ಚಿತ್ರೀಕರಣಕ್ಕೂ ಮೊದಲೇ ಪುಷ್ಪ ತಂಡಕ್ಕೆ IT ಶಾಕ್; ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ದಾಳಿ

Published : Apr 19, 2023, 02:05 PM IST
ಚಿತ್ರೀಕರಣಕ್ಕೂ ಮೊದಲೇ ಪುಷ್ಪ ತಂಡಕ್ಕೆ IT ಶಾಕ್; ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ದಾಳಿ

ಸಾರಾಂಶ

ಚಿತ್ರೀಕರಣಕ್ಕೂ ಮೊದಲೇ ಪುಷ್ಪ ತಂಡಕ್ಕೆ IT ಶಾಕ್; ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ದಾಳಿ

ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ IT (Income Tax) ಅಧಿಕಾರಿಗಳು ಶಾಕ್ ನೀಡಿದ್ದಾರೆ. ನಿರ್ದೇಶಕ ಸುಕುಮಾರ್ ಮತ್ತು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿಸ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.  

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪುಷ್ಪ ಸಿನಿಮಾವನ್ನು ನಿರ್ಮಾಣ ಮಾಡಿದೆ. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಂಸ್ಥೆಯ ನಿರ್ಮಾಪಕರು. ಇಂದು ಬೆಳಗ್ಗೆ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ಶುರು ಮಾಡಿದ್ದಾರೆ ಎಂದು ವರದಿ ಆಗಿದೆ.

ಈ ಸಂಸ್ಥೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದೆ.  ಶ್ರೀಮಂತಡು. ಜನತಾ ಗ್ಯಾರೇಜ್, ರಂಗಸ್ಥಳಂ, ಉಪ್ಪೇನಾ, ಪುಷ್ಪ, ಸರ್ಕಾರಿ ವಾರಿ ಪಾಛ, ವೀರ ಸಿಂಹ ರೆಡ್ಡಿ, ಮಾಲ್ಟೇರ್ ವೀರಯ್ಯ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಈ ಸಂಸ್ಥೆ ನೀಡಿದೆ. ಆದಾಯ ತೆರಿಗೆ ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ದಾಳಿ ನಡಿದಿದೆ. ಅಲ್ಲದೆ ಮೈತ್ರಿ ಮೂವಿಸ್ ಲೆಕ್ಕವಿಲ್ಲದಷ್ಟು ಆದಾಯ ಹೊಂದಿದೆ ಮತ್ತು ಮನಿ ಲಾಂಡರಿಂಗ್ ದಂಧೆಯಲ್ಲಿ ತೊಡಗಿದೆ ಎನ್ನುವ ಆರೋಪದ ಕೂಡ ಕೇಳಿಬರುತ್ತಿದೆ. 

2023ರ ನಿರೀಕ್ಷೆಯ ಸಿನಿಮಾಗಳಲ್ಲಿ ದಕ್ಷಿಣದ ಏಕೈಕ ಚಿತ್ರ; ಶಾರುಖ್, ಸಲ್ಮಾನ್ ಹಿಂದಿಕ್ಕಿದ ಅಲ್ಲು ಅರ್ಜುನ್

ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆಗೆ ಪುಷ್ಪ ಚಿತ್ರದ ಸುಕುಮಾರನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. 

Oo Antava: ಪುಷ್ಪಾ-2ನಲ್ಲೂ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ನಟಿ ಹೇಳಿದ್ದೇನು?

ಪುಷ್ಪ ಸಿನಿಮಾದ ದೊಡ್ಡ ಸಕ್ಸಸ್ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬಹುತೇಕ ಮುಗಿಯಬೇಕಿತ್ತು. ಆದರೆ ಒಂದಿಷ್ಟು ಬದಲಾವಣೆಯ ಕಾರಣ ಸಿನಿಮಾ ಚಿತ್ರೀಕರಣ ತಡುವಾಗುತ್ತಿದೆ ಎನ್ನಲಾಗಿದೆ. ಪುಷ್ಪ-2 2023ರ  ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಒರಮ್ಯಾಕ್ಸ್​ ರಿಲೀಸ್ ಮಾಡಿರುವ ಪಟ್ಟಿಯಲಲ್ಲಿ ಪುಷ್ಪ-2 ಮೊದಲ ಸ್ಥಾನದಲ್ಲಿದೆ. ಈ ಸಿನಿಮಾದಲ್ಲಿಅಲ್ಲು ಅರ್ಜುನ್ ಮತ್ತು ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಕಲಾವಿದರ ಹೆಸರು ಕೇಳಿಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!