ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರಾ 'ಮಹಾನಟಿ'? #JusticeForSangeetha ಟ್ರೆಂಡ್

Published : Jan 26, 2023, 12:50 PM ISTUpdated : Jan 26, 2023, 12:51 PM IST
ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರಾ 'ಮಹಾನಟಿ'? #JusticeForSangeetha ಟ್ರೆಂಡ್

ಸಾರಾಂಶ

ದಳಪತಿ ವಿಜಯ್ ಮತ್ತು ಸಂಗೀತ ದಾಂಪತ್ಯದಲ್ಲಿ ಮಹಾನಟಿ ಕೀರ್ತಿ ಸುರೇಶ್ ಬಿರುಗಾಳಿ ಎಬ್ಬಿಸಿದ್ರಾ ಎನ್ನುವ ಸುದ್ದಿ ವೈರಲ್ ಆಗಿದೆ. ಕೀರ್ತಿಗಾಗಿ ವಿಜಯ್ ಪತ್ನಿಯಿಂದ ದೂರ ಆಗುತ್ತಿದ್ದಾರೆ ಎನ್ನಲಾಗಿದೆ. 

ಕಾಲಿವುಡ್ ಸ್ಟಾರ್ ತಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಮತ್ತು ಪತ್ನಿ ಸಂಗೀತಾ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದು ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನುವ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ದಕ್ಷಿಣ ಭಾರತದ ಸುಂದರ ದಂಪತಿಗಳಲ್ಲಿ ಒಂದಾಗಿದ್ದ ಈ ಜೋಡಿ ಇದೀಗ ದೂರ ಆಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ಶಾಕ್ ಆಗಿದೆ. ವಿಜಯ್ ವಿಚ್ಚೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ಅನೇಕ ನಟಿಯರ ಜೊತೆ ಹೆಸರು ಕೇಳಿ ಬರುತ್ತಿದೆ. ಅಂದಹಾಗೆ ವಿಜಯ್ ಇದುವರೆಗಿನ ವೃತ್ತಿ ಜೀವನದಲ್ಲಿ ಯಾರ ಜೊತೆಯು ಅವರ ಹೆಸರು ಥಳಕು ಹಾಕಿಕೊಂಡಿಲ್ಲ. ಸಿನಿಮಾ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ವಿಜಯ್ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. 

ಇದೀಗ ವಿಜಯ್ ಹೆಸರು ಖ್ಯಾತ ನಟಿಯ ಜೊತೆ ಕೇಳಿ ಬರುತ್ತಿದೆ.  ತಮಿಳಿನ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಕಾರಣಕ್ಕೆ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗಿದೆ. ವಿಜಯ್ ಮತ್ತು ಕೀರ್ತಿ ಇಬ್ಬರೂ ಬೈರವ್ ಮತ್ತು ಸರ್ಕಾರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರೂ ಕ್ಲೋಸ್ ಆಗಿದ್ದು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಬ್ಬರೂ ಕ್ಲೋಸ್ ಆಗಿದ್ದು ಅಷ್ಟೆಯಲ್ಲದೇ ಮದುವೆ ಕೂಡ ಆಗುತ್ತಿದ್ದಾರಂತೆ. ಕೀರ್ತಿಗಾಗಿ ವಿಜಯ್ ಪತ್ನಿಯಿಂದ ದೂರ ಆಗುವ ನಿರ್ಧಾರ ಮಾಡಿದ್ದಾರೆ ಎನ್ನುವ ಗುಸು ಗುಸು ಕಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. 

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #JusticeForSangeetha ಎನ್ನುವ ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದೆ. ವಿಜಯ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಇಬ್ಬರ ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಲು ಕಾರಣವಾಗಿದ್ದು ಇತ್ತೀಚಿಗೆ ಇಬ್ಬರೂ  ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದಿರುವುದು. ನಿರ್ದೇಶಕ ಅಟ್ಲೀ ಕುಮಾರ್ ಅವರ ಪತ್ನಿ ಪ್ರಿಯಾ ಬೇಬಿ ಶವರ್ ನಲ್ಲಿ ವಿಜಯ್ ಮಾತ್ರ ಹಾಜರಾಗಿದ್ದರು. ಬಳಿಕ ವಾರಿಸು ಆಡಿಯೋ ಲಾಂಚ್ ಈವೆಂಟ್‌‌ಗೂ ಸಂಗೀತಾ ಗೈರಾಗಿದ್ದರು. 

ರಕ್ಷಿತ್ ಶೆಟ್ಟಿ ಬಗ್ಗೆ ಹೀಗೊಂದು ಸುದ್ದಿ ವೈರಲ್; ದಳಪತಿ ವಿಜಯ್ ಸಿನಿಮಾದಲ್ಲಿ ಸಿಂಪಲ್ ಸ್ಟಾರ್

ವಿಜಯ್ ಪತ್ನಿ ಸಂಗೀತಾ ಸದ್ಯ ವಿದೇಶದಲ್ಲಿದ್ದಾರಂತೆ. ಅವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ. ಅಲ್ಲೇ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ.  ಇದನ್ನು ಗಮನಿಸಿದ ಅಭಿಮಾನಿಗಳಿಗೆ ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನುವ ಅನುಮಾನ ದಟ್ಟವಾಗಿದೆ.

1999ರಲ್ಲಿ ವಿಜಯ್ -ಸಂಗೀತಾ ಮದುವೆ

ವಿಜಯ್ ಮತ್ತು ಸಂಗೀತಾ ಅವರದ್ದು ಲವ್ ಮ್ಯಾರೇಜ್. ಇಬ್ಬರ ಪ್ರೇಮ್ ಕಹಾನಿ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ವಿಜಯ್ ಸಿನಿಮಾ ನೋಡಿ ಫಿದಾ ಆದ ಸಂಗೀತಾ ಬಳಿಕ ವಿಜಯ್ ಅವರನ್ನು ಭೇಟಿಯಾದರು. 1996ರಲ್ಲಿ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದರು. ಚೆನ್ನೈ ಶೂಟಿಂಗ್ ಸೆಟ್ ನಲ್ಲಿ ಸಂಗೀತ ಮೊದಲ ಬಾರಿಗೆ ವಿಜಯ್ ಅವರನ್ನು ಭೇಟಿಯಾದರು. ಅಂದಹಾಗೆ ಸಂಗೀತ ಯುಕೆಯಲ್ಲಿ ಇದ್ದರು. ವಿಜಯ್ ಇಷ್ಟವಾದ ಬಳಿಕ ಚೆನ್ನೈಗೆ ಬರಲು ಪ್ರಾರಂಭಿಸಿದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗೆ ಬಳಿಕ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. 

ದಳಪತಿ ವಿಜಯ್- ಸಂಗೀತಾ ಡಿವೋರ್ಸ್ ರೂಮರ್‌ಗೂ ರಶ್ಮಿಕಾ ಮಂದಣ್ಣ ಲಿಂಕ್!?

1999 ಆಗಸ್ಟ್ 25ರಂದು ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಹಿಂದೂ ಮತ್ತು ಕ್ರಿಸ್ಚಿಯನ್ ಸಂಪ್ರದಾಯಂತೆ ಇಬ್ಬರೂ ಮದುವೆಯಾದರು.  ಮದುವೆಯಾಗಿ ಒಂದು ವರ್ಷದ ನಂತರ ಸಂಗೀತಾ ಮೊದಲ ಮಗ ಜೇಸನ್ ಸಂಜಯ್ ಅವರನ್ನು ಸ್ವಾಗತಿಸಿದರು. ಬಳಿಕ ಮಗಳು ದಿವ್ಯಾ ಜನಿಸಿದಳು. ವಿಜಯ್ ಮತ್ತು ಸಂಗೀತಾ ಜೋಡಿಗೆ ಇಬ್ಬರು ಮಕ್ಕಳು. 23ವರ್ಷಗಳಿಂದ ಸುಂದರ ಸಾಂಸಾರಿಕ ಜೀವನ ನಡೆಸುತ್ತಿದ್ದ ವಿಜಯ್ ಮತ್ತು  ಸಂಗೀತಾ ಬಾಳಲ್ಲಿ ಏನಾಗಿದೆ ಎಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇಬ್ಬರೂ ಒಟ್ಟಿಗೆ ಚೆನ್ನಾಗಿ ಇರಲಿ ಎಂದು ಹಾರೈಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?