3.8 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ ನಟಿ ಮಾಧುರಿ ದೀಕ್ಷಿತ್; ಇದರಲ್ಲಿದೆ ಹಲವು ವಿಶೇಷತೆ

Published : Apr 19, 2023, 02:57 PM IST
3.8 ಕೋಟಿ ಮೌಲ್ಯದ ಹೊಸ ಕಾರು ಖರೀದಿಸಿದ ನಟಿ ಮಾಧುರಿ ದೀಕ್ಷಿತ್; ಇದರಲ್ಲಿದೆ ಹಲವು ವಿಶೇಷತೆ

ಸಾರಾಂಶ

ಬಾಲಿವುಡ್ ಖ್ಯಾತ  ನಟಿ ಮಾಧುರಿ ದೀಕ್ಷಿತ್ 3.8 ಕೋಟಿ ಮೌಲ್ಯದ ಪೋರ್ಶೆ 911 ಟರ್ಬೋ s ಕಾರನ್ನು ಖರೀದಿಸಿದ್ದಾರೆ. 

ಬಾಲಿವುಡ್‌ನ ಎವರ್ ಗ್ರೀನ್ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ಇತ್ತೀಚೆಗೆ ಮಾಧುರಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ತೀರ ಕಡಿಮೆಯಾದರೂ ಬೇಡಿಕೆ ಕಮ್ಮಿ ಆಗಿಲ್ಲ. ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮಾಧುರಿ ದೀಕ್ಷಿತ್ ಆಗಾಗ ಸುದ್ದಿಯಲ್ಲಿರುತ್ತಾರೆ. ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್ ಜೊತೆ ಇತ್ತೀಚೆಗಷ್ಟೆ ಮುಂಬೈನಲ್ಲಿ ವಡಾ ಪಾವ್ ಪಾರ್ಟಿ ಮಾಡಿ ಸುದ್ದಿಯಾಗಿದ್ದ ಮಾಧುರಿ ಇದೀಗ ಐಷಾರಾಮಿ ಕಾರು ಖರೀದಿಸಿದ್ದಾರೆ. ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ಮಾಧವ್ ನೆನೆ ಅವರು ದುಬಾರಿ ಕಾರಿನನ್ನು ಖರೀದಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಮಾಧುರಿ ಮತ್ತು ಪತಿ ಶ್ರೀರಾಮ್ ದಂಪತಿ 3.8 ಕೋಟಿ ಮೌಲ್ಯದ ಪೋರ್ಶೆ 911 ಟರ್ಬೋ s ಕಾರನ್ನು ಖರೀದಿಸಿದ್ದಾರೆ. ಅಂದಹಾಗೆ ಮಾಧುರಿ ಮತ್ತು ಶ್ರೀರಾಮ್ ಬಳಿ ಈಗಾಗಲೇ 1.87 ಕೋಟಿ ಮೊಲ್ಯದ ಪೋರ್ಶೆ ಕಾರು ಇದೆ. ಇದೀಗ 2ನೇ ಕಾರು ಇದಾಗಿದೆ. ಹೊಸ ಕಾರು ಖರೀದಿಸಿದ ಬಳಿಕ ಶ್ರೀರಾಮ್ ನೆನೆ ಪತ್ನಿ ಮಾಧುರಿ ಜೊತೆ ಮುಂಬೈ ಸುತ್ತಿದ್ದಾರೆ. ಇಬ್ಬರೂ ಜಾಲಿ ರೈಡ್ ಮಾಡಿರುವ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಈ ಕಾರಿನ ವಿಶೇಷತೆ ಎಂದರೆ ಅತ್ಯಂತ ವೇಗವಾಗ ಕಾರು ಇದಾಗಿದೆ. ಕೇವಲ 2.6 ಸೆಕೆಂಡುಗಳಲ್ಲಿ ಝೀರೋ ಇಂದ 100 kmph (ಗಂಟೆಗೆ ಕಿಲೋಮೀಟರ್) ತಲುಪಬಹುದು. ಇದು ಗಂಟೆಗೆ 330 ಕಿಲೋಮೀಟರ್ ವೇಗವನ್ನು ಹೊಂದಿದೆ. ಈ ಕಾರನ್ನು ಭಾರತದಲ್ಲಿಯೇ ಅತಿ ವೇಗದ ಕಾರು ಎನ್ನಲಾಗುತ್ತದೆ. ಈ ಕಾರನ್ನು ಮರುವಿನ್ಯಾಸಗೊಳಿಸಲಾಗಿದ್ದು ಎಲ್ಇಡಿ ಲೈಟ್ಸ್ (DRLs) ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಇದ್ದು ಇದು ಕಾರಿನ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ವಡಾ ಪಾವ್‌ ಪಾರ್ಟಿ ಕೊಡಿಸಿದ ಮಾಧುರಿ ದೀಕ್ಷಿತ್; ಫೋಟೋ ವೈರಲ್

ಈ ಕಾರು ಸೆಲೆಬ್ರಿಟಿಗಳಿಗೆ ಭಾರಿ ಪ್ರೀಯವಾದ ಕಾರಾಗಿದೆ. ಭಾರತದ ಅನೇಕ ಸೆಲೆಬ್ರಿಟಿಗಳು ಈ ಕಾರನ್ನು ಬಳಸುತ್ತಾರೆ. ಸಚಿನ್ ತೆಂಡೂಲ್ಕರ್‌ ಅವರಿಂದ ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ವರೆಗೂ ಇದೇ ಕಾರನ್ನು ಬಳಸುತ್ತಾರೆ. 

ನಟಿ ಮಾಧುರಿ ಕಳೆದ ವರ್ಷ ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. 48 ಕೋಟಿ ರೂಪಾಯಿ ಬೆಲೆಬಾಳುವ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದರು.  ಸುಂದರವಾದ ಅಪಾರ್ಟ್ಮೆಂಟ್ ಆದಾಗಿದ್ದು ಸಮುದ್ರದ ನೋಟ ಹೊಂದಿದೆ. ಇದೀಗ ದುಬಾರಿ ಕಾರು ಕೂಡ ಮಾಧುರಿ ಮನೆ ಸೇರಿದೆ. 

'ತ್ರಿದೇವ್'​ ಬಳಿಕ 34 ವರ್ಷಗಳಾದರೂ ಮಾಧುರಿ-ಸನ್ನಿ ಒಟ್ಟಿಗೇ ನಟಿಸಲಿಲ್ಲವೇಕೆ?

ಸಿನಿಮಾ ವಿಚಾರಕ್ಕೆ ಬರುವುದಾದರೆ ಮಾಧುರಿ ಕೊನೆಯದಾಗಿ ಅಮೆಜಾನ್ ಪ್ರೈಮ್ ಒರಿಜಿನಲ್ ಮಜಾ ಮಾ ನಲ್ಲಿ ಕಾಣಿಸಿಕೊಂಡಿದ್ದರು. ಆನಂದ್ ತಿವಾರಿ ನಿರ್ದೇಶನದಲ್ಲಿ ಬಂದ ಚಿತ್ರದಲ್ಲಿ ಮಾಧುರಿ ಪಲ್ಲವಿ ಪಟೇಲ್ ಎಂಬ ಸರಳ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ನೆಟ್‌ಫ್ಲಿಕ್ಸ್‌ನ 'ದಿ ಫೇಮ್ ಗೇಮ್‌ನಲ್ಲೂ ಕಾಣಿಸಿಕೊಂಡಿದ್ದರು. ಫೆಬ್ರವರಿ 25, 2022 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!