ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಮೊಮ್ಮಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಪ್ರಿಯಾಂಕಾ ಮಗಳನ್ನು ನೋಡಿಲ್ಲ ಎಂದಿರುವ ಮಧು, ಸದ್ಯದಲ್ಲೇ ಭೇಟಿಯಾಗುತ್ತೇನೆ ಎಂದು ಬಹಿರಂಗ ಪಡಿಸಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಸದ್ಯ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿದ್ದಾರೆ. ಅಮೆರಿಕದ ಖ್ಯಾತ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾದ ಬಳಿಕ ಪ್ರಿಯಾಂಕಾ ವಿದೇಶದಲ್ಲೇ ನೆಲೆಸಿದ್ದಾರೆ. ಅಪರೂಪಕ್ಕೊಮ್ಮೆ ಭಾರತಕ್ಕೆ ಬರುವ ಪ್ರಿಯಾಂಕಾ ಸದ್ಯದ ದಿನಗಳಲ್ಲಿ ತಾಯ್ನಾಡಿಗೆ ಬಂದಿಲ್ಲ. ಇದೀಗ ಪ್ರಿಯಾಂಕಾ ಭಾರತಕ್ಕೆ ಬರಲು ಸಜ್ಜಾಗಿದ್ದಾರಂತೆ. ಜೊತೆಯಲ್ಲಿ ಮುದ್ದಾದ ಮಗುವನ್ನು ಭಾರತಕ್ಕೆ ಕರೆದುಕೊಂಡು ಬರಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಬಾರಿಗೆ ಪ್ರಿಯಾಂಕಾ ಮಗುವನ್ನು ತನ್ನ ತಾಯ್ನಾಡಿಗೆ ಕರೆದುಕೊಂಡು ಬರುತ್ತಿದ್ದಾರೆ.
ಅಂದಹಾಗೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದ್ದರು. ಹೆಣ್ಣು ಮಗುವಿನ ತಾಯಿ ಆಗಿರುವ ಖುಷಿಯನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಆದರೆ ಯಾವ ಮಗು ಎಂದು ಪ್ರಿಯಾಂಕಾ ಎಲ್ಲೂ ಹೇಳಿರಲಿಲ್ಲ. ಆದರೆ ಇತ್ತೀಚಿಗೆ ಪ್ರಿಯಾಂಕಾ ಸೋದರ ಸಂಬಂಧಿ ಮೀರಾ ಚೋಪ್ರಾ ಹೆಣ್ಣು ಎಂದು ಬಹಿರಂಗ ಪಡಿಸಿದ್ದರು. ಇದುವರೆಗೂ ಮಗುವಿನ ಫೋಟೋವನ್ನು ಪ್ರಿಯಾಂಕಾ ದಂಪತಿ ಎಲ್ಲಿಯೂ ರಿವೀಲ್ ಮಾಡಿಲ್ಲ. ಇದೀಗ ಭಾರತಕ್ಕೆ ಬರ್ತಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದೆ. ಈ ಬಗ್ಗೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ(Madhu Chopra) ಬಹಿರಂಗ ಪಡಿಸಿದ್ದಾರೆ.
ಮೊಮ್ಮಗುವನ್ನು ಇನ್ನು ನೋಡಿಲ್ಲ ಎಂದಿರುವ ಮಧು ಚೋಪ್ರಾ, 'ಕೋವಿಡ್ ಕಾರಣದಿಂದ ಮೊಮ್ಮಗು ಭೇಟಿ ಆಗಲು ಸಾಧ್ಯವಾಗಿಲ್ಲ. ಆದರೆ ಸದ್ಯದಲ್ಲೇ ಭೇಟಿಯಾಗುತ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಧು ಚೋಪ್ರ, ನಾನು ಇನ್ನು ಅವಳನ್ನು ನೋಡಿಲ್ಲ. ನಾನು ಇಲ್ಲೇ ಇದ್ದೀನಿ. ಅವಳು ಲಾಸ್ ಏಂಜಲೀಸ್ ನಲ್ಲಿದ್ದಾಳೆ. ಅವಳು ತುಂಬ ಸಂತೋಷದಿಂದ ಇದ್ದಾಳೆ ಎಂದು ಭಾವಿಸುತ್ತೇನೆ. ಬಹುಶಃ ನಾನು ಸದ್ಯದಲ್ಲೇ ಅವಳನ್ನು ಭೇಟಿಯಾಗುತ್ತೇನೆ. ಆಗ ಇದಕ್ಕೆ ಉತ್ತರಿಸಲು ಸಾಧ್ಯವಾಗುತ್ತೆ' ಎಂದಿದ್ದಾರೆ.
ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್ ಚರಣ್ ಮಾತುಗಳಿದು!
'ಅವಳು ಭಾರತಕ್ಕೆ ಬರುವುದನ್ನು ಕಾಯುತ್ತಿದ್ದೇನೆ. ಇದು ಅವಳ ದೇಶ, ಅವಳು ಬರೆಬೇಕು ಎಂದು ಪ್ರಿಯಾಂಕಾ ತಾಯಿ ಹೇಳಿದ್ದಾರೆ. ಅಜ್ಜಿ ಆಗಲು ತುಂಬಾ ಸಮಯದಿಂದ ಕಾಯುತ್ತಿದ್ದೆ ಎಂದಿರುವ ಮಧು ಚೋಪ್ರಾ, ತುಂಬಾ ಸಂತೋಷವಾಗಿದೆ. ಇದನ್ನು ವರ್ಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಈಗ ಸಂಭವಿಸಿದೆ' ಎಂದಿದ್ದಾರೆ.
ಪ್ರಿಯಾಂಕಾ ತಾಯಿಯ ಮಾತು ಕೇಳಿದರೆ ಸದ್ಯದಲ್ಲೇ ಪ್ರಿಯಾಂಕಾ ತನ್ನ ಮಗಳ ಜೊತೆ ಭಾರತಕ್ಕೆ ಬರುವ ಸಾಧ್ಯತೆ ಇದ್ದು ಮಗುವಿಗೆ ತನ್ನ ತಾಯ್ನಾಡಿನ ದರ್ಶನ ಮಾಡಿಸಲಿದ್ದಾರೆ. ಮೊಮ್ಮಗುಗಾಗಿ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಪ್ರಿಯಾಂಕಾ ಮಗಳು ಹೇಗಿದ್ದಾಳೆ ಎಂದು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದಲ್ಲೇ ಮಗುವಿನ ಫೋಟೋ ರಿವೀಲ್ ಮಾಡುವುದು ಅನುಮಾನ.
ಕರ್ನಾಟಕದ ವ್ಯಕ್ತಿಗೆ ತನ್ನ ದುಬಾರಿ ಕಾರನ್ನ ಮಾರಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್, ಜಿ ಲೇ ಜರಾ, ಎಂಡಿಂಗ್ ಥಿಂಗ್ಸ್ ನಲ್ಲಿ ನಟಿಸಿದ್ದಾರೆ. ಇನ್ನು ಪ್ರಿಯಾಂಕಾ ಸದ್ಯ ಮಗಳ ಆರೈಕೆ ಮತ್ತು ನಟನೆ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಡುವೆ ಭಾರಕ್ಕೆ ಯಾವಾಗ ಬರ್ತಾರೆ ಎಂದು ಕಾದು ನೋಡಬೇಕು.