
ಬಿಗ್ ಬಾಸ್ ಸೀಸನ್ 7ರ ವಿನ್ನರ್ ಗೌಹರ್ ಖಾನ್ ಮತ್ತು ಖ್ಯಾತ ಗಾಯಕ ಇಸ್ಮಾಯಿಲ್ ದರ್ಬಾರ್ ಅವರ ಪುತ್ರ ಜೈದ್ ದರ್ಬಾರ್ ಜೊತೆ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಫೇಸ್ ತುಂಬಾನೇ ಚೆನ್ನಾಗಿದೆ ಜೀವನ ಎಂಜಾಯ್ ಮಾಡುತ್ತಿರುವೆ ಎಂದು ಬಾಂಬೆ ಟೈಮ್ಸ್ ಸಂರ್ಶನದಲ್ಲಿ ಗೌಹರ್ ಖಾನ್ ಮಾತನಾಡಿದ್ದಾರೆ.
ಗೌಹರ್ ಖಾನ್ ಮಾತು:
'ನಾನು ಕನಸು ಕಂಡಂತೆ ಜೀವನ ನಡೆಯುತ್ತಿದೆ ನಾನು ಕೆಲಸ ಕೂಡ ಮಾಡುತ್ತಿರುವೆ. ನಾನು ಪರ್ಸನಲ್ ಮತ್ತು ಪ್ರೊಫೆಷನಲ್ ಎರಡೂ ಮ್ಯಾನೇಜ್ ಮಾಡುತ್ತೀನಿ ಎಂದು ಜೈದ್ ದರ್ಬಾರ್‌ಗೆ ನಂಬಿಕೆ ಇದೆ. ಮದುವೆ ಆದ ಮೇಲೆ ಜೀವನ ಹೀಗೆ ಇರುತ್ತದೆ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ. ಏನಾದರೂ ತಪ್ಪಾದರೆ ಹೇಗೆ ಮ್ಯಾನೇಜ್ ಮಾಡಬೇಕೆಂದು ಜನರಿಗೆ ಗೊತ್ತಿಲ್ಲ. ನಮ್ಮ ವಿಚಾರದಲ್ಲಿ ನಾನು ಅರ್ಥ ಮಾಡಿಕೊಂಡಿದ್ದೀವಿ ಒಬ್ಬರು ಹೈಪರ್ ಆದರೆ ಮತ್ತೊಬ್ಬರು ಸಮಾಧಾನದಿಂದ ವರ್ತಿಸುತ್ತೀವಿ. ನಮ್ಮ ಸಂಬಂಧದ ಬಗ್ಗೆ ನನಗೆ ತುಂಬಾನೇ ಗೌರವವಿದೆ ಹಾಗೂ ಎಲ್ಲಾ ಬ್ಯಾಲೆನ್ಸ್ ಮಾಡುತ್ತಿದ್ದೀವಿ'
'ಮಕ್ಕಳು ಮಾಡಿಕೊಳ್ಳುವುದರ ಬಗ್ಗೆ ನಮಗೆ ಟೆನ್ಶನ್ ಇಲ್ಲ. ಜೈದ್ ದರ್ಬಾರ್ ಮತ್ತು ನನ್ನ ನಡುವೆ ಇರುವ ಈಕ್ವೇಷನ್ ಬಗ್ಗೆ ಅತ್ತೆ ಮಾವ ಅವರಿಗೆ ಗೊತ್ತಿದೆ. ನಾವಿಬ್ಬರೂ ನಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀವಿ ಮೂರನೇ ವ್ಯಕ್ತಿಗಳ ಮಾತಿಗೆ ತಲೆ ಕೊಡುವುದಿಲ್ಲ. ಕುಟುಂಬದಿಂದ ಯಾವ ಒತ್ತಡವಿಲ್ಲ ನಮಗೆ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಪ್ರೀತಿ ಮತ್ತು ಕಾಳಜಿಯಿಂದ ಹಲವರು ನನಗೆ ಪ್ರಶ್ನೆ ಮಾಡುತ್ತಾರೆ ನಾನು ಉತ್ತರ ಕೊಡುವೆ. ನನ್ನ ಪರ್ಸನಲ್ ಲೈಫ್ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಅರ್ಹತೆ ಇಲ್ಲ'
'ಜೀವನದಲ್ಲಿ ಮತ್ತು ವೃತ್ತಿಯಲ್ಲಿ ನನಗೆ ಸಿಕ್ಕಿರುವಷ್ಟು ಚಾನ್ಸ್ ಯಾರಿಗೆ ಸಿಕ್ಕಿದೆ ಹೇಳಿ? ಚಿತ್ರರಂಗದ ಬೆಸ್ಟ್ ಬ್ಯಾನರ್ ಮತ್ತು ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ ನನಗೆ. ಡಿಜಿಟಲ್ ಕಾರ್ಯಕ್ರಮಗಳು ಹೆಚ್ಚಾಗಿದೆ ಈಗ ಓಟಿಟಿ ವೀಕ್ಷಕರಿಗೆ ಫೂಲ್ ಮಾಡುವುದಕ್ಕೆ ಆಗೋಲ್ಲ. ವೃತ್ತಿಯಲ್ಲಿ ನನಗೆ ಓಟಿಟಿ ತುಂಬಾನೇ ಒಳ್ಳೆಯದು ಮಾಡಿದೆ. ನಟಿಯಾಗಿ ನನಗೆ ವಿವಿಧ ಪಾತ್ರಗಳನ್ನು ಆಫರ್ ಮಾಡಿದೆ. 2013ರಲ್ಲಿ ತುಂಬಾನೇ ಕಡಿಮೆ ಟಿವಿ ಕಾರ್ಯಕ್ರಮಗಳು ಇತ್ತು ಈಗ ಎಲ್ಲಾ ಬದಲಾಗಿದೆ ಬಿಗ್ ಬಾಸ್ ಶೋ ಫಾರ್ಮ್ಯಾಟ್ ಕೂಡ. ಜನರು ನೋಡುವ ರೀತಿ ಕೂಡ ಬದಲಾಗಿದೆ. ನನಗೆ ಟಿವಿ ಶೋ ಆಫರ್ ಬಂದರೆ ಬೇಡ ಎಂದು ಹೇಳುವುದಿಲ್ಲ. ನಟಿಯಾಗಿ ನನಗಿರುವ ಸಾಮರ್ಥ್ಯಕ್ಕೆ ಧಾರಾವಾಹಿಯಲ್ಲಿ ಅಭಿನಯಿಸುವುದು ಎಷ್ಟು ಸರಿ ನನಗೆ ಗೊತ್ತಿಲ್ಲ. ವೀಕ್ಷಕರಿಗೆ ಧಾರಾವಾಹಿಗಳು ಇಷ್ಟವಾಗುತ್ತದೆ ಆದರೆ ಅದೆಲ್ಲಾ ವರ್ಷಗಳ ಕಾಲ ಕೆಲಸ ಹಲವು ವರ್ಷಗಳು ಒಂದೇ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ನನಗೆ ತಾಳ್ಮೆ ಇಲ್ಲ ಅಂತಲ್ಲ ಒಂದೇ ಮಾಡುವುದಕ್ಕೆ ತುಂಬಾ monotonus ಅನಿಸುತ್ತದೆ' ಎಂದು ಗೌಹರ್ ಖಾನ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.