ವಿಜಯ್ ದಳಪತಿ ಮನೆ ಮುಂದೆ ಕಣ್ಣೀರಿಟ್ಟ ಪಾನಿಪೂರಿ ವ್ಯಾಪಾರಿ ಮಗಳು; ಸಿಸಿಟಿವಿ ನೋಡಿ ನಟನ ಮನಸ್ಸು ಕರಗುತ್ತಾ?

Published : Apr 19, 2023, 01:01 PM IST
ವಿಜಯ್ ದಳಪತಿ ಮನೆ ಮುಂದೆ ಕಣ್ಣೀರಿಟ್ಟ ಪಾನಿಪೂರಿ ವ್ಯಾಪಾರಿ ಮಗಳು; ಸಿಸಿಟಿವಿ ನೋಡಿ ನಟನ ಮನಸ್ಸು ಕರಗುತ್ತಾ?

ಸಾರಾಂಶ

ಸಿಸಿಟಿವಿ ಮುಂದೆ ನಿಂತು ಮಾತನಾಡುತ್ತಿರುವ ಪುಟ್ಟ ಹುಡುಗಿ ವಿಡಿಯೋ ವೈರಲ್. ದಳಪತಿ ವಿಜಯ್ ಮನಸ್ಸು ಕರಗುತ್ತಾ?

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ದಳಪತಿಗೆ ಸಿಕ್ಕಾಪಟ್ಟೆ ಕ್ರೇಜಿಯಾಗಿರುವ ಅಭಿಮಾನಿಗಳು ಇದ್ದಾರೆ. ಮೈ ಮೇಲೆ ಅಚ್ಚೆ ಹಾಕಿಸಿಕೊಳ್ಳುತ್ತಾರೆ, ಗಾಡಿಗಳ ಮೇಲೆ ಸ್ಟಿಕರ್ ಹಾಕಿಸಿಕೊಳ್ಳುತ್ತಾರೆ, ಮನೆಯಲ್ಲಿ ಫೋಟೋ ಇಟ್ಟು ಪೂಜೆ ಮಾಡುತ್ತಾರೆ, ಮನೆ ಮುಂದೆ ಗಂಟೆಗಟ್ಟಳೆ ನಿಂತು ಮಾತನಾಡಿಸುತ್ತಾರೆ..ಹೀಗೆ ಏನಾದರೂ ಒಂದು ಸರ್ಕಸ್ ಮಾಡಿಕೊಂಡು ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ಈಗ ಅದೇ ರೀತಿ ಹುಡುಗಿಯೊಬ್ಬಳು ಸಿಸಿಟಿವಿ ಮುಂದೆ ಮನವಿ ಮಾಡುತ್ತಿರುವುದು ವೈರಲ್ ಆಗುತ್ತಿದೆ. 

ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಯುವತಿಯೊಬ್ಬಳು ನಟ ವಿಜಯ್ ದಳಪತಿ ಮನೆ ಮುಂದೆ ನಿಂತುಕೊಂಡು ಗೇಟ್‌ ಬಳಿ ಇರುವ ಸಿಸಿಟಿವಿಯಲ್ಲಿ ಎದುರು ಕೈ ಮುಗಿದು ದಯವಿಟ್ಟು ಒಮ್ಮೆ ಆದರೂ ಹೊರ ಬನ್ನಿ ನಿಮ್ಮನ್ನು ನೋಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಯಾರು ಸೆರೆ ಹಿಡಿದಿದ್ದಾರೆ ಗೊತ್ತಿಲ್ಲ ಆದರೆ ಸಿಸಿಟಿವಿ ವಿಡಿಯೋ ನೋಡಿ ವಿಜಯ್ ರಿಯಾಕ್ಟ್ ಮಾಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. 

ಕೊನೆಗೂ ದಳಪತಿ ವಿಜಯ್ 'ಲಿಯೋ' ಸೆಟ್ ಸೇರಿದ ಸಂಜಯ್ ದತ್; ಫೋಟೋ ವೈರಲ್

'ದಳಪತಿ ವಿಜಯ್ ಅವರನ್ನು ನೋಡಿ ನಾನು ತುಂಬಾ ದೂರದಿಂದ ಪ್ರಯಾಣ ಮಾಡಿಕೊಂಡು ಬಂದಿರುವೆ. ದಳಪತಿ ಸರ್ ಇನ್‌ಸ್ಟಾಗ್ರಾಂ ಬಳಸುತ್ತಾರೆ ಆಕ್ಟಿವ್ ಆಗಿದ್ದಾರೆ ಹೀಗಾಗಿ ನಾನು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ನೋಡಿ ಆದರೂ ಮುಂದೆ ಒಂದು ದಿನ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಳ್ಳುತ್ತಾರೆ ಅಂದುಕೊಂಡಿರುವೆ. ಅವರ ಜೊತೆ ಒಂದೇ ಒಂದು ಫೋಟೋ ತೆಗೆಸಿಕೊಳ್ಳಬೇಕು. ಯಾಕೆ ಗೊತ್ತಿಲ್ಲ ವಿಜಯ್ ಅವರ ಬಗ್ಗೆ ಮಾತನಾಡಿದರೆ ಸಾಕು ನನ್ನ ಕಣ್ಣಿನಲ್ಲಿ ನೀರು ಬರುತ್ತದೆ' ಎಂದು ಹುಡುಗಿ ಮಾತನಾಡಿದ್ದಾರೆ. 

ವಿಡಿಯೋ ವೈರಲ್ ಆದ ಮೇಲೆ ತಿಳಿಯಿತ್ತು ಮನವಿ ಮಾಡಿಕೊಂಡಿರುವ ಹುಡುಗಿ ಹೆಸರು ತಮಿಳು ಸೆಲ್ವಿ ಆಕೆ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು. ಅಲ್ಲದೆ ಆಕೆ ಕಾಂಚೀಪುರಂ ಜಿಲ್ಲೆಯ ಅಯ್ಯಂಗಾರ್ಕುಲಂನಲ್ಲಿ ಪಾನಿಪುರಿ ವ್ಯಾಪಾರ ಮಾಡುವ ವ್ಯಕ್ತಿಯ ಪುತ್ರಿ. ತಮಿಳ್ ಸೆಲ್ವಿ ಮಾತ್ರವಲ್ಲ ಅವರ ಇಡೀ ಕುಟುಂಬ ವಿಜಯ್ ಫ್ಯಾನ್ಸ್‌ ಎಂದು ಹೇಳಲಾಗುತ್ತದೆ. ಆದರೆ ವಿಜಯ್ ಮನೆಯಲ್ಲಿ ಇರಲಿಲ್ಲ ಲಿಯೋ ಸಿನಿಮಾ ಚಿತ್ರೀಕರಣದಲ್ಲಿದ್ದರು.

Thalapathy vijay: ಬಿಡುಗಡೆಗೆ ಮುನ್ನವೇ 413 ಕೋಟಿ ರೂ. ಬಾಚಿಕೊಂಡ LEO

ಅಭಿಮಾನಿಗಳಿಗೋಸ್ಕರ ಇನ್‌ಸ್ಟಾಗ್ರಾಂ:

ಪುಟ್ಟ ಮಕ್ಕಳಿಂದ ವಯಸ್ಕರರಿಗೆ ವಿಜಯ್ ಅಂದ್ರೆ ತುಂಬಾನೇ ಇಷ್ಟ. ಪ್ರತಿಯೊಬ್ಬರನ್ನು ಭೇಟಿ ಮಾಡಿ ಮಾತನಾಡಲು ಕಷ್ಟವಾಗುತ್ತದೆ ಸಿನಿಮಾ ವಿಚಾರಗಳನ್ನು ತಿಳಿಸಲು ಕಷ್ಟವಾಗುತ್ತದೆ ಎನ್ನುವ ಕಾರಣ ಇನ್‌ಸ್ಟಾಗ್ರಾಂಗೆ ಕಾಲಿಟ್ಟಿದ್ದಾರೆ. ದಳಪತಿ ವಿಜಯ್  ಇನ್ಸ್ಟಾಗ್ರಾಮ್‌ಗೆ ಲಗ್ಗೆ ಎಡುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇನ್ಸ್ಟಾಗ್ರಾಮ್‌ ಖಾತೆ ತೆರೆಯುತ್ತಿದ್ದಂತೆ ಮಿಲಿಯನ್ ಗಟ್ಟಲೇ ಅಭಿಮಾನಿಗಳು ಫಾಲೋ ಮಾಡಲು ಶುರುಮಾಡಿದ್ದಾರೆ. ಅಂದಹಾಗೆ ವಿಜಯ್ ಏಪ್ರಿಲ್ 2ರಂದು ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಎಂಟ್ರಿ ಕೊಡುತ್ತಿದ್ದೆತೆ 4 ಮಿಲಿಯನ್‌ಗೂ ಅಧಿಕ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್‌ ಖಾತೆ ತೆರೆಯುತ್ತಿದ್ದಂತೆ ವಿಜಯ್ ತನ್ನದೇ ಫೋಟೋ ಶೇರ್ ಮಾಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಫೋಟೋಗೂ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. 4 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ಸ್ ಒತ್ತಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳು ದಳಪತಿಯನ್ನು ಹಾಡಿಹೊಗಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!