಣಗಳನ್ನು ನಿಮ್ಮ ಬಳಿಗೆ ತರಲಾಗುವುದು. ಈ ವರ್ಷ ಸಂಪೂರ್ಣ ಹೊಳಪಿನಿಂದ ಇರಲಿ, ನಾನು ಅದನ್ನು ಖಚಿತಪಡಿಸಿಕೊಳ್ಳುತ್ತೇನೆ ಮತ್ತು ಅದು ನನ್ನ ಜವಾಬ್ದಾರಿಯಾಗಿದೆ. ನಿನಗಾಗಿ ಬೇಬಿ ಗರ್ಲ್ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದ್ದರು. 

ಸುಖೇಶ್ ಚಂದ್ರಶೇಖರ್ ಇದ್ದ ಜೈಲ್ ಸೆಲ್ ಮೇಲೆ ದಾಳಿ: ಐಷಾರಾಮಿ ವಸ್ತುಗಳ ಜಪ್ತಿ

ಸುಕೇಶ್ ಜೈಲಿನಲ್ಲೇ ಕುಳಿತು ಜಾಕ್ವೆಲಿನ್ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿದ್ದರೆ ಜಾಕ್ವೆಲಿನ್ ಮಾತ್ರ ಸಾಲು ಸಾಲು ಆರೋಪ ಮಾಡಿದ್ದಾರೆ. ಮೋಸ ಮಾಡಿದ, ಜೀವನ ಹಾಳು ಮಾಡಿದ ಎಂದು ಸುಕೇಶ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸುಕೇಶ್ ಏನೇ ಹೇಳಿದರು ಜಾಕ್ವೆಲಿನ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 

click me!