Salman - Aamir Khan: ಆಮೀರ್​ ಖಾನ್​ ಮನೆಗೆ ಮಧ್ಯರಾತ್ರಿ ಬಂದ ಸಲ್ಮಾನ್,​ ಕಾರಣವೇನು?

Published : Jan 26, 2023, 10:04 AM ISTUpdated : Jan 26, 2023, 10:10 AM IST
Salman - Aamir Khan:  ಆಮೀರ್​ ಖಾನ್​ ಮನೆಗೆ ಮಧ್ಯರಾತ್ರಿ ಬಂದ ಸಲ್ಮಾನ್,​ ಕಾರಣವೇನು?

ಸಾರಾಂಶ

ಕಳೆದ ಆರು ವರ್ಷಗಳಿಂದ ದ್ವೇಷ ಸಾಧಿಸುತ್ತಿರುವ ನಟ ಆಮೀರ್​ ಖಾನ್ ಮನೆಗೆ ನಟ ಸಲ್ಮಾನ್ ಖಾನ್​ ಮಧ್ಯರಾತ್ರಿ ಬಂದದ್ದು ಈ ಬಗ್ಗೆ ಬಿ ಟೌನ್​ನಲ್ಲಿ ಭಾರಿ ಚರ್ಚೆ ಶುರುವಾಗಿದೆ. ​ 

ಮುಂಬೈ: ಬಾಲಿವುಡ್‌ನಲ್ಲಿ ಖಾನ್ ತ್ರಯರಾದ ಸಲ್ಮಾನ್​, ಶಾರುಖ್​ ಹಾಗೂ ಆಮೀರ್​ ಅವರು ಅಧಿಕಾರದಲ್ಲಿದ್ದ ಕಾಲವೊಂದಿತ್ತು. ಆದರೆ, ಕೆಲ ದಿನಗಳಿಂದ ಅವರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ (Box office) ವಿಶೇಷ ಪ್ರದರ್ಶನ ಕಾಣುತ್ತಿಲ್ಲ. ಈ ನಡುವೆ ಸಲ್ಮಾನ್ ಖಾನ್ ಇತ್ತೀಚೆಗೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಆಮೀರ್ ಖಾನ್ (Aamir Khan) ಮನೆಗೆ ಬಂದಿರುವ ವಿಷಯ ಹೊರ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಸಲ್ಮಾನ್ ಖಾನ್​, ಆಮೀರ್ ಮನೆಗೆ ಹೋಗುತ್ತಿರುವುದು ಕಂಡು ಬಂದಿದೆ. ಹೀಗಿರುವಾಗ ಮಧ್ಯರಾತ್ರಿಯೇ 'ಭಾಯಿಜಾನ್' ಆಮಿರ್​ ಖಾನ್​ ಮನೆ ತಲುಪಿದ್ದು ಏಕೆ? ಇದರ ಹಿಂದಿರುವ ಉದ್ದೇಶವೇನು ಇತ್ಯಾದಿ  ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಬಳಕೆದಾರರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಷ್ಟಕ್ಕೂ ಒಬ್ಬ ನಟನ ಮನೆಗೆ ಇನ್ನೊಬ್ಬ ಹೋದರೆ ಅಷ್ಟು ದೊಡ್ಡ ವಿಷಯವಾಗುತ್ತಲೇ ಇರಲಿಲ್ಲ.  ಆದರೆ ಸಲ್ಮಾನ್​ ಖಾನ್ (Salman Khan)​ ಮನೆಗೆ ಆಮೀರ್​ ಖಾನ್​ ಹೋಗಿರುವ ವಿಷಯ ಇಷ್ಟೊಂದು ಚರ್ಚೆಗೆ ಗ್ರಾಸವಾಗಿರಲು ಕಾರಣ ಏಕೆಂದರೆ ಕಳೆದ 6 ವರ್ಷಗಳಿಂದ ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ನಡುವೆ ನಡೆಯುತ್ತಿರುವ ಶೀತಲ ಸಮರದಿಂದಾಗಿ! ಹೌದು. ಹೊರಗಿನವರಿಗೆ ಹೆಚ್ಚಿನ ಮಂದಿಗೆ ಈ ವಿಷಯ ತಿಳಿದಿರಲಿಕ್ಕಿಲ್ಲ. ಆದರೆ ಚಿತ್ರರಂಗದಲ್ಲಿ ಕಳೆದ ಆರು ವರ್ಷಗಳಿಂದ (Six years) ಈ ಸುದ್ದಿ ಬಿಸಿಬಿಸಿ ಚರ್ಚೆಯಾಗುತ್ತಲೇ ಇದೆ. ಅದೇನೆಂದರೆ ಸಲ್ಮಾನ್​ ಮತ್ತು ಆಮೀರ್​ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು. ವರದಿಗಳ ಪ್ರಕಾರ, 2016 ರಲ್ಲಿ ಅವರ 'ದಂಗಲ್' (Dangal) ಮತ್ತು 'ಸುಲ್ತಾನ್' (Sulthan) ಚಿತ್ರಗಳು ಬಿಡುಗಡೆಯಾದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತಂತೆ.  ಅಂದಿನಿಂದ ಅವರಿಬ್ಬರೂ ಯಾವುದೇ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ.  ಈ ಘಟನೆಯಾದ ಮೇಲೆ ಒಬ್ಬರನ್ನೊಬ್ಬರು ಪರಸ್ಪರ  ಮಾತನಾಡಿಕೊಂಡಿಲ್ಲ (Not talking).  

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

ವರದಿಗಳ ಪ್ರಕಾರ, ಒಮ್ಮೆ ಆಮೀರ್ ಖಾನ್ ಚಿತ್ರದ ಬಗ್ಗೆ ಸಲ್ಮಾನ್​ ಖಾನ್​ ಮಾತನಾಡಿದ್ದಾಗ ಸಿಟ್ಟಿಗೆದ್ದಿದ್ದ ಆಮೀರ್​,  ತಮ್ಮ ಚಿತ್ರಗಳ ಬಗ್ಗೆ ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಡಿ ಎಂದು ಸಲ್ಮಾನ್ ಅವರಿಗೆ ಹೇಳಿದ್ದರಂತೆ. ಅಲ್ಲಿಂದ  ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಿದೆ ಎನ್ನಲಾಗಿದ್ದು, ಆದರೆ, ಈ ವಿಚಾರದಲ್ಲಿ ಇಬ್ಬರೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ವಿಷಯ ಇಷ್ಟು ಗಂಭೀರವಾಗಿರುವಾಗ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿದ್ದು ಏಕೆ ಎಂಬ ಬಗ್ಗೆ ಈಗ ಚರ್ಚೆಯಾಗುತ್ತಿದೆ. 

ಈಗ ಸಿಕ್ಕಿರುವ ಸುದ್ದಿಗಳು ನಿಜವೇ ಆಗಿದ್ದರೆ,  ಸಲ್ಮಾನ್ ಮಾತ್ರವಲ್ಲದೆ ಚಿತ್ರ ನಿರ್ಮಾಪಕ ಮತ್ತು ಮಹೇಶ್ ಭಟ್ (Mahesh Bhatt)ಸಹೋದರ ಮುಖೇಶ್ ಭಟ್ ಕೂಡ ಆಮೀರ್ ಖಾನ್ ಮನೆಗೆ ತಲುಪಿದ್ದಾರೆ. ಹೀಗಿರುವಾಗ ಆಮೀರ್ ಖಾನ್ ಹಾಗೂ ಸಲ್ಮಾನ್ ಜೊತೆಗಿನ ಹೊಸ ಸಿನಿಮಾವನ್ನು ಮಹೇಶ್​ ಭಟ್ ಅನೌನ್ಸ್ (Announce) ಮಾಡಲಿದ್ದಾರಾ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತಿದೆ. ಇದಕ್ಕೆ ಏನಿದ್ದರೂ ಕಾಲವೇ ಉತ್ತರಿಸಬೇಕು. ಅದು ಏನೇ ಆದರೂ ಖಾನ್​ ಇಬ್ಬರೂ ಮುಂಚಿನಂತೆ ಸ್ನೇಹದಿಂದ ಇರಲಿ ಎಂದು ಅಭಿಮಾನಿಗಳು ಆಶಿಸುತ್ತಿರುವುದಂತೂ ನಿಜ. 

ಇದೇನೆ ಇದ್ದರೂ ಮಧ್ಯರಾತ್ರಿ ಆಮೀರ್​ ಮನೆಗೆ ಸಲ್ಮಾನ್​ ಹೋಗಿದ್ದು ಏಕೆ ಎಂಬ ಬಗ್ಗೆ ಮಾತ್ರ ಜಾಲತಾಣದಲ್ಲಿ ತಮಾಷೆಯ ಚರ್ಚೆ ಶುರುವಾಗಿದೆ. ಅದಕ್ಕೆ ತಮ್ಮದೇ  ಆದ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ ನೆಟ್ಟಿಗರು. ಒಬ್ಬ ಬಳಕೆದಾರ, 'ತಾವು ನಟಿಸಿರುವ ಪಠಾಣ್ ಕೂಡ ವಿಫಲವಾದರೆ, ಮುಂದೇನು ಮಾಡಬೇಕು ಎಂಬ ಬಗ್ಗೆ ಸಲ್ಮಾನ್ ಖಾನ್​ ಆಮೀರ್​ ಜೊತೆ  ಚರ್ಚಿಸಲು ಬಂದಿರಬೇಕು' ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ಇನ್ನೊಬ್ಬ 'ಹಾಗಿದ್ದರೆ ಶಾರುಖ್ ಎಲ್ಲಿ' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮೊದಲ ಬಳಕೆದಾರ 'ದೀಪಿಕಾ ಹಿಂದೆ ಹೋಗಿರಬೇಕು' ಎಂದಿದ್ದಾರೆ... ಅದಕ್ಕೆ ಇನ್ನೊಬ್ಬರು 'ಇರಲಿಕ್ಕಿಲ್ಲ ಬೈಕಾಟ್​ಗೆ ಹೆದರಿ ಮನೆಯಲ್ಲಿ ಅವಿತುಕೊಂಡಿರಬೇಕು' ಎಂದಿದ್ದಾರೆ. ಈ ಕಮೆಂಟ್​ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾರುಖ್​ ಅಭಿಮಾನಿಯೊಬ್ಬ, ಯಾರು ಏನೇ ಬೈಕಾಟ್​ ಮಾಡಿದರೂ ಪಠಾಣ್​ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ. ಹೀಗೆ ಅನೇಕ ಮಂದಿ ಅನೇಕ ರೀತಿಯಲ್ಲಿ ತಮಾಷೆ ಮಾಡುತ್ತಿದ್ದಾರೆ. 

Shah Rukh Khan: ಟಾಪ್​ 20 ಸಿನಿಮಾ ಲಿಸ್ಟ್​ ರಿಲೀಸ್​: ಶಾರುಖ್​ ಖಾನ್​ಗೆ ಬಿಗ್​ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ