Pathaan Collection; KGF-2 ಹಿಂದಿ ಕಲೆಕ್ಷನ್ ಬ್ರೇಕ್ ಮಾಡಲು ಶಾರುಖ್ ವಿಫಲ; ಮೊದಲ ದಿನ ಗಳಿಸಿದೆಷ್ಟು?

Published : Jan 26, 2023, 10:55 AM IST
Pathaan Collection; KGF-2 ಹಿಂದಿ ಕಲೆಕ್ಷನ್ ಬ್ರೇಕ್ ಮಾಡಲು ಶಾರುಖ್ ವಿಫಲ; ಮೊದಲ ದಿನ ಗಳಿಸಿದೆಷ್ಟು?

ಸಾರಾಂಶ

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಕನ್ನಡದ ಕೆಜಿಎಫ್-2 ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಶಾರುಖ್ ಸಿನಿಮಾ ವಿಫಲವಾಗಿದೆ.  

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ  ವರ್ಷಗಳ ಬಳಿಕ ಶಾರುಖ್ ಖಾನ್ ಅಭಿಮಾನಿಗಳ ಮುಂದೆ ಬಂದಿದ್ದು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಶಾರುಖ್ ಜೊತೆ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. ಇಬ್ಬರನ್ನು ತೆರೆಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ಕೋಟಿ ಕೋಟಿ ಬಾಚಿ ಕೊಂಡಿರುವ ಪಠಾಣ್ ಮೊದಲ ದಿನ 50 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಅಂದಾಜಿಸಲಾಗಿದೆ. 

ಪಠಾಣ್ ಸಿನಿಮಾ ಮೊದಲ ಭರ್ಜರಿ ಕಲೆಕ್ಷನ್ ಮಾಡಿದ್ದರೂ ಸಹ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ವಿಫಲವಾಗಿದೆ. ಕೆಜಿಎಫ್-2 ಸಿನಿಮಾ ಹಿಂದಿಯಲ್ಲಿ ಬರೋಬ್ಬರಿ 52 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ ಪಠಾಣ್ 50 ಕೋಟಿ ರೂಪಾಯಿ ಮಾತ್ರ ಎನ್ನಲಾಗಿದೆ.  ಈ ಮೂಲಕ ಕೆಜಿಎಫ್ 2 ಸಾರ್ವಕಾಲಿಕ ಟಾಪ್ ಓಪನರ್ ಸಿನಿಮಾವಾಗಿದೆ. ಇನ್ನೂ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಪ್ ನಟನೆಯ ವಾರ್ ಸಿನಿಮಾ ಕೂಡ ಹೆಚ್ಚು ಕಲೆಕ್ಷನ್ ಮಾಡಿತ್ತು. ಹಿಂದಿಯಲ್ಲಿ ವಾರ್ ಸಿನಿಮಾ 50 ಕೋಟಿ ರೂಪಾಯಿ ಬಾಚಿಕೊಂಡಿತ್ತು. 

ಬೆಳಗಾವಿ: ಪಠಾಣ್ ಚಿತ್ರ ಪ್ರದರ್ಶಿಸದಂತೆ ಚಿತ್ರಮಂದಿರದ ಮೇಲೆ ಹಿಂದೂಪರ ಕಾರ್ಯಕರ್ತರ ದಾಳಿ

ಸದ್ಯ ಮೊದಲ ದಿವನೇ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಪಠಾಣ್ ಸಿನಿಮಾ 2ನೇ ದಿನ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ. ಇಂದು ಗಣರಾಜ್ಯ ದಿನ ಇರುವ ಕಾರಣ ಅತೀ ಹೆಚ್ಚು ಬಾಚಿಕೊಳ್ಳುವ ಸಾಧ್ಯತೆ ಇದೆ. ಪಠಾಣ್ ಸಿನಿಮಾ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಬಂದ ಸಿನಿಮಾವಾಗಿದೆ. ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. 

Shah Rukh Khan: 5 ವರ್ಷಗಳ ನಂತರ ತೆರೆಗೆ ಹಿಂತಿರುಗುತ್ತಿರುವ ಶಾರುಖ್ ಖಾನ್‌ ನರ್ವಸ್‌?

ಪಠಾಣ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಸಿನಿಮಾರಂಗ ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಪ್ರಾರಂಭವಾಗುತ್ತಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ಸಿನಿಮಾ ಮತ್ತಷ್ಟು ಧೈರ್ಯ ತುಂಬಿದೆ. ಪಠಾಣ್ ಪಕ್ಕಾ ಲೆಕ್ಕಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಸಿನಿಮಾ ಕನ್ನಡದ ಕೆಜಿಎಫ್-2 ಸಿನಿಮಾದ ದಾಖಲೆ ಬ್ರೇಕ್ ಮಾಡುತ್ತಾ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ ಸದ್ಯ ಬಂದಿರುವ ಪಠಾಣ್ ಲೆಕ್ಕದ ಪ್ರಕಾರ ಕೆಜಿಎಫ್ 2 ಬಾಲಿವುಡ್‌ನಲ್ಲೂ ಕಿಂಗ್ ಆಗಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!