ತಂದೆ ಸಾವಿಗೆ ಹೆದರಿ 45 ದಿನ ಮನೆಯೊಳಗೆ ಇದ್ದೆ; ಕಷ್ಟದ ದಿನಗಳನ್ನು ಬಿಚ್ಚಿಟ್ಟ ಇರ್ಫಾನ್ ಖಾನ್ ಪುತ್ರ

By Vaishnavi ChandrashekarFirst Published Jan 8, 2023, 2:29 PM IST
Highlights

2020ರಲ್ಲಿ ಕ್ಯಾನ್ಸರ್‌ನಿಂದ ಅಗಲಿದ ನಟ ಇರ್ಫಾನ್ ಖಾನ್. ತಂದೆ ಇಲ್ಲದೆ ಜೀವಿಸಲು ಕಷ್ಟ ಎಂದು ಮನೆಯಲ್ಲಿ ಲಾಕ್‌ ಮಾಡಿದ ಪುತ್ರ....

ಬಾಲಿವುಡ್‌ ವರ್ಸಟೈಲ್ ನಟ ಇರ್ಫಾನ್ ಖಾನ್‌ ನ್ಯೂರೋಎಂಡೋಕ್ರೈನ್ ಎಂದ ಅಪರೂಪದ ಕ್ಯಾನ್ಟರ್‌ನಿಂದ ಬಳಲುತ್ತಿದ್ದು ಚಿಕಿತ್ಸೆ ವಿಫಲವಾಗಿ ಏಪ್ರಿಲ್ 2020ರಲ್ಲಿ ಅಗಲಿದ್ದರು. ಹಲವು ದಿನಗಳ ಕಾಲ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇರ್ಫಾನ್ ಖಾನ್‌ ಅಗಲಿಕೆ ಹಿಂದಿ ಚಿತ್ರರಂಗಕ್ಕೆ ದೊಡ್ಡ ನಷ್ಟ ಎನ್ನಬಹುದು. 

ಪತ್ನಿ ಸುತಾಪ ಸಿಕ್ದರ್, ಮಕ್ಕಳಾದ ಬಾಬಿಲ್ ಖಾನ್ ಮತ್ತು ಅಯಾನ್‌ ಖಾನ್‌ನ ಅಗಲಿದರು. ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಬಿಲ್‌ ಕೆಲವು ದಿನಗಳ ಹಿಂದೆ ನೀಡಿದ ಸಂದರ್ಶನದಲ್ಲಿ  ತಂದೆ ಅಗಲಿಕೆ ಎಷ್ಟು ದೊಡ್ಡ ಪರಿಣಾಮ ಬೀರಿತ್ತು ಎಂದು ಹೇಳಿಕೊಂಡಿದ್ದಾರೆ. 

'ಅಪ್ಪ ಅಗಲಿದಾಗ ನಾನು ಆ ವಿಚಾರವನ್ನು ನಂಬಲಿಲ್ಲಿ ಈ ಘಟನೆ ಆಗಿದೆ ಎನ್ನುವುದನ್ನು ಮನಸ್ಸು ಒಪ್ಪಲಿಲ್ಲ. ಒಂದು ವಾರ ಕಳೆದ ನಂತರ ಘಟನೆ ಮನಸ್ಸಿಗೆ ತುಂಬಾ ನೋವು ಕೊಟ್ಟಿತ್ತು. ಇದರಿಂದ ಹೊರ ಬರಲು ಆಗದೆ ನಾನು ಕೆಟ್ಟ ಸುರುಳಿಯಲ್ಲಿ ಸಿಲುಕಿಕೊಂಡೆ. ಒಂದುವರೆ ತಿಂಗಳುಗಳ ಕಾಲ ನಾನು ರೂಮಿನಲ್ಲಿ ಬಾಗಿಲು ಹಾಕಿಕೊಂಡು ಹೊರ ಬರುತ್ತಿರಲಿಲ್ಲ' ಎಂದು ಬಾಲಿವುಡ್‌ ಬಬಲ್ ಸಂದರ್ಶನದಲ್ಲಿ ಬಾಬಿಲ್ ಮಾತನಾಡಿದ್ದಾರೆ. 

'ತಂದೆ ಸಿನಿಮಾ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಿದ್ದರು ಎಷ್ಟು ಬ್ಯುಸಿ ಅಂದ್ರೆ ತುಂಬಾ ಲಾಂಗ್‌ ಶೆಡ್ಯೂಲ್‌ಗಳನ್ನು ಒಪ್ಪಿಕೊಳ್ಳುತ್ತಿದ್ದರು. ಈ ಘಟನೆ ನಡೆದಾಗ, ಇಲ್ಲ ಅಪ್ಪ ಶೂಟಿಂಗ್ ಹೋಗಿದ್ದಾರೆ ಮುಗಿಸಿಕೊಂಡು ಮನೆಗೆ ಬರುತ್ತಾರೆ ಅನ್ನೋದು ಭಾವನೆಯಲ್ಲಿ ಇರುತ್ತಿದ್ದೆ. ಇದು ಲೆಕ್ಕ ಮಾಡಲಾಗದ ಶೂಟಿಂಗ್ ಬಾರದ ಲೋಕ. ಅವರು ಎಂದೂ ವಾಪಸ್ ಬರುವುದಿಲ್ಲ.  ನನ್ನ ಬೆಸ್‌ಫ್ರೆಂಡ್‌ ಕಳೆದುಕೊಂಡೆ. ನನ್ನ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುವಿದಿಲ್ಲ' ಎಂದು ಬಾಬಿಲ್ ಹೇಳಿದ್ದಾರೆ. 

ಇರ್ಫಾನ್ ಆಸ್ತಿ:

ಇರ್ಫಾನ್ ಚಿತ್ರವೊಂದಕ್ಕೆ ಸುಮಾರು 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು.ಇಷ್ಟೇ ಅಲ್ಲ, ಇರ್ಫಾನ್ ಶುಲ್ಕದ ಜೊತೆಗೆ ಸಿನಿಮಾದ ಗಳಿಕೆಯ ಬಗ್ಗೆ ಮೊದಲೇ ಸಿನಿಮಾ ನಿರ್ಮಾಪಕರ ಜತೆ ಮಾತನಾಡಿ ಅದರ ಲಾಭದ ಷೇರುಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು.   ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಜಾಹೀರಾತಿಗಾಗಿ ಸುಮಾರು 5 ಕೋಟಿ ರೂ ಚಾರ್ಜ್‌ ಮಾಡುತ್ತಿದ್ದರು. ಸಿಸ್ಕಾ ಎಲ್‌ಇಡಿಯಂತಹ ದೊಡ್ಡ ಕಂಪನಿಗಳಿಗೆ ಜಾಹೀರಾತುಗಳನ್ನು ಸಹ ಮಾಡಿದರು.ಇರ್ಫಾನ್ ಖಾನ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಮತ್ತು  ಐಷಾರಾಮಿ ಪ್ರದೇಶವಾದ ಜುಹುವಿನಲ್ಲಿ ಫ್ಲಾಟ್ ಅನ್ನು ಸಹ ಹೊಂದಿದ್ದಾರೆ. ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟರಲ್ಲಿ ಇರ್ಫಾನ್ ಖಾನ್ ಅವರ ಹೆಸರು ಸೇರಿತ್ತು.

ಎಂಥವರನ್ನೂ ಭಾವುಕರನ್ನಾಗಿಸುತ್ತದೆ ಇರ್ಫಾನ್ ಖಾನ್ ಪತ್ನಿ ಹೃದಯಸ್ಪರ್ಶಿ ಪತ್ರ!

ಇರ್ಫಾನ್ ಖಾನ್ ಸುಮಾರು 110 ಕೋಟಿ ರೂ.ಳ ವೈಯಕ್ತಿಕ ಹೂಡಿಕೆಯನ್ನೂ ಮಾಡಿದ್ದರು. ಇರ್ಫಾನ್ ಟೊಯೊಟಾ ಸೆಲಿಕಾ, ಬಿಎಂಡಬ್ಲ್ಯು (BMW), ಮಾಸೆರಾಟಿ ಕ್ವಾಟ್ರೋಪೋರ್ಟೆ ಮತ್ತು ಆಡಿಯಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಇವುಗಳ ಬೆಲೆ ಸುಮಾರು 5 ಕೋಟಿ.

ಪುತ್ರ ಭಾವುಕ ಮೆಸೇಜ್:

'ನಾನು ಸಿನಿಮಾ ವಿದ್ಯಾರ್ಥಿಯಾಗುವ ಮೊದಲು, ನನ್ನ ತಂದೆ  ನನಗೆ ಹೇಳಿಕೊಟ್ಟ ಮೊದಲ ಪಾಠ ಏನು ಗೊತ್ತಾ?  ಚಿತ್ರರಂಗದಲ್ಲಿ ನನ್ನನ್ನು ನಾನು ಪ್ರೂವ್ ಮಾಡಬೇಕೆಂದು. ಕಾರಣ ಸಿನಿಮಾ ಜಗತ್ತು ಅಷ್ಟು ಕಡಿಮೆ ಗೌರವ ಹೊಂದಿದೆ. ಅವರು ನೀಡಿದ ಎಚ್ಚಿರಿಕೆ ಮೇಲೆ ನಾನು ಭಾರತೀಯ ಸಿನಿಮಾದ ಬಗ್ಗೆ, ನಿಮ್ಮೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ,' ಎಂದು ಬಣ್ಣದ ಲೋಕದ ರಿಯಾಲ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

'ಸಿನಿಮಾ ನೋಡುವ ಪ್ರೇಕ್ಷಕರು, ಚಿತ್ರ ನೋಡ ನೋಡುತ್ತಾ ತಾವು ಮಾನಸಿಕವಾಗಿ ಬೆಳೆಯಲು ನಿರಾಕರಿಸುತ್ತಾರೆ. ಆದರೂ ನನ್ನ ತಂದೆ ಆಯ್ಕೆ ಮಾಡಿಕೊಂಡ ವಿಭಿನ್ನ ಪಾತ್ರಗಳನ್ನು ಭಾರತೀಯರು ಒಪಿಕೊಂಡಿದ್ದಾರೆ. ಸಿಕ್ಸ್‌ ಪ್ಯಾಕ್ಸ್‌ ಫ್ಯಾಂಟಸಿಯಿಂದಾನೇ ನನ್ನ ತಂದೆ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಕಲಾವಿದನಿಗೆ ಅಗತ್ಯವಾದ ಅಭಿನಯ ಕರತಲಾಮಲಕವಾಗಿದ್ದರೂ, ನಿರೀಕ್ಷಿತ ಗೆಲವು ಸಾಧಿಸುವಲ್ಲಿ ಅವರು ವಿಫಲರಾದರು. ಫೋಟೋ ಶಾಪ್‌ ಮಾಡಿದ ಐಟಮ್‌ ಸಾಂಗ್‌ಗಳಿಂದ ಕೇವಲ ಸೆಕ್ಸಿಸಂ ಬಿಂಬಿಸುವ ಮತ್ತು ದೇಶಪ್ರೇಮದ ಅದೇ ಸಾಂಪ್ರದಾಯಿಕ ಪ್ರಾತಿನಿತ್ಯದಿಂದ ಬಾಲಿವುಡ್ ಸೋತಿದೆ. ನನ್ನ ತಂದೆಗೆ ಎಲ್ಲ ಅರ್ಹತೆ ಇದ್ದರೂ, ಬಾಲಿವುಡ್‌ನಲ್ಲಿ ಯಶಸ್ವಿ ನಾಯಕನಾಗದಿದ್ದಕ್ಕೆ ಸಿಕ್ಸ್ ಪ್ಯಾಕ್ ಕೊರತೆಯೇ ಕಾರಣ ಎಂಬುದನ್ನು ಸಿನಿ ಪ್ರೇಮಿಗಳು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಸಿನಿಮಾ ಹಿಟ್ ಆಗುವುದು ಕೇವಲ ಸಿಕ್ಸ್‌ ಫ್ಯಾಕ್‌ ಹಾಟ್‌ ಬಾಯ್ಸ್‌ನಿಂದ ಮಾತ್ರ,' ಎಂದು ಭಾವುಕರಾಗಿ ತಮ್ಮ ಮನಸಿನಳಾದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

click me!